ಇನ್-ವಿಟ್ರೋ ಫರ್ಟಿಲೈಸೇಶನ್ (ಐವಿಎಫ್)
ಐವಿಎಫ್ ಎಂದರೇನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ?
ಐವಿಎಫ್ ಅಥವಾ ಇನ್ ವಿಟ್ರೊ ಫರ್ಟಿಲೈಸೇಷನ್ ಹೆಚ್ಚು ವ್ಯಾಪಕವಾಗಿ ತಿಳಿದಿರುವ ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಿಕ್ಸ್ (ಎಆರ್‍ಟಿ)ಗಳಲ್ಲಿ ಒಂದಾಗಿದೆ. ಐವಿಎಫ್, ಔಷಧ ಮತ್ತು ಶಸ್ತ್ರಚಿಕಿತ್ಸಾ ವಿಧಾನಗಳ ಸಂಯೋಜನೆಯ ಮೂಲಕ ವೀರ್ಯವು ಅಂಡಾಣುವನ್ನು ಫರ್ಟಿಲೈಸ್ ಮಾಡಲು ಸಹಾಯ ಮಾಡುತ್ತದೆ. ಅಂದರೆ, ಅಂಡಾಣುಗಳನ್ನು ಮಾನವ ದೇಹದ ಹೊರಗೆ ಫಲವತ್ತಾಗಿಸಿ ನಂತರ ಗರ್ಭಾಶಯದಲ್ಲಿ ಅಳವಡಿಸಲಾಗುತ್ತದೆ. ಸಂತಾನೋತ್ಪತ್ತಿ ಸಮಸ್ಯೆಯಿಂದ ಬಳಲುತ್ತಿರುವ ದಂಪತಿಗಳಿಗೆ ಸಹಾಯ ಮಾಡಲು ಮತ್ತು ಆನುವಂಶಿಕ ಸಮಸ್ಯೆಗಳನ್ನು ತಡೆಗಟ್ಟಲು ಈ ಕಾರ್ಯವಿಧಾನಗಳನ್ನು ಬಳಸಬಹುದು.
ಮಹಿಳೆಯ ಅಂಡಾಣು ಪುರುಷನ ವೀರ್ಯದೊಂದಿಗೆ ಸೇರಿದಾಗ - ಗರ್ಭಧಾರಣೆಯು ಫಲೀಕರಣ (ಫರ್ಟಿಲೈಸೇಷನ್) ದೊಂದಿಗೆ ಪ್ರಾರಂಭವಾಗುತ್ತದೆ.
ಫಲೀಕರಣ(ಫರ್ಟಿಲೈಸೇಷನ್)ವು ಸಾಮಾನ್ಯವಾಗಿ ಮಹಿಳೆಯ ಫಾಲೋಪಿಯನ್ ಟ್ಯೂಬ್‍ನಲ್ಲಿ ನಡೆಯುತ್ತದೆ. ಇದು ಅಂಡಾಶಯವನ್ನು ಗರ್ಭಾಶಯಕ್ಕೆ ಜೋಡಿಸುವ ಒಂದು ಕೊಳವೆಯ ತರಹದ ಅಂಗವಾಗಿದೆ. ಫಲವತ್ತಾದ(ಫರ್ಟಿಲೈಸ್ಡ್) ಅಂಡಾಣು (ಈಗ ಇದನ್ನು ಭ್ರೂಣ ಎಂದು ಕರೆಯಲಾಗುತ್ತದೆ) ಯಶಸ್ವಿಯಾಗಿ ಫಾಲೋಪಿಯನ್ ಟ್ಯೂಬ್‍ನಲ್ಲಿ ಚಲಿಸಿದರೆ ಮತ್ತು ಗರ್ಭಾಶಯದಲ್ಲಿ ಅಳವಡಿಸಿದರೆ, ಭ್ರೂಣವು ಗರ್ಭಾಶಯದ ಎಂಡೊಮೆಟ್ರಿಯಲ್ ಗೋಡೆಯ ಮೇಲೆ ಬೆಳೆಯಲು ಪ್ರಾರಂಭಿಸುತ್ತದೆ.
ಮಗುವನ್ನು ಹೊಂದಲು ಯೋಜಿಸುತ್ತಿರುವ ದಂಪತಿಗಳಲ್ಲಿ ಈ ಸಾಮಾನ್ಯ ಫಲೀಕರಣ(ಫರ್ಟಿಲೈಸೇಷನ್) ಪ್ರಕ್ರಿಯೆಯು ನಡೆಯದೇ ಇದ್ದಾಗ, ಆರೋಗ್ಯವಂತ ಮಗುವಿನ ಗರ್ಭಧರಿಸುವ ಸಾಧ್ಯತೆಗಳನ್ನು ಹೆಚ್ಚಿಸಲು ಅಸಿಸ್ಟೆಡ್ ರಿಪ್ರೊಡ್ಯೂಕ್ಟಿವ್ ಟೆಕ್ನಿಕ್ಸ್ (ಎಆರ್‍ಟಿ)ನ ಸುಧಾರಿತ ತಂತ್ರಗಳನ್ನು ಬಳಸಲಾಗುತ್ತದೆ.
ಐವಿಎಫ್ ಆವರ್ತನದಲ್ಲಿ, ಅಂಡಾಶಯದಿಂದ ಅಂಡಾಣುಗಳನ್ನು ಪಡೆಯಲಾಗುತ್ತದೆ ಮತ್ತು ವೀರ್ಯವನ್ನು ಸ್ಖಲನದಿಂದ ಸಂಗ್ರಹಿಸಲಾಗುತ್ತದೆ (ಅಥವಾ ಸ್ಖಲನವು ಸಾಧ್ಯವಾಗದಿದ್ದರೆ ಅಥವಾ ಸ್ಖಲನವು ಉಪಯೋಗಿ ವೀರ್ಯಾಣುಗಳನ್ನು ಹೊಂದಿಲ್ಲದಿದ್ದರೆ ಶಸ್ತ್ರಚಿಕಿತ್ಸೆಯಿಂದ ಗಂಡನ ವೃಷಣಗಳಿಂದ ವೀರ್ಯಾಣುವನ್ನು ಪಡೆಯಲಾಗುತ್ತದೆ). ಈ ವೀರ್ಯವನ್ನು ನಂತರ ಪ್ರಯೋಗಾಲಯದಲ್ಲಿ ದೇಹದ ಹೊರಗೆ ಅಂಡಾಣುವನ್ನು ಫರ್ಟಿಲೈಸ್ ಆಗಿಸಲು ಬಳಸಲಾಗುತ್ತದೆ. ವೀರ್ಯ ಮತ್ತು ಅಂಡಾಣುಗಳನ್ನು ಪರಸ್ಪರ ಹತ್ತಿರ ಇರಿಸಿದರೆ (ಸಾಂಪ್ರದಾಯಿಕ ಐವಿಎಫ್ ಎಂದು ಕರೆಯಲಾಗುತ್ತದೆ) ಅಥವಾ ವೀರ್ಯವನ್ನು ಅಂಡಾಣು ಒಳಗೆ ಸೇರಿಸುವ ಮೂಲಕ (ಐಸಿಎಸ್‍ಐ ಎಂಬ ಪ್ರಕ್ರಿಯೆಯ ಮೂಲಕ) ಈ ಫಲೀಕರಣ(ಫರ್ಟಿಲೈಸೇಷನ್)ವು ನಡೆಯಬಹುದು. ಫರ್ಟಿಲೈಸ್ ಆದ ಅಂಡಾಣುಗಳನ್ನು ನಂತರ ಬೆಳೆಸಲಾಗುತ್ತದೆ ಮತ್ತು ಮಹಿಳೆಯ ಗರ್ಭಾಶಯವನ್ನು ಅನುಕರಿಸುವಂತಹ ಪರಿಸ್ಥಿತಿಗಳಲ್ಲಿ ಪ್ರಯೋಗಾಲಯದಲ್ಲಿ ‘ಬೆಳೆಸಲಾಗುತ್ತದೆ’. ಫರ್ಟಿಲೈಸ್ ಆದ ಅಂಡಾಣು, ಅದನ್ನು ಇಡಲಾಗಿರುವ ಕಲ್ಚರ್ ಮೀಡಿಯಾದಿಂದ ಎಲ್ಲಾ ಪೋಷಣೆಯನ್ನು ಪಡೆಯುತ್ತದೆ. ಭ್ರೂಣಶಾಸ್ತ್ರಜ್ಞರು ಭ್ರೂಣದ ಬೆಳವಣಿಗೆಯ ಮೇಲ್ವಿಚಾರಣೆ ಮಾಡುತ್ತಾರೆ. ಭ್ರೂಣವು ಸಾಕಷ್ಟು ಬೆಳೆದಾಗ, ಅದನ್ನು ಮಹಿಳೆಯ ಗರ್ಭಾಶಯಕ್ಕೆ ವರ್ಗಾಯಿಸಲಾಗುತ್ತದೆ (ತಾಜಾ ಭ್ರೂಣ ವರ್ಗಾವಣೆ(ಫ್ರೆಶ್ ಎಂಬ್ರಿಯೋ ಟ್ರಾನ್ಸ್‌ಫರ್) ಎಂದು ಕರೆಯಲಾಗುತ್ತದೆ) ಅಥವಾ ಭವಿಷ್ಯದ ವರ್ಗಾವಣೆಗಾಗಿ ಫ್ರೀಜ್ ಮಾಡಿಡಲಾಗುತ್ತದೆ (ಹೆಪ್ಪುಗಟ್ಟಿದ ಭ್ರೂಣ ವರ್ಗಾವಣೆ(ಫ್ರೋಜನ್ ಎಂಬ್ರಿಯೋ ಟ್ರಾನ್ಸ್‌ಫರ್) ಎಂದು ಕರೆಯಲಾಗುತ್ತದೆ).
ಒಂದು ಪೂರ್ಣ ಐವಿಎಫ್ ಆವರ್ತನವು ಸುಮಾರು ಮೂರು ವಾರಗಳ ಅವಧಿಯದ್ದಾಗಿರುತ್ತದೆ. ಆದರೆ ಕೆಲವೊಮ್ಮೆ ದಂಪತಿಗಳಲ್ಲಿನ ಕೆಲವು ಸವಾಲುಗಳನ್ನು ನಿರ್ವಹಿಸಲು ಕಾರ್ಯವಿಧಾನವನ್ನು ವಿವಿಧ ಭಾಗಗಳಾಗಿ ವಿಭಜಿಸಲಾಗುತ್ತದೆ. ಇದು ಪ್ರಕ್ರಿಯೆಯನ್ನು ವಿಳಂಬವಾಗಿಸಬಹುದು.
ಐವಿಎಫ್ ಅನ್ನು ಮಹಿಳೆಯ ಅಂಡಾಣು ಮತ್ತು ಪುರುಷ ಸಂಗಾತಿಯ ವೀರ್ಯಾಣುಗಳನ್ನು ಬಳಸಿ ಮಾಡಬಹುದು ಅಥವಾ ಇದು ಅನಾಮಧೇಯ ದಾನಿಗಳ ವೀರ್ಯ, ಅಂಡಾಣು ಅಥವಾ ಭ್ರೂಣಗಳನ್ನು ಒಳಗೊಂಡಿರಬಹುದು. ಕೆಲವೊಮ್ಮೆ ಗರ್ಭಾವಸ್ಥೆಯ ವಾಹಕರನ್ನು (ಗರ್ಭಕೋಶದಲ್ಲಿ ಅಳವಡಿಸಲಾಗಿರುವ ಭ್ರೂಣವನ್ನು ಹೊಂದಿರುವ ಮಹಿಳೆ) ಬಳಸಬಹುದು. ಅಂತಹ ವಾಹಕರನ್ನು ಬಾಡಿಗೆ ತಾಯಿ(ಸರೋಗೇಟ್ ಮದರ್) ಎಂದು ಕರೆಯಲಾಗುತ್ತದೆ ಮತ್ತು ಪ್ರಕ್ರಿಯೆಯನ್ನು ಬಾಡಿಗೆ ತಾಯ್ತನ(ಸರೋಗೇಸಿ) ಎಂದು ಕರೆಯಲಾಗುತ್ತದೆ.
ಐವಿಎಫ್ ಚಿಕಿತ್ಸೆಯನ್ನು ಯಾವಾಗ ಸೂಚಿಸಲಾಗುತ್ತದೆ?
ಪೋಷಕರಾಗುವ ಸಂತೋಷವನ್ನು ಪಡೆಯಲು ದಂಪತಿಗಳಿಗೆ ಐಯುಐ ಸಲಹೆ ಕೊಡಲು ಹಲವಾರು ಕಾರಣಗಳಿವೆ. ಕೆಳಗಿನ ಸಂದರ್ಭಗಳಲ್ಲಿ ಐಯುಐ ಶಿಫಾರಸು ಮಾಡಲಾಗುತ್ತದೆ:
• ಫಾಲೋಪಿಯನ್ ಟ್ಯೂಬ್‍ಗಳಲ್ಲಿ ಅಡೆತಡೆ ಉಂಟಾಗುವುದು ಅಥವಾ ದೋಷಗಳು: ಫಾಲೋಪಿಯನ್ ಟ್ಯೂಬ್‍ನಲ್ಲಿ ಫಲೀಕರಣ(ಫರ್ಟಿಲೈಸೇಷನ್) ಸಾಮಾನ್ಯವಾಗಿ ಸಂಭವಿಸುತ್ತದೆ. ನಂತರ ಭ್ರೂಣವು ಗರ್ಭಾಶಯದ ಒಳಗೆ ಚಲಿಸುತ್ತದೆ. ಅಲ್ಲಿ ಅದನ್ನು ಅಳವಡಿಸಲಾಗುತ್ತದೆ. ಫಾಲೋಪಿಯನ್ ಟ್ಯೂಬ್‍ಗಳಲ್ಲಿ ಅಡೆತಡೆಗಳು ಅಥವಾ ದೋಷಗಳು ಗರ್ಭಾಶಯದ ಭ್ರೂಣದ ಫಲೀಕರಣ(ಫರ್ಟಿಲೈಸೇಷನ್) ಮತ್ತು ಚಲನೆಯನ್ನು ತಡೆಯುತ್ತದೆ.
• ಅಂಡೋತ್ಪತ್ತಿ ಅಸ್ವಸ್ಥತೆಗಳು: ಅಂಡೋತ್ಪತ್ತಿ ನಿಯಮಿತವಾಗಿಲ್ಲದಿದ್ದರೆ ಅಥವಾ ಇಲ್ಲದಿದ್ದರೆ ಫಲೀಕರಣ(ಫರ್ಟಿಲೈಸೇಷನ್) ಕ್ಕೆ ಕಡಿಮೆ ಅಂಡಾಣುಗಳು ಲಭ್ಯವಿವೆ.
• ಅಕಾಲಿಕ ಅಂಡಾಶಯದ ವೈಫಲ್ಯ: ಮಹಿಳೆಯು ಸಾಮಾನ್ಯವಾಗಿ 42-56 ವರ್ಷಗಳ ನಡುವೆ ಋತುಬಂಧ(ಮೆನೋಪಾಸ್)ಕ್ಕೆ ಒಳಗಾಗುತ್ತಾಳೆ, ಆದರೆ ಅಕಾಲಿಕ ಅಂಡಾಶಯದ ವೈಫಲ್ಯದಲ್ಲಿ ಆಕೆಯ ಅಂಡಾಶಯಗಳು ಸಾಮಾನ್ಯವಾಗಿ ಬಹಳಷ್ಟು ಮುನ್ನವೇ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ.
• ಎಂಡೊಮೆಟ್ರಿಯೊಸಿಸ್: ಗರ್ಭಾಶಯದ ಅಂಗಾಂಶವು ಗರ್ಭಾಶಯದ ಹೊರಗೆ ಬೆಳೆಯುವಾಗ ಮತ್ತು ಸೊಂಟದಲ್ಲಿ ಉರಿಯೂತದ ಬದಲಾವಣೆಗಳನ್ನು ಉಂಟುಮಾಡಿದಾಗ ಎಂಡೊಮೆಟ್ರಿಯೊಸಿಸ್ ಸಂಭವಿಸುತ್ತದೆ. ಇದು ಅಂಡಾಶಯಗಳು, ಗರ್ಭಾಶಯ ಮತ್ತು ಫಾಲೋಪಿಯನ್ ಟ್ಯೂಬ್‍ಗಳ ಕಾರ್ಯಚಟುವಟಿಕೆ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಗರ್ಭಾಶಯದ ಗೋಡೆಯ ಮೇಲೆ ಭ್ರೂಣದ ಅಳವಡಿಕೆಯನ್ನು ತಡೆಯುತ್ತದೆ. ಎಂಡೊಮೆಟ್ರಿಯೊಸಿಸ್ ಸಂತಾನೋತ್ಪತ್ತಿ ಸಮಸ್ಯೆಯ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.
• ಗರ್ಭಾಶಯದ ಫೈಬ್ರಾಯ್ಡ್‌ಗಳು: ಗರ್ಭಾಶಯದ ಫೈಬ್ರಾಯ್ಡ್‌ಗಳು ಗರ್ಭಾಶಯದ ಗೋಡೆಯಲ್ಲಿ ಹಾನಿಕಾರಕವಲ್ಲದ ಗೆಡ್ಡೆಗಳಾಗಿವೆ. ಇವು 30 ಮತ್ತು 40 ವರ್ಷ ವಯಸ್ಸಿನ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಗರ್ಭಾಶಯದ ಫೈಬ್ರಾಯ್ಡ್‌ಗಳು ಅಂಡಾಣು ಮತ್ತು ವೀರ್ಯಾಣುಗಳು ಭೇಟಿಯಾಗಲು ಸಾಧ್ಯವಾಗದಂತೆ ಮಾಡಿ ಫರ್ಟಿಲೈಸೇಷನ್ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಬಹುದು ಅಥವಾ ಭ್ರೂಣದ ಅಳವಡಿಕೆ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಿ ಇದರಿಂದ ಮಗುವಿನ ಬೆಳವಣಿಗೆ ಮತ್ತು ಸ್ಥಾನದ ಮೇಲೆ ಪರಿಣಾಮ ಬೀರಬಹುದು.
• ಕಳಪೆ ಅಂಡಾಶಯದ ಮೀಸಲು: ಮಹಿಳೆಯ ಅಂಡಾಶಯಗಳು ತಮ್ಮ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಕಳೆದುಕೊಂಡಾಗ ಇದು ಸಂಭವಿಸುತ್ತದೆ. ಇದು ಸಂತಾನೋತ್ಪತ್ತಿ ಸಮಸ್ಯೆಗೆ ಕಾರಣವಾಗಬಹುದು. ಕಳಪೆ ಅಂಡಾಶಯದ ಮೀಸಲು ಇರುವಲ್ಲಿ, ಮಹಿಳೆಯ ಅಂಡಾಣುಗಳ ಗುಣಮಟ್ಟ ಮತ್ತು ಪ್ರಮಾಣವು ಕಡಿಮೆಯಾಗುತ್ತದೆ ಮತ್ತು ಇದು ಸಾಮಾನ್ಯವಾಗಿ ಋತುಬಂಧದ ಸಮಯದಲ್ಲಿ ಸಂಭವಿಸುತ್ತದೆ. ಕಳಪೆ ಅಂಡಾಶಯದ ಮೀಸಲಿಗೆ ವಯಸ್ಸು ಪ್ರಾಥಮಿಕ ಕಾರಣವಾಗಿದೆ.
• ವಯಸ್ಸಾದ ಕಾರಣದಿಂದ ಅಂಡೋತ್ಪತ್ತಿ ತೊಂದರೆ ಹೊಂದಿರುವ ಮಹಿಳೆಯರು: ಮಹಿಳೆಯ ಗರಿಷ್ಠ ಸಂತಾನೋತ್ಪತ್ತಿ ಸಾಮರ್ಥ್ಯ 20 ರ ವಯಸ್ಸಿನಲ್ಲಿರುತ್ತದೆ. ಸಂತಾನೋತ್ಪತ್ತಿ ಸಾಮರ್ಥ್ಯ (ಗರ್ಭಿಣಿಯಾಗುವ ಸಾಮರ್ಥ್ಯ) 30 ವಯಸ್ಸಿನ ನಂತರ ಕ್ಷೀಣಿಸಲು ಪ್ರಾರಂಭವಾಗುತ್ತದೆ.ಒಮ್ಮೆ ನೀವು 30 ವರ್ಷದ ಮಧ್ಯಭಾಗವನ್ನು ತಲುಪಿದಾಗ ಸಂತಾನೋತ್ಪತ್ತಿ ಸಾಮರ್ಥ್ಯ ತೀವ್ರಗತಿಯಲ್ಲಿ ಕುಸಿಯುತ್ತದೆ. ನೈಸರ್ಗಿಕವಾಗಿ ಗರ್ಭಿಣಿಯಾಗುವುದು 45 ನೇ ವಯಸ್ಸಿನಲ್ಲಿ ಹೆಚ್ಚಿನ ಮಹಿಳೆಯರಿಗೆ ಅಸಂಭವವಾಗಿರುತ್ತದೆ.
• ಆನುವಂಶಿಕ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು: ಕೆಲವು ನಿರ್ದಿಷ್ಟ ಆನುವಂಶಿಕ ಅಂಶಗಳು ಫರ್ಟಿಲಿಟಿ ಮೇಲೆ ಪರಿಣಾಮ ಬೀರುತ್ತವೆ. ಆನುವಂಶಿಕ ಅಸಹಜತೆಗಳು ಎರಡು ವಿಧಗಳಲ್ಲಿವೆ - ಏಕ ಜೀನ್ ದೋಷಗಳು ಮತ್ತು ವರ್ಣತಂತು ಅಸಹಜತೆಗಳು. ಮೊಟ್ಟೆಗಳನ್ನು ಹಿಂಪಡೆದು ಫರ್ಟಿಲೈಜ್ ಮಾಡಿದ ನಂತರ, ಎಲ್ಲಾ ಆನುವಂಶಿಕ ಸಮಸ್ಯೆಗಳನ್ನು ಕಂಡುಹಿಡಿಯಲಾಗದಿದ್ದರೂ ಕೆಲವು ಆನುವಂಶಿಕ ಸಮಸ್ಯೆಗಳಿಗೆ ಅವುಗಳನ್ನು ಪರೀಕ್ಷಿಸಲಾಗುತ್ತದೆ. ಗುರುತಿಸಲಾದ ಸಮಸ್ಯೆಗಳನ್ನು ಹೊಂದಿರದ ಭ್ರೂಣಗಳನ್ನು ಗರ್ಭಾಶಯಕ್ಕೆ ವರ್ಗಾಯಿಸಬಹುದು.
• ಫಾಲೋಪಿಯನ್ ಟ್ಯೂಬ್‍ಗಳನ್ನು ತೆಗೆದುಹಾಕಲಾಗಿರುವ ಮಹಿಳೆಯರು: ನಿರ್ಬಂಧಿಸಿದ ಟ್ಯೂಬ್‍ಗಳು ಅಥವಾ ಹಿಂದಿನ (ಎಕ್ಟೋಪಿಕ್)ಅಪಸ್ಥಾನೀಯ ಗರ್ಭಧಾರಣೆ ಅಥವಾ ಗೆಡ್ಡೆಯ ಕಾರಣದಿಂದ ತಮ್ಮ ಫಾಲೋಪಿಯನ್ ಟ್ಯೂಬ್‍ಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಿರುವ ಮಹಿಳೆಯರಿಗೆ ಐವಿಎಫ್ ಅನ್ನು ಸಲಹೆ ಮಾಡಲಾಗುತ್ತದೆ.
• ವಿವರಿಸಲಾಗದ ಸಂತಾನೋತ್ಪತ್ತಿ ಸಮಸ್ಯೆ: ವಿವರಿಸಲಾಗದ ಸಂತಾನೋತ್ಪತ್ತಿ ಸಮಸ್ಯೆಯಲ್ಲಿ, ಸಾಮಾನ್ಯ ಕಾರಣಗಳಿಗಾಗಿ ಮೌಲ್ಯಮಾಪನ ಮಾಡಿದರೂ ಇನ್‍ಫರ್ಟಿಲಿಟಿ ಕಾರಣ ತಿಳಿದಿಲ್ಲ.
• ಪುನರಾವರ್ತಿತ ಐಯುಐ ವೈಫಲ್ಯಗಳು: ಐಯುಐ ಅಥವಾ ಗರ್ಭಾಶಯದ ಗರ್ಭಧಾರಣೆಯು ತುಲನಾತ್ಮಕವಾಗಿ ಸರಳವಾದ ಸಂತಾನೋತ್ಪತ್ತಿ ಚಿಕಿತ್ಸೆಯಾಗಿದೆ. ಇದನ್ನು ಫರ್ಟಿಲಿಟಿ ಔಷಧಿಗಳೊಂದಿಗೆ ಅಥವಾ ಇಲ್ಲದೆ ಮಾಡಬಹುದು. ಕಾರ್ಯವಿಧಾನವು ಒಳಗೊಂಡಿರುತ್ತದೆ - ವಿಶೇಷ ತಂತ್ರಗಳನ್ನು ಬಳಸಿ ತೊಳೆದ ವೀರ್ಯವನ್ನು ನೇರವಾಗಿ ಗರ್ಭಾಶಯಕ್ಕೆ ತೆಳುವಾದ ಕ್ಯಾಥೆಟರ್‌ನೊಂದಿಗೆ ವರ್ಗಾಯಿಸುವುದು. ಪುನರಾವರ್ತಿತ ಐಯುಐ ಕಾರ್ಯವಿಧಾನಗಳು ವಿಫಲವಾದಾಗ ಐವಿಎಫ್ ಅನ್ನು ಸೂಚಿಸಲಾಗುತ್ತದೆ. ಐಯುಐ ವಿಫಲಗೊಳ್ಳಲು ಸಂಭವನೀಯ ಕಾರಣಗಳು ವಯಸ್ಸು, ಅಂಡಾಣುವಿನ ಗುಣಮಟ್ಟ, ವೀರ್ಯದ ಗುಣಮಟ್ಟ, ಸಮಯ ಮತ್ತು ಎಂಡೊಮೆಟ್ರಿಯೊಸಿಸ್‍ಗಳನ್ನು ಅವಲಂಬಿಸಿರುತ್ತದೆ.
• ಕಡಿಮೆಯಾದ ವೀರ್ಯಾಣು ಸಂಖ್ಯೆಗಳು, ಚಲನಶೀಲತೆ ಅಥವಾ ರೂಪವಿಜ್ಞಾನದೊಂದಿಗೆ ಪುರುಷ ಅಂಶದ ಸಂತಾನೋತ್ಪತ್ತಿ ಸಮಸ್ಯೆ: ಪುರುಷ ಇನ್‍ಫರ್ಟಿಲಿಟಿ ಫಲವತ್ತಾದ ಹೆಣ್ಣಿನಲ್ಲಿ ಗರ್ಭಧಾರಣೆಯನ್ನು ಉಂಟುಮಾಡಲು ಪುರುಷನ ಅಸಮರ್ಥತೆಯನ್ನು ಸೂಚಿಸುತ್ತದೆ. ಪುರುಷ ಸಂತಾನೋತ್ಪತ್ತಿ ಸಾಮಾನ್ಯವಾಗಿ ವೀರ್ಯ ಮತ್ತು ವೀರ್ಯದ ಗುಣಮಟ್ಟದಲ್ಲಿನ ಕೊರತೆಯಿಂದ ಉಂಟಾಗುತ್ತದೆ. ಕಡಿಮೆ ವೀರ್ಯಾಣು ಸಂಖ್ಯೆ ಕಡಿಮೆಯಾದ ವೀರ್ಯಾಣು ಚಲನಶೀಲತೆ ಮತ್ತು ಅಸಹಜ ರೂಪವಿಜ್ಞಾನಕ್ಕೆ ಸಂಬಂಧಿಸಿರುತ್ತವೆ.
• ವೆರಿಕೋಸೆಲೆ ಎಂಬ ಸಮಸ್ಯೆ: ಮನುಷ್ಯನ ವೃಷಣ(ಗಳ) ಮೇಲಿನ ರಕ್ತನಾಳ(ವೇಯ್ನ್ಸ್)ಗಳು ತುಂಬಾ ದೊಡ್ಡದಾಗಿದ್ದಾಗ ಇದು ಸಂಭವಿಸುತ್ತದೆ. ಇವು ವೃಷಣಗಳನ್ನು ಬಿಸಿ ಮಾಡುತ್ತವೆ. ಶಾಖವು ವೀರ್ಯದ ಸಂಖ್ಯೆ ಅಥವಾ ಆಕಾರದ ಮೇಲೆ ಪರಿಣಾಮ ಬೀರಬಹುದು.
• ಪುರುಷ ಸಂತಾನೋತ್ಪತ್ತಿ ಸಮಸ್ಯೆಯ ಇತರ ಅಂಶಗಳು: ಮನುಷ್ಯನಲ್ಲಿ ಕಡಿಮೆ ವೀರ್ಯಾಣು ಉತ್ಪತ್ತಿ ಅಥವಾ ಯಾವುದೂ ವೀರ್ಯೋತ್ಪತ್ತಿ ಇಲ್ಲದಿರಲು ಕಾರಣವಾಗುವ ಅಂಶಗಳು ಐವಿಎಫ್‍ಗೆ ಸಲಹೆ ನೀಡಬಹುದು.
• ವೀರ್ಯಾಣುಗಳ ಕಳಪೆ ಚಲನಶೀಲತೆ: ವೀರ್ಯಾಣುಗಳ ಆಕಾರ ಮತ್ತು ಗಾತ್ರದಿಂದ ವೀರ್ಯಾಣುವಿನ ದುರ್ಬಲ ಚಲನಶೀಲತೆ ಉಂಟಾಗಬಹುದು. ಇದು ವೀರ್ಯವು ಮೊಟ್ಟೆಯನ್ನು ಫರ್ಟಿಲೈಜ್ ಮಾಡಲು ಕಷ್ಟಕರವಾಗಿಸುತ್ತದೆ. ಕೆಲವೊಮ್ಮೆ ಗಾಯಗಳು ಅಥವಾ ಸಂತಾನೋತ್ಪತ್ತಿ ವ್ಯವಸ್ಥೆಗೆ ಇತರ ಹಾನಿಗಳು ವೀರ್ಯಾಣುವನ್ನು ತಡೆಯುತ್ತವೆ ಅಥವಾ ವೀರ್ಯಾಣುವಿನ ಆಕಾರವನ್ನು ಬದಲಾಯಿಸುತ್ತವೆ.
• ಕ್ಯಾನ್ಸರ್ ಅಥವಾ ಇತರ ಆರೋಗ್ಯ ಪರಿಸ್ಥಿತಿಗಳಿಗೆ ಫರ್ಟಿಲಿಟಿ ಸಂರಕ್ಷಣೆ: ವಿಕಿರಣ ಮತ್ತು ಕೀಮೋಥೆರಪಿಯಂತಹ ಕ್ಯಾನ್ಸರ್ ಚಿಕಿತ್ಸೆಯು ನಿಮ್ಮ ಸಂತಾನೋತ್ಪತ್ತಿ ಸಾಮರ್ಥ್ಯಕ್ಕೆ ಹಾನಿಯುಂಟುಮಾಡಬಹುದು. ನೀವು ಕ್ಯಾನ್ಸರ್‌ಗೆ ಚಿಕಿತ್ಸೆಯನ್ನು ಪ್ರಾರಂಭಿಸಲಿದ್ದರೆ, ಫರ್ಟಿಲಿಟಿ ಸಂರಕ್ಷಣೆಗಾಗಿ ನೀವು ಐವಿಎಫ್ ಚಿಕಿತ್ಸೆಯನ್ನು ಆರಿಸಿಕೊಳ್ಳಬಹುದು. ಮಹಿಳೆಯರು ತಮ್ಮ ಅಂಡಾಶಯದಿಂದ ಅಂಡಾಣುಗಳನ್ನು ಕೊಯ್ಲು ಮಾಡಬಹುದು ಮತ್ತು ನಂತರದ ಬಳಕೆಗಾಗಿ ಫರ್ಟಿಲೈಜ್ ಆಗದ ಸ್ಥಿತಿಯಲ್ಲಿ ಶೀಥಲೀಕರಿಸಿ ಇಡಬಹುದು. ಅಥವಾ ಭವಿಷ್ಯದ ಬಳಕೆಗಾಗಿ ಅಂಡಾಣುಗಳನ್ನು ಫರ್ಟಿಲೈಜ್ ಮಾಡಬಹುದು ಮತ್ತು ಭ್ರೂಣಗಳಾಗಿ ಶೀಥಲೀಕರಿಸಿ ಇಡಬಹುದು.
• ಸರೊಗೇಸಿ(ಬಾಡಿಗೆ ತಾಯಿ ನೆರವು): ಕ್ರಿಯಾತ್ಮಕ ಗರ್ಭಾಶಯವನ್ನು ಹೊಂದಿರದ ಅಥವಾ ಗರ್ಭಾವಸ್ಥೆಯು ಗಂಭೀರವಾದ ಆರೋಗ್ಯ ಸಮಸ್ಯೆ ಹೊಂದಿರುವ ಮಹಿಳೆಯರು ಗರ್ಭಧಾರಣೆಯನ್ನು ಸಾಗಿಸಲು (ಗರ್ಭಧಾರಣೆಯ ವಾಹಕ) ಇನ್ನೊಬ್ಬ ವ್ಯಕ್ತಿಯನ್ನು ಬಳಸಿಕೊಂಡು ಐವಿಎಫ್‍ಅನ್ನು ಆಯ್ಕೆ ಮಾಡಬಹುದು. ಈ ಸಂದರ್ಭದಲ್ಲಿ, ಮಹಿಳೆಯ ಮೊಟ್ಟೆಗಳನ್ನು ವೀರ್ಯದೊಂದಿಗೆ ಫಲವತ್ತಾಗಿಸಲಾಗುತ್ತದೆ. ಪರಿಣಾಮವಾಗಿ ಭ್ರೂಣಗಳನ್ನು ಗರ್ಭಾವಸ್ಥೆಯ ವಾಹಕರಲ್ಲಿ (ಅಥವಾ ಬಾಡಿಗೆ ತಾಯಿಯ) ಇರಿಸಲಾಗುತ್ತದೆ.
ಐಯುಐ ಆಕ್ರಮಣಕಾರಿಯಲ್ಲದ ಮತ್ತು ನೋವುರಹಿತ ವಿಧಾನವಾಗಿದೆ. ಅಲ್ಲದೇ ಕನಿಷ್ಠ ಔಷಧಿಗಳೊಂದಿಗೆ ನಿಮ್ಮ ನೈಸರ್ಗಿಕ ಆವರ್ತನದೊಂದಿಗೆ ಮಾಡಬಹುದು. ಅಂಡೋತ್ಪತ್ತಿ ಸಮಯದಲ್ಲಿ, ವೀರ್ಯಾಣು ಕೋಶಗಳನ್ನು ಪುರುಷ ಸಂಗಾತಿಯಿಂದ ಸಂಗ್ರಹಿಸಲಾಗುತ್ತದೆ ಮತ್ತು ಐಯುಐನಲ್ಲಿ ಬಳಸಲಾಗುತ್ತದೆ. ಐಯುಐ ಮತ್ತು ಅಂಡಾಶಯದ ಪ್ರಚೋದನೆಯ ಸಂಯೋಜನೆಯೊಂದಿಗೆ ಗರ್ಭಧಾರಣೆಯ ಸಾಧ್ಯತೆಗಳು ಹೆಚ್ಚಾಗಬಹುದು. ಅಂಡಾಶಯದಲ್ಲಿ ಬಹು ಅಂಡಾಣುಗಳನ್ನು ಉತ್ಪಾದಿಸಲು ಅಂಡಾಣುಗಳ ಬೆಳವಣಿಗೆಯನ್ನು ಉತ್ತೇಜಿಸುವ ನಿರ್ದಿಷ್ಟ ಔಷಧಿಗಳೊಂದಿಗೆ ಅಂಡಾಶಯದ ಪ್ರಚೋದನೆಯನ್ನು ಸಾಧಿಸಬಹುದು.
ಐವಿಎಫ್‍ಗೆ ನೀವು ಹೇಗೆ ತಯಾರಿ ಆಗುತ್ತೀರಿ?
ಐವಿಎಫ್ ಆವರ್ತನವನ್ನು ಪ್ರಾರಂಭಿಸುವ ಮೊದಲು ವಿವಿಧ ಸ್ಕ್ರೀನಿಂಗ್ ಕಾರ್ಯವಿಧಾನಗಳನ್ನು ಮಾಡಬೇಕು.
• ಅಂಡಾಶಯದ ಮೀಸಲು ಪರೀಕ್ಷೆ - ನಿಮ್ಮ ಋತುಆವರ್ತನದ ಮೊದಲ ಕೆಲವು ದಿನಗಳಲ್ಲಿ ನಿಮ್ಮ ರಕ್ತದಲ್ಲಿನ ಕೋಶಕ(ಫಾಲಿಕಲ್)-ಉತ್ತೇಜಿಸುವ ಹಾರ್ಮೋನ್ (ಎಫ್‍ಎಸ್‍ಎಚ್), ಎಸ್ಟ್ರಾಡಿಯೋಲ್ (ಈಸ್ಟ್ರೊಜೆನ್) ಮತ್ತು ಆ್ಯಂಟಿ-ಮುಲ್ಲೆರಿಯನ್ ಹಾರ್ಮೋನ್‍ಗಳ ಸಾಂದ್ರತೆಯನ್ನು ಅಂಡಾಣುಗಳ ಪ್ರಮಾಣ ಮತ್ತು ಗುಣಮಟ್ಟವನ್ನು ನಿರ್ಧರಿಸಲು ಮಾಡಲಾಗುತ್ತದೆ. ನಿಮ್ಮ ಅಂಡಾಶಯದ ಅಲ್ಟ್ರಾಸೌಂಡ್ ಪರೀಕ್ಷಾ ಫಲಿತಾಂಶಗಳು ನಿಮ್ಮ ಅಂಡಾಶಯಗಳು ಫರ್ಟಿಲಿಟಿ ಔಷಧಿಗಳಿಗೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಊಹಿಸಲು ವೈದ್ಯರಿಗೆ ಸಹಾಯ ಮಾಡುತ್ತದೆ.
• ವೀರ್ಯ ವಿಶ್ಲೇಷಣೆ: ಐವಿಎಫ್ ಆವರ್ತನವನ್ನು ಪ್ರಾರಂಭಿಸುವ ಮೊದಲು ಫರ್ಟಿಲಿಟಿಯ ಮೌಲ್ಯಮಾಪನದ ಭಾಗವಾಗಿ ವೀರ್ಯ ವಿಶ್ಲೇಷಣೆಯನ್ನು ಮಾಡಲಾಗುತ್ತದೆ.
• ಸಾಂಕ್ರಾಮಿಕ ರೋಗದ ಸ್ಕ್ರೀನಿಂಗ್: ಇಬ್ಬರೂ ಪಾಲುದಾರರು ಎಚ್‍ಐವಿ ಸೇರಿದಂತೆ ಸಾಂಕ್ರಾಮಿಕ ರೋಗಗಳನ್ನು ಪರೀಕ್ಷಿಸಲ್ಪಡುತ್ತಾರೆ.
• ಗರ್ಭಾಶಯದ ಪರೀಕ್ಷೆ: ನೀವು ಐವಿಎಫ್‍ಅನ್ನು ಪ್ರಾರಂಭಿಸುವ ಮೊದಲು ಗರ್ಭಾಶಯದ ಒಳಪದರವನ್ನು ಪರೀಕ್ಷಿಸಲಾಗುತ್ತದೆ. ಇದು ನಿಮ್ಮ ಗರ್ಭಾಶಯದ ಕುಹರದ ಚಿತ್ರಗಳನ್ನು ಸೃಷ್ಟಿಸಲು ಸೋನೊಹಿಸ್ಟೆರೊಗ್ರಫಿ ಮತ್ತು ಅಲ್ಟ್ರಾಸೌಂಡ್ ಅನ್ನು ಒಳಗೊಂಡಿರಬಹುದು.
ಐವಿಎಫ್ ಕಾರ್ಯವಿಧಾನ
ಐವಿಎಫ್ ಅಂಡಾಶಯದ ಪ್ರಚೋದನೆ, ಅಂಡಾಣು ಮರುಪಡೆಯುವಿಕೆ, ವೀರ್ಯ ಮರುಪಡೆಯುವಿಕೆ, ಫಲೀಕರಣ ಮತ್ತು ಭ್ರೂಣ ವರ್ಗಾವಣೆಯಂತಹ ಹಲವಾರು ಹಂತಗಳನ್ನು ಒಳಗೊಂಡಿರುತ್ತದೆ. ಐವಿಎಫ್‍ನ ಒಂದು ಆವರ್ತನವು ಸುಮಾರು ಎರಡರಿಂದ ಮೂರು ವಾರಗಳನ್ನು ತೆಗೆದುಕೊಳ್ಳಬಹುದು, ಕೆಲವೊಮ್ಮೆ ಹಲವು ಆವರ್ತನಗಳು ಬೇಕಾಗಬಹುದು.
ಅಂಡೋತ್ಪತ್ತಿ ಇಂಡಕ್ಷನ್
ಐವಿಎಫ್ ಪ್ರಕ್ರಿಯೆಯು ಫರ್ಟಿಲಿಟಿ ಔಷಧಿಗಳು ಮತ್ತು ಹಾರ್ಮೋನುಗಳೊಂದಿಗೆ ಪ್ರಾರಂಭವಾಗುತ್ತದೆ. ಅಂಡಾಶಯದಲ್ಲಿ ಬಹು ಅಂಡಾಣುಗಳ ಬೆಳವಣಿಗೆಯನ್ನು ಉತ್ತೇಜಿಸಲು ಸುಮಾರು 10 - 12 ದಿನಗಳವರೆಗೆ ಮಹಿಳೆಗೆ ಇವುಗಳನ್ನು ನೀಡಲಾಗುತ್ತದೆ. ಬೆಳೆಯುತ್ತಿರುವ ಅಂಡಾಣುಗಳ ಸ್ಥಿತಿಯನ್ನು ತಿಳಿಯಲು ಟ್ರಾನ್ಸ್‌ವೆಜಿನಲ್ ಅಲ್ಟ್ರಾಸೌಂಡ್ ಸ್ಕ್ಯಾನ್ ಮತ್ತು ಹಾರ್ಮೋನ್ ವಿಶ್ಲೇಷಣೆ ನಡೆಸಲಾಗುತ್ತದೆ.
ಒಬ್ಬರಿಗೆ ಹಲವಾರು ವಿಭಿನ್ನ ಔಷಧಿಗಳು ಬೇಕಾಗಬಹುದು, ಉದಾಹರಣೆಗೆ
• ಅಂಡಾಶಯದ ಪ್ರಚೋದನೆಗಾಗಿ ಔಷಧಗಳು: ಕೋಶಕ(ಫಾಲಿಕಲ್)-ಉತ್ತೇಜಿಸುವ ಹಾರ್ಮೋನ್ (ಎಫ್‍ಎಸ್‍ಎಚ್) ಅಥವಾ ಲ್ಯುಟೈನೈಜಿಂಗ್ ಹಾರ್ಮೋನ್ (ಎಲ್‍ಎಚ್) ಅಥವಾ ಎರಡರ ಸಂಯೋಜನೆಯನ್ನು ಅಂಡಾಶಯಗಳನ್ನು ಉತ್ತೇಜಿಸಲು ಚುಚ್ಚಲಾಗುತ್ತದೆ. ಈ ಔಷಧಿಗಳು ಒಂದು ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಅಂಡಾಣುಗಳನ್ನು ಅಭಿವೃದ್ಧಿಪಡಿಸಲು ಉತ್ತೇಜಿಸುತ್ತವೆ.
• ಅಂಡಾಣು (ಊಸೈಟ್) ಪಕ್ವತೆಗಾಗಿ ಔಷಧಗಳು: ಅಂಡಾಣು ಮರುಪಡೆಯುವಿಕೆಗೆ ಕೋಶಕಗಳು ಸಿದ್ಧವಾದಾಗ ಲುಪ್ರೈಡ್ ಅಥವಾ ಎಚ್‍ಸಿಜಿಯಂತಹ ಟ್ರಿಗ್ಗರ್‌ಗಳು ಎಂದು ಕರೆಯಲ್ಪಡುವ ನಿರ್ದಿಷ್ಟ ಔಷಧಗಳನ್ನು ಅಂಡಾಣುಗಳ ಪಕ್ವತೆಗೆ ಸಹಾಯ ಮಾಡಲು ನೀಡಲಾಗುತ್ತದೆ.
• ಅಕಾಲಿಕ ಅಂಡೋತ್ಪತ್ತಿಯನ್ನು ತಡೆಗಟ್ಟುವ ಔಷಧಿಗಳು: ನಿಮ್ಮ ದೇಹವು ಬೆಳೆಯುತ್ತಿರುವ ಅಂಡಾಣುಗಳನ್ನು ತೀರಾ ಬೇಗನೆ ಬಿಡುಗಡೆ ಮಾಡುವುದನ್ನು ತಡೆಯಲು ಈ ಔಷಧಿಗಳನ್ನು ನೀಡಲಾಗುತ್ತದೆ.
• ನಿಮ್ಮ ಗರ್ಭಾಶಯದ ಒಳಪದರವನ್ನು ತಯಾರಿಸಲು ಔಷಧಿಗಳು: ನಿಮ್ಮ ಗರ್ಭಾಶಯವು ಭ್ರೂಣದ ಅಳವಡಿಕೆಯನ್ನು ಹೆಚ್ಚು ಸ್ವೀಕರಿಸುವಂತೆ ಮಾಡಲು ಭ್ರೂಣ ವರ್ಗಾವಣೆಯ ದಿನದಂದು ಪ್ರೊಜೆಸ್ಟರಾನ್ ಪೂರಕಗಳನ್ನು ನೀಡಬಹುದು.
• ಅಂಡಾಣುಗಳನ್ನು ಹಿಂಪಡೆಯಲು ಸಿದ್ಧವಾಗುವ ಮುನ್ನ ಒಂದರಿಂದ ಎರಡು ವಾರಗಳಷ್ಟು ಅಂಡಾಶಯದ ಪ್ರಚೋದನೆಯ ಅಗತ್ಯವಿರುತ್ತದೆ.
ಅಂಡಾಣುಗಳ ಸ್ಥಿತಿಯನ್ನು ತಿಳಿಯಲು ನಿಮ್ಮ ವೈದ್ಯರು ಈ ಕೆಳಗಿನ ಕ್ರಮಗಳನ್ನು ನಡೆಸುತ್ತಾರೆ:
• ಯೋನಿಯ ಅಲ್ಟ್ರಾಸೌಂಡ್: ಕೋಶಕಗಳ ಬೆಳವಣಿಗೆಯನ್ನು ಮೇಲ್ವಿಚಾರಣೆ ಮಾಡಲು ನಿಮ್ಮ ಅಂಡಾಶಯದ ಚಿತ್ರಣ (ಅಂಡಾಣುಗಳು ಪಕ್ವವಾಗುವ ದ್ರವದಿಂದ ತುಂಬಿದ ಅಂಡಾಶಯದ ಚೀಲಗಳು)
• ರಕ್ತ ಪರೀಕ್ಷೆಗಳು: ಅಂಡಾಶಯದ ಪ್ರಚೋದನೆಗಾಗಿ ನೀಡಲಾದ ಔಷಧಿಗಳಿಗೆ ನಿಮ್ಮ ಪ್ರತಿಕ್ರಿಯೆಯನ್ನು ನೋಡಲು ಈ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಉದಾಹರಣೆಗೆ, ಕಿರುಚೀಲಗಳ ಬೆಳವಣಿಗೆಯೊಂದಿಗೆ ಎಸ್ಟ್ರೊಜೆನ್ ಮಟ್ಟವು ಹೆಚ್ಚಾಗುತ್ತದೆ ಮತ್ತು ಅಂಡೋತ್ಪತ್ತಿ ತನಕ ಪ್ರೊಜೆಸ್ಟರಾನ್ ಮಟ್ಟಗಳು ಕಡಿಮೆಯಾಗಿರುತ್ತವೆ. ನೀಡಲಾಗುವ ಚುಚ್ಚುಮದ್ದಿನ ಹಾರ್ಮೋನುಗಳಿಗೆ ಮಹಿಳೆಯ ದೇಹವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.
ಅಂಡಾಣು ಮರಳಿಪಡೆಯುವಿಕೆ
ಅಂತಿಮ ಪ್ರಚೋದಕ ಚುಚ್ಚುಮದ್ದಿನ ನಂತರ ಮತ್ತು ಅಂಡೋತ್ಪತ್ತಿಗೆ ಮುನ್ನ 34 ರಿಂದ 36 ಗಂಟೆಗಳವರೆಗೆ ಅಂಡಾಣುಗಳನ್ನು ಮರಳಿ ಪಡೆಯುವ ಕಾರ್ಯ ಕೈಗೊಳ್ಳಲಾಗುತ್ತದೆ. ಒಮ್ಮೆ ಅಂಡಾಣುಗಳು ಸಾಕಷ್ಟು ಬೆಳೆದಾಗ ಮತ್ತು ಪ್ರಚೋದಕ ಚುಚ್ಚುಮದ್ದು ನೀಡುವುದರೊಂದಿಗೆ ಪಕ್ವವಾದಾಗ, ಅಂಡಾಣುಗಳನ್ನು ಹೊರತೆಗೆಯಲು ಸೊಂಟದ ಕುಹರದ ಮೂಲಕ ಅಲ್ಟ್ರಾಸೌಂಡ್ ಬಳಸಿ ಫಾಲಿಕ್ಯುಲರ್ ಆಸ್ಪಿರೇಶನ್ ಎಂಬ ಸಣ್ಣ ಶಸ್ತ್ರಚಿಕಿತ್ಸಾ ವಿಧಾನದ ಮೂಲಕ ಅಂಡಾಣುಗಳನ್ನು ಹೊರತೆಗೆಯಲಾಗುತ್ತದೆ. ಸಂಭಾವ್ಯ ಅಸ್ವಸ್ಥತೆಯನ್ನು ಕಡಿಮೆ ಮಾಡಲು ಅಥವಾ ತೊಡೆದುಹಾಕಲು ರೋಗಿಗೆ ಸಾಮಾನ್ಯ ಅರಿವಳಿಕೆ ನೀಡಲಾಗುತ್ತದೆ. ಅಂಡಾಣು ಹಿಂಪಡೆಯುವಿಕೆಯನ್ನು ಟ್ರಾನ್ಸ್‌ವೆಜಿನಲ್ ಅಲ್ಟ್ರಾಸೌಂಡ್ ಆಸ್ಪಿರೇಷನ್ ಎಂಬ ವಿಧಾನದಿಂದ ಮಾಡಲಾಗುತ್ತದೆ. ಕಿರುಚೀಲಗಳನ್ನು ಗುರುತಿಸಲು ನಿಮ್ಮ ಯೋನಿಯೊಳಗೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೇರಿಸಲಾಗುತ್ತದೆ ಮತ್ತು ನಂತರ ಯೋನಿಯ ಮೂಲಕ ಹೋಗಲು ಮತ್ತು ಅಂಡಾಣುಗಳನ್ನು ಹಿಂಪಡೆಯಲು ಕಿರುಚೀಲಗಳಿಗೆ ಒಂದು ತೆಳುವಾದ ಸೂಜಿಯನ್ನು ಅಲ್ಟ್ರಾಸೌಂಡ್ ಪ್ರೋಬ್‍ಗೆ ಸೇರಿಸಲಾಗುತ್ತದೆ. ಟ್ರಾನ್ಸ್‌ವೆಜಿನಲ್ ಸ್ಕ್ಯಾನ್ ಮೂಲಕ ಅಂಡಾಶಯವನ್ನು ಪ್ರವೇಶಿಸಲು ಸಾಧ್ಯವಾಗದಿದ್ದರೆ ಅಬ್ಡಾಮಿನಲ್ ಅಲ್ಟ್ರಾಸೌಂಡ್ ಅನ್ನು ಬಳಸಬಹುದು.ನಂತರ ಸೂಜಿಯ ಮೂಲಕ ಕೋಶಕಗಳಿಂದ ಬಹು ಅಂಡಾಣುಗಳನ್ನು ತೆಗೆದುಹಾಕಲಾಗುತ್ತದೆ. ಅಂಡಾಣುವನ್ನು ಹಿಂಪಡೆದ ನಂತರ ನೀವು ಸೆಳೆತ ಮತ್ತು ತುಂಬಿಕೊಂಡಂತಹ ಅಥವಾ ಒತ್ತಡದ ಭಾವನೆಯನ್ನು ಅನುಭವಿಸಬಹುದು. ಪ್ರೌಢ ಮತ್ತು ಆರೋಗ್ಯಕರ ಅಂಡಾಣುಗಳನ್ನು ಪೌಷ್ಟಿಕಾಂಶದ ದ್ರವದಲ್ಲಿ ಇರಿಸಲಾಗುತ್ತದೆ (ಕಲ್ಚರ್ ಮೀಡಿಯಂ) ಮತ್ತು ಕಾವು ಕೊಡಲಾಗುತ್ತದೆ. ಭ್ರೂಣಗಳನ್ನು ಸೃಷ್ಟಿಸುವುದಕ್ಕೆ ಪ್ರಯತ್ನಿಸಲು ಆರೋಗ್ಯಕರ ಮತ್ತು ಪ್ರೌಢ ಅಂಡಾಣುಗಳನ್ನು ವೀರ್ಯದೊಂದಿಗೆ ಬೆರೆಸಲಾಗುತ್ತದೆ ಅಥವಾ ಅಂಡಾಣುಗಳನ್ನು ಫರ್ಟಿಲೈಜ್ ಮಾಡಲು ಐಸಿಎಸ್‍ಐ ವಿಧಾನವನ್ನು ಮಾಡಲಾಗುತ್ತದೆ.
ಫರ್ಟಿಲೈಸೇಷನ್(ಫಲೀಕರಣ)
ಸ್ಖಲನದ ಮೂಲಕ ವೀರ್ಯದ ಮಾದರಿಯನ್ನು ನೀಡಲು ಪುರುಷನನ್ನು ಕೇಳಲಾಗುತ್ತದೆ. ಫರ್ಟಿಲೈಸೇಷನ್ ಉತ್ತೇಜಿಸಲು ವೀರ್ಯ ಮತ್ತು ಅಂಡಾಣುಗಳನ್ನು ಒಂದು ಡಿಶ್‍ನಲ್ಲಿ ಒಟ್ಟಿಗೆ ಸೇರಿಸಲಾಗುತ್ತದೆ ಮತ್ತು ನಿಯಂತ್ರಿತ ಪರಿಸರದಲ್ಲಿ ಪ್ರಯೋಗಾಲಯದಲ್ಲಿ ಸಂಗ್ರಹಿಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಐಸಿಎಸ್‍ಐ ಎಂಬ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತದೆ. ಅಲ್ಲಿ ಮೊಟ್ಟೆಗಳಿಗೆ ಹಾನಿಯಾಗದಂತೆ ವೀರ್ಯಾಣುವನ್ನು ಅಂಡಾಣು ಒಳಗೆ ತಳ್ಳಲಾಗುತ್ತದೆ. ಇದು ಫರ್ಟಿಲೈಸೇಷನ್‍ಅನ್ನು ಖಚಿತಪಡಿಸುತ್ತದೆ.
ಫರ್ಟಿಲೈಸ್ ಆದ ಮೊಟ್ಟೆಯನ್ನು ಸುಮಾರು 48 ಗಂಟೆಗಳ ಕಾಲ ವಿಶೇಷ ಬೆಳವಣಿಗೆಯ ಮಾಧ್ಯಮದಲ್ಲಿ ಶೇಖರಿಸಿಡಲಾಗುತ್ತದೆ. ಅಲ್ಲದೇ ಅದು ವಿಭಜನೆಯಾಗುತ್ತದೆ ಮತ್ತು 6-8 ಜೀವಕೋಶಗಳನ್ನು ಹೊಂದಿರುವ ಭ್ರೂಣವಾಗುತ್ತದೆ. ಅದೇ ಸಮಯದಲ್ಲಿ, ಭ್ರೂಣವನ್ನು ಅಳವಡಿಸಲು ಗರ್ಭಾಶಯದ ಒಳಪದರವನ್ನು ತಯಾರಿಸಲು ಮಹಿಳೆಗೆ ಪ್ರೊಜೆಸ್ಟರಾನ್ ಹಾರ್ಮೋನ್‍ನ ಪೂರಕಗಳನ್ನು ನೀಡಲಾಗುತ್ತದೆ.
ಸಾಂಪ್ರದಾಯಿಕ ಗರ್ಭಧಾರಣೆ: ಆರೋಗ್ಯಕರ ವೀರ್ಯಾಣು ಮತ್ತು ಪ್ರೌಢ ಮೊಟ್ಟೆಗಳನ್ನು ಮಿಶ್ರಣ ಮಾಡಲಾಗುತ್ತದೆ ಮತ್ತು ರಾತ್ರಿಯಿಡೀ ಕಾವು ಕೊಡಲಾಗುತ್ತದೆ.
ಇಂಟ್ರಾಸೈಟೋಪ್ಲಾಸ್ಮಿಕ್ ವೀರ್ಯಾಣು ಇಂಜೆಕ್ಷನ್ (ಐಸಿಎಸ್‍ಐ): ಐಸಿಎಸ್‍ಐನಲ್ಲಿ, ಪ್ರತಿ ಪ್ರೌಢ ಮೊಟ್ಟೆಯೊಳಗೆ ಒಂದು ಆರೋಗ್ಯಕರ ವೀರ್ಯವನ್ನು ನೇರವಾಗಿ ಚುಚ್ಚಲಾಗುತ್ತದೆ. ಹಿಂದಿನ ಐವಿಎಫ್ ಆವರ್ತನಗಳಲ್ಲಿ ಫರ್ಟಿಲೈಸೇಷನ್ ಪ್ರಯತ್ನಗಳು ವಿಫಲವಾದರೆ ಐಸಿಎಸ್‍ಐ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಭ್ರೂಣ ವರ್ಗಾವಣೆ
ಅಂಡಾಣುವಿನ ಹಿಂಪಡೆಯುವಿಕೆ ಮತ್ತು ಫಲೀಕರಣದ ಮೂರರಿಂದ ಐದು ದಿನಗಳ ನಂತರ ಭ್ರೂಣಗಳನ್ನು ಸಾಮಾನ್ಯವಾಗಿ ಮಹಿಳೆಯ ಗರ್ಭಾಶಯಕ್ಕೆ ವರ್ಗಾಯಿಸಲಾಗುತ್ತದೆ. ಭ್ರೂಣಗಳನ್ನು ಗರ್ಭಾಶಯಕ್ಕೆ ವರ್ಗಾಯಿಸಲು ಕ್ಯಾಥೆಟರ್ ಅಥವಾ ಸಣ್ಣ ಟ್ಯೂಬ್ ಬಳಸಲಾಗುತ್ತದೆ. ಈ ವಿಧಾನವು ಸಾಮಾನ್ಯವಾಗಿ ಹೆಚ್ಚಿನ ಮಹಿಳೆಯರಿಗೆ ನೋವುರಹಿತವಾಗಿರುತ್ತದೆ. ಆದರೂ ಕೆಲವು ಮಹಿಳೆಯರು ಸ್ವಲ್ಪ ಪ್ರಮಾಣದ ಸ್ನಾಯು ಸೆಳೆತವನ್ನು ಅನುಭವಿಸುತ್ತಾರೆ. ಭ್ರೂಣಗಳ ಯಶಸ್ವಿ ವರ್ಗಾವಣೆಯ ನಂತರ, ಗರ್ಭಾಶಯದೊಳಗೆ ಅಳವಡಿಸಲಾಗುತ್ತದೆ, ಇದರ ಪರಿಣಾಮವಾಗಿ ಗರ್ಭಾವಸ್ಥೆ ಉಂಟಾಗುತ್ತದೆ. ಇದನ್ನು ಭ್ರೂಣ ವರ್ಗಾವಣೆಯ 16 ದಿನಗಳ ನಂತರ ರಕ್ತ ಪರೀಕ್ಷೆಯ ಮೂಲಕ ಕಂಡುಹಿಡಿಯಬಹುದು. ಪರೀಕ್ಷೆಯು ಸಕಾರಾತ್ಮಕವಾಗಿ ಬಂದರೆ, ನೀವು ಸಾಮಾನ್ಯ ಗರ್ಭಧಾರಣೆಯಂತೆ ಗರ್ಭಾವಸ್ಥೆಯ ಹಂತದ ಮೂಲಕ ಸಾಗುತ್ತೀರಿ. ಐವಿಎಫ್ ಚಿಕಿತ್ಸೆಯ ಮೂಲಕ ಆರೋಗ್ಯಕರ ಮತ್ತು ಯಶಸ್ವಿ ಗರ್ಭಧಾರಣೆ ಸಂಭವಿಸುತ್ತದೆ.
ಘನೀಕೃತ(ಫ್ರೋಜನ್) ಭ್ರೂಣ ವರ್ಗಾವಣೆ
ಐವಿಎಫ್ ಆವರ್ತನದಲ್ಲಿ, ಒಂದು ಅಥವಾ ಹೆಚ್ಚಿನ ಭ್ರೂಣಗಳು ಬೆಳವಣಿಗೆಯಾಗುತ್ತವೆ ಮತ್ತು ಈ ಭ್ರೂಣಗಳನ್ನು ಸಾಮಾನ್ಯವಾಗಿ ನಂತರದ ಬಳಕೆಗಾಗಿ ಫ್ರೀಜ್(ಶೀಥಲೀಕರಿಸಿ ಘನೀಕರಿಸುವುದು) ಮಾಡಿಡಲಾಗುತ್ತದೆ. ಸಾಮಾನ್ಯವಾಗಿ, ಐವಿಎಫ್ ಆವರ್ತನದಲ್ಲಿ ಮಹಿಳೆಯರ ಗರ್ಭಾಶಯಕ್ಕೆ ಕೇವಲ ಒಂದು ಅಥವಾ ಎರಡು ಭ್ರೂಣಗಳನ್ನು ವರ್ಗಾಯಿಸಲಾಗುತ್ತದೆ. ಏಕೆಂದರೆ ಬಹು ಗರ್ಭಧಾರಣೆಯ ಹೆಚ್ಚಿನ ಸಾಧ್ಯತೆಗಳಿವೆ. ಉಳಿದ ಭ್ರೂಣಗಳನ್ನು ಭವಿಷ್ಯದ ಬಳಕೆಗಾಗಿ ಫ್ರೀಜ್ ಮಾಡಿಡಲಾಗುತ್ತದೆ. ಅಂಡಾಣುವನ್ನು ಹಿಂಪಡೆದ ಎರಡರಿಂದ ಐದು ದಿನಗಳ ನಂತರ ತಾಜಾ ಭ್ರೂಣ ವರ್ಗಾವಣೆಯನ್ನು ಮಾಡಲಾಗುತ್ತದೆ. ಹೆಪ್ಪುಗಟ್ಟಿದ ಭ್ರೂಣ ವರ್ಗಾವಣೆಯು ಹೆಪ್ಪುಗಟ್ಟಿದ ಭ್ರೂಣವನ್ನು ಕ್ರಿಯೋಪ್ರಿಸರ್ವೇಶನ್ ಟ್ಯಾಂಕ್‍ಗಳಿಂದ (ದ್ರವ ಸಾರಜನಕದಿಂದ ತುಂಬಿದ) ಹಿಂಪಡೆಯುವ ಪ್ರಕ್ರಿಯೆಯಾಗಿದ್ದು, ಅದನ್ನು ಸಾಮಾನ್ಯ ಕೋಣೆಗೆ ವಿಶೇಷ ಕ್ರಮದಲ್ಲಿ ತಂದು ನಂತರ ಮಹಿಳೆಯ ಗರ್ಭಾಶಯಕ್ಕೆ ವರ್ಗಾಯಿಸಲಾಗುತ್ತದೆ. ಗರ್ಭಾಶಯಕ್ಕೆ ವರ್ಗಾಯಿಸುವ ಪ್ರಕ್ರಿಯೆಯು ತಾಜಾ ವರ್ಗಾವಣೆಯಂತೆಯೇ ಇರುತ್ತದೆ.
ಭ್ರೂಣ ವರ್ಗಾವಣೆ ಕಾರ್ಯವಿಧಾನದ ನಂತರ
ಭ್ರೂಣ ವರ್ಗಾವಣೆಯ ನಂತರ ಸ್ವಲ್ಪ ಅನಾನುಕೂಲ ಹಾಗೂ ಅಸ್ವಸ್ಥತೆ ಉಂಟಾಗಬಹುದು. ಸಾಮಾನ್ಯವಾಗಿರುವ ದೈನಂದಿನ ಚಟುವಟಿಕೆಗಳನ್ನು ಪುನರಾರಂಭಿಸಬಹುದು. ಬಿರುಸಿನ ಚಟುವಟಿಕೆ ತಪ್ಪಿಸಬೇಕು. ಹೆಚ್ಚಿನ ಎಸ್ಟ್ರೋಜೆನ್ ಮಟ್ಟಗಳಿಂದಾಗಿ ಸ್ತನ ಮೃದುತ್ವ, ಸೌಮ್ಯವಾದ ಉಬ್ಬುವಿಕೆ, ಸೆಳೆತ, ಮಲಬದ್ಧತೆ ಇವು ಭ್ರೂಣ ವರ್ಗಾವಣೆಯ ನಂತರ ಕಂಡುಬರುವ ಕೆಲವು ಅಡ್ಡಪರಿಣಾಮಗಳು.
ಫಲಿತಾಂಶಗಳು
ಯಶಸ್ವಿ ಗರ್ಭಧಾರಣೆಯಾಗಿದೆಯೇ ಎಂದು ಪತ್ತೆಹಚ್ಚುವುದಕ್ಕಾಗಿ, ಭ್ರೂಣ ವರ್ಗಾವಣೆಯ ನಂತರ ಸುಮಾರು 12 ದಿನಗಳ ನಂತರ ವೈದ್ಯರು ಮಹಿಳೆಯ ರಕ್ತದ ಮಾದರಿಯನ್ನು ಪರೀಕ್ಷಿಸುತ್ತಾರೆ.
• ಗರ್ಭಿಣಿಯಾಗಿದ್ದರೆ, ಹೆಚ್ಚಿನ ಸಂದರ್ಭಗಳಲ್ಲಿ ವೈದ್ಯರು ಹೆಚ್ಚಿನ ಅಪಾಯದ ಅವಧಿಯಾಗಿರುವ ಮೂರು ತಿಂಗಳವರೆಗೆ ಪ್ರಕರಣವನ್ನು ನಿಭಾಯಿಸುತ್ತಾರೆ. ಆನಂತರ, ವೈದ್ಯರು ಮಹಿಳೆಯನ್ನು ಪ್ರಸವಪೂರ್ವ ಆರೈಕೆಗಾಗಿ ಪ್ರಸೂತಿ ತಜ್ಞರು ಅಥವಾ ಇತರೆ ಗರ್ಭಧಾರಣೆಯ ತಜ್ಞರಿಗೆ ಶಿಫಾರಸು ಮಾಡಬಹುದು.
• ಗರ್ಭಿಣಿಯಾಗದಿದ್ದರೆ, ಪ್ರೊಜೆಸ್ಟರಾನ್ ತೆಗೆದುಕೊಳ್ಳುವುದನ್ನು ನಿಲ್ಲಿಸಲು ವೈದ್ಯರು ಮಹಿಳೆಗೆ ಹೇಳುತ್ತಾರೆ ಮತ್ತು ಮಹಿಳೆಯು ಒಂದು ವಾರದೊಳಗೆ ತನ್ನ ಮುಟ್ಟಿನ ಅವಧಿಯನ್ನು ಹೊಂದುವ ಸಾಧ್ಯತೆಯಿದೆ.
ಐವಿಎಫ್ ಬಳಕೆಯ ನಂತರ ಆರೋಗ್ಯಕರ ಮಗುವಿಗೆ ಜನ್ಮ ನೀಡುವ ಸಾಧ್ಯತೆಗಳು ವಿವಿಧ ಅಂಶಗಳನ್ನು ಅವಲಂಬಿಸಿರುತ್ತದೆ:
• ತಾಯಿಯ ವಯಸ್ಸು: ಐವಿಎಫ್ ಸಮಯದಲ್ಲಿ ತಮ್ಮ ಅಂಡಾಣುಗಳನ್ನು ಬಳಸಿಕೊಂಡು ಕಿರಿಯ ವಯಸ್ಸಿನ ಮಹಿಳೆಯರು ಗರ್ಭಿಣಿಯಾಗಲು ಮತ್ತು ಆರೋಗ್ಯಕರ ಮಗುವಿಗೆ ಜನ್ಮ ನೀಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಯಶಸ್ಸಿನ ಸಾಧ್ಯತೆಗಳನ್ನು ಹೆಚ್ಚಿಸಲು, ಐವಿಎಫ್ ಸಮಯದಲ್ಲಿ 41 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಅಥವಾ ಅಂಡಾಣುವಿನ ಗುಣಮಟ್ಟ ಅಥವಾ ಅಂಡಾಣು ಮೀಸಲು ಸಾಕಷ್ಟಿಲ್ಲದ ಸಂದರ್ಭಗಳಲ್ಲಿ ದಾನಿ ಅಂಡಾಣುಗಳನ್ನು ಪರಿಗಣಿಸಲಾಗುತ್ತದೆ.
• ಭ್ರೂಣದ ಸ್ಥಿತಿ: ಗರ್ಭಾವಸ್ಥೆಯ ದರಗಳು ಭ್ರೂಣದ ಹಂತವನ್ನು ಅವಲಂಬಿಸಿರುತ್ತದೆ. ಹೆಚ್ಚು ಅಭಿವೃದ್ಧಿ ಹೊಂದಿದ ಭ್ರೂಣಗಳು (ಬ್ಲಾಸ್ಟೊಸಿಸ್ಟ್) ಕಡಿಮೆ ಅಭಿವೃದ್ಧಿ ಹೊಂದಿದ ಭ್ರೂಣಗಳಿಗೆ ಹೋಲಿಸಿದರೆ ಹೆಚ್ಚಿನ ಗರ್ಭಧಾರಣೆಯ ಮಟ್ಟ ಹೊಂದಿರುತ್ತವೆ (ದಿನ ಎರಡು ಅಥವಾ ಮೂರು).
• ಸಂತಾನೋತ್ಪತ್ತಿ ಇತಿಹಾಸ: ಎಂದಿಗೂ ಜನ್ಮ ನೀಡದ ಮಹಿಳೆಯರಿಗಿಂತ ಹಿಂದೆ ಜನ್ಮ ನೀಡಿದ ಮಹಿಳೆಯರು ಐವಿಎಫ್ ಬಳಸಿಕೊಂಡು ಗರ್ಭಿಣಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
• ಸಂತಾನೋತ್ಪತ್ತಿ ಸಮಸ್ಯೆಗೆ ಕಾರಣ: ವಿವರಿಸಲಾಗದ ಸಂತಾನೋತ್ಪತ್ತಿ ಸಮಸ್ಯೆ ಹೊಂದಿರುವ ಮಹಿಳೆಯರಿಗಿಂತ ತೀವ್ರವಾದ ಎಂಡೊಮೆಟ್ರಿಯೊಸಿಸ್ ಹೊಂದಿರುವ ಮಹಿಳೆಯರು ಐವಿಎಫ್ ಬಳಸಿಕೊಂಡು ಗರ್ಭಿಣಿಯಾಗುವ ಸಾಧ್ಯತೆ ಕಡಿಮೆಯಿರುತ್ತದೆ. ಅಂಡಾಣುಗಳ ಸಾಮಾನ್ಯ ಪೂರೈಕೆಯು ಇನ್‍ಫರ್ಟಿಲಿಟಿ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
• ಜೀವನಶೈಲಿಯ ಅಂಶಗಳು: ಸ್ಥೂಲಕಾಯ ಗರ್ಭಿಣಿಯಾಗುವ ಮತ್ತು ಮಗುವನ್ನು ಹೊಂದುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಆಲ್ಕೋಹಾಲ್, ಮನರಂಜನಾ ಔಷಧಗಳು, ಅತಿಯಾದ ಕೆಫೀನ್ ಮತ್ತು ಕೆಲವು ಔಷಧಿಗಳ ಬಳಕೆ ಕೂಡ ಹಾನಿಕಾರಕವಾಗಬಹುದು. ಧೂಮಪಾನ ಮಾಡುವ ಮಹಿಳೆಯರು ಐವಿಎಫ್ ಸಮಯದಲ್ಲಿ ಕಡಿಮೆ ಅಂಡಾಣುಗಳನ್ನು ಹಿಂಪಡೆಯುತ್ತಾರೆ ಮತ್ತು ಹೆಚ್ಚು ಸಲ ಗರ್ಭಪಾತವಾಗಬಹುದು.
ಐವಿಎಫ್‍ನ ಸಂಭಾವ್ಯ ಅಪಾಯಗಳು ಯಾವುವು?
• ಬಹು ಜನನಗಳು: ಲೋರೆಮ್ ಇಪ್ಸಮ್ ಡೋಲರ್ ಸಿಟ್ ಅಮೆಟ್, ಕಾನ್ಸೆಕ್ಟೆಟುರಾಡಿಪಿಸ್ಸಿಂಜೆಲಿಟ್. ಯುಟ್ ಎಲಿಟೆಲ್ಲಸ್, ಲುಕ್ಟುಸ್ನೆಕುಲ್ಲಮ್‍ಕಾರ್ಪರ್‍ಮಾಟಿಸ್, ಪುಲ್ವಿನಾರ್ ಡಪಿಬಸ್ಲಿಯೊ.
• ಅಕಾಲಿಕ ಹೆರಿಗೆ ಮತ್ತು ಕಡಿಮೆ ಜನನ ತೂಕ: ಐವಿಎಫ್ ಕಡಿಮೆ ಜನನ ತೂಕದೊಂದಿಗೆ ಬೇಗ ಜನಿಸುವ ಶಿಶುಗಳ ಅಪಾಯವನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸುತ್ತದೆ.
• ಅಂಡಾಶಯದ ಹೈಪರ್‌ಸ್ಟಿಮ್ಯುಲೇಶನ್ ಸಿಂಡ್ರೋಮ್: ಅಂಡಾಶಯದ ಹೈಪರ್‌ಸ್ಟಿಮ್ಯುಲೇಶನ್ ಸಿಂಡ್ರೋಮ್‍ನಲ್ಲಿ (ಒಎಚ್‍ಎಸ್‍ಎಸ್), ಎಚ್‍ಸಿಜಿಯಂತಹ ಫರ್ಟಿಲಿಟಿ ಚುಚ್ಚುಮದ್ದಿನ ಬಳಕೆಯಿಂದಾಗಿ ಅಂಡಾಶಯಗಳು ಊದಿಕೊಳ್ಳುತ್ತವೆಯಲ್ಲದೇ ನೋವಿನಿಂದ ಕೂಡಿರುತ್ತವೆ. ಈ ಲಕ್ಷಣಗಳು ಸಾಮಾನ್ಯವಾಗಿ ಒಂದು ವಾರದವರೆಗೆ ಇರುತ್ತವೆ ಮತ್ತು ಸ್ವಲ್ಪಮಟ್ಟಿನ ಹೊಟ್ಟೆ ನೋವು, ಉಬ್ಬುವುದು, ವಾಕರಿಕೆ, ವಾಂತಿ ಮತ್ತು ಅತಿಸಾರ ಕಾಣಿಸಿಕೊಳ್ಳಬಹುದು. ಅದೇನೇ ಇದ್ದರೂ, ನೀವು ಗರ್ಭಿಣಿಯಾಗಿದ್ದಲ್ಲಿ ನಿಮ್ಮ ಈ ತೊಂದರೆಯ ಲಕ್ಷಣಗಳು ಹಲವಾರು ವಾರಗಳವರೆಗೆ ಇರುತ್ತದೆ. ಕೆಲವು ಅಪರೂಪದ ಸಂದರ್ಭಗಳಲ್ಲಿ, ಮಹಿಳೆಗೆ ಅಂಡಾಶಯದ ಹೈಪರ್‌ಸ್ಟಿಮ್ಯುಲೇಶನ್ ಸಿಂಡ್ರೋಮ್‍ನ ತೀವ್ರ ಸ್ವರೂಪ ಕಾಣಿಸಿಕೊಳ್ಳಬಹುದು ಮತ್ತು ಅಂತಹ ಸಂದರ್ಭಗಳಲ್ಲಿ, ಎದೆ, ಸೊಂಟದ ಪ್ರದೇಶ ಮತ್ತು ಅಂಡಾಶಯದಲ್ಲಿ ಹೆಚ್ಚುವರಿ ದ್ರವದ ಕಾರಣದಿಂದಾಗಿ ಮಹಿಳೆಯು ತೂಕ ಹೆಚ್ಚಾಗುವ ಮತ್ತು ಉಸಿರಾಟದ ತೊಂದರೆಯನ್ನು ಅನುಭವಿಸಬಹುದು.
• ಗರ್ಭಪಾತ: ತಾಜಾ ಭ್ರೂಣಗಳೊಂದಿಗೆ ಐವಿಎಫ್ ಬಳಸಿ ಗರ್ಭಧರಿಸುವ ಮಹಿಳೆಯರಿಗೆ ಗರ್ಭಪಾತದ ಪ್ರಮಾಣವು ನೈಸರ್ಗಿಕವಾಗಿ ಗರ್ಭಧರಿಸುವ ಮಹಿಳೆಯರಂತೆಯೇ ಇರುತ್ತದೆ. ಆದರೆ ತಾಯಿಯ ವಯಸ್ಸು ಹೆಚ್ಚಾಗುವುದರೊಂದಿಗೆ ದರವು ಹೆಚ್ಚಾಗುತ್ತದೆ.
• ಅಂಡಾಣು-ಹಿಂಪಡೆಯುವ ಪ್ರಕ್ರಿಯೆಯ ತೊಡಕುಗಳು: ಅಂಡಾಣುಗಳನ್ನು ಹಿಂಪಡೆಯಲು ಸೂಜಿಯನ್ನು ಬಳಸುವುದರಿಂದ ಅಪರೂಪವಾಗಿ ರಕ್ತಸ್ರಾವ, ಸೋಂಕು, ಕರುಳು, ಮೂತ್ರಕೋಶ ಮತ್ತು ರಕ್ತನಾಳಗಳಿಗೆ ಹಾನಿಯಾಗಬಹುದು. ಸೆಡೆಟಿವ್ ಮತ್ತು ಸಾಮಾನ್ಯ ಅರಿವಳಿಕೆ ಮದ್ದುಗಳು ತಮ್ಮದೇ ಆದ ಅಪಾಯಗಳನ್ನು ಹೊಂದಿವೆ.
• ಎಕ್ಟೋಪಿಕ್(ಅಪಸ್ಥಾನೀಯ) ಗರ್ಭಧಾರಣೆ: ಫಲವತ್ತಾದ ಅಂಡಾಣುವು ಗರ್ಭಾಶಯದ ಹೊರಗೆ, ಸಾಮಾನ್ಯವಾಗಿ ಫಾಲೋಪಿಯನ್ ಟ್ಯೂಬ್‍ನಲ್ಲಿ ಅಳವಡಿಸಿಕೊಂಡಾಗ, ಅದನ್ನು ಎಕ್ಟೋಪಿಕ್ ಗರ್ಭಧಾರಣೆ ಎಂದು ಕರೆಯಲಾಗುತ್ತದೆ. ಫಲವತ್ತಾದ ಅಂಡಾಣುವು ಗರ್ಭಾಶಯದ ಹೊರಗೆ ಬದುಕಲು ಸಾಧ್ಯವಿಲ್ಲ, ಆದ್ದರಿಂದ ಗರ್ಭಧಾರಣೆಯನ್ನು ಮುಂದುವರಿಸಲು ಸಾಧ್ಯವಿರುವುದಿಲ್ಲ.
• ಜನ್ಮ ದೋಷಗಳು: ಹೇಗೆ ಗರ್ಭಧರಿಸಿದರೂ, ಮಗುವಿನ ಜನ್ಮ ದೋಷಗಳ ಬೆಳವಣಿಗೆಯಲ್ಲಿ ತಾಯಿಯ ವಯಸ್ಸು ಪ್ರಾಥಮಿಕ ಅಪಾಯಕಾರಿ ಅಂಶವಾಗಿದೆ. ಆದ್ದರಿಂದ, ಐವಿಎಫ್ ಮೂಲಕ ಗರ್ಭಧರಿಸಿದ ಶಿಶುಗಳು ಜನ್ಮ ದೋಷಗಳ ಹೆಚ್ಚಿನ ಅಪಾಯವನ್ನು ಹೊಂದಿರುವುದಿಲ್ಲ. ಐವಿಎಫ್ ಶಿಶುಗಳನ್ನು ಡಬಲ್ ಮಾರ್ಕರ್, ಟ್ರಿಪಲ್ ಮಾರ್ಕರ್ ಮತ್ತು ಅಸಂಗತತೆ ಪರೀಕ್ಷೆಗಳಲ್ಲಿ ಹೆಚ್ಚು ಶ್ರದ್ಧೆಯಿಂದ ಪರೀಕ್ಷಿಸಲಾಗುತ್ತದೆ. ಇದರಿಂದಾಗಿ ಜನ್ಮ ದೋಷಗಳನ್ನು ಬಹಳ ಮುಂಚೆಯೇ ಪತ್ತೆಹಚ್ಚಲು ಅವಕಾಶ ಸಿಗುತ್ತದೆ.
ಗರ್ಭಧರಿಸಲು ಸಾಧ್ಯವಾಗದ ಪ್ರತಿ ದಂಪತಿಗಳಿಗೆ ಐವಿಎಫ್ ಅಥವಾ ಟೆಸ್ಟ್ ಟ್ಯೂಬ್ ಬೇಬಿ ಕ್ರಮ ಆಶೀರ್ವಾದವಾಗಿದೆ. ಕಳೆದ ಕೆಲವು ದಶಕಗಳಲ್ಲಿ ವಿಶ್ವಾದ್ಯಂತ ಲಕ್ಷಾಂತರ ದಂಪತಿಗಳು ಐವಿಎಫ್‍ನಿಂದ ಪ್ರಯೋಜನ ಪಡೆದಿದ್ದಾರೆ. ಈ ಐವಿಎಫ್ ಶಿಶುಗಳು ನೈಸರ್ಗಿಕವಾಗಿ ಗರ್ಭಧರಿಸಿದ ಮಗುವಿನಂತೆ ಆರೋಗ್ಯಕರವಾಗಿದ್ದು ಸಾಮಾನ್ಯ ಜೀವನ ನಡೆಸುತ್ತಿದ್ದಾರೆ. ತಮ್ಮ ಸ್ವಂತ ಮಗುವನ್ನು ಹೊಂದಲು ಹಾತೊರೆಯುವ ದಂಪತಿಗಳು ಭರವಸೆ ಕಳೆದುಕೊಳ್ಳಬೇಕಾಗಿಲ್ಲ. ಅವರು ಉತ್ತಮ ಐವಿಎಫ್ ಕೇಂದ್ರಕ್ಕೆ ಭೇಟಿ ನೀಡಬೇಕು ಮತ್ತು ಸರಿಯಾದ ಸಲಹೆಯನ್ನು ಪಡೆಯಬೇಕು.
ಸತತ ಪ್ರಯತ್ನಗಳ ನಂತರವೂ ಗರ್ಭಧರಿಸುವಲ್ಲಿ ತೊಂದರೆ ಹೊಂದಿರುವ ದಂಪತಿಗಳಿಗೆ ಐವಿಎಫ್ ಚಿಕಿತ್ಸೆ ಒಂದು ವರದಾನವಾಗಿದೆ. ಭಾರತದಲ್ಲಿ ಐವಿಎಫ್ ಚಿಕಿತ್ಸೆಯು ಸಂತಾನೋತ್ಪತ್ತಿ ಔಷಧ ಕ್ಷೇತ್ರದಲ್ಲಿ ಹೊಸ ತಂತ್ರಗಳನ್ನು ಪರಿಚಯಿಸುವುದರೊಂದಿಗೆ ಉತ್ತಮ ಬೆಳವಣಿಗೆ ಕಾಣುತ್ತಿದೆ. ಆದರೂ, ವೆಚ್ಚದ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ. ಬೆಂಗಳೂರಿನ ನಿವಾಸಿಗಳು ಐವಿಎಫ್ ವೆಚ್ಚಗಳ ಬಗ್ಗೆ ಆಶ್ಚರ್ಯ ಪಡುತ್ತಿದ್ದಲ್ಲಿ, ನೀವು ಬೆಂಗಳೂರಿನಲ್ಲಿಯೇ ಅತ್ಯುತ್ತಮ ಐವಿಎಫ್ ಚಿಕಿತ್ಸೆಯನ್ನು ಕೈಗೆಟುಕುವ ವೆಚ್ಚದಲ್ಲಿ ಪಡೆಯಬಹುದು. ಅಲ್ಲದೇ ಕಡಿಮೆ-ವೆಚ್ಚದ ಇಎಂಐ(ಮಾಸಿಕ ಕಂತು)ನೊಂದಿಗೆ ಹಣಕಾಸಿನ ಸಹಾಯವನ್ನೂ ಪಡೆಯಬಹುದು.