ಡಾ. ಎಸ್‌ ಆರ್‌ ರಾಜಂ ಮುರಳಿ

ಡಾ. ಎಸ್‌ ಆರ್‌ ರಾಜಂ ಮುರಳಿ

MBBS, MD FRM
ಹಿರಿಯ ಫಲವತ್ತತೆ ತಜ್ಞರು
ವೈದ್ಯಕೀಯ ನೋಂದಣಿ ಸಂಖ್ಯೆ (ಕೆಎಂಸಿ) : 108376
ತಿಳಿದಿರುವ ಭಾಷೆಗಳು: ಕನ್ನಡ, ಇಂಗ್ಲೀಷ್‌, ತಮಿಳು

ನಿಮ್ಮ ನೇಮಕಾತಿಯನ್ನು ಕಾಯ್ದಿರಿಸಿ

ಶಾಖೆ
ಆವರಣದಲ್ಲಿ
ಆನ್ಲೈನ್

* ನೇಮಕಾತಿಗಳು ವೈದ್ಯರ ಲಭ್ಯತೆಗೆ ಒಳಪಟ್ಟಿರುತ್ತವೆ. ದಯವಿಟ್ಟು, ನೀವು ಈಗಾಗಲೇ ಗರ್ಭಗುಡಿಗೆ ಭೇಟಿ ನೀಡಿದ್ದರೆ ನಿಮ್ಮ ನೋಂದಾಯಿತ ಸಂಖ್ಯೆಯನ್ನು ನೀವು ನೀಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

ಡಾ. ಎಸ್‌ಆರ್‌. ರಾಜಂ ಮುರಳಿ (ಎಂಬಿಬಿಎಸ್‌, ಎಂಡಿ, ಎಫ್‌ಐಆರ್‌ಎಂ) ಗರ್ಭಗುಡಿ ಐವಿಎಫ್‌ ಸೆಂಟರ್‌ನಲ್ಲಿ ಹಿರಿಯ ಫಲವತ್ತತೆ ತಜ್ಞೆಯಾಗಿದ್ದಾರೆ. ಸಂತಾನೋತ್ಪತ್ತಿ ಚಿಕಿತ್ಸೆಯಲ್ಲಿ ರಾಜಂ ಅವರಿಗೆ ಅಪಾರ ಅನುಭವ ಮತ್ತು ಪರಿಣತಿ ಇದೆ. ಒಳ್ಳೆಯ ಶೈಕ್ಷಣಿಕ ಹಿನ್ನೆಲೆ ಮತ್ತು ಅದ್ಭುತ ಪ್ರಾಯೋಗಿಕ ಜ್ಞಾನ ಹೊಂದಿರುವ ಡಾ. ಎಸ್‌ಆರ್ ರಾಜಂ ಮುರಳಿ ಸಂತಾನೋತ್ಪತ್ತಿ ಕ್ಷೇತ್ರಕ್ಕೆ ತಮ್ಮದೇ ಆದ ಗಮನಾರ್ಹ ಕೊಡುಗೆ ನೀಡಿದ್ದಾರೆ. ಪ್ರಮುಖವಾಗಿ ಗರ್ಭಾವಸ್ಥೆಯ ಟ್ರೋಫೋಬ್ಲಾಸ್ಟಿಕ್ ಕಾಯಿಲೆಗಳ ಅಧ್ಯಯನದಲ್ಲಿ ರಾಜಂ ಅವರದ್ದು ಮಹತ್ವದ ಕೊಡುಗೆ.

ಡಾ. ಎಸ್‌ಆರ್‌ ರಾಜಂ ತಮ್ಮ ವೃತ್ತಿಜೀವನದುದ್ದಕ್ಕೂ AICOG ಮತ್ತು FOGSI ಯಂತಹ ಪ್ರತಿಷ್ಠಿತ ವೈದ್ಯಕೀಯ ಸಮ್ಮೇಳನಗಳಲ್ಲಿ ಅದ್ಭುತ ಸಂಶೋಧನಾ ಲೇಖನಗಳನ್ನು ಪ್ರಸ್ತುತಪಡಿಸಿದ್ದಾರೆ. ಅಷ್ಟೇಅಲ್ಲ, ಅಂಡೋತ್ಪತ್ತಿಗೆ ಸಂಬಂಧಿಸಿದಂತೆ ಅಪರೂಪದ ಕ್ಲಿನಿಕಲ್ ಪ್ರಕರಣಗಳಿಂದ ಹಿಡಿದು ಇಂಟ್ರಾಯುಟೆರಿನ್‌ ಇನ್ಸೆಮಿನೇಷನ್‌ ತನಕ ಹಲವು ವಿಷಯಗಳಲ್ಲಿ ಖ್ಯಾತಿ ಹಾಗೂ ಮನ್ನಣೆ ಗಳಿಸಿದ್ದಾರೆ. ಸಂತಾನೋತ್ಪತ್ತಿ ಔಷಧ ಕ್ಷೇತ್ರದಲ್ಲಿ ಅವರಿಗಿರುವ ಶ್ರದ್ಧೆ ಮತ್ತು ಸಮರ್ಪಣಾ ಭಾವ ಹಲವು ಪ್ರಕಟಣೆಗಳಲ್ಲಿ ಸ್ಪಷ್ಟವಾಗಿದೆ. ಪೆರಿನಾಟಾಲಜಿ-ಜರ್ನಲ್ ಆಫ್ ಪೆರಿನಾಟಲ್ ಮತ್ತು ನಿಯೋನಾಟಲ್ ಕೇರ್ ಮತ್ತು ಮಿನರ್ವಾ ಜಿನೆಕೋಲ್‌ನಂತಹ ಪ್ರತಿಷ್ಠಿತ ನಿಯತಕಾಲಿಕೆಗಳಲ್ಲಿ ಡಾ. ರಾಜಂ ಅವರ ಪ್ರಬುದ್ಧ ಲೇಖನಗಳು ಪ್ರಕಟವಾಗಿವೆ.

ಡಾ. ಎಸ್‌ಆರ್. ರಾಜಂ ಮುರಳಿ ಅವರ ಪರಿಣತಿಯು ಇನ್‌ವಿಟ್ರೊ ಮೆಚುರೇಶನ್ (ಐವಿಎಂ) ಮತ್ತು ಅಂಡಾಶಯದ ಪ್ರಚೋದನೆ ಸೇರಿದಂತೆ ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನದ (ಎಆರ್‌ಟಿ) ವಿವಿಧ ಕ್ಷೇತ್ರಗಳಿಗೆ ವಿಸ್ತರಿಸಿದೆ. ಡಾ. ರಾಜಂ ಶೈಕ್ಷಣಿಕ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳು ಮತ್ತು ಉತ್ತಮ ಕ್ಲಿನಿಕಲ್ ಪ್ರಾಕ್ಟೀಸ್ (ಜಿಸಿಪಿ) ತರಬೇತಿಯಲ್ಲಿ ಭಾಗವಹಿಸುವಿಕೆಯಿಂದಲೇ, ಸಂತಾನೋತ್ಪತ್ತಿ ಕ್ಷೇತ್ರದಲ್ಲಿ ಸದಾ ಮುಂಚೂಣಿಯಲ್ಲಿರಲು ಅವರು ಎಷ್ಟು ಉತ್ಸುಕರಾಗಿದ್ದಾರೆಂದು ತಿಳಿಯುತ್ತದೆ.

ಫಲವತ್ತತೆಯ ಫಲಿತಾಂಶಗಳನ್ನು ಸುಧಾರಿಸುವ ಬಗ್ಗೆ ಡಾ. ಎಸ್‌ಆರ್. ರಾಜಂ ಮುರಳಿ ಅವರಿಗಿರುವ ಉತ್ಸಾಹ, ಆಳವಾದ ಜ್ಞಾನ ಮತ್ತು ಸಮರ್ಪಣಾ ಮನೋಭಾವವು ಸಂತಾನೋತ್ಪತ್ತಿ ವೈದ್ಯಕೀಯ ಕ್ಷೇತ್ರದಲ್ಲಿ ಅವರನ್ನು ಪ್ರಮುಖ ವ್ಯಕ್ತಿಯನ್ನಾಗಿ ರೂಪಿಸಿದೆ.

ಈ ಪುಟವನ್ನು ಹಂಚಿಕೊಳ್ಳಿ