ನಿರ್ಬಂಧಿತ ಫಾಲೋಪಿಯನ್ ಟ್ಯೂಬ್‍ಗಳು
ಹೆಣ್ಣು ಸಂತಾನೋತ್ಪತ್ತಿ ವ್ಯವಸ್ಥೆಯು ಅಂಡಾಶಯಗಳು, ಫಾಲೋಪಿಯನ್ ಟ್ಯೂಬ್‍ಗಳು, ಯೋನಿ ಮತ್ತು ಗರ್ಭಾಶಯವನ್ನು ಒಳಗೊಂಡಿರುವ ಅನೇಕ ಅಂಗಗಳನ್ನು ಒಳಗೊಂಡಿದೆ. ಮಹಿಳೆ ಗರ್ಭಿಣಿಯಾಗಬೇಕಾದರೆ ಈ ಪ್ರತಿಯೊಂದು ಅಂಗಗಳೂ ಪ್ರಮುಖ ಪಾತ್ರವಹಿಸುತ್ತವೆ. ಈ ಅಂಗಗಳಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ, ಗರ್ಭಧಾರಣೆಯು ಸವಾಲಿನದಾಗುತ್ತದೆ. ಸಂತಾನೋತ್ಪತ್ತಿ ಸಮಸ್ಯೆ ಕಡೆಗೆ ಪ್ರಮುಖ ಕೊಡುಗೆ ನೀಡುವ ಅಂತಹ ಒಂದು ಸ್ಥಿತಿ ಎಂದರೆ ಫಾಲೋಪಿಯನ್ ಟ್ಯೂಬ್‍ಗಳಲ್ಲಿ ಅಡ್ಡಿ ಉಂಟಾಗುವುದು ಅಥವಾ ಈ ಕೊಳವೆಗಳು ನಿರ್ಬಂದಿತವಾಗಿರುವುದಾಗಿರುತ್ತದೆ.
ಫಾಲೋಪಿಯನ್ ಟ್ಯೂಬ್‍ಗಳು ಉದ್ದ ಮತ್ತು ತೆಳ್ಳಗಿನ ಕೊಳವೆಗಳ ಜೋಡಿಯಾಗಿವೆ. ಇದನ್ನು ಗರ್ಭಾಶಯದ ಕೊಳವೆಗಳು ಎಂದೂ ಕರೆಯುತ್ತಾರೆ. ಪ್ರತಿ ಫಾಲೋಪಿಯನ್ ಟ್ಯೂಬ್‍ನ ಉದ್ದ ಸುಮಾರು 4-5 ಇಂಚುಗಳಷ್ಟಿದ್ದು,ಸುಮಾರು 0.2-0.6 ಇಂಚುಗಳಷ್ಟು ವ್ಯಾಸವನ್ನು ಹೊಂದಿದೆ. ಈ ಕೊಳವೆಗಳು ಅಂಡಾಶಯವನ್ನು ಗರ್ಭಾಶಯಕ್ಕೆ ಜೋಡಿಸುತ್ತವೆ. ಇವು ಅಂಡಾಶಯದಿಂದ ಅಂಡಾಣುವನ್ನು ಸಾಗಿಸಲು ಸಹಾಯ ಮಾಡುತ್ತವೆಯಲ್ಲದೇ ವೀರ್ಯಾಣು ಪ್ರಯಾಣಿಸಲು ಮತ್ತು ಅಂಡಾಣುವನ್ನು ತಲುಪಲು ಸಹಾಯ ಮಾಡುತ್ತವೆ. ಫಲೀಕರಣ ನಡೆಯಲು ಸೂಕ್ತವಾದ ವಾತಾವರಣವನ್ನು ಒದಗಿಸುತ್ತವೆ. ಆದ್ದರಿಂದ, ಒಂದು ಅಥವಾ ಎರಡೂ ಟ್ಯೂಬ್‍ಗಳಲ್ಲಿ ಅಡ್ಡಿಯುಂಟಾದರೆ, ಗರ್ಭಧಾರಣೆ ಕಷ್ಟಕರವಾಗುತ್ತದೆ.
ಫಾಲೋಪಿಯನ್ ಟ್ಯೂಬ್‍ಗಳಲ್ಲಿ ಅಡ್ಡಿ ಉಂಟಾಗಲು ಕಾರಣವೇನು?
ಸೊಂಟದ ಅಂಟಿಕೊಳ್ಳುವಿಕೆ ಅಥವಾ ಗಾಯದ ಅಂಗಾಂಶದಿಂದಾಗಿ ಫಾಲೋಪಿಯನ್ ಕೊಳವೆಗಳಲ್ಲಿ ಸಾಮಾನ್ಯವಾಗಿ ಅಡೆತಡೆಗಳು ಉಂಟಾಗುತ್ತವೆ. ಟ್ಯೂಬ್‍ಗಳಲ್ಲಿ ಅಡ್ಡಿ ಉಂಟುಮಾಡುವ ಹಲವಾರು ಅಂಶಗಳಿವೆ, ಅವುಗಳಲ್ಲಿ ಈ ಕೆಳಗಿನವು ಕೆಲವು ಸೇರಿವೆ:
• ಎಂಡೊಮೆಟ್ರಿಯೊಸಿಸ್ - ಎಂಡೊಮೆಟ್ರಿಯಲ್ ಅಂಗಾಂಶ ನಿರ್ಮಿತವಾಗುವುದು ತಡೆಗಟ್ಟುವಿಕೆಗೆ ಕಾರಣವಾಗಬಹುದು. ಅಂತೆಯೇ, ಇತರ ಅಂಗಗಳ ಹೊರ ಭಾಗದಲ್ಲಿ ಬೆಳೆಯುವ ಎಂಡೊಮೆಟ್ರಿಯಲ್ ಅಂಗಾಂಶದ ಕಾರಣದಿಂದಾಗಿ ಅಂಟಿಕೊಳ್ಳುವಿಕೆಯು ಕೂಡ ಅಡಚಣೆಯನ್ನು ಉಂಟುಮಾಡಬಹುದು.
• ಫೈಬ್ರಾಯ್ಡ್‌ಗಳು - ಗರ್ಭಾಶಯದೊಳಗಿನ ಅಸಹಜ ಬೆಳವಣಿಗೆಗಳು ಫಾಲೋಪಿಯನ್ ಟ್ಯೂಬ್‍ಗಳಲ್ಲಿ ಅಡ್ಡಿ ಉಂಟಾಗಲು ಕಾರಣವಾಗಬಹುದು.
• ಲೈಂಗಿಕವಾಗಿ ಹರಡುವ ರೋಗಗಳು - ಗೊನೊರಿಯಾ ಮತ್ತು ಕ್ಲಮೈಡಿಯದಂತಹ ಎಸ್‍ಟಿಡಿಗಳು ಕೂಡ ಗಾಯಕ್ಕೆ ಕಾರಣವಾಗಬಹುದು, ಇದು ಸೊಂಟದ ಉರಿಯೂತದ ಕಾಯಿಲೆಗೆ ಕಾರಣವಾಗಬಹುದು, ಇದು ಫಾಲೋಪಿಯನ್ ಟ್ಯೂಬ್‍ಗಳ ನಿರ್ಬಂಧಕ್ಕೆ ಮತ್ತೊಂದು ಕಾರಣವಾಗಿದೆ.
ಇವುಗಳ ಜೊತೆಗೆ, ಫಾಲೋಪಿಯನ್ ಟ್ಯೂಬ್‍ಗಳನ್ನು ನಿರ್ಬಂಧಿಸಲು ಹಲವು ಕಾರಣಗಳಿವೆ.
ಫಾಲೋಪಿಯನ್ ಟ್ಯೂಬ್‍ಗಳಲ್ಲಿ ಅಡ್ಡಿ ಉಂಟಾಗಿರುವುದರ ಲಕ್ಷಣಗಳು
ಅಡೆತಡೆ ಹೊಂದಿರುವ ಫಾಲೋಪಿಯನ್ ಟ್ಯೂಬ್‍ಗಳು ಸಾಮಾನ್ಯವಾಗಿ ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ; ಆದರೂ, ಕೆಲವು ಸಂದರ್ಭಗಳಲ್ಲಿ, ಹೆಚ್ಚು ಋತುಸ್ರಾವದ ಅವಧಿಗಳಲ್ಲಿ ಸೌಮ್ಯದಿಂದ ಮಧ್ಯಮ ಮಟ್ಟದ ಸೊಂಟನೋವನ್ನು ಉಂಟುಮಾಡಬಹುದು.
ಅಡ್ಡಿ ಉಂಟಾಗಿರುವ ಕೊಳವೆಗಳಿಗೆ ಚಿಕಿತ್ಸೆ ನೀಡಬಹುದೇ?
ಅದೃಷ್ಟವಶಾತ್, ಅಡೆತಡೆಯ ಪ್ರಮಾಣ ಏನೇ ಇರಲಿ, ರಿಪ್ರೊಡಕ್ಟಿವ್ ಮೆಡಿಸಿನ್ ಅಗಾಧವಾದ ಪ್ರಗತಿಯನ್ನು ಸಾಧಿಸಿದೆ ಮತ್ತು ಫಾಲೋಪಿಯನ್ ಟ್ಯೂಬ್‍ಗಳಲ್ಲಿನ ಅಡ್ಡಿಗಳನ್ನು ತೆರವು ಮಾಡಲು ಅಥವಾ ಚಿಕಿತ್ಸೆ ನೀಡಲು ವಿವಿಧ ಚಿಕಿತ್ಸಾವಿಧಾನಗಳು ಈಗ ಲಭ್ಯವಿದೆ. ಈ ತೊಂದರೆಗೆ ಚಿಕಿತ್ಸೆ ನೀಡಲು ನೈಸರ್ಗಿಕ ಮತ್ತು ವೈದ್ಯಕೀಯ ಚಿಕಿತ್ಸೆಗಳು ಲಭ್ಯವಿವೆ.
ಅಡ್ಡಿ ಉಂಟಾಗಿರುವ ಫಾಲೋಪಿಯನ್ ಟ್ಯೂಬ್‍ಗಳ ರೋಗನಿರ್ಣಯ ಹೇಗೆ ಕೈಗೊಳ್ಳಲಾಗುತ್ತದೆ?
ಅಡ್ಡಿ ಉಂಟಾಗಿರುವ ಫಾಲೋಪಿಯನ್ ಟ್ಯೂಬ್‍ಗಳಿಗೆ ಸಂಬಂಧಿಸಿದ ಯಾವುದೇ ರೋಗಲಕ್ಷಣಗಳಿಲ್ಲದ ಕಾರಣ, ಅಡಚಣೆಯಿದ್ದರೆ ಅದನ್ನು ಕಂಡುಹಿಡಿಯುವುದು ಕಷ್ಟ. ಇದನ್ನು ಸಾಮಾನ್ಯವಾಗಿ ಹಿಸ್ಟರೊಸಲ್ಪಿಂಗೋಗ್ರಾಮ್ (ಎಚ್‍ಎಸ್‍ಜಿ) ಮೂಲಕ ಕಂಡುಹಿಡಿಯಲಾಗುತ್ತದೆ, ಫಾಲೋಪಿಯನ್ ಟ್ಯೂಬ್‍ಗಳ ಒಳಭಾಗವನ್ನು ಪರೀಕ್ಷಿಸಲು ಮತ್ತು ಯಾವುದೇ ಅಡೆತಡೆಗಳನ್ನು ಪತ್ತೆಹಚ್ಚಲು ಬಳಸಲಾಗುವ ಒಂದು ರೀತಿಯ ಎಕ್ಸ್-ರೇ ಇದಾಗಿದೆ.
ಅಡ್ಡಿ ಉಂಟಾಗಿರುವ ಫಾಲೋಪಿಯನ್ ಟ್ಯೂಬ್‍ಗಳಿಗೆ ಚಿಕಿತ್ಸೆ ನೀಡಿದ ನಂತರ ನೀವು ಗರ್ಭಿಣಿಯಾಗಬಹುದೇ?
ಅಡ್ಡಿ ಉಂಟಾಗಿರುವ ಫಾಲೋಪಿಯನ್ ಟ್ಯೂಬ್‍ಗಳು ಸಂತಾನೋತ್ಪತ್ತಿ ಸಮಸ್ಯೆಗಳ ಕಾರಣಗಳಲ್ಲಿ ಒಂದಾಗಿದೆ; ಆದರೂ, ಸಕಾಲಿಕ ಆರೈಕೆ ಮತ್ತು ಚಿಕಿತ್ಸೆಯು ಯಶಸ್ವಿಯಾಗಿ ಗರ್ಭಧರಿಸಲು ಸಹಾಯ ಮಾಡುತ್ತದೆ. ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಯನ್ನು ಕೆಲವೊಮ್ಮೆ ಯಾವುದೇ ಅಡೆತಡೆಗಳನ್ನು ತೆಗೆದುಹಾಕಲು ಮತ್ತು ಗರ್ಭಧಾರಣೆಯ ಸಾಧ್ಯತೆಯನ್ನು ಸುಧಾರಿಸಲು ಬಳಸಲಾಗುತ್ತದೆ. ಆದರೂ, ಶಸ್ತ್ರಚಿಕಿತ್ಸೆಯು ಪ್ರಯೋಜನಕಾರಿಯಲ್ಲದಿದ್ದರೂ, ಗರ್ಭಧಾರಣೆಯನ್ನು ಸಾಧಿಸಲು ನೀವು ಇನ್ನೂ ಕೂಡ ಐವಿಎಫ್ ಆಯ್ಕೆ ಮಾಡಬಹುದು.