ಡಾ ಆಶಾ ಎಸ್ ವಿಜಯ್

ಡಾ ಆಶಾ ಎಸ್ ವಿಜಯ್

MBBS, DGO-DNB
ವೈದ್ಯಕೀಯ ನಿರ್ದೇಶಕರು - ಗರ್ಭಗುಡಿ
ವೈದ್ಯಕೀಯ ನೋಂದಣಿ ಸಂಖ್ಯೆ (ಕೆಎಂಸಿ) : 33884
ತಿಳಿದಿರುವ ಭಾಷೆಗಳು: ಕನ್ನಡ, ಹಿಂದಿ, ಇಂಗ್ಲಿಷ್

* ನೇಮಕಾತಿಗಳು ವೈದ್ಯರ ಲಭ್ಯತೆಗೆ ಒಳಪಟ್ಟಿರುತ್ತವೆ. ದಯವಿಟ್ಟು, ನೀವು ಈಗಾಗಲೇ ಗರ್ಭಗುಡಿಗೆ ಭೇಟಿ ನೀಡಿದ್ದರೆ ನಿಮ್ಮ ನೋಂದಾಯಿತ ಸಂಖ್ಯೆಯನ್ನು ನೀವು ನೀಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

ಡಾ. ಆಶಾ ಎಸ್. ವಿಜಯ್ - ಸಂತಾನೋತ್ಪತ್ತಿ ಚಿಕಿತ್ಸೆಯ ಮುಂಚೂಣಿ ವೈದ್ಯರಲ್ಲಿ ಪ್ರಮುಖರಾಗಿದ್ದು, ನಿಪುಣ ಶಿಕ್ಷಣತಜ್ಞರು, ಸಾಧಕ ಉದ್ಯಮಶೀಲರು ಮತ್ತು ಸಾಮಾಜಿಕ ದಾರ್ಶನಿಕರಾಗಿದ್ದಾರೆ.

ಡಾ. ಆಶಾ ಅವರು ಪ್ರಸೂತಿ, ಸ್ತ್ರೀರೋಗ ಶಾಸ್ತ್ರ ಮತ್ತು ಫರ್ಟಿಲಿಟಿ ಕ್ಷೇತ್ರಗಳಲ್ಲಿ ಎರಡು ದಶಕಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಸಂತಾನೋತ್ಪತ್ತಿ ಸಮಸ್ಯೆ ಕ್ಷೇತ್ರದಲ್ಲಿ – ರೋಗಿಗೆ ಚಿಕಿತ್ಸೆ ನೀಡುವಲ್ಲಿ ಮತ್ತು ಸಂತಾನೋತ್ಪತ್ತಿ ಸಮಸ್ಯೆ ಕುರಿತ ಶಿಕ್ಷಣದಲ್ಲಿ ಅವರು ಅಪಾರ ಖ್ಯಾತಿ ಗಳಿಸಿದ್ದಾರೆ. ಸಂತಾನೋತ್ಪತ್ತಿ ಸಮಸ್ಯೆ ನಿವಾರಣೆ ಕೈಗೊಳ್ಳುವ ಜನಪರ ದೃಷ್ಟಿಕೋನ ಹೊಂದಿರುವ ವೈದ್ಯಕೀಯ ಮೇಧಾವಿ ಎಂದು ಅನೇಕರು ಅವರನ್ನು ಪರಿಗಣಿಸುತ್ತಾರೆ.

೮೫೦೦ಕ್ಕೂ ಹೆಚ್ಚು ದಂಪತಿಗಳು ತಮ್ಮದೇ ಆದ ಮಗುವನ್ನು ಹೊಂದಿ ಆ ಮೂಲಕ ಅವರ ಜೀವನದಲ್ಲಿ ಸಂತಸ ಕಾಣಲು ಡಾ. ಆಶಾ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ತಮ್ಮ ಅಪಾರ ಜ್ಞಾನ, ಪರಿಣಿತಿ, ಕೌಶಲ್ಯ ಮತ್ತು ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನದೊಂದಿಗೆ, ಸಂತಾನಹೀನತೆ ಕ್ಷೇತ್ರದಲ್ಲಿ ಅಸಾಧಾರಣ ಯಶಸ್ಸು ಕಂಡಿದ್ದಾರೆ. ಅವರು ತಮ್ಮ ದೃಷ್ಟಿಕೋನಕ್ಕೆ ಬದ್ಧತೆಯಿಂದಿರುವುದಲ್ಲದೆ ದಂಪತಿಗಳು ಆರೋಗ್ಯಕರ ಮಗುವನ್ನು ಹೊಂದಲು ಸಾಧ್ಯವಾಗುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ.

ಡಾ. ಆಶಾ ಎಸ್. ವಿಜಯ್ ಅವರು ಈ ಕೆಳಗಿನ ಕೇಂದ್ರಗಳಲ್ಲಿ ಬಂಜೆತನ ಕ್ಷೇತ್ರದಲ್ಲಿ ವಿಶೇಷ ತರಬೇತಿ ಪಡೆದಿದ್ದಾರೆ.

> ಡಾ. ಕಾಮಿನಿ ರಾವ್ ಅವರ ಮಾರ್ಗದರ್ಶನದಲ್ಲಿ ಬೆಂಗಳೂರು ನೆರವಿನ ಗರ್ಭಧಾರಣೆ ಕೇಂದ್ರ.

> ರಿಲಯನ್ಸ್ ಎಆರ್‌ಟಿ ಫೌಂಡೇಶನ್, ಡಾ. ಅಮೀತ್ ಪಟ್ಕಿ ಅವರ ಮಾರ್ಗದರ್ಶನದಲ್ಲಿ.

> ಇಎಆರ್‌ಟಿ ಮುಂಬೈನಲ್ಲಿ ತರಬೇತಿ.

ಪ್ರಶಸ್ತಿಗಳು

ಡಾ. ಆಶಾ ಅವರು ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ ಮತ್ತು ಕೆಲವು ಪ್ರಮುಖ ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ.

> ರೋಗಿಯ ತೃಪ್ತಿ ಮತ್ತು ಶ್ರೇಷ್ಠತೆ ಪ್ರಶಸ್ತಿ - ಇಲಾ ವುಮನ್.

> ಎಫ್‌ಕೆಸಿಸಿಐ ಮತ್ತು ರಿಯೋವೇರಾ ಮಹಿಳಾ ಸಾಧಕರ ಪ್ರಶಸ್ತಿ.

> ಮಹಿಳಾ ಸಾಧಕಿ ಪ್ರಶಸ್ತಿ -ಸಿಒಡಬ್ಲ್ಯೂಇ – ಭಾರತ ಸರ್ಕಾರದ ಕೇಂದ್ರ ಸಚಿವರಿಂದ.

> ರೋಟರಿ ರಾಜ್ಯೋತ್ಸವ ಪ್ರಶಸ್ತಿ -೨೦೧೯.

> ರೇಡಿಯಂಟ್ ಇನ್ಫಿನಿಥೀಸ್ಟ್ ಪ್ರಶಸ್ತಿ.

> ಕೆಎಸ್‌ಆರ್‌ಟಿಸಿ - ೨೦೧೮ ರ ಮಹಿಳಾ ದಿನಾಚರಣೆಯಂದು ಸಂಘದ ಅಭಿನಂದನೆ.

ಪ್ರಯಾಣ, ದೃಷ್ಟಿಕೋನ ಮತ್ತು ಗುರಿ

ಬೆಳೆಯುವ ವಯಸ್ಸಿನಲ್ಲಿಯೇ ಡಾ. ಆಶಾ ಅವರು ವೈದ್ಯೆಯಾಗಲು ಮತ್ತು ಸಾಮಾಜಿಕ ಸೇವೆ ಸಲ್ಲಿಸಲು ಬಯಸಿದ್ದರು. ಅವರದ್ದು ಕಠಿಣ ಸವಾಲುಗಳನ್ನು ಎದುರಿಸಿ ದಾಟಿದ ಮತ್ತು ಅಡೆತಡೆಗಳನ್ನು ನಿವಾರಿಸಿಕೊಂಡು ಮುಂದುವರಿದ ಪರಿಶ್ರಮದ ಕಥೆಯಾಗಿದೆ. ತಾನು ಏನನ್ನು ಸಾಧಿಸಬೇಕು ಅನ್ನುವ ನಿಖರತೆಯೊಂದಿಗೆ ಹೆಚ್ಚಿನ ಒಳ್ಳೆಯದನ್ನು ಮಾಡುವುದರ ಕಡೆಗೆ ಅವರ ಒಲವಿದ್ದು ಅದನ್ನು ಸಾಧಿಸಿದ್ದಾರೆ.

ಡಾ. ಆಶಾ ಪ್ರತಿಷ್ಠಿತ ಬೆಂಗಳೂರು ವೈದ್ಯಕೀಯ ಕಾಲೇಜಿನಿಂದ ವೈದ್ಯಕೀಯದಲ್ಲಿ ಪದವಿ ಪಡೆದರು ಮತ್ತು ಬೆಂಗಳೂರಿನ ಕಿದ್ವಾಯಿ ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿಯಲ್ಲಿ ಸೀನಿಯರ್‌ ರೆಸಿಡೆಂಟ್‌ ಡಾಕ್ಟರ್‌ ಆಗಿ ವೃತ್ತಿಜೀವನ ಪ್ರಾರಂಭಿಸಿದರು. ನಂತರ ಅವರು ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ೧೯೯೬ ರಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಆಶಾ ಅವರು 'ಸನ್ನಿಧಿ ಮಲ್ಟಿ-ಸ್ಪೆಷಾಲಿಟಿ ಹಾಸ್ಪಿಟಲ್'ನೊಂದಿಗೆ ತಮ್ಮದೇ ಆದ ಖಾಸಗಿ ವೈದ್ಯ ವೃತ್ತಿ ಆರಂಭಿಸಿದರು. ನಂತರ ಅವರು ಸ್ತ್ರೀರೋಗ ಶಾಸ್ತ್ರ ಮತ್ತು ಸಂತಾನೋತ್ಪತ್ತಿ ಸಮಸ್ಯೆ ಕ್ಷೇತ್ರದಲ್ಲಿ ಅಗಾಧ ಅನುಭವವನ್ನು ಪಡೆದರು. ತಮ್ಮ ವೃತ್ತಿಯ ಭಾಗವಾಗಿ ಸ್ತ್ರೀರೋಗ ಶಾಸ್ತ್ರ, ಪ್ರಸೂತಿ ಮತ್ತು ಫರ್ಟಿಲಿಟಿ ಸಮಸ್ಯೆಗಳೊಂದಿಗಿನ ಅನುಭವದ ೧೫ ವರ್ಷಗಳ ಅವಧಿಯಲ್ಲಿ, ಸಂತಾನೋತ್ಪತ್ತಿ ಸಮಸ್ಯೆಯನ್ನು ಗಮನಿಸಲು ಮತ್ತು ಪರಿಹರಿಸಲು ಪ್ರಯತ್ನಿಸುವುದನ್ನು ಅವರು ತಮ್ಮ ಜೀವನದ ಉದ್ದೇಶವನ್ನಾಗಿ ಮಾಡಿಕೊಂಡರು.

ಸಂತಾನೋತ್ಪತ್ತಿ ಸಮಸ್ಯೆ ಇರುವವರು ಯಾರನ್ನು ಸಂಪರ್ಕಿಸಬೇಕು ಮತ್ತು ಅವರು ಅಳವಡಿಸಿಕೊಳ್ಳಬೇಕಾದ ಚಿಕಿತ್ಸೆಯ ಬಗ್ಗೆ ಹೇಗೆ ನಿರ್ಧರಿಸಬೇಕು, ವೆಚ್ಚಗಳನ್ನು ಹೇಗೆ ನಿರ್ವಹಿಸಬೇಕು ಇತ್ಯಾದಿಗಳ ಬಗ್ಗೆ ಮಾಹಿತಿ ಹೊಂದಿರುವುದಿಲ್ಲ ಎಂದು ಅವರು ತಿಳಿದಿದ್ದರು.ಅನೇಕ ಪ್ರಕರಣಗಳಲ್ಲಿ, ಸಂತಾನೋತ್ಪತ್ತಿ ಸಮಸ್ಯೆ ಕಾರಣಗಳನ್ನು ಹೆಚ್ಚಾಗಿ ಪತ್ತೆಹಚ್ಚಲಾಗುವುದಿಲ್ಲ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ, ದಂಪತಿಗಳಿಗೆ ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ ಲಭಿಸುವುದಿಲ್ಲ ಎಂಬುದನ್ನು ಅವರು ಗಮನಿಸಿದರು. ಅವರು ಅದನ್ನು ಪಡೆದರೂ ಸಹ, ಈ ಚಿಕಿತ್ಸೆಯು ಕಡಿಮೆ ಯಶಸ್ಸಿನ ಮಟ್ಟಗಳನ್ನು ಹೊಂದಿದ್ದು ಹೆಚ್ಚು ದುಬಾರಿಯಾಗಿತ್ತಲ್ಲದೇ ಮಧ್ಯಮ ವರ್ಗದ ಕುಟುಂಬಗಳಿಗೆ ಕೈಗೆಟುಕುವಂತಿರಲಿಲ್ಲ. ಆಗ ಡಾ. ಆಶಾ ಅವರು, ಮೊದಲ ತಲೆಮಾರಿನ ಉದ್ಯಮಿಗಳ ತಂಡದೊಂದಿಗೆ, ಸಮಸ್ಯೆಯನ್ನು ಸಮಗ್ರವಾಗಿ ಗಮನಿಸಲು ನಿರ್ಧರಿಸಿದರು - ಕೈಗೆಟುಕುವ ವೆಚ್ಚದಲ್ಲಿ ವಿಶ್ವದರ್ಜೆಯ ಚಿಕಿತ್ಸೆ ಮತ್ತು ಸೇವೆಗಳನ್ನು ಒದಗಿಸಲು ಮುಂದಾದರು.

ಹೀಗೆ ಹುಟ್ಟಿದ್ದು ಗರ್ಭಗುಡಿ ಐವಿಎಫ್!

ಸಾಧನೆಗಳು

ಸಂಸ್ಥಾಪಕರು - ಗರ್ಭಗುಡಿ ಐವಿಎಫ್ ಕೇಂದ್ರ

ಡಾ. ಆಶಾ ವಿಜಯ್ ಅವರು ೨೦೧೧ ರಲ್ಲಿ ಗರ್ಭಗುಡಿ ಐವಿಎಫ್ ಸೆಂಟರ್ ಅನ್ನು ಕೈಗೆಟುಕುವ ವೆಚ್ಚದಲ್ಲಿ , ಸಮಗ್ರ ವಿಶ್ವ ದರ್ಜೆಯ ಫರ್ಟಿಲಿಟಿ ಚಿಕಿತ್ಸೆಯನ್ನು ಒದಗಿಸುವುದಕ್ಕಾಗಿ ಸ್ಥಾಪಿಸಿದರು. ಅದರ ಯಶಸ್ಸಿನ ಪ್ರಮಾಣ ಅಂದಿನಿಂದ ಹೆಚ್ಚುತ್ತಲೇ ಇದೆ. ಸಂಸ್ಥಾಪಕರ ಬದ್ಧತೆ, ಸಾಮರ್ಥ್ಯಗಳು ಮತ್ತು ಬಲವಾದ, ಮೌಲ್ಯಾಧಾರಿತ ಸಂಸ್ಥೆಯನ್ನು ನಿರ್ಮಿಸುವ ನಿರ್ಣಯದಿಂದಾಗಿ ಹೆಚ್ಚಿನ ಪ್ರಗತಿ ಕಂಡುಬಂದಿದೆ. ಗರ್ಭಗುಡಿಯ ಆಯ್ದ ಫರ್ಟಿಲಿಟಿ ತಜ್ಞರ ತಂಡವು ಉನ್ನತ ಮಟ್ಟದಲ್ಲಿ ಸಮರ್ಥ ಸ್ತ್ರೀರೋಗತಜ್ಞರು, ಭ್ರೂಣಶಾಸ್ತ್ರಜ್ಞರು, ತಂತ್ರಜ್ಞರು ಮತ್ತು ಸಿಬ್ಬಂದಿಯನ್ನು ಒಳಗೊಂಡಿದೆ. ಅವರು ವೈಯಕ್ತೀಕರಿಸಿದ ಫರ್ಟಿಲಿಟಿ ಚಿಕಿತ್ಸಾ ಯೋಜನೆಯನ್ನು ಅಭಿವೃದ್ಧಿಪಡಿಸಲು ರೋಗಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ ಮತ್ತು ಐವಿಎಫ್, ಐಯುಐ, ದಾನಿ ಕಾರ್ಯಕ್ರಮಗಳು, ಇಆರ್‌ಎ, ಪಿಜಿಡಿ, ಅನುಕ್ರಮ ವರ್ಗಾವಣೆಗಳಂತಹ ಸುಧಾರಿತ ಚಿಕಿತ್ಸಾ ಆಯ್ಕೆಗಳಂತಹ ಫರ್ಟಿಲಿಟಿ ಚಿಕಿತ್ಸೆಯನ್ನು ನೀಡುತ್ತಾರೆ. ಇಂದು, ಗರ್ಭಗುಡಿಯ ಯಶಸ್ಸು ಶೇ. ೬೫ ಕ್ಕಿಂತ ಹೆಚ್ಚಿದೆ, ಇದು ಉದ್ಯಮದಲ್ಲಿ ಅತ್ಯಧಿಕವಾಗಿದೆ.

ಸ್ಥಾಪಕರು - ಜಿಜಿಐಆರ್‌ಎಚ್‌ಆರ್ (ಗರ್ಭಗುಡಿ ಇನ್‌ಸ್ಟಿಟ್ಯೂಟ್ ಆಫ್ ರಿಪ್ರೊಡಕ್ಟಿವ್ ಹೆಲ್ತ್ ಅಂಡ್ ರೀಸರ್ಚ್)

ಡಾ. ಆಶಾ ಅವರು ಜಿಜಿಐಆರ್‌ಎಚ್‌ಆರ್‌ನ ಡೀನ್ ಮತ್ತು ವೈಜ್ಞಾನಿಕ ನಿರ್ದೇಶಕರಾಗಿದ್ದಾರೆ. ಇದು ಸಂತಾನೋತ್ಪತ್ತಿ ಆರೋಗ್ಯ ತರಬೇತಿ ಮತ್ತು ಸಂಶೋಧನೆಯ ಕ್ಷೇತ್ರದಲ್ಲಿ ಪ್ರಮುಖ ಸಂಸ್ಥೆಯಾಗಿದೆ.

ಈ ಸಂಸ್ಥೆಯು ಸಂತಾನೋತ್ಪತ್ತಿ ಸಮಸ್ಯೆ ಕ್ಷೇತ್ರದಲ್ಲಿ ಉನ್ನತ ದರ್ಜೆಯ ತರಬೇತಿಯನ್ನು ನೀಡುತ್ತದೆ. ಇದು ಸ್ತ್ರೀರೋಗತಜ್ಞರು, ವೈದ್ಯಕೀಯ ವಿದ್ಯಾರ್ಥಿಗಳು, ಮೂತ್ರಶಾಸ್ತ್ರಜ್ಞರು, ವಿಜ್ಞಾನ ಪದವೀಧರರು ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿಗೆ ಅಸಾಧಾರಣ ಕಲಿಕೆ ಮತ್ತು ಉನ್ನತ ಕೌಶಲ್ಯದ ಅವಕಾಶಗಳನ್ನು ಒದಗಿಸುವ ಆನ್‌ಲೈನ್ ಮತ್ತು ಆಫ್‌ಲೈನ್ ಕೋರ್ಸ್‌ಗಳ ವ್ಯಾಪಕ ಆಯ್ಕೆಯನ್ನು ನೀಡುತ್ತದೆ. ಜಿಜಿಐಆರ್‌ಎಚ್‌ಆರ್‌ನ ಪ್ರಾಥಮಿಕ ಗುರಿ ಎಂದರೆ ಅದು ಶ್ರೀಮಂತ ಪರಿಣಿತಿಯನ್ನು ಹಂಚಿಕೊಳ್ಳುವುದು ಮತ್ತು ಸಂತಾನೋತ್ಪತ್ತಿ ಸಮಸ್ಯೆ ಮತ್ತು ಸಂತಾನೋತ್ಪತ್ತಿ ತಂತ್ರಜ್ಞಾನಗಳಲ್ಲಿ ಯಶಸ್ಸನ್ನು ಪೋಷಕ ಸಂಸ್ಥೆ ಗರ್ಭಗುಡಿ ಐವಿಎಫ್‌ನೊಂದಿಗೆ ಹಂಚಿಕೊಳ್ಳುವುದಾಗಿದೆ.

ಗರ್ಭಜ್ಞಾನ ಪ್ರತಿಷ್ಠಾನದ ಸ್ಥಾಪಕ ಟ್ರಸ್ಟಿ

ಡಾ. ಆಶಾ ಅವರು ಗರ್ಭಗುಡಿ ಗುಂಪಿನ, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯನ್ನು ಪೂರೈಸಲು ಸ್ಥಾಪಿಸಲಾದ ಗರ್ಭಜ್ಞಾನ್ ಫೌಂಡೇಶನ್‌ನ ಸಂಸ್ಥಾಪಕ ಟ್ರಸ್ಟಿಗಳಲ್ಲಿ ಒಬ್ಬರಾಗಿದ್ದಾರೆ. ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲವಿರುವ ವರ್ಗದವರಿಗೆ ಸಂತಾನೋತ್ಪತ್ತಿ ಚಿಕಿತ್ಸೆ ಪಡೆಯಲು ಸಹಾಯ ಮಾಡುವುದು, ಗ್ರಾಮೀಣ ಪ್ರದೇಶಗಳಲ್ಲಿ ಅಭ್ಯಾಸ ಮಾಡುವ ವೈದ್ಯರಿಗೆ ಸರಿಯಾದ ರೀತಿಯಲ್ಲಿ, ಸರಿಯಾದ ಸಮಯದಲ್ಲಿ ಸಂತಾನೋತ್ಪತ್ತಿ ಸಮಸ್ಯೆ ಪರಿಹರಿಸಲು ಶಿಕ್ಷಣ ಮತ್ತು ತರಬೇತಿ ನೀಡುವುದು ಇದರ ಉದ್ದೇಶವಾಗಿದೆ.

ಡಾ. ಆಶಾ ವಿಜಯ್ ಅವರು ಮಾರ್ಗದರ್ಶಿ ಬೆಳಕಾಗಿ ಅನೇಕ ಮಕ್ಕಳಿಲ್ಲದ ದಂಪತಿಗಳ ಜೀವನವನ್ನು ಬೆಳಗಿಸಿದ್ದಾರೆ. ಅವರು ದಯಾಮಯಿ, ಸಮರ್ಪಿತರು ಮತ್ತು ದೂರದೃಷ್ಟಿ ಉಳ್ಳವರಾಗಿದ್ದಾರೆ. ಅವರು ಸ್ಪರ್ಶಿಸುವ ಎಲ್ಲ ಜೀವಗಳಿಗೆ ಅವರು ನಿಜವಾದ ಸ್ಫೂರ್ತಿಯಾಗಿದ್ದಾರೆ.

ತತ್ವಶಾಸ್ತ್ರದ ಪ್ರಸಿದ್ಧ ಶಾಲೆ, ಇನ್ಫಿನಿಥೀಸಮ್, ಡಾ. ಆಶಾ ಅವರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇನ್ಫಿನಿಥೀಸಮ್‌ನ ಸಂಸ್ಥಾಪಕರಾದ ಮಹಾತ್ರಿಯಾ ಅವರು ಡಾ. ಆಶಾ ಅವರ ಜೀವನದಲ್ಲಿ ದೀಪಸ್ತಂಭವಾಗಿದ್ದಾರೆ-ಅವರಿಗೆ ಜೀವನವನ್ನು ಶಾಂತಿಯುತವಾಗಿ ದೊಡ್ಡದಾಗಿ ಬೆಳೆಸಲು ನಿರ್ದೇಶನ, ಸಾಧನಗಳು ಮತ್ತು ಸ್ಫೂರ್ತಿಯನ್ನು ನೀಡಿದರು. ಮಹಾತ್ರಿಯಾ ಅವರ ಬೋಧನೆಗಳು ಡಾ. ಆಶಾ ಮತ್ತು ಗರ್ಭಗುಡಿ ಸಮೂಹದ ಕಂಪನಿಗಳ ಜೀವನದಲ್ಲಿ ಪ್ರಮುಖ ನಿಲುವುಗಳಾಗಿವೆ.

ಈ ಪುಟವನ್ನು ಹಂಚಿಕೊಳ್ಳಿ