ಡಾ. ಶುಭಾ ಎಲ್‌

ಡಾ. ಶುಭಾ ಎಲ್‌

MBBS, MS(OBG), DNB, FRM
ಸಂತಾನೋತ್ಪತ್ತಿ ತಜ್ಞರು
ವೈದ್ಯಕೀಯ ನೋಂದಣಿ ಸಂಖ್ಯೆ (ಕೆಎಂಸಿ) : 95820
ತಿಳಿದಿರುವ ಭಾಷೆಗಳು: ಕನ್ನಡ, ಇಂಗ್ಲಿಷ್‌, ತೆಲುಗು, ಹಿಂದಿ, ಮಲಯಾಳಂ ಮತ್ತು ತಮಿಳು

ನಿಮ್ಮ ನೇಮಕಾತಿಯನ್ನು ಕಾಯ್ದಿರಿಸಿ

* ನೇಮಕಾತಿಗಳು ವೈದ್ಯರ ಲಭ್ಯತೆಗೆ ಒಳಪಟ್ಟಿರುತ್ತವೆ. ದಯವಿಟ್ಟು, ನೀವು ಈಗಾಗಲೇ ಗರ್ಭಗುಡಿಗೆ ಭೇಟಿ ನೀಡಿದ್ದರೆ ನಿಮ್ಮ ನೋಂದಾಯಿತ ಸಂಖ್ಯೆಯನ್ನು ನೀವು ನೀಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

ಡಾ. ಶುಭಾ ಎಲ್‌. ಅವರು ನುರಿತ ಫಲವತ್ತತೆ ತಜ್ಞೆಯಾಗಿದ್ದು ಪ್ರಸೂತಿ ಮತ್ತು ಸ್ರ್ರೀರೋಗ ಶಾಸ್ತ್ರದಲ್ಲಿ ಐದು ವರ್ಷಗಳ ಅನುಭವ ಹೊಂದಿದ್ದಾರೆ. ಶುಭಾ ದಾವಣಗೆರೆಯ ಜೆಜೆಎಂಸಿ ಕಾಲೇಜಿನಿಂದ ಎಂಬಿಬಿಎಸ್‌ ಪದವಿ ಹಾಗೂ ಮಂಗಳೂರಿನ ಫಾದರ್‌ ಮುಲ್ಲರ್‌ ಕಾಲೇಜಿನಿಂದ ಎಂಎಸ್‌ ಪದವಿ ಪಡೆದಿದ್ದಾರೆ. ಸೇಂಟ್‌ ಮಾರ್ತಾಸ್‌ ಹಾಸ್ಪಿಟಲ್‌ನಲ್ಲಿ ಹಿರಿಯ ರಿಜಿಸ್ಟ್ರಾರ್‌ ಆಗಿ ಕಾರ್ಯನಿರ್ವಹಿಸಿ ನಂತರ ಹೆಚ್ಚಿನ ಪರಿಣಿತಿ ಪಡೆಯುವ ಅಪೇಕ್ಷೆಯಿಂದ ಕೇರಳದ ಕ್ರಾಫ್ಟ್‌ ಆಸ್ಪತ್ರೆಯಿಂದ ಸಂತಾನೋತ್ಪತ್ತಿ ಔಷಧಿಯಲ್ಲಿ ಫೇಲೋಶಿಪ್‌ ಪಡೆದುಕೊಂಡಿದ್ದಾರೆ.

ಡಾ. ಶುಭಾ ಎಲ್‌. ಒಬ್ಬ ಕೌಶಲ್ಯಯುತ ವತ್ತಿಪರ ವೈದ್ಯೆಯಾಗಿದ್ದು ತಮ್ಮ ವೃತ್ತಿಯ ಬಗೆಗೆ ವಿಶೇಷ ಪ್ರೀತಿ ಹೊಂದಿದ್ದಾರೆ. ತಮ್ಮ ಬಳಿಗೆ ಬರುವ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವ ಗುರಿ ಅವರದ್ದು. ಡಾ. ಶುಭಾ ಅವರು ಐವಿಎಫ್‌,ಐಯುಐ ನಂಥ ART ಕಾರ್ಯವಿಧಾನದಲ್ಲಿ ವಿಶೇಷ ಪರಿಣಿತಿ ಪಡೆದಿದ್ದಾರೆ. ರೋಗಿಗಳಲ್ಲಿ ಆತ್ಮವಿಶ್ವಾಸ ತುಂಬುವುದು ಮತ್ತು ಅವರಿಗೆ ಆರಾಮದಾಯಕ ವಾತಾವರಣ ಒದಗಿಸುವುದರಲ್ಲಿ ಶುಭಾ ಹೆಸರುವಾಸಿ ಪಡೆದಿದ್ದು, ವೈಜ್ಞಾನಿಕ ವಿಧಾನದ ಮೂಲಕ ಹಾಗೂ ನೈತಿಕವಾಗಿ ಫಲವತ್ತತೆ ಚಿಕಿತ್ಸೆ ನೀಡುವುದರಲ್ಲಿ ಹೆಚ್ಚು ವಿಶ್ವಾಸ ಹೊಂದಿದ್ದಾರೆ. ಶುಭಾ ಸಂತಾನೋತ್ಪತ್ತಿ ಸಮಸ್ಯೆಗೆಂದು ಬರುವವರಿಗೆ ಅದ್ಭುತವಾಗಿ ಸಮಾಲೋಚನೆ ನಡೆಸುತ್ತಾರೆ. ಫಲವತ್ತತೆ ಚಿಕಿತ್ಸೆಯಲ್ಲಿ ಡಾ. ಶುಭಾ ಅವರಿಗಿರುವ ಕೌಶಲ್ಯ ಮತ್ತು ಅನುಭವ ಅವರನ್ನು ಗರ್ಭಗುಡಿ ಐವಿಎಫ್‌ ಸೆಂಟರ್‌ನ ಒಬ್ಬ ಪ್ರಮುಖ ಸದಸ್ಯೆಯ್ನನಾಗಿ ರೂಪಿಸಿದೆ

ಈ ಪುಟವನ್ನು ಹಂಚಿಕೊಳ್ಳಿ