ಡಾ. ರಾಧಾ ಪುಚ್ಚಲಪಲ್ಲಿ

ಡಾ. ರಾಧಾ ಪುಚ್ಚಲಪಲ್ಲಿ

MBBS, DNB(OBG), FRM
ಫಲವತ್ತತೆ ತಜ್ಞರು
ವೈದ್ಯಕೀಯ ನೋಂದಣಿ ಸಂಖ್ಯೆ (ಕೆಎಂಸಿ) : 161939
ತಿಳಿದಿರುವ ಭಾಷೆಗಳು: ತಮಿಳು, ತೆಲುಗು, ಕನ್ನಡ, ಇಂಗ್ಲಿಷ್‌ ಮತ್ತು ಹಿಂದಿ

ನಿಮ್ಮ ನೇಮಕಾತಿಯನ್ನು ಕಾಯ್ದಿರಿಸಿ

ಶಾಖೆ
ಆವರಣದಲ್ಲಿ
ಆನ್ಲೈನ್

* ನೇಮಕಾತಿಗಳು ವೈದ್ಯರ ಲಭ್ಯತೆಗೆ ಒಳಪಟ್ಟಿರುತ್ತವೆ. ದಯವಿಟ್ಟು, ನೀವು ಈಗಾಗಲೇ ಗರ್ಭಗುಡಿಗೆ ಭೇಟಿ ನೀಡಿದ್ದರೆ ನಿಮ್ಮ ನೋಂದಾಯಿತ ಸಂಖ್ಯೆಯನ್ನು ನೀವು ನೀಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

ಡಾ. ರಾಧಾ ಪುಚ್ಚಲಪಲ್ಲಿ  ಅನುಭವಿ ಸ್ತ್ರೀರೋಗತಜ್ಞೆ ಮತ್ತು ಸಂತಾನೋತ್ಪತ್ತಿ ಔಷಧ ಕ್ಷೇತ್ರದಲ್ಲಿ ಸುಮಾರು ಆರು ವರ್ಷಗಳಿಗೂ ಹೆಚ್ಚಿನ ಅನುಭವವಿರುವ ಫಲವತ್ತತೆ ತಜ್ಞರಾಗಿದ್ದಾರೆ. ಗ್ರಾಮೀಣ ಭಾಗ ಮತ್ತು  ಖಾಸಗಿ ಆಸ್ಪತ್ರೆಗಳಲ್ಲಿ 6 ವರ್ಷಗಳಿಗೂ ಹೆಚ್ಚಿನ ವೈದ್ಯಕೀಯ ಅನುಭವ ಹೊಂದಿರುವ ಅವರು, ಮಕ್ಕಳಿಲ್ಲದ ದಂಪತಿಗಳ ಕನಸನ್ನು ನನಸು ಮಾಡಲು ತಮ್ಮ ಸೇವೆಯನ್ನು ಮುಡಿಪಾಗಿಟ್ಟಿದ್ದಾರೆ. ಅಲ್ಲದೆ ಬಹುಭಾಷೆಗಳನ್ನ ತಿಳಿದಿರುವ ಕಾರಣ  (ತೆಲುಗು, ಕನ್ನಡ, ಹಿಂದಿ, ತಮಿಳು ಮತ್ತು ಇಂಗ್ಲಿಷ್) ತಮ್ಮಲ್ಲಿಗೆ ಬರುವ ವಿವಿಧ ಭಾಷೆಯ ದಂಪತಿಗಳ ಭಾವನೆಗಳನ್ನು ಅರ್ಥ ಮಾಡಿಕೊಂಡು ಅವರಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ಸಫಲರಾಗಿದ್ದಾರೆ. 

ಶಿಕ್ಷಣ ಮತ್ತು ಅರ್ಹತೆಗಳು

ವೈದ್ಯಕೀಯ ಪದವಿ (MBBS): ಶ್ರೀ ವೆಂಕಟೇಶ್ವರ ಸರ್ಕಾರಿ ವೈದ್ಯಕೀಯ ಕಾಲೇಜು, ತಿರುಪತಿ, ಆಂಧ್ರಪ್ರದೇಶ (2000–2006)

DGO (ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಸ್ನಾತಕೋತ್ತರ ಡಿಪ್ಲೊಮಾ): ಕರ್ನೂಲ್ ಸರ್ಕಾರಿ ವೈದ್ಯಕೀಯ ಕಾಲೇಜು, ಆಂಧ್ರಪ್ರದೇಶ (2008–2010)

ಸಂತಾನೋತ್ಪತ್ತಿ ಔಷಧದಲ್ಲಿ ಫೆಲೋಶಿಪ್ (FRM, ICOG ಪ್ರಮಾಣೀಕೃತ): ಡಾ. ಪಾಟೀಲ್ ಅವರ ಫಲವತ್ತತೆ ಕೇಂದ್ರ, ಬೆಂಗಳೂರು (2019)

ಅನುಭವ ಮತ್ತು ಪರಿಣತಿ

ಆಂಧ್ರಪ್ರದೇಶದ ಅನಂತಪುರದ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಆಸ್ಪತ್ರೆಯಲ್ಲಿ (RDT ಆಸ್ಪತ್ರೆ) 2 ವರ್ಷಗಳು

ಆಂಧ್ರಪ್ರದೇಶದ ಚಿತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ  4 ವರ್ಷಗಳ ಸೇವೆ

ಡಾ. ರಾಧಾ ಪುಚ್ಚಲಪಲ್ಲಿ ಅವರು ಬಂಜೆತನ ನಿರ್ವಹಣೆ, ನೆರವಿನ ಸಂತಾನೋತ್ಪತ್ತಿ ಚಿಕಿತ್ಸೆಗಳು, ಸ್ತ್ರೀರೋಗ ಸಮಸ್ಯೆಗಳು  ಮತ್ತು ಫಲವತ್ತತೆ ಆರೈಕೆಯಲ್ಲಿ ಹೆಚ್ಚಿನ ಪರಿಣತಿ ಹೊಂದಿದ್ದಾರೆ.

ಸರ್ಟಿಫಿಕೇಟ್‌ಗಳು

ಸಂತಾನೋತ್ಪತ್ತಿ ಔಷಧದಲ್ಲಿ ಫೆಲೋಶಿಪ್ (ICOG ಪ್ರಮಾಣೀಕೃತ, 2019)

IVF ಚಿಕಿತ್ಸೆ 

ಡಾ. ರಾಧಾ ಅವರು ಫಲವತ್ತತೆ ಚಿಕಿತ್ಸೆ ನೀಡುವಾಗ ಸಮಗ್ರ ಮತ್ತು ಸಹಾನುಭೂತಿ ವಿಧಾನವನ್ನು ಅನುಸರಿಸುತ್ತಾರೆ. ಅದರಲ್ಲಿ ಅಪಾರವಾದ ನಂಬಿಕೆ ಇರಿಸಿದ್ದಾರೆ. ಪ್ರತಿಯೊಂದು ದಂಪತಿಗೂ ಅವರ ಅಗತ್ಯಕ್ಕನುಗುಣವಾಗಿ ವೈಯಕ್ತಿಕಗೊಳಿಸಿದ ಚಿಕಿತ್ಸೆ ಮತ್ತು ಸರಿಯಾದ ಮಾರ್ಗದರ್ಶನದ ಜೊತೆಗೆ ಅತ್ಯಾಧುನಿಕ ಚಿಕಿತ್ಸೆ ನೀಡುವಲ್ಲಿ ಡಾ. ರಾಧಾ ಅವರು ಹೆಚ್ಚಿನ ಮುತುವರ್ಜಿ ವಹಿಸುತ್ತಾರೆ.  

ಚಿಕಿತ್ಸೆಯಲ್ಲಿ ಪರಿಣಿತಿ 

ರೋಗಿ-ಕೇಂದ್ರಿತ ಫಲವತ್ತತೆ ಆರೈಕೆ

IVF, IUI ಮತ್ತು ಅಡ್ವಾನ್ಸಡ್‌ ರಿಪ್ರೊಡಕ್ಟಿವ್‌ ಮೆಡಿಸನ್‌ನಲ್ಲಿ ಪರಿಣಿತಿ

ರೋಗಿಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಭಾಷಾ ಪ್ರಾವೀಣ್ಯತೆ 

ಗ್ರಾಮೀಣ ಮತ್ತು ನಗರ ಆರೋಗ್ಯ ಸೇವೆಗಳಲ್ಲಿ ಅನುಭವ

 

ಈ ಪುಟವನ್ನು ಹಂಚಿಕೊಳ್ಳಿ

ಕರೆಗಾಗಿ ವಿನಂತಿಸಿ

+91 9108 9108 32