ಡಾ. ಅಪರ್ಣಾ ಎನ್.

ಡಾ. ಅಪರ್ಣಾ ಎನ್.

MBBS, DNB, M.Ch Reproductive Medicine and Surgery
ಸಂತಾನೋತ್ಪತ್ತಿ ತಜ್ಞರು
ವೈದ್ಯಕೀಯ ನೋಂದಣಿ ಸಂಖ್ಯೆ (ಕೆಎಂಸಿ) : 97374
ತಿಳಿದಿರುವ ಭಾಷೆಗಳು: ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಮಲಯಾಳಂ

ನಿಮ್ಮ ನೇಮಕಾತಿಯನ್ನು ಕಾಯ್ದಿರಿಸಿ

ಶಾಖೆ
ಆವರಣದಲ್ಲಿ
ಆನ್ಲೈನ್

* ನೇಮಕಾತಿಗಳು ವೈದ್ಯರ ಲಭ್ಯತೆಗೆ ಒಳಪಟ್ಟಿರುತ್ತವೆ. ದಯವಿಟ್ಟು, ನೀವು ಈಗಾಗಲೇ ಗರ್ಭಗುಡಿಗೆ ಭೇಟಿ ನೀಡಿದ್ದರೆ ನಿಮ್ಮ ನೋಂದಾಯಿತ ಸಂಖ್ಯೆಯನ್ನು ನೀವು ನೀಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

ಅರ್ಪಣಾ ಭಾವದಿಂದ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯೆ ಅಂದ್ರೆ ಅದು ಡಾ. ಅಪರ್ಣಾ ಎನ್. ಡಾ. ಅಪರ್ಣಾ ನುರಿತ ಹಿರಿಯ ಸಂತಾನೋತ್ಪತ್ತಿ ಔಷಧಿ ತಜ್ಞೆಯಾಗಿದ್ದು ಸದ್ಯ ಗರ್ಭಗುಡಿ ಐವಿಎಫ್ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಅಪರ್ಣಾ ತುಮಕೂರಿನ ಸಿದ್ದಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದರು. ರಾಷ್ಟ್ರೀಯ ಪರೀಕ್ಷಾ ಮಂಡಳಿ ಮೂಲಕ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡರು. NEET ಪರೀಕ್ಷೆಯಲ್ಲಿ ೧೮ನೇ rank ಪಡೆದುಕೊಂಡ ಪ್ರಚಂಡ ಬುದ್ಧಿವಂತೆ ಡಾ. ಅಪರ್ಣಾ. ಅಷ್ಟೇ ಅಲ್ಲ, ಕೇರಳದ ಕೊಚ್ಚಿಯಲ್ಲಿರುವ ಅಮೃತಾ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ಸಂತಾನೋತ್ಪತ್ತಿ ಔಷಧಿ ಮತ್ತು ಶಸ್ತ್ರ ಚಿಕಿತ್ಸೆಯಲ್ಲಿ ವಿಶೇಷ ಪರಿಣಿತಿ ಪಡೆದುಕೊಂಡಿದ್ದಾರೆ.

ಡಾ. ಅಪರ್ಣಾ ಅವರಿಗೆ ಬಂಜೆತನ ಮತ್ತು ಗರ್ಭನಷ್ಟ ಮರುಸ್ಥಾಪನೆ, ಪದೇಪದೆ ಐವಿಎಫ್ ವೈಫಲ್ಯ, ಬಂಜೆತನದಲ್ಲಿ ಅಲ್ಟ್ರಾಸೌಂಡ್, ಫಲವತ್ತತೆ ವರ್ಧನೆಗೆ ಲ್ಯಾಪರೊಸ್ಕೊಪಿ, ಹಿಸ್ಟೆರೊಸ್ಕೊಪಿ, ಕ್ಯಾನ್ಸರ್ ರೋಗಿಗಳಿಗಾಗಿ ಫಲವತ್ತತೆ ಸಂರಕ್ಷಣೆ ಮುಂತಾದ ವಿಷಯಗಳಲ್ಲಿ ಅಪಾರ ಅನುಭವವಿದೆ. ಡಾ. ಅಪರ್ಣಾ ಅವರ ಪ್ರೀತಿ ತುಂಬಿದ ಸಮಾಲೋಚನೆ ಮತ್ತು ಕೌಶಲ್ಯ ರೋಗಿಗಳಲ್ಲಿ ಅಪಾರ ಮೆಚ್ಚುಗೆ ಗಳಿಸಿದೆ. ಅವರ ತಾಳ್ಮೆ ಮತ್ತು ಜ್ಞಾನವಂತೂ ಎಂಥವರೂ ಮೆಚ್ಚುವಂಥದ್ದು. ನೈತಿಕವಾಗಲ್ಲದೆ ಪ್ರತಿಯೊಬ್ಬ ದಂಪತಿಗಳನ್ನು ಗೌರವದಿಂದ ಮತ್ತು ಸುರಕ್ಷತೆಯಿಂದ ನಡೆಸಿಕೊಳ್ಳಬೇಕು ಅನ್ನುವುದು ಡಾ. ಅಪರ್ಣಾ ಅವರ ನೀತಿ.

ಗರ್ಭಗುಡಿ ಸಂತಾನೋತ್ಪತ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ಡಾ. ಅಪರ್ಣಾ ಸೇವೆ ಸಲ್ಲಿಸುತ್ತಿದ್ದು ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಅವರ ಮಹತ್ವದ ಲೇಖನಗಳು ಪ್ರಕಟವಾಗಿವೆ. ಡಾ. ಅಪರ್ಣಾರಿಗೆ ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಮತ್ತು ಮಲಯಾಳಂ ಭಾಷೆಗಳು ಗೊತ್ತಿರುವುದರಿಂದ ದಂಪತಿಗಳ ಜೊತೆ ಮನಮುಟ್ಟುವಂತೆ ಸಮಾಲೋಚಿಸಬಲ್ಲರು. ತಮ್ಮ ಶಿಕ್ಷಣ, ಅನುಭವ, ಭಾಷಾಜ್ಞಾನದ ಮೂಲಕ ದಂಪತಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಅವರ ದಾಂಪತ್ಯ ಬದುಕನ್ನು ಖುಷಿಯಾಗಿಡುವಲ್ಲಿ ಡಾ. ಅಪರ್ಣಾ ಸಹಕಾರಿಯಾಗಿದ್ದಾರೆ.

ಈ ಪುಟವನ್ನು ಹಂಚಿಕೊಳ್ಳಿ