ಕರ್ನಾಟಕದಾದ್ಯಂತ ನಾವು ಒಂಭತ್ತು ಅತ್ಯಾಧುನಿಕ ಶಾಖೆಗಳನ್ನು ಹೊಂದಿದ್ದೇವೆ. ತಮಿಳುನಾಡಿನ ಹೊಸೂರಿನ ಶಾಖೆಯಲ್ಲಿ ಎಲ್ಲಾ ರೀತಿಯ ಇನ್‌ಫರ್ಟಿಲಿಟಿ ಸಮಸ್ಯೆಗಳಿಗೂ ವಿಶ್ವದರ್ಜೆಯ ಚಿಕಿತ್ಸೆ ದೊರೆಯಲಿದೆ.
ನಮ್ಮ ಸೇವೆಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಮತ್ತು ನಿಮಗೆ ಹತ್ತಿರವಾದ ನಮ್ಮ ಶಾಖೆಯನ್ನು ಹುಡುಕಲು ಇಂದೇ ನಮ್ಮನ್ನು ಸಂಪರ್ಕಿಸಿ.
ಹೊಸೂರು ದೊರೆಯುವ ಬಂಜೆತನ ಚಿಕಿತ್ಸೆಗಳು








# 822/3, KM ಟವರ್ಸ್, ಕೃಷ್ಣಗಿರಿ ಬೈಪಾಸ್ ರಸ್ತೆ, ವಸಂತ ನಗರ, ಹೊಸೂರು, ತಮಿಳುನಾಡು 635 109
ಗರ್ಭಗುಡಿ IVF ಕೇಂದ್ರ, ಹೊಸೂರು
ಗರ್ಭಗುಡಿ IVF ಸೆಂಟರ್ ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ IVF ಸೆಂಟರ್ ಆಗಿದ್ದು, ಮಕ್ಕಳಿಲ್ಲದ ದಂಪತಿಗಳಿಗೆ ವಿಶ್ವದರ್ಜೆಯ ಚಿಕಿತ್ಸೆ ನೀಡುವುದು ನಮ್ಮ ಗುರಿಯಾಗಿದೆ. ಕರ್ನಾಟಕವಲ್ಲದೆ ಈಗ ತಮಿಳುನಾಡಿನ ಹೊಸೂರಿನಲ್ಲೂ ನಮ್ಮ ಸೇವೆ ವಿಸ್ತರಿಸಿದ್ದು, ಗರ್ಭಗುಡಿ ಒಟ್ಟು ಹತ್ತು ಸುಸಜ್ಜಿತ ಶಾಖೆಗಳನ್ನು ಹೊಂದಿದಂತಾಗುತ್ತದೆ. ಈ ಹತ್ತೂ ಶಾಖೆಗಳ ಮೂಲಕ ದಂಪತಿಗಳ ತಾಯ್ತನದ ಕನಸನ್ನು ನನಸು ಮಾಡಲು ನಾವು ಸದಾ ಮುಂಚೂಣಿಯಲ್ಲಿರುತ್ತೇವೆ ಎಂದು ಹೇಳಲು ನಮಗೆ ಹೆಮ್ಮೆ ಎನಿಸುತ್ತದೆ.
ಹೊಸೂರಿನ ಮುಖ್ಯ ರಸ್ತೆಯಲ್ಲಿ ಆರಂಭವಾಗಿರುವ ಗರ್ಭಗುಡಿ ಶಾಖೆ ಎಲ್ಲಾ ರೀತಿಯ ಅತ್ಯಾಧುನಿಕ ಸೌಕರ್ಯವನ್ನು ಹೊಂದಿದೆ. ನುರಿತ ವೈದ್ಯರು, ದಾದಿಯರು, ಎಂಬ್ರಿಯೋಲಾಜಿಸ್ಟ್ ಟೀಮ್, ದಂಪತಿಗಳಿಗೆ ಅತ್ಯುತ್ತಮ ಸೇವೆ ಮತ್ತು ಆರೈಕೆ ನೀಡಲಿದ್ದು ಅತಿ ಹೆಚ್ಚು ಯಶಸ್ಸು ಸಿಗಲಿದೆ.
ನಾಡು ಕಂಡ ಶ್ರೇಷ್ಠ ಫಲವತ್ತತೆ ವೈದ್ಯೆ ಹಾಗೂ ಗರ್ಭಗುಡಿಯ ಸಂಸ್ಥಾಪಕರು ಮತ್ತು ವೈದ್ಯಕೀಯ ನಿರ್ದೇಶಕರಾದ ಡಾ. ಆಶಾ ಎಸ್. ವಿಜಯ್ ಮತ್ತು ಗರ್ಭಗುಡಿ ಗ್ರೂಪ್ CEO ವಿಜಯ್ ಕುಮಾರ್ ಎಸ್. ಇವರ ನೇತೃತ್ವದಲ್ಲಿ ಗರ್ಭಗುಡಿ ಆಸ್ಪತ್ರೆ ಅದ್ವಿತೀಯವಾದ ಸಾಧನೆಯನ್ನೇ ಮಾಡಿದೆ. ಸುಮಾರು 15 ಸಾವಿರಕ್ಕೂ ಹೆಚ್ಚು ಮಕ್ಕಳು ಜನ್ಮತಾಳಲು ನೆರವಾಗಿದೆ. ಆ ಮೂಲಕ 15 ಸಾವಿರಕ್ಕೂ ಹೆಚ್ಚು ಕುಟುಂಬಗಳು ಸಂತಸದಿಂದ, ಸಂಭ್ರಮದಿಂದ ತಮ್ಮ ಕುಟುಂಬವನ್ನು ಪರಿಪೂರ್ಣಗೊಳಿಸಿಕೊಳ್ಳಲು ನೆರವಾಗಿದೆ.
ಆಗಸ್ಟ್ 28 ರಂದು ಆರಂಭವಾಗಿರುವ ಹೊಸೂರು ಶಾಖೆ, ಆಗಸ್ಟ್ 29ರಿಂದಲೇ ತನ್ನ ಕಾರ್ಯವನ್ನು ಆರಂಭ ಮಾಡಿದ್ದು ತನ್ನಲ್ಲಿಗೆ ಚಿಕಿತ್ಸೆಗೆಂದು ಬರುವ ದಂಪತಿಗಳಿಗೆ ವೈಯಕ್ತಿಕಗೊಳಿಸಿದ ಸಂಪೂರ್ಣ ಚಿಕಿತ್ಸೆ ನೀಡುತ್ತಿದೆ. IVF ಜೊತೆಗೆ, ಗರ್ಭಗುಡಿಯು ಇಂಟ್ರಾಸೈಟೋಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್ (ICSI), ಪ್ರಿಇಂಪ್ಲಾಂಟೇಷನ್ ಜೆನೆಟಿಕ್ ಡಯಾಗ್ನೋಸಿಸ್ (PGD) ಮತ್ತು ಇತರೆ ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನಗಳ ಸೇವೆಯನ್ನೂ ಹೊಸೂರಿನಲ್ಲಿ ಪಡೆಯಬಹುದು.