ಬಾಳಿಗೊಂದು ಬೇಕು ಕರುಳಿನಾ ಕುಡಿ ನಿಮ್ಮ ಕನಸನ್ನು ನನಸಾಗಿಸುತ್ತದೆ ಗರ್ಭಗುಡಿ

ಪರಿಪೂರ್ಣತೆಯಸಂತಸವನ್ನು ಅನುಭವಿಸಿ

ಗರ್ಭಗುಡಿ ನೂತನ ಪೀಳಿಗೆಯ ಸಂತಾನೋತ್ಪತ್ತಿ ಸಮಸ್ಯೆ ಚಿಕಿತ್ಸಾ ಆಸ್ಪತ್ರೆಗಳ ಸಮೂಹವಾಗಿದ್ದು, ಈ ನಿರಂತರವಾಗಿ ಹೆಚ್ಚುತ್ತಿರುವ ಸಂತಾನೋತ್ಪತ್ತಿ ಸಮಸ್ಯೆಯನ್ನು ಪರಿಹರಿಸಲು ಅತ್ಯಾಧುನಿಕ ಮೂಲಸೌಕರ್ಯ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಖ್ಯಾತ ಸ್ತ್ರೀರೋಗತಜ್ಞರು ಮತ್ತು ಫರ್ಟಿಲಿಟಿ ತಜ್ಞೆ ಡಾ. ಆಶಾ ಎಸ್. ವಿಜಯ್ ನೇತೃತ್ವದ ಬದ್ಧತೆಯ ಉದ್ಯಮಿಗಳು ಮತ್ತು ಆರೋಗ್ಯ ತಜ್ಞರ ತಂಡವು ಇದನ್ನು ಸ್ಥಾಪಿಸಿದೆ.

7000ಕ್ಕೂ ಹೆಚ್ಚಿನ ಸಂಖ್ಯೆಯ ದಂಪತಿಗಳು ತಮ್ಮದೇ ಆದ ಜೈವಿಕ ಶಿಶುವನ್ನು ಹೊಂದುವುದರ ಖಾತ್ರಿ ಮಾಡಿಕೊಳ್ಳುವ ಮೂಲಕ ಅವರ ಜೀವನದಲ್ಲಿ ಸುಖಾಂತ್ಯವನ್ನು ಸೃಷ್ಟಿಸುವಲ್ಲಿ ಕೇಂದ್ರವು ಪ್ರಮುಖ ಪಾತ್ರ ವಹಿಸಿದೆ. ನಮ್ಮ ದೃಢವಾದ ತಜ್ಞರ ತಂಡ ಮತ್ತು ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನಗಳೊಂದಿಗೆ, ಗರ್ಭಗುಡಿ ಸಂತಾನೋತ್ಪತ್ತಿ ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸಿನ ಮಟ್ಟಗಳನ್ನು ಸಾಧಿಸಿದೆ. ನಾವು ನಮ್ಮ ದೃಷ್ಟಿಕೋನಕ್ಕೆ ಸಮರ್ಪಿತರಾಗಿದ್ದೇವೆಯಲ್ಲದೇ ದಂಪತಿಗಳು ಆರೋಗ್ಯವಂತ ಮಗುವನ್ನು ಮನೆಗೆ ಒಯ್ಯಬಹುದು ಮತ್ತು ಪಿತೃತ್ವವನ್ನು ಆನಂದಿಸಬಹುದು ಎಂಬುದರ ಖಾತ್ರಿಮಾಡಿಕೊಳ್ಳಲು ಸಂಪೂರ್ಣ ಪ್ರಯತ್ನ ನಡೆಸುತ್ತೇವೆ.

ಡಾ ಆಶಾ ಎಸ್. ವಿಜಯ್, ಗರ್ಭಗುಡಿಯ ಸಂಸ್ಥಾಪಕರು ಮತ್ತು ವೈದ್ಯಕೀಯ ನಿರ್ದೇಶಕರು

ಗರ್ಭಗುಡಿ ಏಕೆ?

ಒಂದು ದಶಕದ ಅವಧಿಯಲ್ಲಿ ಸಂತಾನ ಪಡೆಯುವ ಆಸಕ್ತಿ ಹೊಂದಿರುವ ಸಾವಿರಾರು ದಂಪತಿಗಳಿಗೆ ಆಶಾಕಿರಣವಾಗಿ ಗರ್ಭಗುಡಿ ಸೇವೆ ನೀಡಿದೆ. ನಿಮ್ಮ ಅಗತ್ಯಗಳನ್ನು ಪೂರೈಸಲು ನಮ್ಮ ಅನುಭವಿ ಮತ್ತು ಸಮರ್ಪಿತ ವಿಶೇಷ ತಜ್ಞರು, ದಾದಿಯರು ಮತ್ತು ಭ್ರೂಣಶಾಸ್ತ್ರಜ್ಞರು ಕೆಲಸ ಮಾಡುತ್ತಾರೆಯಲ್ಲದೇ ತ್ವರಿತವಾಗಿ, ವೃತ್ತಿಪರವಾಗಿ ಮತ್ತು ಉತ್ಸಾಹದಿಂದ ಪ್ರತಿಕ್ರಿಯಿಸುತ್ತಾರೆ. 2011 ರಿಂದ ಪರಿಣತ ಮತ್ತು ಖ್ಯಾತ ಸಂತಾನೋತ್ಪತ್ತಿ ತಜ್ಞರು ನೀಡುವ ಸಾಟಿಯಿಲ್ಲದ ಚಿಕಿತ್ಸೆಗಳೊಂದಿಗೆ, ಮಹಿಳೆಯರ ಮತ್ತು ಪುರುಷರ ಸಂತಾನೋತ್ಪತ್ತಿ ಸಮಸ್ಯೆಯನ್ನು ಜಯಿಸಲು ಇತ್ತೀಚಿನ ವೈದ್ಯಕೀಯ ತಂತ್ರಜ್ಞಾನಗಳು ಮತ್ತು ವಿಧಾನಗಳ ಪ್ರಗತಿ ಮತ್ತು ಅನುಷ್ಠಾನಕ್ಕೆ ನಮ್ಮ ಆದ್ಯ ಪ್ರವರ್ತಕ ಕಾರ್ಯ ಕಾರಣವಾಗಿದೆ. ಇತರೆ ಎಲ್ಲ ಕೇಂದ್ರಗಳಲ್ಲಿ ಚಿಕಿತ್ಸೆ ವಿಫಲವಾದಲ್ಲಿ ದಂಪತಿಗಳು ಬರುವ ಸ್ಥಳ ಗರ್ಭಗುಡಿ ಐವಿಎಫ್ ಆಗಿರುತ್ತದೆ. ಯಾವುದೇ ಭರವಸೆ ಇಲ್ಲ ಎಂದು ವಿವಿಧೆಡೆ ಹೇಳಿದ ನಂತರ ದಂಪತಿಗಳು ಗರ್ಭಗುಡಿಯಲ್ಲಿ ಗರ್ಭ ಧರಿಸಿದ ಹಲವಾರು ಪ್ರಕರಣಗಳಿವೆ ಅಲ್ಲದೇ ಪ್ರಪಂಚದ ಮೂಲೆ ಮೂಲೆಯ ದಂಪತಿಗಳಿಗೆ ಮಗುವನ್ನು ತಮ್ಮದಾಗಿಸಿಕೊಳ್ಳುವ ಅವರ ಉತ್ಸಾಹಪೂರ್ವಕ ಆಸೆÉಯನ್ನು ಪೂರೈಸಲು ನಮ್ಮ ಕೇಂದ್ರವು ಸಹಾಯ ಮಾಡುತ್ತಿದೆ.

ನಮ್ಮ ಸಂತೋಷಗೊಂಡ ದಂಪತಿಗಳಿಂದ ಪ್ರಶಂಸಾ ಪ್ರಮಾಣಪತ್ರಗಳು

ನಮ್ಮ ಬಹುಕಾರ್ಯೋಪಯೋಗಿ ವಿಧಾನ

ಫರ್ಟಿಲಿಟಿಯ ಚಿಕಿತ್ಸೆಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಒತ್ತಡವನ್ನು ಉಂಟುಮಾಡಬಹುದು ಎಂದು ಗರ್ಭಗುಡಿಯಲ್ಲಿ ನಾವು ಅರ್ಥಮಾಡಿಕೊಂಡಿದ್ದೇವೆ. ಬಹಳಷ್ಟು ಆಯ್ಕೆಗಳನ್ನು ಒದಗಿಸಲು ಮತ್ತು ಗರ್ಭಧಾರಣೆಗೆ ಪ್ರಯತ್ನಿಸುತ್ತಿರುವ ಅನೇಕರಿಗೆ ಭರವಸೆಯ ನೂತನ ಕಿರಣವನ್ನು ತರಲು ನಾವು ಯಾವಾಗಲೂ ಬದ್ಧರಾಗಿದ್ದೇವೆ. ಆದ್ದರಿಂದ, ನೀವು ಈ ಕೆಳಗಿನದನ್ನು ನಿರೀಕ್ಷಿಸಬಹುದು:

ಐವಿಎಫ್‍ನ ಯಶಸ್ಸಿನ ಮಟ್ಟಗಳು

ಗರ್ಭಗುಡಿಯು ಉದ್ಯಮದಲ್ಲಿ ಶೇಕಡಾ 65-73 ಕ್ಕಿಂತ ಹೆಚ್ಚಿನ ಐವಿಎಫ್ ಚಿಕಿತ್ಸೆಗಳ ಯಶಸ್ಸಿನ ಮಟ್ಟವನ್ನು ಹೊಂದಿದೆ.

ವಿಶ್ವ ದರ್ಜೆಯ ಫರ್ಟಿಲಿಟಿ ಆರೈಕೆ

2011 ರಿಂದ 7,000 ಕ್ಕೂ ಹೆಚ್ಚು ಶಿಶುಗಳನ್ನು ಜಗತ್ತಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಹೆಮ್ಮೆ.

ಉನ್ನತ ಫಲವತ್ತತೆ ತಜ್ಞರು

ನಿಮಗೆ ಗರ್ಭಧರಿಸುವುದಕ್ಕೆ ಸಹಾಯ ಮಾಡಲು ಸ್ತ್ರೀರೋಗಶಾಸ್ತ್ರತಜ್ಞರು, ಭ್ರೂಣಶಾಸ್ತ್ರಜ್ಞರು, ತಂತ್ರಜ್ಞರು ಮತ್ತು ಸಿಬ್ಬಂದಿಗಳಂತಹ ಫರ್ಟಿಲಿಟಿ ತಜ್ಞರ ತಂಡ.

ಕೈಗೆಟುಕುವ ಚಿಕಿತ್ಸೆಗಳು

ಔಷಧಿಗಳು ಅಥವಾ ಸೇವೆಗಳ ಗುಣಮಟ್ಟ ಅಥವಾ ಸೇವಾಕಾರ್ಯದಲ್ಲಿ ಯಾವುದೇ ರಾಜಿ ಇಲ್ಲದೆ ಕೈಗೆಟುಕುವ ವೆಚ್ಚದ ಚಿಕಿತ್ಸೆ

ಉಚಿತ ಎರಡನೇ ಅಭಿಪ್ರಾಯ

ರೋಗಿಗಳು ಬಂದು ನಮ್ಮ ವೈದ್ಯರನ್ನು ಭೇಟಿ ಮಾಡಬಹುದು ಮತ್ತು ರೋಗಿ ದಂಪತಿಗಳಿಗೆ ಸಲಹೆ ನೀಡಲಾಗಿರುವ ಚಿಕಿತ್ಸೆಯು ಉತ್ತಮವಾಗಿದೆಯೇ ಎಂದು ಅರ್ಥಮಾಡಿಕೊಳ್ಳಬಹುದು.

ಹಣಕಾಸು ನೆರವು ಆಯ್ಕೆಗಳು

ಕಾರ್ಯವಿಧಾನಗಳ ವೆಚ್ಚವನ್ನು ಪೂರೈಸುವುದಕ್ಕೆ ಹಣಕಾಸು ಹೊಂದಿಸುವುದು ಸಾಧ್ಯವಾಗದಿದ್ದಾಗ ರೋಗಿಗಳಿಗೆ ಶೂನ್ಯ ಬಡ್ಡಿಯಲ್ಲಿ ಹಣಕಾಸು ನೆರವು.

ಸಮಗ್ರ ಮಾರ್ಗ

ಮನಸ್ಸು-ದೇಹ-ಆತ್ಮಗಳನ್ನು ಒಳಗೊಂಡ ಕಾರ್ಯಕ್ರಮಗಳ ಮೂಲಕ ಸಂತಾನೋತ್ಪತ್ತಿ ಸಮಸ್ಯೆಗೆ ಚಿಕಿತ್ಸೆ ನೀಡುವುದು.

ಸಾಂಪ್ರದಾಯಿಕ ಶಿಷ್ಟಾಚಾರಗಳು

ಪ್ರಕ್ರಿಯೆ, ತಂತ್ರಜ್ಞಾನ ಮತ್ತು ವೈದ್ಯಕೀಯ ಸಂಶೋಧನೆಯಲ್ಲಿ ಇತ್ತೀಚಿನ ಪ್ರಗತಿಗಳನ್ನು ಅಳವಡಿಸಲು ನಿಗದಿತವಾಗಿ ವಿಸ್ತರಣೆÉ ಮತ್ತು ನವೀಕರಣ ಕಾರ್ಯ ಕೈಗೊಳ್ಳಲಾಗುತ್ತದೆ.

ಅತ್ಯುತ್ತಮ ಸೌಲಭ್ಯಗಳು

ನಮ್ಮಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನದ ಜೊತೆಗೆ ಅತ್ಯಂತ ಸವಾಲಿನ ಪ್ರಕರಣಗಳನ್ನು ನಿರ್ವಹಿಸಲು ಕೇಂದ್ರಗಳು ಸಜ್ಜಾಗಿವೆ

Garbhagudi Statistics

ನಮ್ಮ ಸದಾ ಬೆಳೆಯುತ್ತಿರುವ ಯಶಸ್ಸು

ಗರ್ಭಗುಡಿ ಎಂದರೆ ಕನಸುಗಳು ಜೀವಂತವಾಗಿರುವ ಸ್ಥಳ, ಇಲ್ಲಿ ಭರವಸೆಗಳು ಎಂದಿಗೂ ಮರೆಯಾಗುವುದಿಲ್ಲ ಮತ್ತು ಸಾಧ್ಯತೆಗಳು ಎಂದಿಗೂ ಕೊನೆಗೊಳ್ಳುವುದಿಲ್ಲ. ನಿಮ್ಮ ಆನಂದದ ಕಂದಮ್ಮಗಳನ್ನು ಕೈಯಲ್ಲಿ ಎತ್ತಿಹಿಡಿಯುವ ಸುವರ್ಣ ಕ್ಷಣವನ್ನು ಅನುಭವಿಸಲು ನಿಮಗೆ ಸಹಾಯ ಮಾಡಲು ನಾವು ನಿರಂತರವಾಗಿ ಕೆಲಸ ಮಾಡುತ್ತೇವೆ. ನಮ್ಮ ಗುಣಮಟ್ಟದ ಚಿಕಿತ್ಸೆ ಮತ್ತು ಆರೈಕೆಯ ಜೊತೆಗೆ, ಉನ್ನತ ಯಶಸ್ಸಿನ ಮಟ್ಟಗಳನ್ನು ಸಾಧಿಸಲು ಕೊಡುಗೆ ನೀಡುವ ಇತರ ಕೆಲವು ಅಂಶಗಳು:

8500+ಸಂತೋಷ ತುಂಬಿದ ಕುಟುಂಬಗಳು

111+ಉಚಿತ ಫರ್ಟಿಲಿಟಿ ಜಾಗೃತಿ ಶಿಬಿರಗಳು

65-73%ಐವಿಎಫ್ ಯಶಸ್ಸಿನ ಮಟ್ಟ

7ಬೆಂಗಳೂರಿನ ವಿವಿಧೆಡೆ 5 ಕೇಂದ್ರಗಳು

ನಮ್ಮ ತಜ್ಞರನ್ನು ಭೇಟಿ ಮಾಡಿ

ನಮ್ಮ ಫಲವತ್ತತೆ ತಜ್ಞರ ತಂಡವು ಅವರ ವ್ಯಾಪಕವಾದ ಕ್ಲಿನಿಕಲ್ ಅನುಭವ ಮತ್ತು ಸಂಶೋಧನಾ ಕೊಡುಗೆಗಳು ಮತ್ತು ಅತ್ಯಂತ ಸವಾಲಿನ ಫಲವತ್ತತೆ ಪ್ರಕರಣಗಳಿಗೆ ಚಿಕಿತ್ಸೆ ನೀಡುವಲ್ಲಿ ಅವರ ಯಶಸ್ಸಿಗೆ ಹೆಸರುವಾಸಿಯಾಗಿದೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಬೆಂಗಳೂರಿನಲ್ಲಿ ಐವಿಎಫ್ ಚಿಕಿತ್ಸೆಗೆ ಎಷ್ಟು ವೆಚ್ಚವಾಗುತ್ತದೆ?
ಬೆಂಗಳೂರಿನಲ್ಲಿ IVF ಚಿಕಿತ್ಸೆಯ ವೆಚ್ಚವು ವೈಯಕ್ತಿಕ ಸಂದರ್ಭಗಳು ಮತ್ತು ಚಿಕಿತ್ಸೆಯ ಅವಶ್ಯಕತೆಗಳನ್ನು ಅವಲಂಬಿಸಿ ಬದಲಾಗಬಹುದು. ಗರ್ಭಗುಡಿ IVF ಕೇಂದ್ರದಲ್ಲಿ, ನಾವು INR 90,000 ರಿಂದ ಪ್ರಾರಂಭವಾಗುವ ವಿವಿಧ IVF ಪ್ಯಾಕೇಜ್‌ಗಳನ್ನು ನೀಡುತ್ತೇವೆ.
ಬೆಂಗಳೂರಿನಲ್ಲಿ ಯಾವ ಐವಿಎಫ್ ಕ್ಲಿನಿಕ್ ಹೆಚ್ಚು ಯಶಸ್ಸಿನ ಪ್ರಮಾಣವನ್ನು ಹೊಂದಿದೆ?
ಗರ್ಭಗುಡಿ ಆಸ್ಪತ್ರೆಯು ಫಲವತ್ತತೆ ಚಿಕಿತ್ಸೆಯನ್ನು ನೀಡುತ್ತದೆಯೇ?
ಐವಿಎಫ್ ಚಿಕಿತ್ಸೆ ಪಡೆಯಲು ಗರ್ಭಗುಡಿ ಆಸ್ಪತ್ರೆಯನ್ನು ಏಕೆ ಆಯ್ಕೆ ಮಾಡಿಕೊಳ್ಳಬೇಕು?
ಬೆಂಗಳೂರಿನ ಅತ್ಯುತ್ತಮ ಬಂಜೆತನದ ವೈದ್ಯರು ಯಾರು?
IVF 100% ನಿಖರವಾಗಿದೆಯೇ?
ಭಾರತದಲ್ಲಿನ IVF ವೆಚ್ಚಗಳನ್ನು ವಿಮೆ ಆವರಿಸುತ್ತದೆಯೇ?