ಹಣಕಾಸು ನೆರವು ಆಯ್ಕೆಗಳು

ಹಣಕಾಸು ನೆರವು ಆಯ್ಕೆಗಳು

ಗರ್ಭಗುಡಿಯಲ್ಲಿನ ಚಿಕಿತ್ಸೆಯ ವೆಚ್ಚವು ಪೋಷಕರಾಗುವ ನಿಮ್ಮ ಕನಸಿಗೆ ಹೊರೆಯಾಗಬಾರದು ಅನ್ನುವ ಅರಿವು ನಮಗಿದೆ.ಯಾಕೆಂದರೆ, ಸಾಮಾನ್ಯವಾಗಿ ಆರೋಗ್ಯ ವಿಮೆ ಸಂತಾನೋತ್ಪತ್ತಿ ಚಿಕಿತ್ಸೆಯ ವೆಚ್ಚವನ್ನು ಒಳಗೊಂಡಿರುವುದಿಲ್ಲ.ಇದರಿಂದ ಚಿಕಿತ್ಸೆಗಳು ಸರಿಯಾಗಿ ಸಿಗದೆ ಇರಬಹುದು.ಇದನ್ನು ಪರಿಗಣಿಸಿ, ಗರ್ಭಗುಡಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹಣಕಾಸಿನ ನೆರವು ನೀಡಲು ನಾವು ಪ್ರಮುಖ ಹಣಕಾಸು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಹಣಕಾಸು ನೆರವನ್ನ ದಂಪತಿಗಳು ಆಯ್ಕೆ ಮಾಡಿಕೊಂಡಲ್ಲಿ ಶೂನ್ಯ ಬಡ್ಡಿ ದರದಲ್ಲಿ ಸುಲಭ ಕಂತುಗಳ ಸಾಲವನ್ನು ನೀಡಲಾಗುತ್ತದೆ.

ಪ್ರಕ್ರಿಯೆ

ಹಣಕಾಸಿನ ನೆರವು ಒಂದೆರಡು ದಿನಗಳಲ್ಲಿ ಸುಲಭವಾಗಿ ಮುಗಿಯುವಂಥ ಒಂದು ಸಾಮಾನ್ಯ ಪ್ರಕ್ರಿಯೆ. ಈ ಪ್ರಕ್ರಿಯೆ ಡಿಜಿಟಲ್ ಆಗಿರುವುದರಿಂದ ಹಣಕಾಸು ಸಂಸ್ಥೆಯ ಪರಿಶೀಲನೆಗಾಗಿ ಕೆಲವು ದಾಖಲೆಪತ್ರಗಳ ಅಗತ್ಯವಿರುತ್ತದೆ. ಇವುಗಳನ್ನು ಗರ್ಭಗುಡಿಯಲ್ಲಿರಿಸಲಾಗಿರುವ ಸಾಧನದ ಮೂಲಕ ಅಪ್‌ಲೋಡ್ ಮಾಡಬೇಕಾಗುತ್ತದೆ. ದಂಪತಿಗಳು ಪಡೆಯಬಹುದಾದ ಹಣಕಾಸು ನೆರವಿನ ಪ್ರಮಾಣವನ್ನು ನಿರ್ಧರಿಸಲು ಈ ದಾಖಲೆಗಳ ಪರಿಶೀಲನೆ ಅತ್ಯಗತ್ಯ. ದಾಖಲೆಗಳೂ ಸಹ ಕನಿಷ್ಠವಾಗಿರುತ್ತವೆ. ಈ ಹಣಕಾಸು ಪ್ರಕ್ರಿಯೆ ಸಂಪೂರ್ಣವಾಗಿ ತೊಂದರೆ ಮುಕ್ತವಾಗಿದೆ. ಹಣಕಾಸು ನೆರವು ಪ್ರಕ್ರಿಯೆಯ ಪ್ರತಿ ಹಂತದಲ್ಲೂ ಗರ್ಭಗುಡಿ ಸಿಬ್ಬಂದಿ ನಿಮ್ಮ ಸಹಾಯಕ್ಕೆ ನಿಲ್ಲುತ್ತದೆ.

ಕೇಳಲಾಗುವ ಸಾಮಾನ್ಯ ದಾಖಲೆಗಳು

• ವಿಳಾಸ ಪುರಾವೆ ಮತ್ತು ಐಡಿ ಪುರಾವೆ

• ರದ್ದುಪಡಿಸಿದ ಚೆಕ್

• ಬ್ಯಾಂಕ್ ಲೆಕ್ಕವಿವರಣೆ

• ಚಿಕಿತ್ಸೆಯ ಯೋಜಿತ ವೆಚ್ಚ (ಗರ್ಭಗುಡಿಯಿಂದ ನೀಡಲಾಗುತ್ತದೆ)

ಅಪಾಯದ ವಿವರ ಮತ್ತು ಅರ್ಜಿದಾರರ ಮರುಪಾವತಿ ಸಾಮರ್ಥ್ಯದ ಆಧಾರದ ಮೇಲೆ, ಸಾಲದ ಮೊತ್ತವನ್ನು ಅನುಮೋದಿಸಲಾಗುತ್ತದೆ. ಚಿಕಿತ್ಸೆ ಪ್ರಾರಂಭವಾದ ದಿನದಂದು ನೇರವಾಗಿ ಈ ಮೊತ್ತವನ್ನು ಆಸ್ಪತ್ರೆಗೆ ಜಮಾ ಮಾಡಲಾಗುತ್ತದೆ. ಇಎಂಐಗಳು ಹಣ ವಿತರಣೆಯಾದ ತಿಂಗಳ ನಂತರ ಪ್ರಾರಂಭವಾಗುತ್ತವೆ.

ಗಮನಿಸಬೇಕಾದ ಕೆಲವು ಪ್ರಮುಖ ಅಂಶಗಳು

• ಸಾಲವನ್ನು ರೋಗಿಗೆ ಶೂನ್ಯ ಬಡ್ಡಿದರದಲ್ಲಿ ನೀಡಲಾಗುತ್ತದೆ. ಇದರಿಂದ ರೋಗಿಯ ಮೇಲೆ ಯಾವುದೇ ಹೆಚ್ಚುವರಿ ಹೊರೆ ಉಂಟಾಗುವುದಿಲ್ಲ.

• ಅರ್ಜಿದಾರರ ಮರುಪಾವತಿ ಸಾಮರ್ಥ್ಯವನ್ನು ಆಧರಿಸಿ, ನೀಡಬೇಕಾದ ಮೊತ್ತವನ್ನು ನಿರ್ಧರಿಸಲಾಗುತ್ತದೆ.

• ಚಿಕಿತ್ಸೆಗೆ ಒಳಪಡುವ ದಂಪತಿಗಳು ಬ್ಯಾಂಕ್ ಖಾತೆ ಅಥವಾ ಸರಿಯಾದ ವಿಳಾಸದ ಪುರಾವೆಯನ್ನು ಹೊಂದಿಲ್ಲದಿದ್ದಲ್ಲಿ, ಸಂಬಂಧಿಕರ ನೆರವನ್ನು ಕೇಳಬಹುದು. ದಂಪತಿಗಳು ಸಹ-ಅರ್ಜಿದಾರರಾಗಬಹುದು.

• ಹೆಚ್ಚಿನ ಪ್ರಕ್ರಿಯೆಯು ಆನ್‌ಲೈನ್‌ನಲ್ಲಿ ನಡೆಯುತ್ತದೆ. ಆದ್ದರಿಂದ ದಂಪತಿಗಳು ಅನೇಕ ಬಾರಿ ಹಣಕಾಸು ಕಂಪನಿಯ ಕಚೇರಿಗೆ ಭೇಟಿ ನೀಡಬೇಕಾಗಿಲ್ಲ. ಸಾಮಾನ್ಯವಾಗಿ, ವೈಯಕ್ತಿಕ ಭೇಟಿಯು ಗರ್ಭಗುಡಿಯಲ್ಲಿ ನಡೆಯುತ್ತದೆ.

• ಕೆಲವು ಕಾರಣಗಳಿಂದ ಚಿಕಿತ್ಸೆಯನ್ನು ರದ್ದುಗೊಳಿಸಿದರೆ ಅಥವಾ ಚಿಕಿತ್ಸೆಯ ವೆಚ್ಚವು ಯೋಜಿತ ವೆಚ್ಚಕ್ಕಿಂತ ಕಡಿಮೆಯಾದರೆ, ಆಗ ಉಳಿದ ಮೊತ್ತವನ್ನು ರೋಗಿಗೆ ಹಿಂದಿರುಗಿಸಲಾಗುತ್ತದೆ.

• ಆರಂಭದಲ್ಲಿ ನಿರೀಕ್ಷಿಸಿದ್ದಕ್ಕಿಂತ ವೆಚ್ಚದಲ್ಲಿ ಹೆಚ್ಚಳ ಕಂಡುಬಂದರೆ, ದಂಪತಿಗಳು ಅದೇ ಕಂಪನಿಯಿಂದ ಹೆಚ್ಚುವರಿ ಹಣಕಾಸು ನೆರವು ಪಡೆಯಬಹುದು. ಈ ಪ್ರಕ್ರಿಯೆ ತುಂಬಾ ಸರಳವಾಗಿದೆ.

• ದಂಪತಿಗಳು ೩ ತಿಂಗಳು, ೬ ತಿಂಗಳು, ೯ ತಿಂಗಳು ಅಥವಾ ೧೨ ತಿಂಗಳ ಇಎಂಐ ಆಯ್ಕೆಗಳನ್ನು ಆರಿಸಿಕೊಳ್ಳಬಹುದು.

• ಗರ್ಭಗುಡಿ, ಚಿಕಿತ್ಸೆಗೆ ಹಣಕಾಸು ನೆರವು ಒದಗಿಸುತ್ತಿಲ್ಲ, ಅಥವಾ ಗರ್ಭಗುಡಿಯು ಫೈನಾನ್ಸಿಂಗ್ ಕಂಪನಿಯ ಭಾಗವೂ ಅಲ್ಲ.

• ಇದು ಕೇವಲ ರೋಗಿಗಳಿಗೆ ಸಹಾಯ ಮಾಡಲು ಹಣಕಾಸು ಕಂಪನಿ ಮತ್ತು ಗರ್ಭಗುಡಿ ನಡುವಿನ ಪಾಲುದಾರಿಕೆಯಾಗಿದೆ.

• ಕಂತುಗಳ ಸಂಗ್ರಹವು ಹಣಕಾಸು ನೆರವು ಕಂಪನಿಯ ಸಂಪೂರ್ಣ ಜವಾಬ್ದಾರಿಯಾಗಿದೆ. ಗರ್ಭಗುಡಿ ಈ ಪ್ರಕ್ರಿಯೆಯಲ್ಲಿ ಭಾಗಿಯಾಗುವುದಿಲ್ಲ.