ಸುರಕ್ಷಾ. ಬಿ

ಸುರಕ್ಷಾ. ಬಿ

ಎಮ್‌ಎಸ್‌ಸಿ ಯೋಗಿಕ್‌ ಸೈನ್ಸ್‌
ಯೋಗ ಚಿಕಿತ್ಸಕರು
ವೈದ್ಯಕೀಯ ನೋಂದಣಿ ಸಂಖ್ಯೆ (ಕೆಎಂಸಿ) :
ತಿಳಿದಿರುವ ಭಾಷೆಗಳು: ಕನ್ನಡ, ಇಂಗ್ಲಿಷ್‌

ಇವರು ಸುರಕ್ಷಾ ಬಿ. ಯೋಗ ತರಬೇತುದಾರರು. ಜನರ ಸಮಗ್ರ ಯೋಗಕ್ಷೇಮ ಮತ್ತು ಆಂತರಿಕ ಸಾಮರಸ್ಯವನ್ನು ಹೆಚ್ಚಿಸಲು ಅತೀವ ಉತ್ಸಾಹ ಹೊಂದಿರುವ ಯೋಗಪಟು. ಮಂಗಳೂರು ವಿಶ್ವವಿದ್ಯಾನಿಲಯದಿಂದ ಯೋಗ ವಿಜ್ಞಾನದಲ್ಲಿ ಸ್ನಾತಕೋತ್ತರ ವಿಜ್ಞಾನ ಪದವಿ ಪಡೆದಿರುವ ಸುರಕ್ಷಾ ಯೋಗ ಕ್ಷೇತ್ರದಲ್ಲಿ ಅತ್ಯುನ್ನತ ಶೈಕ್ಷಣಿಕ ಸಾಧನೆ ಮಾಡಿದ್ದಾರೆ.

ಯೋಗ ತರಬೇತುದಾರರಾಗಿ ಸುರಕ್ಷಾ ಅವರಿಗೆ ನಾಲ್ಕು ವರ್ಷಗಳ ಸುದೀರ್ಘ ಅನುಭವವಿದೆ. ಪ್ರತಿಷ್ಠಿತ ಯೋಗ ಬೋಧಕರಾಗಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ವಾಸ್ಥ್ಯ ಕಾಪಾಡುವಲ್ಲಿ ತರಬೇತಿ ಮತ್ತು ಮಾರ್ಗದರ್ಶನ ನೀಡುತ್ತಿದ್ದಾರೆ. ವಿವೇಕಾನಂದ ಕೇಂದ್ರ, ಕನ್ಯಾಕುಮಾರಿ ಇವರು ಆಯೋಜಿಸಿದ ರಾಷ್ಟ್ರೀಯ ಯೋಗ ಸಮ್ಮೇಳನದಿಂದ ಯೋಗ ಶಾಸ್ತ್ರ ಸಂಗಮಂ ಪುರಸ್ಕಾರ ಪಡೆದಿರುವ ಸುರಕ್ಷಾ, ವಿವಿಧ ಯೋಗ ಚಾಂಪಿಯನ್‌ಶಿಪ್‌ಗಳು ಮತ್ತು ಸಮ್ಮೇಳನಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದು ಅವರ ಪರಿಣಿತಿಯ ಪರಿಧಿ ಹೆಚ್ಚುತ್ತಲೇ ಇದೆ.

ಆಲ್‌ ಇಂಡಿಯಾ ಇಂಟರ್‌ಯೂನಿವರ್ಸಿಟಿ ಯೋಗ ಕಾಂಪಿಟಿಷಿನ್‌ ಮತ್ತು ಸೌತ್‌ವೆಸ್ಟ್‌ ಝೋನ್‌-ಯೂನಿವರ್ಸಿಟಿ ಯೋಗ ಕಾಂಪಿಟಿಷನ್‌ನಂಥ ಪ್ರತಿಷ್ಠಿತ ಸಮಾರಂಭಗಳಲ್ಲಿ ತರಬೇತುದಾರರಾಗಿ ಹಾಗೂ ಮ್ಯಾನೇಜರ್‌ ಆಗಿ ಭಾಗವಹಿಸಿರುವುದಲ್ಲದೆ ಡಿಪಾರ್ಟ್‌ಮೆಂಟ್‌ ಆಫ್‌ ಕಾನ್ಸಿಯಸ್‌ನೆಸ್‌ ಮತ್ತು ಯೋಗಿಕ್‌ ಸೈನ್ಸ್‌ ಹಾಗೂ ಮಂಗಳಗಂಗೋತ್ರಿಯ ಧರ್ಮನಿಧಿ ಯೋಗಪೀಠವನ್ನೂ ಪ್ರತಿನಿಧಿಸಿದ್ದಾರೆ.

ಸುರಕ್ಷಾ ಅವರಿಗೆ ಯೋಗದಲ್ಲಿ ಅತೀವ ಆಸಕ್ತಿ ಮತ್ತು ಬದ್ಧತೆಯಿದ್ದು ವ್ಯಾಪಕ ಅನುಭವ ಹೊಂದಿದ್ದಾರೆ ಮತ್ತು ಆ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಸಮಾಜದಲ್ಲಿ ಆರೋಗ್ಯ ಮತ್ತು ಪ್ರಶಾಂತತೆಯನ್ನು ಮೂಡಿಸುವ ನಿಟ್ಟಿನಲ್ಲಿ ಅವರ ಕೊಡುಗೆ ಮಹತ್ವವಾದುದು. ತರಗತಿಯನ್ನು ನಡೆಸುತ್ತಿರಲಿ, ಸ್ಪರ್ಧೆಗಳಲಿ ಭಾಗವಹಿಸುತ್ತಿರಲಿ ಸಮ್ಮೇಳನಗಳಲ್ಲಿ ತಮ್ಮ ಅನುಭವವನ್ನು ಹಂಚಿಕೊಳ್ಳಲಿ ಸುರಕ್ಷಾ ಎಲ್ಲಾ ಕಡೆ ಯೋಗದ ಸಾರವನ್ನು ಪಸರಿಸುತ್ತಿದ್ದಾರೆ. ಆ ಮೂಲಕ ಇತರೆ ಯೋಗಾಕಾಂಕ್ಷಿಗಳಿಗೆ ಸ್ಪೂರ್ತಿಯಾಗುತ್ತಿದ್ದಾರೆ.

ಈ ಪುಟವನ್ನು ಹಂಚಿಕೊಳ್ಳಿ