ಡಾ. ದೀಪ್ತಿ ವೆಂಕಟೇಶ್

ಡಾ. ದೀಪ್ತಿ ವೆಂಕಟೇಶ್

MBBS, MS - FRM
ಸಂತಾನೋತ್ಪತ್ತಿ ತಜ್ಞರು
ವೈದ್ಯಕೀಯ ನೋಂದಣಿ ಸಂಖ್ಯೆ (ಕೆಎಂಸಿ) : 104924
ತಿಳಿದಿರುವ ಭಾಷೆಗಳು: ಕನ್ನಡ, ಇಂಗ್ಲಿಷ್,ಹಿಂದಿ, ತೆಲುಗು

ನಿಮ್ಮ ನೇಮಕಾತಿಯನ್ನು ಕಾಯ್ದಿರಿಸಿ

ಶಾಖೆ
ಆವರಣದಲ್ಲಿ
ಆನ್ಲೈನ್

* ನೇಮಕಾತಿಗಳು ವೈದ್ಯರ ಲಭ್ಯತೆಗೆ ಒಳಪಟ್ಟಿರುತ್ತವೆ. ದಯವಿಟ್ಟು, ನೀವು ಈಗಾಗಲೇ ಗರ್ಭಗುಡಿಗೆ ಭೇಟಿ ನೀಡಿದ್ದರೆ ನಿಮ್ಮ ನೋಂದಾಯಿತ ಸಂಖ್ಯೆಯನ್ನು ನೀವು ನೀಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

ಡಾ. ದೀಪ್ತಿ ವೆಂಕಟೇಶ್ ಸುಪ್ರಸಿದ್ಧ ವೈದ್ಯೆಯಾಗಿದ್ದಾರೆ. ಅತ್ಯಂತ ಪ್ರೀತಿ ಮತ್ತು ಜನಾನುರಾಗಿ ಫಲವತ್ತತೆ ತಜ್ಞೆ ಅಂದರೆ ತಪ್ಪಾಗಲಾರದು. ಕಳೆದ ಏಳು ವರ್ಷಗಳಿಂದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. VIMS ಮತ್ತು RCಯಲ್ಲಿ ಉನ್ನತ ಶ್ರೇಣಿಯಲ್ಲಿ ಪದವಿ ಪಡೆದ ದೀಪ್ತಿ ಪ್ರತಿಷ್ಠಿತ ಬೆಂಗಳೂರು ಮೆಡಿಕಲ್ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆಯಿಂದ MS OBG ಶಿಕ್ಷಣ ಪಡೆದಿದ್ದಾರೆ. RGUHS ನಿಂದ ಸಂತಾನೋತ್ಪತ್ತಿ ಔಷಧಿಯಲ್ಲಿ ಫೆಲೋಷಿಪ್ ಗಳಿಸಿ ಆ ಕ್ಷೇತ್ರದಲ್ಲೇ ತಮ್ಮನ್ನ ತಾವು ಪ್ರೀತಿಯಿಂದ ತೊಡಗಿಸಿಕೊಂಡಿದ್ದಾರೆ.

ದೀಪ್ತಿ ವೆಂಕಟೇಶ್ ಅವರು Intra-Uterine Insemination (IUI) ಮತ್ತು In-Vitro Fertilization (IVF) ಹಾಗೂ ART ತಂತ್ರಜ್ಞಾನದಲ್ಲಿ ವಿಶೇಷ ಪರಿಣಿತಿ ಹೊಂದಿದ್ದು, ಅದೆಷ್ಟೋ ದಂಪತಿಗಳ ಕನಸನ್ನು ನನಸು ಮಾಡಲು ಸಹಾಯ ಮಾಡುತ್ತಿದ್ದಾರೆ. ತಮ್ಮ ಬಳಿಗೆ ಬರುವ ದಂಪತಿಗಳ ಬಗ್ಗೆ ವಿಶೇಷ ಕಾಳಜಿ ಮತ್ತು ಪ್ರೀತಿ ತೋರಿಸಿ ಚಿಕಿತ್ಸೆ ನೀಡುವ ದೀಪ್ತಿಯವರು ಅವರ ಅಪಾರ ಪ್ರಶಂಸೆ ಮತ್ತು ಗೌರವಕ್ಕೆ ಪಾತ್ರರಾಗಿದ್ದಾರೆ. ಹೇಳಬೇಕೆಂದ್ರೆ, ತಮ್ಮ ಬಳಿಗೆ ಬರುವ ರೋಗಿಗಳಿಗೆ ದಿ ಬೆಸ್ಟ್ ಚಿಕಿತ್ಸೆ ನೀಡುವಲ್ಲಿ ದೀಪ್ತಿ ಸದಾ ಮುಂದು. ಅದಕ್ಕಾಗಿ ಆಧುನಿಕ ಕೌಶಲ್ಯ ಮತ್ತು ಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿಯೂ ದೀಪ್ತಿ ಸದಾ ಮುಂಚೂಣಿಯಲ್ಲಿರುತ್ತಾರೆ.

ಡಾ. ದೀಪ್ತಿ ಭಾರತೀಯ ವೈದ್ಯಕೀಯ ಸಂಶೋಧನಾ ಕಾರ್ಯಕ್ರಮಗಳಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹಲವು ರಾಜ್ಯಗಳಲ್ಲದೆ ರಾಷ್ಟ್ರೀಯ ಸಮ್ಮೇಳನದಲ್ಲಿ ತಮ್ಮ ಪ್ರೌಢ ಪ್ರಬಂಧವನ್ನು ಮಂಡಿಸಿದ್ದಾರೆ. ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ವೈಜ್ಞಾನಿಕತೆ ಮತ್ತು ನೈತಿಕತೆ ಬಹಳ ಮುಖ್ಯವಾದುದು ಎಂದು ನಂಬಿರುವ ದೀಪ್ತಿಯವರದ್ದು ವೃತ್ತಿಪರತೆಯಲ್ಲಿ ಬಹಳ ದೊಡ್ಡ ಹೆಸರು. ದೀಪ್ತಿ ನೀವು ನಿಮ್ಮ ವೃತ್ತಿಪಯಣದಲ್ಲಿ ಅತ್ಯುನ್ನತವಾದ ಪರಿಣಿತಿ ಮತ್ತು ಕಾಳಜಿಯನ್ನು ಹೊಂದಿದ್ದೀರಿ. ಅದಕ್ಕಾಗಿ ನೀವು ಅಭಿನಂದನಾರ್ಹರು.

ಈ ಪುಟವನ್ನು ಹಂಚಿಕೊಳ್ಳಿ