ಸಮಗ್ರ ಮಾರ್ಗ

ಸಮಗ್ರ ಮಾರ್ಗ

ಸಂತಾನೋತ್ಪತ್ತಿ ಸಮಸ್ಯೆಗೆ ಚಿಕಿತ್ಸೆ ನೀಡಲು ಸಮಗ್ರ ವಿಧಾನ

ಸಂತಾನೋತ್ಪತ್ತಿ ಸಮಸ್ಯೆ ಕೇವಲ ದೈಹಿಕ ಕಾಯಿಲೆಗೆ ಮಾತ್ರ ಸೀಮಿತವಾಗಿಲ್ಲ, ಸಾಮಾಜಿಕ, ಭಾವನಾತ್ಮಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸೇರಿದಂತೆ ಜೀವನದ ಎಲ್ಲಾ ಅಂಶಗಳೊಂದಿಗೆ ಸಂಪರ್ಕ ಹೊಂದಿದೆ. ವ್ಯಕ್ತಿಯ ಒಟ್ಟಾರೆ ಆರೋಗ್ಯವು ಭಾವನೆಗಳು ಮತ್ತು ಜೀವನಶೈಲಿಯಿಂದ ಹೆಚ್ಚು ನಿಯಂತ್ರಿಸಲ್ಪಡುತ್ತದೆ. ಈ ಯಾವುದೇ ಅಂಶಗಳಲ್ಲಿ ನೀವು ಅಸಮತೋಲನವನ್ನು ಹೊಂದಿದ್ದರೆ, ಫರ್ಟಿಲಿಟಿ ಸೇರಿದಂತೆ ಒಟ್ಟಾರೆ ಸಾಮಾನ್ಯ ಆರೋಗ್ಯದ ಮೇಲೆ ಪರಿಣಾಮ ಉಂಟಾಗಬಹುದು. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಮ್ಮ ಮನಸ್ಸು, ದೇಹ ಮತ್ತು ಆತ್ಮವನ್ನು ಸರಿಯಾದ ಸಮತೋಲನ ಮತ್ತು ನಿಯಂತ್ರಿತ ರೀತಿಯಲ್ಲಿ ಇಟ್ಟುಕೊಳ್ಳುವುದು ಮುಖ್ಯ. ನಿಮ್ಮ ಫರ್ಟಿಲಿಟಿ, ನಿಮ್ಮ ಒಟ್ಟಾರೆ ಆರೋಗ್ಯದಿಂದ ಹೆಚ್ಚಿನ ಪ್ರಮಾಣದಲ್ಲಿ ಪರಿಣಾಮಕ್ಕೆ ಒಳಗಾಗುತ್ತದೆ. ಕೆಲವು ಅಭ್ಯಾಸಗಳು ಮತ್ತು ಜೀವನಶೈಲಿಯ ಮಾರ್ಪಾಡುಗಳು ನಿಮ್ಮ ಫರ್ಟಿಲಿಟಿ ಮಟ್ಟವನ್ನು ಹೆಚ್ಚಿಸಬಹುದು.

ಅಭ್ಯಾಸಗಳು ಮತ್ತು ಜೀವನಶೈಲಿ ಮಾರ್ಪಾಡುಗಳು

ನಿಮ್ಮ ಜೀವನಶೈಲಿ ನಿಮ್ಮ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ನಿಮ್ಮ ದೈನಂದಿನ ಜೀವನದಲ್ಲಿ ನೀವು ಮಾಡುವ ಆಯ್ಕೆಗಳು ನಿಮ್ಮ ಆರೋಗ್ಯವನ್ನು ರೂಪಿಸುತ್ತವೆ. ಜೊತೆಗೆ ಪ್ರತಿದಿನ ನಮ್ಮ ಸುತ್ತಮುತ್ತ ಏನು ನಡೆಯುತ್ತದೆ ಎಂಬುದು ಸಹ ಮುಖ್ಯವಾಗಿದೆ. ಆದ್ದರಿಂದ, ನೀವು ತಿನ್ನುವ, ಕುಡಿಯುವ ಅಥವಾ ಬದುಕುವುದನ್ನು ಬುದ್ಧಿವಂತಿಕೆಯಿಂದ ಆರಿಸುವ ಮೂಲಕ ಆರೋಗ್ಯಕರ ಜೀವನಶೈಲಿಗೆ ಬದಲಾಯಿಸಿಕೊಳ್ಳಿ. ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ನಿಮ್ಮ ಫರ್ಟಿಲಿಟಿಯನ್ನು ಹೆಚ್ಚಿಸಲು ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ.

ಆರೋಗ್ಯಕರ ಜೀವನಶೈಲಿಯಲ್ಲಿ ಸಮಗ್ರ ವಿಧಾನವು ಒಳಗೊಂಡಿರಬೇಕು:

• ಆರೋಗ್ಯಕರ ಆಹಾರ - ಪೌಷ್ಟಿಕಾಂಶವು ಫರ್ಟಿಲಿಟಿ ಮಟ್ಟದ ಮೇಲೆ ಬಹಳ ದೊಡ್ಡ ಪರಿಣಾಮ ಬೀರುತ್ತದೆ. ತಾಜಾ ಹಣ್ಣುಗಳು ಮತ್ತು ತರಕಾರಿಗಳು, ಧಾನ್ಯಗಳು, ಬೀಜಗಳು ಮತ್ತು ಡೈರಿ ಉತ್ಪನ್ನಗಳನ್ನು ಸೇರಿಸಿರುವ ಆರೋಗ್ಯಕರ ಆಹಾರವನ್ನು ಸೇವಿಸಿ. ಫಾಸ್ಟ್ ಫುಡ್, ಜಂಕ್ ಫುಡ್, ಆಲ್ಕೋಹಾಲ್, ತಂಬಾಕು, ಅತಿಯಾದ ಕೆಫೀನ್ ಅಥವಾ ಮನರಂಜನಾ ಔಷಧಗಳನ್ನು ತಪ್ಪಿಸಿ.

• ಒತ್ತಡವನ್ನು ನಿರ್ವಹಿಸಿ – ಅತಿಯಾದ ಮಾನಸಿಕ ಒತ್ತಡ ನಮ್ಮ ಜೀವನಶೈಲಿಯಿಂದ ಉಂಟಾಗುತ್ತದೆ. ನಿಮ್ಮ ಫರ್ಟಿಲಿಟಿ ಮೇಲೂ ಒತ್ತಡ ಪರಿಣಾಮ ಬೀರುತ್ತದೆ. ನೀವು ನಿಮ್ಮೊಂದಿಗೆ ಸಮಯ ಕಳೆಯಿರಿ, ಧ್ಯಾನ ಅಥವಾ ಯೋಗವನ್ನು ಅಭ್ಯಾಸ ಮಾಡುವ ಮೂಲಕ ನಿಮ್ಮ ಒತ್ತಡವನ್ನು ನಿರ್ವಹಿಸಿ. ಇವೆರಡೂ ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಮತ್ತು ನಿಮ್ಮ ಆಲೋಚನಾ ಪ್ರಕ್ರಿಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.

• ನಿಗದಿತವಾಗಿ ವ್ಯಾಯಾಮ ಮಾಡಿ - ಉತ್ತಮ ಆರೋಗ್ಯವನ್ನು ಹೊಂದಲು, ನೀವು ನಿಗದಿತವಾಗಿ ವ್ಯಾಯಾಮ ಮಾಡುವುದು ಅವಶ್ಯ. ನಿಗದಿತ ವ್ಯಾಯಾಮವು ಫರ್ಟಿಲಿಟಿ ಸುಧಾರಣೆಗೆ ಮಾತ್ರವಲ್ಲದೆ ಒಟ್ಟಾರೆ ಆರೋಗ್ಯಕ್ಕೂ ಅವಶ್ಯಕವಾಗಿದೆ. ಆಲಸಿ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯೊಂದಿಗೆ, ಆರೋಗ್ಯಕರವಾಗಿರಲು ವ್ಯಾಯಾಮ ಕಡ್ಡಾಯವಾಗಿದೆ.

• ಸರಿಯಾದ ದೇಹದ ತೂಕ ಕಾಪಾಡಿಕೊಳ್ಳಿ – ಸ್ಥೂಲಕಾಯ ಹೆಚ್ಚಿನ ಕಾಯಿಲೆಗಳಿಗೆ ಮೂಲ ಕಾರಣವಾಗಿರುವುದರಿಂದ, ಸರಿಯಾದ ದೇಹದ ತೂಕವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.

• ಜನರೊಂದಿಗೆ ಬೆರೆಯಿರಿ - ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುವ ಮತ್ತು ನಿಮ್ಮನ್ನು ಸಂತೋಷಗೊಳಿಸುವ ಜನರನ್ನು ಭೇಟಿ ಮಾಡಲು ಮತ್ತು ಅವರೊಂದಿಗೆ ಸಮಯ ಕಳೆಯಲು ಕಾಲ ಮೀಸಲಿಡಿ.

ಮೇಲಿನ ಅಭ್ಯಾಸಗಳು ಮತ್ತು ಮಾರ್ಪಾಡುಗಳನ್ನು ಅಳವಡಿಸಿಕೊಳ್ಳುವುದರಿಂದ ಖಂಡಿತವಾಗಿಯೂ ಅತ್ಯುತ್ತಮ ಆರೋಗ್ಯ ಮತ್ತು ಯೋಗಕ್ಷೇಮ ನಿಮ್ಮದಾಗುತ್ತದೆ. ಇದು ನಿಮ್ಮ ಫರ್ಟಿಲಿಟಿ ದರವನ್ನು ಸಹ ಮಹತ್ತರವಾಗಿ ಸುಧಾರಿಸಬಹುದು.