ಡಾ.  ಲಕ್ಷ್ಮೀ ಪ್ರಿಯ

ಡಾ. ಲಕ್ಷ್ಮೀ ಪ್ರಿಯ

MBBS, MS (OBG), FRM
ಸಂತಾನೋತ್ಪತ್ತಿ ತಜ್ಞರು
ವೈದ್ಯಕೀಯ ನೋಂದಣಿ ಸಂಖ್ಯೆ (ಕೆಎಂಸಿ) : TMN20120001088
ತಿಳಿದಿರುವ ಭಾಷೆಗಳು: ಕನ್ನಡ, ಇಂಗ್ಲಿಷ್‌, ತಮಿಳು, ತೆಲುಗು

ನಿಮ್ಮ ನೇಮಕಾತಿಯನ್ನು ಕಾಯ್ದಿರಿಸಿ

ಶಾಖೆ
ಆವರಣದಲ್ಲಿ
ಆನ್ಲೈನ್

* ನೇಮಕಾತಿಗಳು ವೈದ್ಯರ ಲಭ್ಯತೆಗೆ ಒಳಪಟ್ಟಿರುತ್ತವೆ. ದಯವಿಟ್ಟು, ನೀವು ಈಗಾಗಲೇ ಗರ್ಭಗುಡಿಗೆ ಭೇಟಿ ನೀಡಿದ್ದರೆ ನಿಮ್ಮ ನೋಂದಾಯಿತ ಸಂಖ್ಯೆಯನ್ನು ನೀವು ನೀಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

ಡಾ. ಲಕ್ಷ್ಮೀ ಪ್ರಿಯ ಅವರು ನುರಿತ ಮತ್ತು ಅನುಭವಿ ಫಲವತ್ತತೆ ತಜ್ಞೆಯಾಗಿದ್ದಾರೆ. ಸಂತಾನೋತ್ಪತ್ತಿ ಸಮಸ್ಯೆಯಿಂದ ಹೊರಬಂದು ಮಗುಬೇಕು ಅನ್ನೋ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಬಯಸುವ ದಂಪತಿಗಳಿಗೆ ಡಾ. ಲಕ್ಷ್ಮೀ ಸಂಪೂರ್ಣಸಹಾಯ ನೀಡುತ್ತಾರೆ. ಡಾ. ಲಕ್ಷ್ಮೀ ಪ್ರಿಯ ಅವರು ಎಂಬಿಬಿಎಸ್‌ ಪದವಿ ಪಡೆದಿದ್ದು ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರದಲ್ಲಿ ಎಂಎಸ್‌ ಪದವಿ ಪಡೆದಿದ್ದಾರೆ ಹಾಗೂ ಸಂತಾನೋತ್ಪತ್ತಿ ಔಷಧಿಯಲ್ಲಿ ವಿಶೇಷ ಪರಿಣಿತಿ ಹೊಂದಿದ್ದಾರೆ. ಡಾ. ಲಕ್ಷ್ಮೀ ಪ್ರಿಯ ಅವರು ಎಫ್‌ಆರ್‌ಎಂ ಅಂದ್ರೆ ಸಂತಾನೋತ್ಪತ್ತಿ ಔಷಧಿಯಲ್ಲಿ ಫೆಲೋಶಿಪ್‌ ಸರ್ಟಫಿಕೆಟ್‌ ಪಡೆದಿದ್ದು ನಂತರ ಆ ಕ್ಷೇತ್ರದಲ್ಲಿ ಅಪಾರ ಅನುಭವ ಗಳಿಸಿಕೊಂಡರು.

ಪ್ರಸೂತಿ ಮತ್ತು ಸ್ತ್ರೀರೋಗ ಹಾಗೂ ಫಲವತ್ತತೆ ಚಿಕಿತ್ಸೆಯಲ್ಲಿ ಐದು ವರ್ಷಗಳ ಅನುಭವ ಹೊಂದಿರುವ ಡಾ. ಲಕ್ಷ್ಮೀ ಪ್ರಿಯ ಅವರು ಸಂತಾನೋತ್ಪತ್ತಿ ಸಮಸ್ಯೆ ಇರುವ ರೋಗಿಗಳು ಎದುರಿಸುವ ಸಾಧಕ ಬಾಧಕಗಳನ್ನ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಡಾ. ಲಕ್ಷ್ಮೀ ಪ್ರಿಯ ಐಯುಐನಲ್ಲಿ ಅಲ್ಟ್ರಾಸೌಂಡ್‌ ಮತ್ತು ಐವಿಎಫ್‌ ಕಾರ್ಯವಿಧಾನ ಹಾಗೂ ಒಸೈಟ್‌ ಮರುಪಡೆಯುವಿಕೆ ಮತ್ತು ಭ್ರೂಣ ವರ್ಗಾವಣೆಯಲ್ಲಿ ವಿಶೇಷ ತರಬೇತಿ ಪಡೆದಿದ್ದಾರೆ. ದಂಪತಿಗಳಿಗೆ ವಿಷಯಾಧಾರಿತ ಮನವರಿಕೆ ಮಾಡಿಕೊಡುವುದು, ಪಿಸಿಒಎಸ್‌, ಮರುಕಳಿಸುವ ಅಳವಡಿಕೆ ವೈಫಲ್ಯ, ಪುನರಾವರ್ತಿತ ಗರ್ಭಧಾರಣೆ ನಷ್ಟ ಇತ್ಯಾದಿ ವಿಷಯಗಳು ಡಾ. ಲಕ್ಷ್ಮೀ ಪ್ರಿಯ ಅವರ ಆಸಕ್ತ ಕ್ಷೇತ್ರಗಳು.

ಡಾ. ಲಕ್ಷ್ಮೀ ಪ್ರಿಯ ಅವರು ನುರಿತ ಮತ್ತು ಅನುಭವಿ ಫಲವತ್ತತೆ ತಜ್ಞೆಯಾಗಿದ್ದು ಸಂತಾನೋತ್ಪತ್ತಿ ಔಷಧಿಯಲ್ಲಿರುವ ತಮ್ಮ ಪರಿಣಿತಿಯನ್ನುಪಯೋಗಿಸಿ ಪ್ರೀತಿ ಮತ್ತು ಸಹಾನುಭೂತಿಯೊಂದಿಗೆ ರೋಗಿಗಳ ಅದ್ಭುತ ಆರೈಕೆ ಮಾಡುತ್ತಾರೆ. ತಮ್ಮ ವ್ಯಾಪಕವಾದ ಜ್ಞಾನ, ಸುಧಾರಿತ ಕೌಶಲ್ಯದಿಂದ ಸಂತಾನೋತ್ಪತ್ತಿ ಸಮಸ್ಯೆಯಿಂದ ಬಳಲುತ್ತಿರುವ ದಂಪತಿಗೆ ಅದರಿಂದ ಹೊರಬರಲು ಸಹಾಯ ಮಾಡುತ್ತಾರೆ. ಅವರ ಬದುಕಿನಲ್ಲಿ ಅರ್ಥಪೂರ್ಣ ಬದಲಾವಣೆ ತರುವುದು ಮತ್ತು ಜೀವನದ ಹಾದಿಯಲ್ಲಿ ತುಂಬು ಸಂತೋಷವನ್ನು ತರುವುದಕ್ಕಾಗಿ ಅವಿರತ ಶ್ರಮಿಸುತ್ತಿದ್ದಾರೆ.

ಈ ಪುಟವನ್ನು ಹಂಚಿಕೊಳ್ಳಿ