ಡಾ. ವಂದನಾ ರಾಮನಾಥನ್‌

ಡಾ. ವಂದನಾ ರಾಮನಾಥನ್‌

MBBS, DNB(OBG) FRM
ಸಂತಾನೋತ್ಪತ್ತಿ ತಜ್ಞರು
ವೈದ್ಯಕೀಯ ನೋಂದಣಿ ಸಂಖ್ಯೆ (ಕೆಎಂಸಿ) : MAH20070001132KTK
ತಿಳಿದಿರುವ ಭಾಷೆಗಳು: ಕನ್ನಡ, ಇಂಗ್ಲಿಷ್, ತಮಿಳು, ಹಿಂದಿ, ಮರಾಠಿ

ಇವರು ಡಾ. ವಂದನಾ ರಾಮನಾಥನ್‌. ಮಕ್ಕಳಿಲ್ಲದ ದಂಪತಿಗಳಿಗೆ ಸಹಾಯ ಮಾಡಿ ಅವರ ಕನಸನ್ನು ನನಸು ಮಾಡಲು ಬದ್ಧವಾಗಿರುವ ಸಂತಾನೋತ್ಪತ್ತಿ ತಜ್ಞೆ. ಡಾ. ರಾಮನಾಥನ್ MIMER ವೈದ್ಯಕೀಯ ಕಾಲೇಜಿನಿಂದ MBBS ಹಾಗೂ K.G ಆಸ್ಪತ್ರೆ ಮತ್ತು ಸ್ನಾತಕೋತ್ತರ ವೈದ್ಯಕೀಯ ಸಂಸ್ಥೆಯಿಂದ MS (D.N.B) ಮತ್ತು CRAFT ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಿಂದ ಸಂತಾನೋತ್ಪತ್ತಿ ಔಷಧದಲ್ಲಿ ಫೆಲೋಶಿಪ್ ಗಳಿಸಿದ್ದಾರೆ.

ಗರ್ಭಗುಡಿ ಐವಿಎಫ್ ಸೆಂಟರ್, ಓಯಸಿಸ್ ಫರ್ಟಿಲಿಟಿ ಸೆಂಟರ್ ಮತ್ತು ದಿ ಆರಿಜಿನ್ ಇಂಟರ್‌ನ್ಯಾಷನಲ್ ಫರ್ಟಿಲಿಟಿ ಸೆಂಟರ್‌ನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ವ್ಯಾಪಕ ಅನುಭವ ಪಡೆದಿರುವ ಡಾ. ರಾಮನಾಥನ್‌ ಅವರು ಸಂತಾನೋತ್ಪತ್ತಿ ಸಮಸ್ಯೆಗೆ ಚಿಕಿತ್ಸೆ ನೀಡುವಲ್ಲಿ ಅಪಾರ ಪರಿಣಿತಿ ಪಡೆದಿದ್ದಾರೆ. ART ಕಾರ್ಯವಿಧಾನಗಳು, ಫಾಲಿಕ್ಯುಲರ್ ಮಾನಿಟರಿಂಗ್ ಮತ್ತು ಅಲ್ಟ್ರಾಸೌಂಡ್-ಮಾರ್ಗದರ್ಶಿತ ಸೇವೆ ನೀಡುವಲ್ಲ ಡಾ. ರಾಮನಾಥನ್‌ಗೆ ಅಪಾರ ಅನುಭವ ಇದೆ.

ಡಾ. ರಾಮನಾಥನ್‌ ಅವರ ಶೈಕ್ಷಣಿಕ ಸಾಧನೆಗಳನ್ನು ನೋಡಿದ್ರೆ ಅವರಿಗೆ ಸುಧಾರಿತ ಫಲವತ್ತತೆ ಚಿಕಿತ್ಸೆಯಲ್ಲಿ ಅಪಾರ ಆಸಕ್ತಿ ಇದೆ. ಅವರು ಮಹತ್ವದ ಸಮ್ಮೇಳನಗಳಲ್ಲಿ ತಾಯಿಯ ವಯಸ್ಸಿನ ಪ್ರಭಾವ ಮತ್ತು ಪ್ರಸ್ತುತಿ ಕುರಿತಂತೆ ಥೀಸಿಸ್‌ ಪ್ರಕಟಿಸಿದ್ದಾರೆ. ವೈದ್ಯಕೀಯ ಸಾಹಿತ್ಯಕ್ಕೂ ಅವರ ಕೊಡುಗೆ ಇದೆ.

ಡಾ.ರಾಮನಾಥನ್‌ ಹೊಸದನ್ನು ಕಲಿಯುವುದರಲ್ಲಿ ಸದಾ ಮುಂದು. ಕಾರ್ಯಾಗಾರಗಳು ಮತ್ತು ಸಮ್ಮೇಳನಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತ, ತಮ್ಮ ಕ್ಷೇತ್ರದಲ್ಲಿನ ಹೊಸಹೊಸ ಸಾಧ್ಯತೆಗಳೊಂದಿಗೆ ಅಪ್‌ಡೇಟ್‌ ಆಗುತ್ತಿರುತ್ತಾರೆ. ಡಾ. ವಂದನಾ ರಾಮನಾಥನ್‌ ಅವರು ತಮ್ಮ ಅಪಾರ ಅನುಭವದೊಂದಿಗೆ ಫಲವತ್ತತೆಯಿಂದ ಬಳಲುತ್ತಿರುವ ದಂಪತಿಗಳಿಗೆ ಮಾರ್ಗದರ್ಶನ ಮತ್ತು ಚಿಕಿತ್ಸೆ ನೀಡಿ ಅವರ ಕನಸನ್ನು ನನಸು ಮಾಡಲು ಶ್ರಮಿಸುತ್ತಿದ್ದಾರೆ.

ಈ ಪುಟವನ್ನು ಹಂಚಿಕೊಳ್ಳಿ