ಡಾ. ಶ್ವೇತಾ ಅಶೋಕ್ ಹರ್ನಾಲ್
ನಿಮ್ಮ ನೇಮಕಾತಿಯನ್ನು ಕಾಯ್ದಿರಿಸಿ
ಶಾಖೆ | ಆವರಣದಲ್ಲಿ | ಆನ್ಲೈನ್ |
---|---|---|
* ನೇಮಕಾತಿಗಳು ವೈದ್ಯರ ಲಭ್ಯತೆಗೆ ಒಳಪಟ್ಟಿರುತ್ತವೆ. ದಯವಿಟ್ಟು, ನೀವು ಈಗಾಗಲೇ ಗರ್ಭಗುಡಿಗೆ ಭೇಟಿ ನೀಡಿದ್ದರೆ ನಿಮ್ಮ ನೋಂದಾಯಿತ ಸಂಖ್ಯೆಯನ್ನು ನೀವು ನೀಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.
ಡಾ. ಶ್ವೇತಾ ಅಶೋಕ್ ಹರ್ನಾಲ್ ಅವರು ನುರಿತ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾಗಿದ್ದಾರೆ. 2012 ರಲ್ಲಿ ಬಿಜಾಪುರದ ಶ್ರೀ ಬಿ . ಎಂ. ಪಾಟೀಲ್ ವೈದ್ಯಕೀಯ ಕಾಲೇಜಿನಲ್ಲಿ MBBS ಪದವಿ ಪಡೆದ ಶ್ವೇತಾ, 2018 ರಲ್ಲಿ ಅಸ್ಸಾಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಿಂದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ MS ಪಡೆದುಕೊಂಡರು. ಡಾ. ಶ್ವೇತಾ ಅವರು 2024ರಲ್ಲಿ, ಗರ್ಭಗುಡಿ ಇನ್‌ಸ್ಟಿಟ್ಯೂಟ್ ಆಫ್ ರಿಪ್ರೊಡಕ್ಟಿವ್ ಮೆಡಿಸಿನ್ & ರಿಸರ್ಚ್ ಪ್ರೈವೇಟ್ ಲಿಮಿಟೆಡ್‌ನಿಂದ ಸಂತಾನೋತ್ಪತ್ತಿ ಔಷಧದಲ್ಲಿ ಫೇಲೋಶಿಪ್ ಪಡೆದುಕೊಂಡರು. ಐದು ವರ್ಷಗಳ ನುರಿತ ಅನುಭವವಿರುವ ಡಾ. ಶ್ವೇತಾ ಸಂತಾನೋತ್ಪತ್ತಿ ಸಮಸ್ಯೆ ಇರುವ ದಂಪತಿಗಳಿಗೆ ಅದರಿಂದ ಹೊರಬರಲು ಸಹಾಯ ಮಾಡುತ್ತಿದ್ದಾರೆ.
ಡಾ. ಶ್ವೇತಾ ಇಂಟ್ರಾ-ಯೂಟೆರಿನ್ ಇನ್ಸೆಮಿನೇಷನ್ (IUI) ಮತ್ತು ಇನ್-ವಿಟ್ರೊ ಫರ್ಟಿಲೈಸೇಶನ್ (IVF) ಸೇರಿದಂತೆ ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನಗಳಲ್ಲಿ (ART) ಅಪಾರ ಪರಿಣತಿ ಹೊಂದಿದ್ದಾರೆ. ಲ್ಯಾಪರೋಸ್ಕೋಪಿ ಮತ್ತು ಹಿಸ್ಟೆರೋಲ್ಯಾಪರೋಸ್ಕೋಪಿಯಲ್ಲೂ ಪರಿಣತಿ ಇದೆ. ಡಾ. ಶ್ವೇತಾ ಪ್ರತಿ ರೋಗಿಯ ಅಗತ್ಯಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡುತ್ತಾರಲ್ಲದೆ, ತಮ್ಮ ಪ್ರೀತಿಭರಿತ ಆರೈಕೆ ಮತ್ತು ದಂಪತಿಗಳ ಯೋಗಕ್ಷೇಮದ ಬಗ್ಗೆ ಇರುವ ಕಾಳಜಿಯಿಂದಾಗಿ ಹಲವರ ಪ್ರಶಂಸೆ ಗಳಿಸಿದ್ದಾರೆ. ಡಾ. ಶ್ವೇತಾ ತಮ್ಮಲ್ಲಿಗೆ ಬರುವ ದಂಪತಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಮತ್ತು ಆರೈಕೆ ಒದಗಿಸಲು ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ನಿರಂತರವಾಗಿ ಪಡೆದುಕೊಳ್ಳುತ್ತಿದ್ದಾರೆ.
ಅತ್ಯಂತ ನುರಿತ ಮತ್ತು ವಿಶ್ವಾಸಾರ್ಹ ಸಂತಾನೋತ್ಪತ್ತಿ ತಜ್ಞೆಯಾಗಿರುವ ಡಾ. ಶ್ವೇತಾ ಅಶೋಕ್ ಹರ್ನಾಲ್, ದಂಪತಿಗಳು ತಮ್ಮ ತಾಯ್ತನದ ಕನಸನ್ನು ನನಸು ಮಾಡಿಕೊಳ್ಳಲು ನೆರವಾಗುತ್ತಿದ್ದಾರೆ. ತಮ್ಮ ವಿಸ್ತೃತ ಶಿಕ್ಷಣ, ವಿಶೇಷ ತರಬೇತಿ ಮತ್ತು ಸದಾ ಕಲಿಕೆ ಹಾಗೂ ಸಮರ್ಪಣಾ ಭಾವದೊಂದಿಗೆ ತಮ್ಮಲ್ಲಿಗೆ ಬರುವ ದಂಪತಿಗಳಿಗೆ ಉತ್ತಮ ಫಲಿತಾಂಶ ಒದಗಿಸಲು ಗರ್ಭಗುಡಿಯಲ್ಲಿ ಸದಾ ಶ್ರಮಿಸುತ್ತಿದ್ದಾರೆ.