ಡಾ. ವರ್ಷಾ ವಿಜಯ್‌

ಡಾ. ವರ್ಷಾ ವಿಜಯ್‌

ಎಂಬಿಬಿಎಸ್‌,ಎಂ.ಡಿ.(ಸೈಕಾಲಜಿ)
ಫಿಸಿಯಾಟ್ರಿಸ್ಟ್‌ ಕನ್ಸಲ್ಟೆಂಟ್‌
ವೈದ್ಯಕೀಯ ನೋಂದಣಿ ಸಂಖ್ಯೆ (ಕೆಎಂಸಿ) :
ತಿಳಿದಿರುವ ಭಾಷೆಗಳು: ಕನ್ನಡ, ಇಂಗ್ಲಿಷ್‌

ಡಾ. ವರ್ಷಾ ವಿಜಯ್‌ ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಐವಿಎಫ್‌ ಸೆಂಟರ್‌ ಗರ್ಭಗುಡಿಯಲ್ಲಿ ಅನುಭವಿ ಮನೋವೈದ್ಯ ಸಲಹೆಗಾರರಾಗಿದ್ದಾರೆ. ಮನೋವೈದ್ಯಶಾಸ್ತ್ರದಲ್ಲಿ ವ್ಯಾಪಕ ತರಬೇತಿ ಹೊಂದಿರುವ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಅಪಾರ ಅಭಿರುಚಿ ಇರುವ ಡಾ. ವರ್ಷಾ ಅವರು ರೋಗಿಗಳ ಆರೈಕೆಯಲ್ಲಿ ಸದಾ ಮುಂದು. ಯಾರು ಫಲವತ್ತತೆ ಚಿಕಿತ್ಸೆಗಳಿಗೆ ಒಳಗಾಗುತ್ತಾರೋ ಅಂಥ ವ್ಯಕ್ತಿಗಳ ಮಾನಸಿಕ ಯೋಗಕ್ಷೇಮವನ್ನು ಪರಿಹರಿಸುವಲ್ಲಿ ಡಾ. ವರ್ಷಾ ಅವರು ಪ್ರಮುಖ ಪಾತ್ರ ವಹಿಸುತ್ತಾರೆ. ಅಂದರೆ ಸಂತಾನೋತ್ಪತ್ತಿ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವನ್ನು ಸಂಯೋಜಿಸಿ, ದಂಪತಿಗಳಿಗೆ ಸಮಗ್ರ ಆರೈಕೆ ಸಿಗುವಲ್ಲಿ ಅವರು ಹೆಚ್ಚಿನ ಆಸಕ್ತಿ ಮತ್ತು ಮುತುವರ್ಜಿ ವಹಿಸುತ್ತಾರೆ. ಯಾಕೆಂದರೆ, ಸಂತಾನೋತ್ಪತ್ತಿಗಾಗಿ ಯಾವುದೇ ಚಿಕಿತ್ಸೆ ಪಡೆಯುವ ದಂಪತಿಗಳಿಗೆ ಮಾನಸಿಕ ಆರೋಗ್ಯ ಅತ್ಯಂತ ಮುಖ್ಯವಾಗಿರುತ್ತದೆ.

ಡಾ. ವರ್ಷಾ ವಿಜಯ್ ಬೆಂಗಳೂರಿನ ಸಪ್ತಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಮನೋವೈದ್ಯಶಾಸ್ತ್ರದಲ್ಲಿ ಎಂ.ಡಿ. ಮತ್ತು ತುಮಕೂರಿನ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಿಂದ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ಅವರು ಆಗಸ್ಟ್ 2020 ರಿಂದ ಆಗಸ್ಟ್ 2023 ರವರೆಗೆ ಸಪ್ತಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಜೂನಿಯರ್ ಡಾಕ್ಟರ್‌ ಆಗಿ ಮತ್ತು ಅಕ್ಟೋಬರ್ 2023 ರಿಂದ ಬೆಂಗಳೂರಿನ ನಿಮ್ಹಾನ್ಸ್ (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್) ನಲ್ಲಿ ಸೀನಿಯರ್‌ ರೆಸಿಡೆಂಟ್‌ ಆಗಿ ಅಪಾರ ಅನುಭವ ಗಳಿಸಿದ್ದಾರೆ. ರೋಗಿಗಳ ಆರೈಕೆ ಮತ್ತು ಮಾನಸಿಕ ಆರೋಗ್ಯ ಸಂಶೋಧನೆಯಲ್ಲಿ ಡಾ. ವರ್ಷಾ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಅದು ದಂಪತಿಗಳ ಒಟ್ಟು ಚಿಕಿತ್ಸಾ ಫಲಿತಾಂಶ ಮತ್ತು ಆರೋಗ್ಯದ ಮೇಲೆ ಅವರಿಗಿರುವ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.

ಡಾ. ವರ್ಷಾ ವಿಜಯ್ ಅವರು ತಮ್ಮ ಸಂಶೋಧನೆ ಮತ್ತು ಬರಹಗಳ ಮೂಲಕ ಮನೋವೈದ್ಯಕೀಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಪ್ರಬಂಧ, "ಎ ಕ್ರಾಸ್-ಸೆಕ್ಷನಲ್ ಸ್ಟಡಿ ಟು ಅನಲೈಸ್ ಆಫ್ ಡಿಪ್ರೆಶನ್, ಆಂಕ್ಸೈಟಿ ಮತ್ತು ಕ್ವಾಲಿಟಿ ಆಫ್ ಲೈಫ್ ಇನ್ ಸೀಜರ್ ಡಿಸಾರ್ಡರ್,"-ನ್ಯೂರಾಲಜಿಕಲ್‌ ಕಂಡೀಷನ್ಸ್‌ ಮೇಲೆ ಉಂಟಾಗುವ ಮಾನಸಿಕ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಅವರಿಗಿರುವ ಆಸಕ್ತಿಯನ್ನು ತೋರಿಸುತ್ತದೆ. ಡಾ. ವರ್ಷಾ ಅವರು ಹಲವಾರು ಪ್ರತಿಷ್ಠಿತ ಪತ್ರಿಕೆಗಳಲ್ಲಿ ತಮ್ಮ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಕ್ರಾಸ್‌ ಸೆಕ್ಷನಲ್‌ ಸ್ಟಡಿ ಟು ಆಕ್ಸೆಸ್‌ ಪ್ರಪೋಷನ್‌ ಆಫ್‌ ಡಿಪ್ರೆಷನ್‌, ಆಂಕ್ಸೈಟಿ ಮತ್ತು ಕ್ವಾಲಿಟಿ ಆಫ್‌ ಲೈಫ್‌ ಇನ್‌ ಪೇಷೆಂಟ್ಸ್‌ ವಿತ್‌ ಸೀಜರ್‌ ಡಿಸಾರ್ಡರ್‌ ಕೂಡ ಒಂದು. IJIP, ಸಂಪುಟ 11, ಸಂಚಿಕೆ 1 (ಜನವರಿ-ಮಾರ್ಚ್ 2023). ಹಾಗೆ ಅದೇ ಸಂಚಿಕೆಯಲ್ಲಿ, ಎ ಕ್ರಾಸ್‌ ಸೆಕ್ಷನಲ್‌ ಸ್ಟಡಿ ಆನ್‌ ಸೆಕ್ಷ್ಯುಯಲ್‌ ಡಿಸ್‌ಫಂಕ್ಷನ್‌ ಅಮಾಂಗ್‌ ಮೇಲ್‌ ಆಲ್ಕೋಹಾಲ್‌ ಡಿಪೆಂಡೆಂಟ್‌ ಪೇಷೆಂಟ್ಸ್‌ ಇನ್‌ ಅ ಟರ್ಷಿಯರಿ ಕೇರ್‌ ಸೆಂಟರ್‌ ಪ್ರಬಂಧ ಕೂಡ ಪ್ರಕಟವಾಗಿದೆ.

ಡಾ. ವರ್ಷಾ ವಿಜಯ್ ಅವರು ಹಲವು ರಾಷ್ಟ್ರೀಯ ವೈದ್ಯಕೀಯ ಸಮ್ಮೇಳನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ ಮತ್ತು ಪ್ರತಿಷ್ಠಿತ ವೇದಿಕೆಗಳಲ್ಲಿ ತಮ್ಮ ಸಂಶೋಧನೆಗಳನ್ನು ಪ್ರಸ್ತುತಪಡಿಸಿದ್ದಾರೆ. ಅವರು ನಿದ್ರಾಹೀನತೆಯಿಂದ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳ ಕುರಿತ ಅಧ್ಯಯನದ ವರದಿಯನ್ನು ಕೆಎಂಸಿ ಮಣಿಪಾಲದಲ್ಲಿ ಪ್ರಸ್ತುತಪಡಿಸಿದ್ದಾರೆ. ಹಾಗೂ ಅವರು KANCIPS ನಲ್ಲಿ ಜನ್ಮಜಾತ ಮೂತ್ರಜನಕಾಂಗದ ಹೈಪರ್ಪ್ಲಾಸಿಯಾ ಮತ್ತು ಉನ್ಮಾದದ ಬಗ್ಗೆ ತಮ್ಮ ಒಳನೋಟಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ MATHANAM 2024 ರಲ್ಲಿಯೂ ಭಾಗವಹಿಸಿದ್ದಾರೆ. ಇದು ಮನೋವೈದ್ಯಕೀಯ ಕ್ಷೇತ್ರದಲ್ಲಿ ಅವರಿಗಿರುವ ಅಪಾರ ಆಸಕ್ತಿಯನ್ನು ತೋರಿಸುತ್ತದೆ.

ನಿಮಗೆ ಗೊತ್ತಿದೆ, ಸಂತಾನೋತ್ಪತ್ತಿ ಆರೋಗ್ಯದಲ್ಲಿ ಮಾನಸಿಕ ಆರೋಗ್ಯವು ನಿರ್ಣಾಯಕ ಪಾತ್ರ ವಹಿಸುತ್ತದೆ. ಯಾಕೆಂದ್ರೆ ಫಲವತ್ತತೆ ಚಿಕಿತ್ಸೆ ಪಡೆದುಕೊಳ್ಳುವ ದಂಪತಿಗಳ ಪಯಣವು ಭಾವನಾತ್ಮಕವಾಗಿ ಒಂದು ಸವಾಲಾಗಿರುತ್ತದೆ. ಇಂಥವರಲ್ಲಿ ಉತ್ತಮ ಫಲಿತಾಂಶ ಬೇಕೆಂದರೆ ಅವರ ಮಾನಸಿಕ ಸಮಸ್ಯೆಯನ್ನ ಪರಿಹರಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಡಾ. ವರ್ಷಾ ವಿಜಯ್ ಅವರ ಪರಿಣತಿಯು ನಮ್ಮ ರೋಗಿಗಳು ಸಮಗ್ರ ಆರೈಕೆಯನ್ನು ಪಡೆಯುವಲ್ಲಿ ಅತ್ಯಂತ ಸಹಾಯಕವಾಗಿದೆ.

ಈ ಪುಟವನ್ನು ಹಂಚಿಕೊಳ್ಳಿ