ಫೈಜುಲ್ಲಾ ಸೈಯದ್
ಫೈಜುಲ್ಲಾ ಸೈಯದ್ ಗರ್ಭಗುಡಿ ಐವಿಎಫ್‌ಕೇಂದ್ರದಲ್ಲಿ ಭ್ರೂಣಶಾಸ್ತ್ರಜ್ಞ ಮತ್ತು ಭ್ರೂಣ ಶಾಸ್ತ್ರದ ನಿರ್ದೇಶಕರಾಗಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಿಂದ ಭ್ರೂಣಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ , ನಾಗಾರ್ಜುನ ವಿಶ್ವವಿದ್ಯಾನಿಲಯದಿಂದ ಮೈಕ್ರೊಬಯಾಲಜಿಯಲ್ಲಿ ಮಾಸ್ಟರ್ಸ್‌ಪಡೆದಿದ್ದಾರೆ. ಮೆಡಿಕಲ್‌ಲ್ಯಾಬೊರೇಟರಿ ಟೆಕ್ನಾಲಜಿಯಲ್ಲಿ ಬ್ಯಾಚ್ಯುಲರ್‌ಡಿಗ್ರಿ ಪಡೆದಿದ್ದಾರೆ. ಭ್ರೂಣಶಾಸ್ತ್ರ ಕ್ಷೇತ್ರದಲ್ಲಿ ಫೈಜುಲ್ಲಾ ಸೈಯದ್‌ಅವರಿಗೆ ಹನ್ನೊಂದು ವರ್ಷಗಳ ಸುದೀರ್ಘ ಅನುಭವವಿದೆ.
ಫೈಜುಲ್ಲಾ ಸೈಯದ್‌ತಮ್ಮ ಸಂಶೋಧನೆಗಳ ಮೂಲಕ ಸಂತಾನೋತ್ಪತ್ತಿ ವೈದ್ಯಕೀಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಫೈಜುಲ್ಲಾ ಅವರ ಮೂರು ಸಂಶೋಧನಾಧಾರಿತ ಪ್ರಬಂಧಗಳು ಪ್ರಕಟವಾಗಿವೆ. ಐವಿಎಫ್‌ಗೆ ಒಳಗಾಗುವ ಮಹಿಳೆಯರಲ್ಲಿ ಫಲವತ್ತತೆ ಮತ್ತು ಎಎಮ್‌ಎಚ್‌ಮಟ್ಟ- ಇವುಗಳ ನಡುವಿನ ಸಂಬಂಧ ಕುರಿತು ಸಂಶೋಧನೆ ಮಾಡಿದ್ದು ಅದು ಜರ್ನಲ್‌ಆಫ್‌ರಿಪ್ರೊಡಕ್ಷನ್‌ಮತ್ತು ಇನ್‌ಫರ್ಟಿಲಿಟಿಯಲ್ಲಿ ಪ್ರಕಟವಾಗಿದೆ. ದಕ್ಷಿಣ ಭಾರತೀಯ ಪುರುಷರ ʼಸೆಮೆನ್‌ಪ್ಯಾರಾಮೀಟರ್ಸ್ʼ ಮೇಲೆ ಕ್ರೊನೊಲಾಜಿಕಲ್‌ಏಜಿಂಗ್‌ಯಾವ ಪರಿಣಾಮ ಬೀರುತ್ತೆ ಅನ್ನೋದನ್ನ ಫರ್ಟಿಲಿಟಿ ಕೇಂದ್ರಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಿ, ಅದನ್ನು ಏಷಿಯನ್‌ಪೆಸಿಫಿಕ್‌ಜರ್ನಲ್‌ಆಫ್‌ರೆಪ್ರೊಡಕ್ಷನ್‌ನಲ್ಲಿ ಪ್ರಕಟಿಸಿದ್ದಾರೆ. ಅಷ್ಟೇ ಅಲ್ಲ, ಫೈಜುಲ್ಲಾ ಅವರು ಫ್ರೀಜರ್‌ನಲ್ಲಿ ಸಂರಕ್ಷಿಸಲ್ಪಟ್ಟು ಮೂರನೇ ಮತ್ತು ಐದನೇ ದಿನ ಭ್ರೂಣ ವರ್ಗಾವಣೆಗೆ ಒಳಪಡುವ ರೋಗಿಗಳಲ್ಲಿ ಇಂಪ್ಲಾಂಟೇಷನ್‌ಮತ್ತು ಕ್ಲಿನಿಕಲ್‌ಪ್ರಗ್ನೆನ್ಸಿ ದರ ಹೇಗಿರುತ್ತೆ ಅನ್ನೋದನ್ನು ಪತ್ತೆಹಚ್ಚಲು ಸುದೀರ್ಘ ಅಧ್ಯಯನವನ್ನೂ ಮಾಡಿದ್ದಾರೆ.
ಅಪಾರವಾದ ಅನುಭವ ಮತ್ತು ಡೆಡಿಕೇಷನ್‌ಫೈಜುಲ್ಲಾ ಅವರನ್ನು ಗರ್ಭಗುಡಿ ತಂಡದ ಪ್ರಮುಖ ಸದಸ್ಯರನ್ನಾಗಿಸಿದೆ. ಮಕ್ಕಳಾಗಿಲ್ಲ ಅಂತ ಬರುವ ಅದೆಷ್ಟೋ ದಂಪತಿಗಳಿಗೆ ಮುದ್ದಾದ ಮಗು ಪಡೆಯುವ ಕನಸನ್ನು ನನಸು ಮಾಡುವಲ್ಲಿ ಫೈಜುಲ್ಲಾ ಅವರ ಸಹಾಯ ಮತ್ತು ಮಾರ್ಗದರ್ಶನವಿದೆ . ಜೊತೆಗೆ ಫಲವತ್ತತೆ ಚಿಕಿತ್ಸೆಯನ್ನ ಯಶಸ್ಸುಗೊಳಿಸಲು ಫೈಜುಲ್ಲಾ ಅವರು ಹೊಸಹೊಸ ವಿಧಾನಗಳನ್ನು ಹುಡುಕ್ತಾ ಇರ್ತಾರೆ. ಫೈಜುಲ್ಲಾ ಅವರಿಗೆ ಭ್ರೂಣಶಾಸ್ತ್ರದ ಬಗ್ಗೆ ಇರುವ ಆಸಕ್ತಿ ಮತ್ತು ಕೌಶಲ್ಯ, ಸಂತಾನೋತ್ಪತ್ತಿ ಔಷಧಿ ಕ್ಷೇತ್ರದಲ್ಲಿ ಹೆಚ್ಚು ಇಷ್ಟಪಡುವ ಭ್ರೂಣಶಾಸ್ತ್ರಜ್ಞರನ್ನಾಗಿ ರೂಪಿಸಿದೆ.
ಫೈಜುಲ್ಲಾ ಅವರಿಗೆ ಸಂತಾನೋತ್ಪತ್ತಿ ಔಷಧಿ ಮೇಲಿರುವ ಆಸಕ್ತಿ ಮೆಚ್ಚವಂಥದ್ದು. ಯುವ ವೈದ್ಯರಿಗೆ ಮಾರ್ಗದರ್ಶನ ನೀಡಿ ಅವರನ್ನು ತಯಾರುಗೊಳಿಸುವಲ್ಲಿ ಫೈಜುಲ್ಲಾ ಅವರು ಸದಾ ಮುಂದು. ಹಾಗಾಗಿ ಅವರು ಯಾವಾಗಲೂ ತಮ್ಮ ಬೋಧನೆ ಮೂಲಕ ಯುವಪೀಳಿಗೆಗೆ ಪ್ರೇರಣೆಯಾಗಿದ್ದಾರೆ. ಭ್ರೂಣಶಾಸ್ತ್ರ ಮತ್ತು ಸಂತಾನೋತ್ಪತ್ತಿ ಔಷಧಿ ಕ್ಷೇತ್ರದ ಹೊಸ ಸಾಧ್ಯತೆಗಳನ್ನು ಯುವಪಡೆಗೆ ತಿಳಿಸಿಕೊಡಲು ಸದಾ ಪ್ರಯತ್ನಿಸ್ತಾನೆ ಇರ್ತಾರೆ.
ಫೈಜುಲ್ಲಾ ಅವರಿಗೆ ಭ್ರೂಣಶಾಸ್ತ್ರ, ಸೂಕ್ಷ್ಮ ಜೀವವಿಜ್ಞಾನ ಮತ್ತು ಭ್ರೂಣದ ಬಯಾಪ್ಸಿಯಲ್ಲಿ ಅಪಾರ ಅನುಭವವಿದೆ. ಆ ಅನುಭವದಿಂದಲೇ ಅವರು ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳ ನಡುವೆ ಸರಿಸಾಟಿಯಿಲ್ಲದ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಸಂಶೋಧಕರಾಗಿ ಮತ್ತು ಬೋಧಕರಾಗಿ ಸಂತಾನೋತ್ಪತ್ತಿ ಔಷಧಿ ಕ್ಷೇತ್ರಕ್ಕೆ ಫೈಜುಲ್ಲಾಅವರ ಕೊಡುಗೆ ಅಪಾರವಾದುದು. ಹಾಗಾಗಿಯೇ ಅವರನ್ನು ಎಲ್ಲರೂ ಗೌರವಿಸುತ್ತಾರೆ ಮತ್ತು ವೃತ್ತಿಪರತೆಯಲ್ಲಿ ಅತಿ ಹೆಚ್ಚು ಬೇಡಿಕೆಯುಳ್ಳವರನ್ನಾಗಿಸಿದೆ.