ಡಾ. ಕಾವ್ಯ ಕೃಷ್ಣಪ್ಪ
ಡಾ. ಕಾವ್ಯ ಕೃಷ್ಣಪ್ಪನವರು ಪ್ರಸಿದ್ಧ ಪ್ರಸೂತಿ , ಸ್ತ್ರೀರೋಗ ಮತ್ತು ಸಂತಾನೋತ್ಪತ್ತಿ ತಜ್ಞೆಯಾಗಿದ್ದಾರೆ. ಮಕ್ಕಳಿಲ್ಲದ ದಂಪತಿಗಳ ಬಾಳಿನಲ್ಲಿ ಭರವಸೆ ತುಂಬಿ ಅವರ ಕನಸನ್ನು ನನಸು ಮಾಡಲು ಸಹಾಯ ಮಾಡುತ್ತಿದ್ದು ಸಂತಾನೋತ್ಪತ್ತಿ ಚಿಕಿತ್ಸಾ ಕ್ಷೇತ್ರದಲ್ಲಿ ಡಾ. ಕಾವ್ಯ ಕೃಷ್ಣಪ್ಪನವರಿಗೆ ಒಂದು ದಶಕದ ಅನುಭವವಿದೆ. ಕೇರಳದ ಕ್ರಾಫ್ಟ್ ಹಾಸ್ಪಿಟಲ್ ಮತ್ತು ರೀಸರ್ಚ್ ಸೆಂಟರ್‌ನಿಂದ ಸಂತಾನೋತ್ಪತ್ತಿ ಔಷಧದಲ್ಲಿ ಫೆಲೋಶಿಪ್ ಮತ್ತು ಜರ್ಮನಿಯ ಕೀಲ್ಸ್ ವಿಶ್ವವಿದ್ಯಾಲಯದಿಂದ ಅಡ್ವಾನ್ಸ್ಡ್ ರಿಪ್ರೊಡಕ್ಟಿವ್ ಮೆಡಿಸಿನ್‌ನಲ್ಲಿ ಡಿಪ್ಲೊಮಾ ಸೇರಿದಂತೆ ವಿಶೇಷ ತರಬೇತಿ ಪಡೆದಿದ್ದಾರೆ ಡಾ. ಕಾವ್ಯ.
ಬೆಳಗಾವಿಯ ಜವಾಹರಲಾಲ್ ನೆಹರೂ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ ಡಾ. ಕಾವ್ಯ ಕೃಷ್ಣಪ್ಪ, ದಾವಣಗೆರೆಯ ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಎಂಎಸ್ ಪೂರ್ಣಗೊಳಿಸಿದ್ದಾರೆ. ಡಾ.ಕಾವ್ಯ ಕೃಷ್ಣಪ್ಪ ಅವರು ಲ್ಯಾಪರೊಸ್ಕೋಪಿ, ಹಿಸ್ಟರೊಸ್ಕೋಪಿ ಮತ್ತು ಅಲ್ಟ್ರಾಸೋನೋಗ್ರಫಿ ಸೇರಿದಂತೆ ವಿವಿಧ ಸಂತಾನೋತ್ಪತ್ತಿ ಕಾರ್ಯವಿಧಾನಗಳಲ್ಲಿ ವಿಶೇಷ ಪರಿಣಿತಿ ಗಳಿಸಿದ್ದಾರೆ. ಸಂತಾನೋತ್ಪತ್ತಿ ಚಿಕಿತ್ಸಾ ಕ್ಷೇತ್ರದಲ್ಲಿನ ಆಧುನಿಕ ಚಿಕಿತ್ಸಾ ವಿಧಾನಗಳಲ್ಲಿ ಅತೀವ ಆಸಕ್ತಿ ಮತ್ತು ಅಭ್ಯಾಸ, ಅವರ ಚಿಕಿತ್ಸೆ ಮತ್ತು ರಾಷ್ಟ್ರೀಯ ಸಮ್ಮೇಳನಗಳ ಭಾಗವಹಿಸುವಿಕೆಯಲ್ಲಿ ಎದ್ದು ಕಾಣುತ್ತಿದೆ.
ಡಾ.ಕಾವ್ಯ ಕೃಷ್ಣಪ್ಪನವರ ವಿಶೇಷ ಪರಿಣಿತಿಯ ಕ್ಷೇತ್ರಗಳೆಂದರೆ, ಡಿಕ್ರೀಸ್ಡ್ ಒವರಿಯನ್ ರಿಸರ್ವ್, ಎಂಡೊಮೆಟ್ರಿಯೊಸಿಸ್, ಪಿಸಿಒಎಸ್, ಮರುಕಳಿಸುವ ಗರ್ಭಧಾರಣೆಯ ನಷ್ಟ ಮತ್ತು ಪುರುಷ ಬಂಜೆತನ. ಇದಲ್ಲದೆ, ಇಂಟ್ರಾ-ಅಂಡಾಶಯದ PRP ಮತ್ತು ಸ್ಟೆಮ್ ಸೆಲ್ ಥೆರಪಿ ಸೇರಿದಂತೆ ಪುನರುತ್ಪಾದಕ ಔಷಧದಂತಹ ನವೀನ ಚಿಕಿತ್ಸೆ ನೀಡುತ್ತಾರೆ ಡಾ ಕಾವ್ಯ. ರೋಗಿಗಳನ್ನು ಭಾವಿಸುವ ವಿಧಾನ ಹಾಗೂ ಕನ್ನಡ, ತೆಲುಗು, ತಮಿಳು, ಇಂಗ್ಲಿಷ್, ಹಿಂದಿ ಮತ್ತು ಮಲಯಾಳಂ ಭಾಷೆಗಳು ಗೊತ್ತಿರುವುದರಿಂದ ರೋಗಿಗಳ ಜೊತೆ ಸುಲಲಿತವಾಗಿ ಮಾತನಾಡಲು ಮತ್ತು ಚಿಕಿತ್ಸೆ ನೀಡಿ ಆರೈಕೆ ಮಾಡಲು ಅವರಿಗೆ ಸುಲಭವಾಗಿದೆ.
ಸಂತಾನಹೀನ ದಂಪತಿಗಳಿಗೆ ಸುರಕ್ಷಿತವಾದ ಮತ್ತು ಕೈಗೆಟುಕುವ ದರದಲ್ಲಿ ಚಿಕಿತ್ಸೆ ನೀಡುವ ಗುರಿ ಹೊಂದಿರುವ ಡಾ ಕಾವ್ಯ ಕೃಷ್ಣಪ್ಪನವರು, ವೈದ್ಯಕೀಯ ಶ್ರೇಷ್ಠತೆ ಮತ್ತು ಸಹಾನುಭೂತಿಯಿಂದ ಅತ್ಯುನ್ನತ ಗುಣಮಟ್ಟದ ಚಿಕಿತ್ಸೆ ಮೂಲಕ ದಂಪತಿಗಳ ಕನಸನ್ನು ನನಸು ಮಾಡಿ ಅವರ ಬಾಳಿನಲ್ಲಿ ಸಂತಸ ತರಲು ಶ್ರಮಿಸುತ್ತಿದ್ದಾರೆ.