ಡಾ. ವರ್ಷಾ ಪಾಟಿಲ್
ದಂಪತಿಗಳ ಬದುಕಲ್ಲಿ ಹರ್ಷ ತರುವ ಏಕೈಕ ಹೆಸರೆಂದರೆ ಅದು ಡಾ ವರ್ಷಾ ಪಾಟಿಲ್. ಅವರೊಬ್ಬ ನುರಿತ ಫಲವತ್ತತೆ ತಜ್ಞೆ. ಗುಲ್ಬರ್ಗದ ಎಂ.ಆರ್. ಮೆಡಿಕಲ್ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಿಂದ DGO ಪದವಿ ಪಡೆದವರು ಡಾ. ವರ್ಷಾ. ನಂತರ ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಯ ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ ಪರೀಕ್ಷೆ ಮೂಲಕ DNB(OBG) ಶಿಕ್ಷಣವನ್ನೂ ಪಡೆದರು.
ಬಂಜೆತನ ನಿವಾರಣೆಯಲ್ಲಿ ಇನ್ನಷ್ಟು ಪರಿಣಿತಿ ಪಡೆಯಬೇಕು ಎಂಬ ಆಸೆಯಿಂದ ಬೆಂಗಳೂರಿನ IIRRH ಸಂಸ್ಥೆಯಿಂದ ಸಂತಾನೋತ್ಪತ್ತಿ ಚಿಕಿತ್ಸೆಯಲ್ಲಿ ಫೇಲೋಷಿಪ್ ಪಡೆದುಕೊಂಡರು. ಕಾರ್ತಿಕ್ ಅಲ್ಟ್ರಾಸೌಂಡ್ ತರಬೇತಿ ಸಂಸ್ಥೆಯಲ್ಲಿ ಡಾ. ಚೈತ್ರಾ ಗಣೇಶ್ ಮಾರ್ಗದರ್ಶನದಲ್ಲಿ ಅಲ್ಟ್ರಾ ಸೌಂಡ್ ತರಬೇತಿ ಪಡೆದರು. ಅಲ್ಲದೆ ಸಂತಾನೋತ್ಪತ್ತಿ ಔಷಧಿ ವಿಭಾಗದಲ್ಲಿ FOGSI ಸಂಸ್ಥೆಯಿಂದ ಆರು ತಿಂಗಳ ICOG ತರಬೇತಿ ಕೂಡ ಪಡೆದಿದ್ದಾರೆ. ವೃತ್ತಿಪರತೆ, ಅಪಾರ ಶ್ರಮ ಮತ್ತು ಜ್ಞಾನಕ್ಕೆ ಇನ್ನೊಂದು ಹೆಸರೇ ಡಾ. ವರ್ಷಾ ಪಾಟಿಲ್.
ನೈತಿಕ ರೀತಿಯಲ್ಲಿ, ವೈಜ್ಞಾನಿಕವಾಗಿ ಫಲವತ್ತತೆ ಸಮಸ್ಯೆಗೆ ಚಿಕಿತ್ಸೆ ನೀಡಬೇಕು ಅನ್ನೋದು ಡಾ. ವರ್ಷಾ ನಂಬಿಕೆ. ಡಾ. ವರ್ಷಾ ಅವರಿಗೆ ಐವಿಎಫ್, ಐವಿಯುನಲ್ಲಿಯೂ ನುರಿತ ಅನುಭವವಿದೆ. ಅಷ್ಟೇ ಅಲ್ಲ, ತಮ್ಮ ಬಳಿ ಬರುವ ನೂರಾರು ರೋಗಿಗಳಿಗೆ ಸೂಕ್ತ ಸಮಾಲೋಚನೆ ನಡೆಸುವಲ್ಲಿಯೂ ಡಾ. ವರ್ಷಾ ಸಿದ್ಧಹಸ್ತರು. ಪ್ರತಿಯೊಬ್ಬರಿಗೂ ಅವರ ಮನದಾಳ ಅರಿತು ಚಿಕಿತ್ಸೆ ನೀಡಬೇಕು ಅನ್ನೋದು ಡಾ. ವರ್ಷಾ ಅವರ ತತ್ವ. ಅದೆಷ್ಟೋ ಮಕ್ಕಳಿಲ್ಲದ ಕುಟುಂಬಗಳಿಗೆ ತಮ್ಮ ಪ್ರೀತಿ ಮತ್ತು ಅನುಭವದ ಮೂಲಕ ಚಿಕಿತ್ಸೆ ನೀಡಿ ಅವರ ಬಾಳಿನಲ್ಲಿ ಹೊಸ ಬೆಳಕು ತಂದಿದ್ದಾರೆ ಡಾ. ವರ್ಷಾ ಪಾಟಿಲ್. ಅದಕ್ಕಾಗಿ ಗರ್ಭಗುಡಿ ಅವರನ್ನು ಅಭಿನಂದಿಸುತ್ತದೆ.