ಐಶ್ವರ್ಯ ಡಿ. ಎಸ್.
ಐಶ್ವರ್ಯಾ ಡಿ. ಎಸ್. ಅವರು ನುರಿತ ಭ್ರೂಣಶಾಸ್ತ್ರಜ್ಞೆಯಾಗಿದ್ದಾರೆ. ಕ್ಲಿನಿಕಲ್ ಎಂಬ್ರಿಯಾಲಜಿ ಕ್ಷೇತ್ರದ ಜೊತೆಗೆ ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ (ART )ಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಪ್ರಸ್ತುತ, ಐಶ್ವರ್ಯ ಅವರು ಗರ್ಭಗುಡಿ ಐವಿಎಫ್ ಕೇಂದ್ರದ ಹನುಮಂತನಗರ ಶಾಖೆಯಲ್ಲಿ ಹಿರಿಯ ಭ್ರೂಣಶಾಸ್ತ್ರಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಗರ್ಭಗುಡಿಗೂ ಮೊದಲು ಐಶ್ವರ್ಯ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಗಳ ART ಯೂನಿಟ್‌ನಲ್ಲಿ ಪ್ರಮುಖ ಭ್ರೂಣಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿದ್ದರು. ವಿಶೇಷವೆಂದರೆ, ಐಶ್ವರ್ಯ ಅವರು ಅಸಂಖ್ಯಾತ ದಂಪತಿಗಳ ತಾಯ್ತನದ ಕನಸು ನನಸು ಮಾಡುವಲ್ಲಿ, ಹಲವಾರು ಯಶಸ್ವಿ ಫಲವತ್ತತೆ ಚಿಕಿತ್ಸೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಐಶ್ವರ್ಯ ಅವರು ನವೆಂಬರ್ 2015 ರಿಂದ ಆಗಸ್ಟ್ 2019 ರವರೆಗೆ ಬೆಂಗಳೂರಿನ ಚಂದ್ರಾ ಲೇಔಟ್‌ನಲ್ಲಿರುವ ಭೂಮಿ IVF ಕೇಂದ್ರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಇಲ್ಲಿಯೇ ಅವರು, ಕ್ಲಿನಿಕಲ್ ಎಂಬ್ರಿಯಾಲಜಿ ಕ್ಷೇತ್ರದಲ್ಲಿ ಅಪಾರ ಅನುಭವ ಗಳಿಸಿದ್ದು. ಅಂದ್ರೆ IVF ಮತ್ತು ICSI ಕಾರ್ಯವಿಧಾನದ ನಿರ್ವಹಣೆ, ಎಂಬ್ರಿಯೋ ಕಲ್ಚರ್ ,ಕ್ರಿಯೋಪ್ರಿಸರ್ವೇಶನ್ ಪ್ರಕ್ರಿಯೆ, ಲ್ಯಾಬೊರೇಟರಿ ನಿರ್ವಹಣೆ ಹಾಗೂ ಗುಣಮಟ್ಟದ ತಪಾಸಣೆಗಳನ್ನು ನಡೆಸುವುದು ಸೇರಿದಂತೆ ದಂಪತಿಗಳ ತಾಯ್ತನದ ಪಯಣದ ಪ್ರತಿ ಹಂತದಲ್ಲೂ ಅವರಿಗೆ ಬೆಂಬಲವಾಗಿ ನಿಲ್ಲುವುದು-ಈ ಎಲ್ಲಾ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ.
ಐಶ್ವರ್ಯಾ ಡಿ. ಎಸ್. ಕ್ಲಿನಿಕಲ್ ಎಂಬ್ರಿಯಾಲಜಿಯಲ್ಲಿ ಪಿಜಿ ಡಿಪ್ಲೊಮಾ ಸೇರಿದಂತೆ 2016ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಅಸಿಸ್ಟೆಟ್ ರಿಪ್ರೊಡಕ್ಟಿವ್ ಟೆಕ್ನಾಲಜಿ ಅಭ್ಯಾಸ ಮಾಡಿದ್ದಾರೆ. 2015ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಬಯಾಲಾಜಿಕಲ್ ಸೈನ್ಸ್‌ವಿಭಾಗದಿಂದ ಜೈವಿಕ ವಿಜ್ಞಾನದಲ್ಲಿ ಇಂಟಿಗ್ರೇಟೆಡ್ ಎಂ.ಎಸ್ಸಿ., ಪದವಿ ಪೂರ್ಣಗೊಳಿಸಿದರು.
ಐಶ್ವರ್ಯಾ ಡಿ. ಎಸ್. ಅವರು ತಮ್ಮ ವೃತ್ತಿಪರ ಬೆಳವಣಿಗೆಗೆ ಬದ್ಧರಾಗಿದ್ದು, ಹಲವಾರು ಆಧುನಿಕ ತರಬೇತಿ ಕಾರ್ಯಕ್ರಮಗಳು ಮತ್ತು ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. 2018 ಅಕ್ಟೋಬರ್ 1 ರಿಂದ 3 ರವರೆಗೆ ನವದೆಹಲಿಯಲ್ಲಿ ಇಂಡಿಯನ್ ಫರ್ಟಿಲಿಟಿ ಸೊಸೈಟಿ ನಡೆಸಿದ QA/QC ಪ್ರೋಗ್ರಾಂ ಮತ್ತು ಕ್ರಿಯೋಬಯಾಲಜಿ ಕೋರ್ಸ್‌ನಲ್ಲಿ ಭಾಗವಹಿಸಿದ್ದರು. 2017 ಅಕ್ಟೋಬರ್ 24ರಿಂದ 28ರವರೆಗೆ KMC ಮಣಿಪಾಲ್ ಯೂನಿವರ್ಸಿಟಿಯ ಕ್ಲಿನಿಕಲ್ ಎಂಬ್ರಿಯಾಲಜಿ ವಿಭಾಗದಲ್ಲಿ ಅಡ್ವಾನ್ಸ್ಡ್ ಸ್ಕಿಲ್ ಸೆಟ್ ಎಂಬ್ರಿಯಾಲಜಿ ಟ್ರೈನಿಂಗ್ (ASSET)ನಲ್ಲಿ ಭಾಗವಹಿಸಿದ್ದರು. ಅಲ್ಲದೆ KISAR ನ 5 ನೇ ಮತ್ತು 6 ನೇ ವಾರ್ಷಿಕ ಕಾಂಗ್ರೆಸ್, KSOGA ಯ 26 ನೇ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದರು ಮತ್ತು 2011, 2012, 2013 ಮತ್ತು 2014 ರ ಶೈಕ್ಷಣಿಕ ವರ್ಷಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ನಡೆಸಿದ INSPIRE ವಿಜ್ಞಾನ ಶಿಬಿರದಲ್ಲಿ ಕೂಡ ಭಾಗವಹಿಸಿದ್ದರು.
ಐಶ್ವರ್ಯಾ ಅವರು ಸುಧಾರಿತ IVF ಮತ್ತು ICSI ತಂತ್ರಗಳು, ಭ್ರೂಣ ಸಂಸ್ಕೃತಿ ಮತ್ತು ಕ್ರಿಯೋಪ್ರಿಸರ್ವೇಶನ್, ಗುಣಮಟ್ಟ ನಿಯಂತ್ರಣ, ಪ್ರಯೋಗಾಲಯ ನಿರ್ವಹಣೆ, ಮತ್ತು ರೋಗಿಗಳ ಸಲಹೆ ಮತ್ತು ವೈಯಕ್ತಿಕ ಚಿಕಿತ್ಸಾ ಯೋಜನೆಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವ್ಯಾಪಕ ಅನುಭವ ಪಡೆದಿದ್ದಾರೆ. ತಾಯ್ತನದ ಪಯಣದಲ್ಲಿ ದಂಪತಿಗಳಿಗೆ ಪ್ರೀತಿಯ ಆರೈಕೆಯ ಜೊತೆಗೆ ಸರಿಯಾದ ಚಿಕಿತ್ಸೆ ಸಿಗಬೇಕು ಅನ್ನೋದು ಐಶ್ವರ್ಯ ಅವರ ಕಾಳಜಿ. ಅದಕ್ಕಾಗಿಯೇ ಅವರು ಸದಾ ಶ್ರಮಿಸುತ್ತಿದ್ದಾರೆ.
ಐಶ್ವರ್ಯಾ ಡಿ. ಎಸ್. ಸಂತಾನೋತ್ಪತ್ತಿ ವಿಜ್ಞಾನದಲ್ಲಿ ಮುಂಚೂಣಿಯಲ್ಲಿದ್ದು, ಹೊಸ ಜ್ಞಾನ ಮತ್ತು ಕೌಶಲ್ಯಗಳ ಮೂಲಕ ದಂಪತಿಗಳಿಗೆ ಸಾಧ್ಯವಾದಷ್ಟು ಉತ್ತಮವಾದ ಆರೈಕೆ ನೀಡಲು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹಾಗೆ ಭ್ರೂಣಶಾಸ್ತ್ರ ಕ್ಷೇತ್ರದಲ್ಲಿ ವಿಶ್ವಾಸಾರ್ಹತೆಯುಳ್ಳ ಪರಿಣತರೆನಿಸಿದ್ದು, ಮಕ್ಕಳನ್ನು ಹೊಂದಬಯಸುವ ಕುಟುಂಬಗಳಿಗೆ ಸಹಾಯ ಮಾಡವಲ್ಲಿ ಸದಾ ಸಿದ್ಧರಿರುತ್ತಾರೆ.