ಕೈಗೆಟುಕುವ ಚಿಕಿತ್ಸೆಗಳು

ಕೈಗೆಟುಕುವ ಚಿಕಿತ್ಸೆಗಳು

ತಾಯ್ತನ ಒಂದು ಸುಂದರ ಅನುಭವ. ಪ್ರತಿಯೊಬ್ಬ ಮಹಿಳೆ ತಾನು ತಾಯಿಯಾಗಬೇಕೆಂದು ಕನಸು ಕಾಣುತ್ತಾಳೆ. ತನ್ನ ಮಗುವನ್ನು ಎತ್ತಿಕೊಳ್ಳಲು, ಮುದ್ದಾಡಲು, ಪ್ರೀತಿಸಲು ಮತ್ತು ಅತಿ ಮುದ್ದಿನಿಂದ ಬೆಳೆಸಲು ಇಷ್ಟಪಡುತ್ತಾಳೆ. ಆದರೆ ಈ ಸ್ವರ್ಗ ಸದೃಶ ಭಾವನೆಯನ್ನು ಅನುಭವಿಸುವ ಅದೃಷ್ಟ ಎಲ್ಲ ಮಹಿಳೆಯರಿಗೂ ಸಿಗುವುದಿಲ್ಲ. ಕಾರಣಗಳು ಯಾವುದೇ ಆಗಿರಬಹುದು. ವೃತ್ತಿಜೀವನಕ್ಕೆ ಹೆಚ್ಚು ಒತ್ತುಕೊಟ್ಟು ಮದುವೆ ತಡವಾಗಿ ಆಗುವುದರಿಂದ ಹಿಡಿದು , ಆರೋಗ್ಯ ಸಮಸ್ಯೆಗಳು, ಆನುವಂಶಿಕ ಅಸ್ವಸ್ಥತೆಗಳು, ವಯಸ್ಸಿನ ಅಂಶಗಳು, ಪುರುಷ ಸಂತಾನೋತ್ಪತ್ತಿ ಸಮಸ್ಯೆಗಳು ಮಗು ಆಗದಿರಲು ಪ್ರಮುಖ ಕಾರಣವಾಗಿರಬಹುದು.

ಹಾಗಂತ ಯೋಚಿಸುತ್ತಾ ಕುಳಿತರೆ ಪ್ರಯೋಜನವಿಲ್ಲ. ನಿಮಗೆ ಗೊತ್ತಿರಲಿ, ಇತ್ತೀಚಿನ ದಿನಗಳಲ್ಲಿ ಯಾವುದೂ ಅಸಾಧ್ಯವಲ್ಲ. ವಿಜ್ಞಾನ ಸಾಕಷ್ಟು ಮುಂದುವರೆದಿದೆ. ಅತ್ಯಾಧುನಿಕ ತಂತ್ರಜ್ಞಾನಗಳ ಸೌಕರ್ಯ ಎಲ್ಲೆಡೆ ಲಭ್ಯವಿದೆ. ಹಾಗಾಗಿ ಮಹಿಳೆ ನೈಸರ್ಗಿಕವಾಗಿ ಗರ್ಭಧರಿಸಲು ಸಾಧ್ಯವಾಗದೆ ಇದ್ದಾಗ ಸಂತಾನೋತ್ಪತ್ತಿ ಚಿಕಿತ್ಸೆ ಪಡೆಯಬಹುದು, ಅಂದರೆ ದಂಪತಿಗಳಲ್ಲಿ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲದಿದ್ದಲ್ಲಿ ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನಗಳ (ಎಆರ್‌ಟಿ) ಚಿಕಿತ್ಸೆ ಪಡೆದು ಪೋಷಕರಾಗಬಹುದು. ಅದರಲ್ಲಿ ಐವಿಎಫ್‌ ಚಿಕಿತ್ಸೆ ಪ್ರಮುಖವಾದುದು.

ಇನ್-ವಿಟ್ರೋ ಫರ್ಟಿಲೈಸೇಶನ್ ಅಥವಾ ಐವಿಎಫ್ ಎನ್ನುವುದು ದೇಹದ ಹೊರಗೆ ಅಂಡಾಣು ಫಲೀಕರಣ ನಡೆಸುವ ಒಂದು ವಿಧಾನ. ಮಹಿಳೆ ನೈಸರ್ಗಿಕವಾಗಿ ಗರ್ಭಧರಿಸಲು ವಿಫಲವಾದಾಗ, ದಂಪತಿಗಳು ಕೃತಕ ಗರ್ಭಧಾರಣೆ ಸಾಧಿಸಲು ಈ ಚಿಕಿತ್ಸೆಯನ್ನು ಆರಿಸಿಕೊಳ್ಳುತ್ತಾರೆ. ಆದ್ರೆ ಗಮನಿಸಿ,

ಐವಿಎಫ್ ದುಬಾರಿ ಚಿಕಿತ್ಸೆಯಾಗಿರಬಹುದು ಮತ್ತು ಆವರ್ತನದ ವೆಚ್ಚವು ದಂಪತಿಗಳ ವೈದ್ಯಕೀಯ ಪರಿಸ್ಥಿತಿಯನ್ನು ಆಧರಿಸಿ ಅವಲಂಬಿತವಾಗಿರುತ್ತದೆ.

ಗರ್ಭಗುಡಿಯಲ್ಲಿ ಪೋಷಕರಾಗಬಯಸುವ ಪ್ರತಿ ದಂಪತಿಗೆ ನಾವು ಸಹಾಯ ಮಾಡುವ ಗುರಿ ಹೊಂದಿದ್ದೇವೆ. ಸೇವೆ ಅಥವಾ ಚಿಕಿತ್ಸೆಯ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ನಾವು ಕೈಗೆಟುಕುವ ದರದಲ್ಲಿ ಚಿಕಿತ್ಸೆ ನೀಡುತ್ತೇವೆ. ಪ್ರತಿಯೊಂದು ಐವಿಎಫ್ ಕೇಂದ್ರವು ತನ್ನದೇ ಆದ ಚಿಕಿತ್ಸಾ ವ್ಯವಸ್ಥೆಯನ್ನು ಹೊಂದಿದ್ದು, ಅದು ಹೆಚ್ಚು ಕಡಿಮೆ ಒಂದೇ ಆಗಿರುತ್ತದೆ. ಆದರೆ ಚಿಕಿತ್ಸೆಗಳ ವೆಚ್ಚದಲ್ಲಿ ಸ್ವಲ್ಪ ಬದಲಾಗುತ್ತದೆ ಅಷ್ಟೆ. ಕೆಲವು ಕೇಂದ್ರಗಳ ಚಿಕಿತ್ಸೆ ಅಂಡಾಣು ಶೇಖರಣೆ, ಭ್ರೂಣಶಾಸ್ತ್ರ ಮತ್ತು ಭ್ರೂಣ ವರ್ಗಾವಣೆ ಪ್ರಕ್ರಿಯೆಗಳ ವೆಚ್ಚವನ್ನು ಮಾತ್ರ ಒಳಗೊಂಡಿರುತ್ತದೆ. ಇನ್ನೂ ಕೆಲವು ಕೇಂದ್ರಗಳು ಎಲ್ಲಾ ಸಮಾಲೋಚನೆಗಳು ಮತ್ತು ಸ್ಕ್ಯಾನ್‌ಗಳ ವೆಚ್ಚವನ್ನು ಒಳಗೊಂಡಿರುತ್ತದೆ. ಕೆಲವು ಚಿಕಿತ್ಸಾಲಯಗಳಲ್ಲಿ ಪರೀಕ್ಷಾ ವೆಚ್ಚ ಮತ್ತು ಇಂಜೆಕ್ಷನ್‌ ವೆಚ್ಚವೂ ಒಳಗೊಂಡಿರುತ್ತದೆ. ಆದ್ದರಿಂದ ವೆಚ್ಚವನ್ನು ಹೋಲಿಕೆ ಮಾಡಿ ನೋಡುವಾಗ, ಚಿಕಿತ್ಸೆಯಲ್ಲಿ ಏನನ್ನು ಸೇರಿಸಲಾಗಿದೆ ಮತ್ತು ಏನಿಲ್ಲ ಎಂಬುದನ್ನು ನೀವು ಕೇಳಿ ಖಚಿತಪಡಿಸಿಕೊಳ್ಳಬಹುದು.

ಈ ಕೆಳಗಿನ ಶುಲ್ಕಗಳನು ಗಮನಿಸಿ.

• ಒಪಿಡಿ ವೆಚ್ಚಗಳು - ಇದು ಸಮಾಲೋಚನೆ, ಅಲ್ಟ್ರಾ-ಸೌಂಡ್ ಮಾನಿಟರಿಂಗ್, ಸಲಹೆ, ರಕ್ತ ಮತ್ತು ಇತರೆ ತನಿಖೆಗಳನ್ನು ಒಳಗೊಂಡಿರುತ್ತದೆ.

• ಪೂರ್ವ ತನಿಖೆಗಳು - ಆವರ್ತನದ ಸಮಯದಲ್ಲಿ ಮಾಡಿದ ತನಿಖೆಗಳು, ಐವಿಎಫ್ ನಂತರದ ತನಿಖೆಗಳು, ಚುಚ್ಚುಮದ್ದು ಮತ್ತು ಔಷಧಿಗಳ ವೆಚ್ಚ (ಐವಿಎಫ್ ಸಮಯದಲ್ಲಿ ಹಾರ್ಮೋನ್ ಚುಚ್ಚುಮದ್ದು, ಭ್ರೂಣ ವರ್ಗಾವಣೆಯ ನಂತರ ಚುಚ್ಚುಮದ್ದು ಮತ್ತು ಔಷಧಿಗಳು)

• ಒಟಿ ಕಾರ್ಯವಿಧಾನದ ಶುಲ್ಕಗಳು - ಇದು ಅಂಡಾಣು ಪಿಕಪ್ ವಿಧಾನ, ಭ್ರೂಣ ವರ್ಗಾವಣೆ ವಿಧಾನ, ಭ್ರೂಣಶಾಸ್ತ್ರದ ಶುಲ್ಕಗಳು, ಭ್ರೂಣದ ಕಲ್ಚರ್ ಮತ್ತು ಮೇಲ್ವಿಚಾರಣೆ, ಘನೀಕರಿಸುವಿಕೆ ಮತ್ತು ಥಾಯಿಂಗ್(ಕರಗುವಿಕೆ)ಅನ್ನು ಒಳಗೊಂಡಿರುತ್ತದೆ.

• ಭ್ರೂಣಶಾಸ್ತ್ರಜ್ಞರ ಮತ್ತು ತಂಡದ ಶುಲ್ಕಗಳು.

• ಭ್ರೂಣಶಾಸ್ತ್ರದ ಲ್ಯಾಬ್ ಶುಲ್ಕಗಳು.

• ಬ್ಲಾಸ್ಟೊಸಿಸ್ಟ್.

• ಲೇಸರ್ ನೆರವಿನ ಹ್ಯಾಚಿಂಗ್.

• ಇತರೆ ವಿವಿಧ ಶುಲ್ಕಗಳು.

• ದಾಖಲೆ ಮತ್ತು ಒಪ್ಪಿಗೆ.

• ನರ್ಸಿಂಗ್, ಹೌಸ್‌ ಕೀಪಿಂಗ್ ಮತ್ತು ಸಹಾಯಕ ತಂಡಗಳು.

• ದಾನಿ ಮತ್ತು ಬಾಡಿಗೆ ತಾಯಿ ಶುಲ್ಕಗಳು.

• ಅಂಡಾಣು ದಾನಿ ಶುಲ್ಕಗಳು.

• ವೀರ್ಯ ದಾನಿ ಶುಲ್ಕಗಳು.

• ಬಾಡಿಗೆ ತಾಯಿ.

• ಇತರೆ ಐಚ್ಛಿಕ ಕಾರ್ಯವಿಧಾನಗಳು.

• ರೋಗನಿರ್ಣಯ ಅಥವಾ ಆಪರೇಟಿವ್ ಹಿಸ್ಟರೊಸ್ಕೋಪಿ.

• ರೋಗನಿರ್ಣಯ ಅಥವಾ ಆಪರೇಟಿವ್ ಲ್ಯಾಪರೊಸ್ಕೊಪಿ.

• ಟಿಇಎಸ್‌ಎ/ಪಿಇಎಸ್‌ಎ/ಮೈಕ್ರೊ ಟೆಸೆ.

• ಅನುಕ್ರಮ ವರ್ಗಾವಣೆ (ಸೀಕ್ವೆನ್ಷಿಯಲ್ ಟ್ರಾನ್ಸ್‌ಫರ್)

ಈ ಎಲ್ಲಾ ಅಂಶಗಳನ್ನುಗಮನಿಸಿದಾಗ , ಹೆಚ್ಚಿನ ಯಶಸ್ಸಿನ ದರವನ್ನು ಹೊಂದಿರುವ ವಿಶೇಷ ಐವಿಎಫ್ ಕೇಂದ್ರಗಳು ಏಕೆ ಸ್ವಲ್ಪ ದುಬಾರಿಯಾಗಿವೆ ಎಂದು ಅರ್ಥಮಾಡಿಕೊಳ್ಳಬಹುದು. ನೀವು ಉತ್ತಮ ಐವಿಎಫ್ ಕೇಂದ್ರಕ್ಕೆ ಹೋದಾಗ, ಅಲ್ಲಿ ಲಭ್ಯವಿರುವ ಅತ್ಯುತ್ತಮ ಚಿಕಿತ್ಸೆಯನ್ನು ಪಡೆಯುತ್ತೀರಿ ಮತ್ತು ಒದಗಿಸಲಾದ ಸೇವೆಯಲ್ಲಿ ಯಾವುದೇ ರಾಜೀ ಇರುವುದಿಲ್ಲ ಎಂಬುದೂ ಖಚಿತವಾಗಿರುತ್ತದೆ.

ಈ ಎಲ್ಲವುಗಳ ಕೊನೆಯಲ್ಲಿ ಚಿಕಿತ್ಸೆ ಫಲಿಸಿ, ಮಗುವಾಗಿ ನೀವು ಆ ಮಗುವನ್ನು ಎತ್ತಿಕೊಂಡು ಮುದ್ದಾಡುವಾಗ ಆಗುವ ಆನಂದ ಇದೆಯಲ್ಲ ಅದು ನಿಜವಾದ ಸಾರ್ಥಕತೆ ಎನಿಸುತ್ತದೆ.