ಅತ್ಯುತ್ತಮ ಸೌಲಭ್ಯಗಳು

ಅತ್ಯುತ್ತಮ ಸೌಲಭ್ಯಗಳು

ತಾಯ್ತನ ಒಂದು ಸುಂದರ ಅನುಭವ. ಅದು ಮಹಿಳೆಯರಿಗೆ ಪ್ರಕೃತಿ ನೀಡಿದ ಅತ್ಯದ್ಭುತ ಕೊಡುಗೆ. ಆದರೆ ಕೆಲವೊಮ್ಮೆ ಕೆಲವು ದುರ್ಘಟನೆಗಳಿಂದಾಗಿ ದುರದೃಷ್ಟಕರ ಸಂಗತಿಗಳು ಸಂಭವಿಸುತ್ತವೆ. ಇದರಿಂದ ತಾಯಿ ಅಥವಾ ಪೋಷಕರಾಗಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮಗು ಬೇಕು ಅಂತ ಆಸೆ ಪಡುವ ದಂಪತಿಗಳು ಐವಿಎಫ್ ಚಿಕಿತ್ಸೆ ತೆಗೆದುಕೊಳ್ಳಲು ಬಯಸುತ್ತಾರೆ.

ಗರ್ಭಗುಡಿಯಲ್ಲಿ ನಾವು ಕೈಗೆಟುಕುವ ಬೆಲೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಉನ್ನತ ದರ್ಜೆಯ ಚಿಕಿತ್ಸೆ ನೀಡುತ್ತೇವೆ. ನಾವು ಸಾಟಿಯಿಲ್ಲದ ಯಶಸ್ಸಿನೊಂದಿಗೆ ಖ್ಯಾತಿ ಗಳಿಸಿದ್ದೇವೆ. ರೋಗಿಗಳ ಸೇವೆಯಲ್ಲಿ ನಾವು ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಸರಿಯಾದ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ನೀಡುವುದನ್ನು ನಾವು ನಂಬುತ್ತೇವೆ. ಚಿಕಿತ್ಸಾ ಸಮಯದಲ್ಲಿ ಎದುರಾಗುವ ಯಾವುದೇ ಸವಾಲನ್ನು ಎದುರಿಸಲು ನಮ್ಮ ಕೇಂದ್ರಗಳು ಅತ್ಯುತ್ತಮ ಮೂಲಸೌಕರ್ಯ ಮತ್ತು ಉನ್ನತ ಮಟ್ಟದ ಸಾಧನಗಳನ್ನು ಹೊಂದಿವೆ. ನಮ್ಮ ತಂತ್ರಜ್ಞಾನಗಳು ಮತ್ತು ಯಂತ್ರಗಳು ಅತ್ಯಾಧುನಿಕವಾಗಿವೆಯಲ್ಲದೆ ನಮ್ಮ ರೋಗಿಗಳಿಗೆ ಅವುಗಳ ಸೇವೆ ಹಗಲಿರುಳೂ ಲಭ್ಯವಿರುತ್ತದೆ. ನಮ್ಮಲ್ಲಿ ಪರಿಣಿತ ಫರ್ಟಿಲಿಟಿ ವೈದ್ಯರು, ನುರಿತ ಸಿಬ್ಬಂದಿಗಳು ಮತ್ತು ಉತ್ತಮ ತರಬೇತಿ ಪಡೆದ ವೈದ್ಯಕೀಯ ಅಧ್ಯಾಪಕರು ಇದ್ದು ಇವರ ಸೇವೆಗಳು ಎಲ್ಲ ಸಮಯಗಳಲ್ಲೂ ಲಭ್ಯವಿರುತ್ತವೆ.

ನಮ್ಮ ಕೇಂದ್ರಗಳು ಹಲವಾರು ಪರೀಕ್ಷೆ ಮತ್ತು ಕಾರ್ಯವಿಧಾನಗಳನ್ನು ನಡೆಸಲು ಬೇಕಾದ ಅತ್ತ್ಯುನ್ನತ ಮೂಲಸೌಕರ್ಯಗಳನ್ನು ಹೊಂದಿವೆ. ನಾವು ಹೆಸರಾಂತ ಸಂತಾನೋತ್ಪತ್ತಿ ಚಿಕಿತ್ಸಾ ಕೇಂದ್ರವಾಗಿದ್ದೇವೆ ಮತ್ತು ನಮ್ಮ ಮಾನದಂಡಗಳು ಅಂತಾರಾಷ್ಟ್ರೀಯ ದರ್ಜೆಯನ್ನು ಹೊಂದಿದ್ದು, ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ. ಐವಿಎಫ್ ಚಿಕಿತ್ಸೆಗಳಿಗೆ ನಮ್ಮನ್ನು ಅತ್ಯಂತ ಹೆಚ್ಚಾಗಿ ಶಿಫಾರಸು ಮಾಡಲಾಗುತ್ತದೆಯಲ್ಲದೇ ಇದು ನಮ್ಮನ್ನು ಪ್ರತ್ಯೇಕ ಸ್ಥಾನದಲ್ಲಿ ಇರಿಸಿದೆ. ಅಲ್ಲದೆ, ಹೆಚ್ಚು ಚಿಕಿತ್ಸೆಯ ವೆಚ್ಚವನ್ನು ಭರಿಸಲು ಸಾಧ್ಯವಿಲ್ಲದವರಿಗೆ ನಾವು ಕಡಿಮೆ ಬೆಲೆಯಲ್ಲಿ ಯೋಜನೆಗಳನ್ನು ನೀಡುತ್ತಿದ್ದೇವೆ. ಇದರಿಂದ ಯಾವುದೇ ಹಿಂಜರಿಕೆಯಿಲ್ಲದೆ ಚಿಕಿತ್ಸೆ ತೆಗೆದುಕೊಳ್ಳಲು ರೋಗಿಗಳಿಗೆ ಸುಲಭವಾಗುತ್ತದೆ.

ನಾವು ರಾಜಿ ಮಾಡಿಕೊಳ್ಳದೆ ಅತ್ಯುತ್ಕೃಷ್ಟ ವೈದ್ಯಕೀಯ ಸೇವೆಯನ್ನು ನೀಡುತ್ತೇವೆ, ಇದು ಐವಿಎಫ್‌ನಲ್ಲಿ ನಮಗೆ ಹೆಚ್ಚಿನ ಯಶಸ್ಸನ್ನು ನೀಡಿದೆ.

ನಿಮ್ಮ ಫರ್ಟಿಲಿಟಿ ಪರೀಕ್ಷೆಗಳಿಂದ ಹಿಡಿದು ನಿಮ್ಮ ಗರ್ಭಧಾರಣೆಯ ದೃಢೀಕರಣದವರೆಗೆ, ನಿಮ್ಮ ಪ್ರತಿ ಹಂತವನ್ನೂ ನಮ್ಮ ತಜ್ಞರು ಗಮನವಿಟ್ಟು ನೋಡಿಕೊಳ್ಳುತ್ತಾರೆ ಮತ್ತು ಹೆಚ್ಚಿನ ಕಾಳಜಿ ವಹಿಸುತ್ತಾರೆ. ಇಲ್ಲಿಯವರೆಗೆ, ನಾವು ೬೦೦೦ ಕ್ಕೂ ಹೆಚ್ಚು ದಂಪತಿಗಳಿಗೆ ಚಿಕಿತ್ಸೆ ನೀಡಿದ್ದೇವೆ. ಇದು ನಮ್ಮ ರೋಗಿಗಳೆಡೆಗೆ ನಮ್ಮ ಸಮರ್ಪಣಾ ಮನೋಭಾವ ಮತ್ತು ಕಠಿಣ ಪರಿಶ್ರಮವನ್ನು ತೋರಿಸುತ್ತದೆ. ಜಗತ್ತಿನ ಎಲ್ಲ ಕಡೆಗಳಿಂದ ಬರುವ ನಮ್ಮ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆಯನ್ನು ನೀಡಲು ಸಹಾಯ ಮಾಡುವ ಸುಸಜ್ಜಿತ ಪ್ರಯೋಗಾಲಯವೂ ನಮ್ಮಲ್ಲಿದೆ.

ಡಾ. ಆಶಾ ಎಸ್. ವಿಜಯ್, ಎಂಬಿಬಿಎಸ್, ಡಿಜಿಒ, ಡಿಎನ್‌ಬಿ & ಎಫ್‌ಆರ್‌ಎಂ ಜರ್ಮನಿ- ವೈದ್ಯಕೀಯ ನಿರ್ದೇಶಕರು, ಗರ್ಭಗುಡಿ ಮತ್ತು ಜಿಜಿಆರ್‌ಎಚ್‌ಆರ್ -ಅವರು ಅನೇಕ ಪ್ರತಿಭಾವಂತ ವೈದ್ಯರು ಮತ್ತು ಸಿಬ್ಬಂದಿಗಳ ತಂಡವನ್ನು ಹೊಂದಿದ್ದು ಈ ಎಲ್ಲಾ ಆಲೋಚನೆಗಳ ಹಿಂದಿರುವ ಮುಖ್ಯಸ್ಥರಾಗಿದ್ದಾರೆ. ಅವರ ಅಪಾರ ಜ್ಞಾನ ಮತ್ತು ಕೌಶಲ್ಯದಿಂದ, ಫರ್ಟಿಲಿಟಿ ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸಿನ ದರಗಳನ್ನು ನೀಡಲು ಸಮರ್ಥರಾಗಿದ್ದಾರೆ. ಡಾ. ಆಶಾ ಅವರು ಬಹಳ ಆಳವಾದ ದೃಷ್ಟಿಕೋನ ಹೊಂದಿದ್ದಾರೆ. ಅಲ್ಲದೇ ಹಲವಾರು ದಂಪತಿಗಳು ಸಂತೋಷದ ಕುಟುಂಬಗಳಾಗಲು ಸಹಾಯ ಮಾಡುವುದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರು ಉತ್ತಮವಾದ ಬದ್ಧತೆಯ ವೈದ್ಯಕೀಯ ಸಿಬ್ಬಂದಿ ಹೊಂದಿದ್ದು, ತುಂಬಾ ಸಹಾಯಕ ಮತ್ತು ಸೌಹಾರ್ದಯುತವಾಗಿದ್ದು ನಿಮಗೆ ಅಗತ್ಯವಿರುವಾಗಲೆಲ್ಲ ಸಿಗುತ್ತಾರೆ.

ಪ್ರತಿಯೊಂದು ಪ್ರಕರಣವೂ ವಿಭಿನ್ನವಾಗಿರುವುದರಿಂದ ಮತ್ತು ಒಂದರಿಂದ ಇನ್ನೊಂದಕ್ಕೆ ಬದಲಾಗುವುದರಿಂದ, ನಾವು ಗರ್ಭಗುಡಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ವೈಯಕ್ತೀಕರಿಸಿದ ಚಿಕಿತ್ಸೆಯನ್ನು ನೀಡುವಲ್ಲಿ ನಂಬಿಕೆ ಹೊಂದಿದ್ದೇವೆ. ಐವಿಎಫ್ ಚಿಕಿತ್ಸೆಯನ್ನು ತೆಗೆದುಕೊಳ್ಳುವ ಮುನ್ನ ಪ್ರತಿ ರೋಗಿಗೆ ಸಲಹೆ, ಸಮಾಲೋಚನೆ ನೀಡಲಾಗುತ್ತದೆ. ಫಲಿತಾಂಶವು ಏನೇ ಇರಲಿ ಐವಿಎಫ್ ಆವರ್ತನವನ್ನು ತೆಗೆದುಕೊಳ್ಳಲು ಅವರು ಚೆನ್ನಾಗಿ ಸಿದ್ಧರಾಗಿದ್ದಾರೆ ಎಂಬುದನ್ನು ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇವೆ.

ಸದಾ ಬೆಳೆಯುತ್ತಿರುವ ನಮ್ಮ ಯಶಸ್ಸು

ಗರ್ಭಗುಡಿ ಎಂದರೆ ಕನಸುಗಳು ಜೀವಂತವಾಗಿರುವ ಸ್ಥಳ, ಇಲ್ಲಿ ಭರವಸೆಗಳು ಎಂದಿಗೂ ಮರೆಯಾಗುವುದಿಲ್ಲ ಮತ್ತು ಸಾಧ್ಯತೆಗಳು ಎಂದಿಗೂ ಕೊನೆಗೊಳ್ಳುವುದಿಲ್ಲ. ನಿಮ್ಮ ಆನಂದದ ಕಂದಮ್ಮಗಳನ್ನು ಕೈಗಳಲ್ಲಿ ಎತ್ತಿಹಿಡಿಯುವ ಸುವರ್ಣ ಕ್ಷಣವನ್ನು ಅನುಭವಿಸಲು ನಿಮಗೆ ನಾವು ನಿರಂತರವಾಗಿ ಸಹಾಯ ಮಾಡುತ್ತೇವೆ.