ಐವಿಎಫ್‍ನ ಯಶಸ್ಸಿನ ಮಟ್ಟಗಳು

ಐವಿಎಫ್‍ನ ಯಶಸ್ಸಿನ ಮಟ್ಟಗಳು

ಐವಿಎಫ್‌ನ ಯಶಸ್ಸಿನ ಮಟ್ಟ ಹಲವಾರು ಪ್ರಮುಖ ಅಂಶಗಳ ಮೇಲೆ ಅವಲಂಬಿತವಾಗಿದೆ. ಜಾಗತಿಕವಾಗಿ ಐವಿಎಫ್ ಯಶಸ್ಸಿನ ಪ್ರಮಾಣ ಶೇ. ೩೦ ರಿಂದ ಶೇ. ೩೭ ರ ವ್ಯಾಪ್ತಿಯಲ್ಲಿದೆ. ಗರ್ಭಗುಡಿ ಯಶಸ್ಸಿನ ಪ್ರಮಾಣವು ಎಲ್ಲಾ ಕೇಂದ್ರಗಳಲ್ಲಿ ಸತತವಾಗಿ ಶೇ. ೬೫ ರಿಂದ ಶೇ. ೭೩ರಷ್ಟಿದೆ. ದಾನಿ ಭ್ರೂಣದ ಆವರ್ತನಗಳು ಮತ್ತು ಬ್ಲಾಸ್ಟೋಸಿಸ್ಟ್ ವರ್ಗಾವಣೆ ಆವರ್ತನಗಳಲ್ಲಿ ಯಶಸ್ಸಿನ ಮಟ್ಟ ಇನ್ನೂ ಹೆಚ್ಚಿರುತ್ತದೆ.

ವಯಸ್ಸು

ಮಹಿಳೆಯ ವಯಸ್ಸು ಮತ್ತು ಸಾಮಾನ್ಯ ಆರೋಗ್ಯ. ಇದರಲ್ಲಿ ಅಂಡಾಶಯ ಕಾಯ್ದಿರಿಸುವುದು, ಹಾರ್ಮೋನ್ ಮಟ್ಟ ಮತ್ತು ಮಹಿಳೆಯ ಸಾಮಾನ್ಯ ದೇಹದ ಪರಿಸ್ಥಿತಿಗಳು - ಮಧುಮೇಹ, ಅಧಿಕ ರಕ್ತದೊತ್ತಡ, ಥೈರಾಯ್ಡ್ ಪ್ರೊಫೈಲ್, ಒತ್ತಡ ಇತ್ಯಾದಿ ಸೇರಿರುತ್ತವೆ.

ಸ್ಟಿಮ್ಯುಲೇಷನ್‌

ಸ್ಟಿಮ್ಯುಲೇಷನ್‌ ಪ್ರೊಟೊಕಾಲ್ ಅನುಸರಿಸಲಾಗುತ್ತದೆ. ಫಲವತ್ತತೆ ತಜ್ಞರ ಪರಿಣಿತಿಯ ಆಧಾರದ ಮೇಲೆ ಪ್ರೊಟೊಕಾಲ್ ಹೆಚ್ಚು ಕಡಿಮೆ ಆಗಬಹುದು.

ಹಾರ್ಮೋನ್‌ ಇಂಜೆಕ್ಷನ್‌ ಮತ್ತು ಐವಿಎಫ್‌ ಮಾಧ್ಯಮದ ಬಳಕೆ

ಉತ್ಪಾದನಾ ಸೌಲಭ್ಯ, ಗುಣಮಟ್ಟದ ನಿಯಂತ್ರಣ‌ ಮತ್ತು ಅನುಸರಿಸಿದ ಪ್ರಕ್ರಿಯೆಯ ಆಧಾರದ ಮೇಲೆ, ವಿಭಿನ್ನ ಚುಚ್ಚುಮದ್ದುಗಳು(ಇಂಜೆಕ್ಷನ್‌) ಒಂದೇ ರೀತಿಯ ಸಂದರ್ಭಗಳಲ್ಲಿ ವಿಭಿನ್ನ ಫಲಿತಾಂಶಗಳನ್ನು ನೀಡಬಹುದು. ಆದ್ದರಿಂದ ಪ್ರಕ್ರಿಯೆಗಾಗಿ ಅತ್ಯುತ್ತಮ ಚುಚ್ಚುಮದ್ದು ಮತ್ತು ಅತ್ಯುತ್ತಮ ಐವಿಎಫ್ ಮಾಧ್ಯಮ ಬಳಸುವುದು ಯೋಗ್ಯವಾಗಿದೆ.

ಆಸ್ಪತ್ರೆ-ಮೂಲಸೌಕರ್ಯ

ವಿಶೇಷವಾಗಿ ಅಂಡಾಣುವನ್ನು ತೆಗೆದುಕೊಳ್ಳುವ ಆಪರೇಷನ್ ಥಿಯೇಟರ್ ಮತ್ತು ಐವಿಎಫ್ ಅಥವಾ ಐಸಿಎಸ್‌ಐ ಮೂಲಕ ಫರ್ಟಿಲೈಸೇಷನ್ ಮಾಡುವ ಭ್ರೂಣಶಾಸ್ತ್ರ ಪ್ರಯೋಗಾಲಯದಲ್ಲಿ ಮೂಲಸೌಕರ್ಯ ಪ್ರಮುಖ ಪಾತ್ರ ವಹಿಸುತ್ತದೆ. ಇವುಗಳನ್ನು ಅತ್ಯುತ್ತಮ ಮಾನದಂಡಗಳ ಪ್ರಕಾರ ನಿರ್ವಹಿಸದಿದ್ದರೆ, ಯಶಸ್ಸಿನ ದರ ತೀವ್ರವಾಗಿ ಕಡಿಮೆಯಾಗುತ್ತದೆ.

ಫರ್ಟಿಲಿಟಿ ತಂಡ

ಫಲವತ್ತತೆ ತಜ್ಞರು, ಭ್ರೂಣಶಾಸ್ತ್ರಜ್ಞರು, ಆಂಡ್ರೊಲಜಿ ಲ್ಯಾಬ್ ಉಸ್ತುವಾರಿ ಮತ್ತು ಸಹಾಯಕ ಸಿಬ್ಬಂದಿ, ಎಲ್ಲರೂ ಬಹಳ ಮುಖ್ಯವಾದ ಪಾತ್ರ ವಹಿಸುತ್ತಾರೆ.

ಮೇಲಿನ ಎಲ್ಲಾ ಐದು ವಿಭಾಗಗಳಲ್ಲಿ ಗರ್ಭಗುಡಿ ಹೆಚ್ಚಿನ ಯಶಸ್ಸಿನ ಅಂಕ ಪಡೆದಿದೆ.

ಸಾವಿರಾರು ಐವಿಎಫ್ ಆವರ್ತನಗಳನ್ನು ನಿರ್ವಹಿಸಿದ ಪರಿಣತರ ತಂಡದ ಜೊತೆಗೆ ನಾವು ಅತ್ಯುತ್ತಮ ಮೂಲಸೌಕರ್ಯವನ್ನು ಹೊಂದಿದ್ದೇವೆ ಹಾಗೂ ನಾವು ಅತ್ಯುತ್ತಮ ಇಂಜೆಕ್ಷನ್ ವಿಧಾನವನ್ನು ಬಳಸುತ್ತೇವೆ. (ಔಷಧಿಗಳು ಮತ್ತು ಮಾಧ್ಯಮದ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ) ಅಲ್ಲದೇ ಹೊಸಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತೇವೆ. ಹಾಗಾಗಿ ನಮ್ಮ ಯಶಸ್ಸಿನ ಪ್ರಮಾಣವು ಯಾವಾಗಲೂ ಅಸಾಧಾರಣವಾಗಿರುತ್ತದೆ.