ಡಾ. ಇತಿಶ್ರೀ ಅನಿಂದಿತಾ ಭ್ರೂಣಶಾಸ್ತ್ರಜ್ಞೆ

ಡಾ. ಇತಿಶ್ರೀ ಅನಿಂದಿತಾ ಭ್ರೂಣಶಾಸ್ತ್ರಜ್ಞೆ

MSc Clinical Embryology and Preimplantation Genetics
ಹಿರಿಯ ಭ್ರೂಣಶಾಸ್ತ್ರತಜ್ಞೆ
ವೈದ್ಯಕೀಯ ನೋಂದಣಿ ಸಂಖ್ಯೆ (ಕೆಎಂಸಿ) :
ತಿಳಿದಿರುವ ಭಾಷೆಗಳು:

ಡಾ. ಇತಿಶ್ರೀ ಅನಿಂದಿತಾ ಎಲೆಕ್ಟ್ರಾನಿಕ್‌ಸಿಟಿಯಲ್ಲಿರುವ ಗರ್ಭಗುಡಿ ಐವಿಎಫ್‌ಸೆಂಟರ್‌ನ ಶಾಖೆಯಲ್ಲಿ ಸೀನಿಯರ್‌ಎಂಬ್ರಿಯೊಲಾಜಿಸ್ಟ್‌ಆಗಿದ್ದಾರೆ. ಅವರೊಬ್ಬ ಅರ್ಹ ಮತ್ತು ಅನುಭವಿ ಎಂಬ್ರಿಯೋಲಾಜಿಸ್ಟ್. ಮೈಸೂರು ವಿಶ್ವವಿದ್ಯಾನಿಲಯದ ASPIER ಕಾಲೇಜಿನಲ್ಲಿ ಕ್ಲಿನಿಕಲ್‌ಎಂಬ್ರಿಯಾಲಜಿ ಮತ್ತು ಪ್ರಿ-ಇಂಪ್ಲಾಂಟೇಷನ್‌ಜೆನೆಟಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಭ್ರೂಣಶಾಸ್ತ್ರ ಕ್ಷೇತ್ರದಲ್ಲಿ ನಾಲ್ಕು ವರ್ಷಗಳ ಅನುಭವವಿದ್ದು ರೋಗಿಗಳಿಗೆ ಉತ್ತಮ ಚಿಕಿತ್ಸೆ ಮತ್ತು ಆರೈಕೆ ಮಾಡುವಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಡಾ. ಅನಿಂದಿತಾ ಭ್ರೂಣಶಾಸ್ತ್ರ ಕ್ಷೇತ್ರಕ್ಕೆ ಅತ್ಯಂತ ಮಹತ್ವದ ಕೊಡುಗೆ ನೀಡಿದ್ದು ಅವರ ಸಾಧನೆಗಳು ವ್ಯಾಪಕವಾಗಿ ಗುರುತಿಸಲ್ಪಟ್ಟಿವೆ. ಡಾ. ಅನಿಂದಿತಾ ಹಲವು ವೆಬಿನಾರ್‌ಮತ್ತು ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಪಟ್ಟ ಗೋಷ್ಠಿಗಳನ್ನು ನಡೆಸಿದ್ದಾರೆ. ಇದು ಅವರ ಗೆಳೆಯರು ಮತ್ತು ಸಹೋದ್ಯೋಗಿಗಳಲ್ಲಿ ಮೆಚ್ಚುಗೆ ಗಳಿಸಿದೆ. ಡಾ. ಅನಿಂದಿತಾ ಅವರ ಪ್ರೆಸೆಂಟೇಷನ್ಸ್‌ ಭ್ರೂಣಶಾಸ್ತ್ರ ಕ್ಷೇತ್ರದ ಹೊಸಹೊಸ ತಂತ್ರಜ್ಞಾನ ಮತ್ತು ಸಾಧ್ಯತೆಗಳ ಬಗ್ಗೆ ಅರಿವು ಮೂಡಿಸಲು ಸಹಾಯವಾಗಿದೆ.

ಹಿರಿಯ ಭ್ರೂಣಶಾಸ್ತ್ರ ತಜ್ಞೆಯಾಗಿ ಕೆಲಸ ಮಾಡುವುದರ ಜೊತೆಗೆ ಡಾ. ಅನಿಂದಿತಾ ಗರ್ಭಗುಡಿ ಸಂತಾನೋತ್ಪತ್ತಿ ಆರೋಗ್ಯ ಮತ್ತು ಸಂಶೋಧನಾ ವಿಭಾಗದಲ್ಲಿ ಅಧ್ಯಾಪಕಿಯಾಗಿದ್ದಾರೆ, ಅಲ್ಲದೆ ಯುವ ಭ್ರೂಣಶಾಸ್ತ್ರಜ್ಞರಿಗೆ ವೃತ್ತಿಪರ ಶಿಕ್ಷಣ ಮತ್ತು ಮಾರ್ಗದರ್ಶನ ನೀಡುವಲ್ಲಿ ಆಸಕ್ತಿ ಹೊಂದಿದ್ದಾರೆ.

ಅಪಾರ ಅನುಭವ ಮತ್ತು ಜ್ಞಾನ , ಭ್ರೂಣಶಾಸ್ತ್ರ ಕ್ಷೇತ್ರದಲ್ಲಿರುವ ಆಸಕ್ತಿಯಿಂದ ಡಾ. ಇತಿಶ್ರೀ ಅನಿಂದಿತಾ ಅವರು ಗರ್ಭಗುಡಿ ಐವಿಎಫ್‌ಸೆಂಟರ್‌ಗೆ ಮತ್ತು ಆರೋಗ್ಯ ವಲಯಕ್ಕೆ ಅಮೂಲ್ಯ ಆಸ್ತಿ ಎನಿಸಿದ್ದಾರೆ. ರೋಗಿಗಳಿಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ಒದಗಿಸಲು ಸದಾ ಬದ್ಧವಾಗಿರುವ ಅನಿಂದಿತಾ ಸಂತಾನೋತ್ಪತ್ತಿ ಔಷಧಿ ಕ್ಷೇತ್ರದಲ್ಲಿ ಅತ್ಯಂತ ಪಾಪ್ಯುಲರ್‌ಮತ್ತು ಬೇಡಿಕೆ ಇರುವ ತಜ್ಞೆ ಆಗಿದ್ದಾರೆ.

ಈ ಪುಟವನ್ನು ಹಂಚಿಕೊಳ್ಳಿ