ಗರ್ಭಾಶಯದ ಒಳಗಿನ ಗರ್ಭಧಾರಣೆ (ಐಯುಐ)

ಗರ್ಭಾಶಯದ ಒಳಗಿನ ಗರ್ಭಧಾರಣೆ (ಐಯುಐ)

ಐಯುಐ ಎಂದರೇನು?

ಐಯುಐ ಅಥವಾ ಗರ್ಭಾಶಯದೊಳಗಿನ ಗರ್ಭಧಾರಣೆ ಫರ್ಟಿಲಿಟಿ ಚಿಕಿತ್ಸೆಯ ಒಂದು ಪ್ರಮುಖ ವಿಧಾನವಾಗಿದೆ. ಈ ವಿಧಾನದಲ್ಲಿ ಪುರುಷ ಸಂಗಾತಿಯ ವೀರ್ಯದ ಮಾದರಿಯನ್ನು “ತೊಳೆದು” ಕಾನ್‍ಸೆಂಟ್ರೇಟ್ ಮಾಡಿ(ಸಾಂದ್ರೀಕರಿಸಿ) ನಂತರ ನೇರವಾಗಿ ಗರ್ಭಾಶಯಕ್ಕೆ ಸೇರಿಸಲಾಗುತ್ತದೆ. ಇದು ವೀರ್ಯದ ಮಾದರಿಯಲ್ಲಿನ ವೀರ್ಯಾಣುವನ್ನು ಅಂಡಾಣುವಿನ ಹತ್ತಿರಕ್ಕೆ ಇರಿಸುತ್ತದೆಯಲ್ಲದೆ ಫಾಲೋಪಿಯನ್ ಟ್ಯೂಬ್‍ ತಲುಪುತ್ತದೆ. ಇದರಿಂದಾಗಿ ಫರ್ಟಿಲೈಸೇಷನ್‍ ಸುಲಭಗೊಳಿಸುತ್ತದೆ. ಸಂತಾನೋತ್ಪತ್ತಿ ಸಮಸ್ಯೆಯನ್ನು ಎದುರಿಸುತ್ತಿರುವ ದಂಪತಿಗಳು ಮಗುವನ್ನು ಪಡೆಯಲು ಗರ್ಭಾಶಯದ ಒಳಗಿನ ಗರ್ಭಧಾರಣೆಯನ್ನು (ಐಯುಐ) ಆರಿಸಿಕೊಳ್ಳಬಹುದು.

ಐಯುಐನ ಉದ್ದೇಶ ಗರ್ಭಿಣಿಯಾಗುವ ಸಾಧ್ಯತೆಯನ್ನು ಹೆಚ್ಚಿಸುವುದು. ವೀರ್ಯಾಣುವು ಅಂಡಾಣುವನ್ನು ಫರ್ಟಿಲೈಸ್ ಮಾಡಿದರೆ(ಫಲವತ್ತಾಗಿಸಿದರೆ) ಮತ್ತು ಫಲವತ್ತಾದ ಅಂಡಾಣುವನ್ನು ಗರ್ಭಾಶಯದಲ್ಲಿ ಸರಿಯಾಗಿ ಅಳವಡಿಸಿದರೆ ಇದು ಸಾಧ್ಯವಾಗುವುದು. ಐಯುಐ ಅನ್ನು ಸಾಮಾನ್ಯವಾಗಿ ‘ದಾನಿ ಗರ್ಭಧಾರಣೆ' ಅಥವಾ 'ಕೃತಕ ಗರ್ಭಧಾರಣೆ' ಎಂದು ಕರೆಯಲಾಗುತ್ತದೆ. ಇದು ಕನಿಷ್ಠ ಆಕ್ರಮಣಕಾರಿ ಮತ್ತು ಫಲವತ್ತತೆ ಚಿಕಿತ್ಸೆಯ ಕೈಗೆಟುಕುವ ರೂಪವಾಗಿದೆ.

ಐಯುಐ ಚಿಕಿತ್ಸೆಯನ್ನು ಯಾರು ತೆಗೆದುಕೊಳ್ಳಬಹುದು ಅಥವಾ ಐಯುಐ ಚಿಕಿತ್ಸೆಯನ್ನು ಯಾವಾಗ ಸೂಚಿಸಲಾಗುತ್ತದೆ?

ಪೋಷಕತ್ವದ ಸಂತೋಷವನ್ನು ಪಡೆಯಲು ದಂಪತಿಗೆ ಐಯುಐ ಸಲಹೆ ನೀಡಲು ವಿವಿಧ ಕಾರಣಗಳಿವೆ. ಕೆಳಗಿನ ಸಂದರ್ಭಗಳಲ್ಲಿ ಐಯುಐ ಶಿಫಾರಸು ಮಾಡಲಾಗುತ್ತದೆ:

• ವಿವರಿಸಲಾಗದ ಸಂತಾನೋತ್ಪತ್ತಿ ಸಮಸ್ಯೆ: ಅಂಡೋತ್ಪತ್ತಿಯನ್ನು ಪ್ರಚೋದಿಸುವ ಔಷಧಿಗಳ ಜೊತೆಗೆ ಐಯುಐ ಅನ್ನು ಇಲ್ಲಿ ಸಲಹೆ ಮಾಡಲಾಗುತ್ತದೆ.

• ಎಂಡೋಮೆಟ್ರಿಯೊಸಿಸ್‍ನಿಂದಾಗಿ ಸಂತಾನೋತ್ಪತ್ತಿ ಸಮಸ್ಯೆ: ಆರೋಗ್ಯಕರ ಅಂಡಾಣು ಉತ್ಪಾದನೆಗೆ ಔಷಧಿಯನ್ನು ಶಿಫಾರಸು ಮಾಡಲಾಗುತ್ತದೆ. ಐಯುಐ ಅನ್ನು ಆಯ್ಕೆ ಮಾಡುವುದರಿಂದ ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

• ಗರ್ಭಕಂಠದ ಅಥವಾ ಗರ್ಭಕಂಠದ ಲೋಳೆಯೊಂದಿಗಿನ ಸಮಸ್ಯೆಗಳು: ಗರ್ಭಕಂಠದ ಲೋಳೆಯು ಬಂಜೆತನವನ್ನು ಹೆಚ್ಚಿಸುತ್ತದೆ. ವೀರ್ಯಾಣುಗಳು ಗರ್ಭಕಂಠವನ್ನು ಬೈಪಾಸ್ ಮಾಡಲು ಐಯುಐ ಸಹಾಯ ಮಾಡುವುದರಿಂದ, ಇದು ವೀರ್ಯಾಣುಗಳು ನೇರವಾಗಿ ಗರ್ಭಾಶಯವನ್ನು ಪ್ರವೇಶಿಸಲು ಅವಕಾಶ ಮಾಡಿಕೊಡುತ್ತದೆ. ಇದರೊಂದಿಗೆ ಫರ್ಟಿಲೈಸೇಷನ್‍ಗೆ ಲಭ್ಯವಿರುವ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.

• ವೀರ್ಯಾಣು ಎಣಿಕೆ ಕಡಿಮೆಯಾಗಿರುವುದು: ಫರ್ಟಿಲೈಸೇಷನ್ ನಡೆಯಲು ಲಭ್ಯವಿರುವ ಆರೋಗ್ಯಕರ ವೀರ್ಯವನ್ನು ನೇರವಾಗಿ ಗರ್ಭಾಶಯಕ್ಕೆ ಸೇರಿಸುವ ಆಯ್ಕೆಯನ್ನು ಐಯುಐ ನೀಡುತ್ತದೆ.

• ಕಡಿಮೆಯಾದ ವೀರ್ಯ ಚಲನಶೀಲತೆ: ಐಯುಐನಲ್ಲಿ ಬಳಸಲಾಗುವ ವೀರ್ಯ ತಯಾರಿಕೆಯ ತಂತ್ರಗಳು ಆರೋಗ್ಯಕರ ವೀರ್ಯಾಣುವಿನ ಚಲನಶೀಲತೆಯನ್ನು ಹೆಚ್ಚಿಸಬಹುದು ಮತ್ತು ಆ ಮೂಲಕ ಫರ್ಟಿಲೈಸೇಷನ್‍ನ ಸಾಧ್ಯತೆಗಳನ್ನು ಹೆಚ್ಚಿಸಬಹುದು.

• ಸ್ಖಲನ ಅಥವಾ ನಿಮಿರುವಿಕೆಯ ಸಮಸ್ಯೆಗಳು: ಇಂತಹ ಸಮಸ್ಯೆಯಿರುವ ದಂಪತಿಗಳು ಐಯುಐಅನ್ನು ಆರಿಸಿಕೊಳ್ಳಬಹುದು, ಏಕೆಂದರೆ ಇದು ಆರೋಗ್ಯಕರ ಚಲನಶೀಲ ವೀರ್ಯಾಣುಗಳನ್ನು ಗರ್ಭಾಶಯದೊಳಗೆ ಸೇರಿಸಲು ಅವಕಾಶ ಮಾಡಿಕೊಡುತ್ತದೆ ಮತ್ತು ಇದರಿಂದಾಗಿ ಫರ್ಟಿಲೈಸೇಷನ್‍ನ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

• ಸಲಿಂಗಿ ದಂಪತಿಗಳು ಗರ್ಭಧರಿಸಲು ಬಯಸುತ್ತಾರೆ: ದಾನಿ ವೀರ್ಯಾಣುವಿನೊಂದಿಗೆ ಎಲ್‍ಜಿಬಿಟಿ ದಂಪತಿಗಳಿಗೆ ಪಿತೃತ್ವವನ್ನು ಪಡೆಯಲು ಐಯುಐ ಅವಕಾಶ ನೀಡುತ್ತದೆ.

• ಮಗುವನ್ನು ಹೊಂದುವ ಒಂಟಿ ಮಹಿಳೆಯ ಬಯಕೆ: ದಾನಿ ವೀರ್ಯದೊಂದಿಗೆ ಗರ್ಭಧರಿಸಲು ಮತ್ತು ಮಾತೃತ್ವವನ್ನು ಪಡೆಯುವ ಒಂಟಿ ಮಹಿಳೆಯ ಬಯಕೆಯನ್ನು ಐಯುಐ ಪೂರೈಸುತ್ತದೆ.

• ಪುರುಷ ಸಂಗಾತಿಯಿಂದ ಮಗುವಿಗೆ ಆನುವಂಶಿಕ ದೋಷವನ್ನು ಹರಡುವುದನ್ನು ತಪ್ಪಿಸಲು ಬಯಸುವ ದಂಪತಿಗಳು: ದಾನಿ ವೀರ್ಯದೊಂದಿಗೆ ಅಂತಹ ದಂಪತಿಗಳು ಆರೋಗ್ಯಕರ ಮಗುವನ್ನು ಹೊಂದಲು ಐಯುಐ ಸಹಾಯ ಮಾಡುತ್ತದೆ.

ಐಯುಐ ಆಕ್ರಮಣಕಾರಿಯಲ್ಲ ಮತ್ತು ನೋವುರಹಿತ ವಿಧಾನವಾಗಿದೆ ಮತ್ತು ಕನಿಷ್ಠ ಔಷಧಿಗಳೊಂದಿಗೆ ನಿಮ್ಮ ನೈಸರ್ಗಿಕ ಚಕ್ರದೊಂದಿಗೆ ಮಾಡಬಹುದು. ಅಂಡೋತ್ಪತ್ತಿ ಸಮಯದಲ್ಲಿ, ವೀರ್ಯಾಣು ಕೋಶಗಳನ್ನು ಪುರುಷ ಸಂಗಾತಿಯಿಂದ ಸಂಗ್ರಹಿಸಲಾಗುತ್ತದೆ ಮತ್ತು ಐಯುಐನಲ್ಲಿ ಬಳಸಲಾಗುತ್ತದೆ. ಐಯುಐ ಮತ್ತು ಅಂಡಾಶಯದ ಪ್ರಚೋದನೆಯ ಸಂಯೋಜನೆಯೊಂದಿಗೆ ಗರ್ಭಧಾರಣೆಯ ಸಾಧ್ಯತೆಗಳು ಹೆಚ್ಚಾಗಬಹುದು. ಅಂಡಾಶಯದಲ್ಲಿ ಅಂಡಾಣುಗಳ ಬೆಳವಣಿಗೆಯನ್ನು ಉತ್ತೇಜಿಸುವ ನಿರ್ದಿಷ್ಟ ಔಷಧಿಗಳೊಂದಿಗೆ ಬಹು ಅಂಡಾಣುಗಳನ್ನು ಉತ್ಪಾದಿಸುವುದಕ್ಕಾಗಿ ಅಂಡಾಶಯದ ಪ್ರಚೋದನೆಯನ್ನು ಸಾಧಿಸಬಹುದು.

ಐಯುಐ ಕಾರ್ಯವಿಧಾನ

ಸೋಂಕಿನ ಸಾಧ್ಯತೆಗಳು ಇರಬಹುದು, ಆದರೆ ಅನುಭವಿ ಫರ್ಟಿಲಿಟಿ ವೈದ್ಯರು ಸೋಂಕುರಹಿತವಾದ ಉಪಕರಣಗಳನ್ನು ಬಳಸಿಕೊಂಡು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಐಯುಐ ಸಮಯದಲ್ಲಿ ನೀವು ಫರ್ಟಿಲಿಟಿ ಔಷಧಿಯನ್ನು ಬಳಸುತ್ತಿದ್ದರೆ, ನಂತರ ಬಹು ಗರ್ಭಧಾರಣೆಯ ಸಾಧ್ಯತೆಗಳಿವೆ. ನಿಮ್ಮ ಫರ್ಟಿಲಿಟಿ ವೈದ್ಯರು ಔಷಧಗಳನ್ನು ಬದಲಾವಣೆಗಳೊಂದಿಗೆ ಸರಿಹೊಂದಿಸುತ್ತಾರೆ ಮತ್ತು ಹೆಚ್ಚಿನ ತೊಡಕುಗಳನ್ನು ತಪ್ಪಿಸಲು ನಿಮ್ಮ ಆರೋಗ್ಯದ ಮೇಲ್ವಿಚಾರಣೆ ಮಾಡುವರು. ಫರ್ಟಿಲಿಟಿ ಔಷಧಕ್ಕೆ ಹೆಚ್ಚಿನ ಪ್ರತಿಕ್ರಿಯೆ ಇದ್ದಾಗ ನೀವು ಅಂಡಾಶಯದ ಹೈಪರ್‍ಸ್ಟಿಮ್ಯುಲೇಶನ್ ಸಿಂಡ್ರೋಮ್ ಅನ್ನು ಅನುಭವಿಸಬಹುದು.

• ನಿಮ್ಮ ಋತು ಆವರ್ತನದ ಸಮಯದಲ್ಲಿ ನಿಮ್ಮ ಫರ್ಟಿಲಿಟಿ ವೈದ್ಯರನ್ನು ನೀವು ಭೇಟಿ ಮಾಡಬೇಕು. ಅಲ್ಲದೇ ರಕ್ತ ಪರೀಕ್ಷೆ, ಅಲ್ಟ್ರಾಸೌಂಡ್ ಮತ್ತು ಔಷಧಗಳ ಬಗ್ಗೆ ಸೂಚನೆಗಳನ್ನು ಪಡೆಯಬೇಕು.

• ಸಲಹೆಯ ಪ್ರಕಾರ ಅಲ್ಟ್ರಾಸೌಂಡ್ ಸ್ಕ್ಯಾನ್ ಮತ್ತು ರಕ್ತ ಪರೀಕ್ಷೆಗಾಗಿ ನೀವು ನಿಮ್ಮ ಫರ್ಟಿಲಿಟಿ ವೈದ್ಯರನ್ನು ಭೇಟಿ ಮಾಡಬೇಕಾಗುವುದು.

• ನಿಮ್ಮ ಔಷಧಿಗಳನ್ನು ಪ್ರಾರಂಭಿಸಿದ 10 ರಿಂದ 15 ದಿನಗಳ ನಂತರ, ನಿಮ್ಮ ಪರೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ, ನೀವು ಅಂಡೋತ್ಪತ್ತಿ ಮಾಡುತ್ತಿದ್ದೀರಾ ಎಂಬುದನ್ನು ಪರೀಕ್ಷಿಸಲು ನೀವು ಫರ್ಟಿಲಿಟಿ ಚಿಕಿತ್ಸಾಲಯಕ್ಕೆ ಭೇಟಿ ನೀಡಬೇಕಾಗುತ್ತದೆ.

• ಅಂಡಾಣುವಿನ ಬೆಳವಣಿಗೆಯನ್ನು ಸುಧಾರಿಸಲು ವೈದ್ಯರು ನಿಮಗೆ ನಿಗದಿತ ಔಷಧಗಳು/ಚುಚ್ಚುಮದ್ದುಗಳನ್ನು ತೆಗೆದುಕೊಳ್ಳಲು ಸಲಹೆ ನೀಡಬಹುದು.

• ನಿಮ್ಮ ಸಂಗಾತಿಯಿಂದ ವೀರ್ಯದ ಮಾದರಿಗಳನ್ನು ಕಾರ್ಯವಿಧಾನದ ದಿನ ಅಥವಾ ಅದಕ್ಕೂ ಮೊದಲು ಸಂಗ್ರಹಿಸಲಾಗುತ್ತದೆ ಮತ್ತು ದಾಸ್ತಾನು ಮಾಡಲಾಗುತ್ತದೆ.

• ವೀರ್ಯ ದ್ರವ ಮತ್ತು ಇತರ ಅಂಶಗಳನ್ನು ತೆಗೆದುಹಾಕಲು ವೀರ್ಯಾಣುವನ್ನು ತೊಳೆಯಲಾಗುತ್ತದೆ. ನಿರ್ದಿಷ್ಟ ಮಾದರಿಯನ್ನು ಆಧರಿಸಿ ವೀರ್ಯ ಮಾನದಂಡಗಳನ್ನು ಸುಧಾರಿಸಲು ನಿರ್ದಿಷ್ಟ ವೀರ್ಯ ತಯಾರಿಕೆ ತಂತ್ರಗಳನ್ನು ಬಳಸಲಾಗುವುದು.

• ನಿಮ್ಮನ್ನು ಮಲಗಿಸಲಾಗುವುದು. ಯೋನಿಯನ್ನು ನಿಧಾನವಾಗಿ ತೆರೆಯಲು ನಿಮ್ಮ ವೈದ್ಯರು ವೆಜೈನಲ್ ಸ್ಪೆಕ್ಯುಲಮ್ ಬಳಸುತ್ತಾರೆ.

• ತೊಳೆದು ತಯಾರಾದ ವೀರ್ಯಾಣುಗಳನ್ನು ಉದ್ದವಾದ ಮತ್ತು ತೆಳ್ಳಗಿರುವ ಟ್ಯೂಬ್‍ಗೆ ತುಂಬಲಾಗುತ್ತದೆ. ನಂತರ ಅದನ್ನು ನಿಮ್ಮ ಯೋನಿಯೊಳಗೆ ನಿಧಾನವಾಗಿ ಸೇರಿಸಲಾಗುತ್ತದೆ. (ಅಲ್ಟ್ರಾಸೌಂಡ್ ಮಾರ್ಗದರ್ಶನದಲ್ಲಿ) ಮತ್ತು ವೀರ್ಯ ಮಾದರಿಯನ್ನು ಫಾಲೋಪಿಯನ್ ಟ್ಯೂಬ್‍ನ ಹತ್ತಿರ ಹೊರಹಾಕಲಾಗುತ್ತದೆ. ಎಂಡೊಮೆಟ್ರಿಯಮ್ ಅಥವಾ ಗರ್ಭಾಶಯದ ಇತರ ಭಾಗಗಳಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ.

• ಸುಮಾರು ಮೂವತ್ತು ನಿಮಿಷಗಳ ಕಾಲ ಒರಗಿರುವ ಭಂಗಿಯಲ್ಲಿ ವಿಶ್ರಾಂತಿ ಪಡೆಯಲು ನಿಮಗೆ ಸಲಹೆ ನೀಡಲಾಗುತ್ತದೆ.

• ಕಾರ್ಯವಿಧಾನದ ಸಮಯದಲ್ಲಿ ನೀವು ಸ್ವಲ್ಪ ಅಸ್ವಸ್ಥತೆ ಅಥವಾ ಅಲ್ಪಪ್ರಮಾಣದ ಸೆಳೆತವನ್ನು ಅನುಭವಿಸಬಹುದು. ಕೆಲವೊಮ್ಮೆ ಸ್ಪಾಟಿಂಗ್(ಅಸಾಧಾರಣ ರಕ್ತಸ್ರಾವ) ಅಥವಾ ಯೋನಿ ರಕ್ತಸ್ರಾವವಾಗಬಹುದು.

• ಐಯುಐ ಕಾರ್ಯವಿಧಾನದ ಎರಡು ವಾರಗಳ ನಂತರ ನಿಮಗೆ ಗರ್ಭಧಾರಣೆಯ ಪರೀಕ್ಷೆಗೆ ಸಲಹೆ ನೀಡಲಾಗುತ್ತದೆ.

ಐಯುಐಗೆ ಸಂಬಂಧಿಸಿದ ಅಪಾಯಕಾರಿ ಅಂಶಗಳು ಯಾವುವು?

ಸೋಂಕಿನ ಸಾಧ್ಯತೆಗಳು ಇರಬಹುದು, ಆದರೆ ಅನುಭವಿ ಫರ್ಟಿಲಿಟಿ ವೈದ್ಯರು ಸೋಂಕುರಹಿತ ಉಪಕರಣಗಳನ್ನು ಬಳಸಿಕೊಂಡು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವರು. ಐಯುಐ ಸಮಯದಲ್ಲಿ ನೀವು ಫರ್ಟಿಲಿಟಿ ಔಷಧಿಯನ್ನು ಬಳಸುತ್ತಿದ್ದರೆ, ಬಹು ಗರ್ಭಧಾರಣೆಯ ಸಾಧ್ಯತೆಗಳಿವೆ. ನಿಮ್ಮ ಫರ್ಟಿಲಿಟಿ ವೈದ್ಯರು ಔಷಧಗಳನ್ನು ಬದಲಾಯಿಸಿ ಸರಿಹೊಂದಿಸುತ್ತಾರೆ ಮತ್ತು ಹೆಚ್ಚಿನ ತೊಡಕುಗಳನ್ನು ತಪ್ಪಿಸಲು ಸತತವಾಗಿ ನಿಮ್ಮ ವೈದ್ಯಕೀಯ ಮೇಲ್ವಿಚಾರಣೆ ನಡೆಸುವರು. ಫರ್ಟಿಲಿಟಿ ಔಷಧಿಗಳಿಗೆ ಹೆಚ್ಚಿನ ಪ್ರತಿಕ್ರಿಯೆ ಇದ್ದಾಗ ನೀವು ಅಂಡಾಶಯದ ಹೈಪರ್‍ಸ್ಟಿಮ್ಯುಲೇಶನ್ ಸಿಂಡ್ರೋಮ್ ಅನುಭವಿಸಬಹುದು.

ಈ ರೋಗಲಕ್ಷಣಗಳನ್ನು ನೀವು ಅನುಭವಿಸಿದಲ್ಲಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ:

• ವಾಕರಿಕೆ ಮತ್ತು ವಾಂತಿ.

• ಉಸಿರಾಟದಲ್ಲಿ ತೊಂದರೆ.

• ತೀವ್ರವಾದ ಹೊಟ್ಟೆ ನೋವು ಅಥವಾ ಸೊಂಟದ ಪ್ರದೇಶದಲ್ಲಿ ನೋವು.

• ತಲೆತಿರುಗುವಿಕೆ ಅಥವಾ ಪ್ರಜ್ಞೆ ತಪ್ಪುವ ಭಾವನೆ.

• ಹೊಟ್ಟೆ ಉಬ್ಬರವಾಗುವುದು.

• ಅತಿಸಾರ(ಡಯೇರಿಯ)

ಐಯುಐನ ಪ್ರಯೋಜನಗಳು

• ಕೈಗೆಟುಕುವ ವೆಚ್ಚ

• ಕಡಿಮೆ ಒತ್ತಡ ಮತ್ತು ಆಕ್ರಮಣಕಾರಿಯಲ್ಲ

• ಕಡಿಮೆ ಔಷಧಗಳ ಬಳಕೆ

ಐಯುಐನ ಅನಾನುಕೂಲಗಳು

• ಕಡಿಮೆ ಯಶಸ್ಸಿನ ಮಟ್ಟ

• ಬಹು ಗರ್ಭಧಾರಣೆಗಳು ಹೆಚ್ಚಿನ ಅಪಾಯದ ಗರ್ಭಾವಸ್ಥೆಗೆ ಕಾರಣವಾಗಬಹುದು.

• ಐವಿಎಫ್‍ಗೆ ಹೋಲಿಸಿದರೆ ಗರ್ಭಪಾತಗಳ ಸಂಖ್ಯೆ ಇಳಿಕೆಯಾಗುವ ಸಾಧ್ಯತೆಗಳು ಕಡಿಮೆ.

• ಸಂತಾನೋತ್ಪತ್ತಿ ಸಮಸ್ಯೆಯ ಕೆಲವು ಸಮಸ್ಯೆಗಳನ್ನು ಮಾತ್ರ ಪರಿಹರಿಸುತ್ತದೆ, ಎಲ್ಲವನ್ನೂ ಪರಿಹರಿಸುವುದಿಲ್ಲ.

ಐಯುಐ ಯಶಸ್ಸಿನ ದರ

ನಿಮ್ಮ ಆರೋಗ್ಯ, ವಯಸ್ಸು, ಸಂತಾನೋತ್ಪತ್ತಿ ಸಮಸ್ಯೆಯ ಕಾರಣ, ಐಯುಐನ ಯಶಸ್ಸಿನ ಮೇಲೆ ಪ್ರಭಾವ ಬೀರಲು ಬಳಸುವ ಔಷಧಿಗಳಂತಹ ಹಲವಾರು ಅಂಶಗಳನ್ನು ಐಯುಐನ ಯಶಸ್ಸು ಅವಲಂಬಿಸಿರುತ್ತದೆ. ನಿಮ್ಮ ಆರೋಗ್ಯ ಮತ್ತು ಸಂತಾನೋತ್ಪತ್ತಿ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ನಿಮ್ಮ ಫರ್ಟಿಲಿಟಿ ವೈದ್ಯರೊಂದಿಗೆ ಮುಕ್ತ ಚರ್ಚೆಯನ್ನು ನಡೆಸುವುದರಿಂದ ನಿಮಗೆ ಯಾವ ಉತ್ತಮ ವಿಧಾನವನ್ನು ಆರಿಸಿಕೊಳ್ಳಬೇಕೆಂಬುದರ ಬಗ್ಗೆ ಸ್ಪಷ್ಟತೆ ಪಡೆಯಲು ಸಹಾಯವಾಗುತ್ತದೆ. ಗರ್ಭಗುಡಿಯಲ್ಲಿ, ನಾವು ಐಯುಐನಲ್ಲಿ ಅಸಾಧಾರಣ ಯಶಸ್ಸಿನ ಮಟ್ಟಗಳನ್ನು ಸ್ಥಿರವಾಗಿ ಸಾಧಿಸುತ್ತಿದ್ದೇವೆ. ವಿಶ್ವಾದ್ಯಂತ ಸರಾಸರಿ ಐಯುಐ ಯಶಸ್ಸಿನ ಮಟ್ಟವು ಸುಮಾರು ಶೇ. 12-14ರಷ್ಟಾಗಿದೆ.

ಈ ಕೆಳಗಿನ ವಿವಿಧ ಅಂಶಗಳಿಂದಾಗಿ ಗರ್ಭಗುಡಿಯಲ್ಲಿ, ನಾವು ಐಯುಐನಲ್ಲಿ ಶೇ. 27 ಕ್ಕಿಂತ ಹೆಚ್ಚು ಯಶಸ್ಸನ್ನು ಸಾಧಿಸಬಹುದು.

• ಉತ್ತಮ ತರಬೇತಿ ಪಡೆದ ವೈದ್ಯರು ಮತ್ತು ಲ್ಯಾಬ್(ಪ್ರಯೋಗಾಲಯ) ಸಿಬ್ಬಂದಿ

• ವಿಶ್ವ ಮಟ್ಟದ ಮೂಲಸೌಕರ್ಯ ಮತ್ತು ಇತ್ತೀಚಿನ ಉಪಕರಣಗಳು

• ರೋಗಿಯ ವೈದ್ಯಕೀಯ ವಿವರಗಳನ್ನು ಆಧರಿಸಿ ಹೇಳಿ ಮಾಡಿಸಿದಂತಹ ಚಿಕಿತ್ಸೆ ಶಿಷ್ಟಾಚಾರಗಳು

• ಇತ್ತೀಚಿನ ಚಿಕಿತ್ಸಾ ವಿಧಾನಗಳು, ವ್ಯವಸ್ಥೆಗಳು ಮತ್ತು ಪ್ರಕ್ರಿಯೆಗಳ ಅಳವಡಿಕೆ

• ಹತ್ತು ವರ್ಷಗಳವರೆಗೆ ನಿರಂತರ ಪ್ರಕ್ರಿಯೆ ಸುಧಾರಣೆ

• ಅತ್ಯುತ್ತಮ ಔಷಧಿಗಳು, ಸಂಸ್ಕರಣಾ ಮಾಧ್ಯಮ, ಬಳಕೆ ವಸ್ತುಗಳು ಮತ್ತು ಚುಚ್ಚುಮದ್ದುಗಳ ಬಳಕೆ

ಸಾರಾಂಶ

ಗರ್ಭಾಶಯದೊಳಗಿನ ಗರ್ಭಧಾರಣೆಯು ನೋವುರಹಿತ, ಆಕ್ರಮಣಶೀಲವಲ್ಲದ, ಕಡಿಮೆ-ಅಪಾಯಕಾರಿ ಮತ್ತು ಅಗ್ಗದ ಕ್ರಮವಾಗಿದೆ. ನೀವು ಸಂತಾನೋತ್ಪತ್ತಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಮತ್ತು ಐಯುಐ ನಿಮಗೆ ಸರಿಯಾದ ಚಿಕಿತ್ಸೆಯಾಗಿದೆಯೇ ಎಂದು ತಿಳಿಯಲು ಬಯಸಿದರೆ, ಫರ್ಟಿಲಿಟಿ ವೈದ್ಯರನ್ನು ಸಂಪರ್ಕಿಸುವುದು ಸಹಾಯಕವಾಗಬಹುದು.

ಭಾರತದಲ್ಲಿ ಐಯುಐ ಚಿಕಿತ್ಸೆಯ ವೆಚ್ಚವು ರಾಜ್ಯದಿಂದ ರಾಜ್ಯಕ್ಕೆ ಮತ್ತು ಒಂದು ಕೇಂದ್ರದಿಂದ ಇನ್ನೊಂದಕ್ಕೆ ಬೇರೆಬೇರೆಯಾಗಿರುತ್ತದೆ. ನೀವು ಬೆಂಗಳೂರಿನಲ್ಲಿ ಐಯುಐ ಚಿಕಿತ್ಸೆ ತೆಗೆದುಕೊಳ್ಳಲು ಬಯಸಿದರೆ , ಗರ್ಭಗುಡಿ ಐವಿಎಫ್ ಕೇಂದ್ರವು ಎಲ್ಲಾ ದಿಕ್ಕುಗಳಲ್ಲಿಯೂ ತನ್ನ ಏಳು ಶಾಖೆಗಳನ್ನು ಹೊಂದಿದ್ದು, ಹೆಚ್ಚಿನ ಯಶಸ್ಸಿನ ಮಟ್ಟಗಳೊಂದಿಗೆ ಐಯುಐ ಕಾರ್ಯವಿಧಾನಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ.

ಈ ಪುಟವನ್ನು ಹಂಚಿಕೊಳ್ಳಿ