ಅಂಡೋತ್ಪತ್ತಿ ಅಸ್ವಸ್ಥತೆಗಳು

ಅಂಡೋತ್ಪತ್ತಿ ಅಸ್ವಸ್ಥತೆಗಳು

ಅಂಡೋತ್ಪತ್ತಿ ಅಸ್ವಸ್ಥತೆಗಳು ಮಹಿಳೆಯರಲ್ಲಿ ಸಂತಾನೋತ್ಪತ್ತಿ ಸಮಸ್ಯೆಯ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಅಂಡೋತ್ಪತ್ತಿ ಅಡ್ಡಿಪಡಿಸಿದಾಗ ಅಥವಾ ಅಂಡೋತ್ಪತ್ತಿ ಆಗದೇ ಇದ್ದಾಗ ಸಮಸ್ಯೆಗಳು ಸಂಭವಿಸಬಹುದು. ಅಂತಹ ಮಹಿಳೆಯರು ಅನಿಗದಿತ ಋತು ಆವರ್ತನ ಅಥವಾ ಋತು ಆವರ್ತನ ಉಂಟಾಗದಿರುವ ತೊಂದರೆ ಅನುಭವಿಸುತ್ತಾರೆ. ಅಂಡೋತ್ಪತ್ತಿ ಸಮಸ್ಯೆಗಳ ಪ್ರಮುಖ ಕಾರಣವೆಂದರೆ ದೇಹದಲ್ಲಿನ ಹಾರ್ಮೋನ್ ಅಸಮತೋಲನವಾಗಿರುತ್ತದೆ.

ಅಂಡೋತ್ಪತ್ತಿ ಅಸ್ವಸ್ಥತೆಗಳಿಗೆ ಹಲವಾರು ಕಾರಣಗಳಿವೆ. ಮೆದುಳಿನಲ್ಲಿರುವ ಪಿಟ್ಯುಟರಿ ಗ್ರಂಥಿಯು ಸರಿಯಾದ ಹಾರ್ಮೋನುಗಳನ್ನು ಬಿಡುಗಡೆ ಮಾಡದಿದ್ದಾಗ ಈ ತೊಂದರೆ ಉಂಟಾಗುತ್ತದೆ. ಇದು ಒತ್ತಡ, ಆಹಾರ, ವ್ಯಾಯಾಮ, ವಿಕಿರಣ ಅಥವಾ ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ (ಪಿಸಿಒಎಸ್) ಎಂಬ ಸ್ಥಿತಿಯಿಂದಾಗಿ ಹಾರ್ಮೋನ್ ಮಟ್ಟದಲ್ಲಿನ ಅಸಮತೋಲನದ ಕಾರಣದಿಂದಾಗಿ ಅನಿಗದಿತ ಮಧ್ಯಂತರದಲ್ಲಿ ಅಂಡಾಣುಗಳನ್ನು ಬಿಡುಗಡೆ ಮಾಡಬಹುದು ಅಥವಾ ಅಂಡಾಣು ಬಿಡುಗಡೆ ಮಾಡುವುದನ್ನು ನಿಲ್ಲಿಸಬಹುದು. ಇತರೆ ಅಂಡೋತ್ಪತ್ತಿ ಅಸ್ವಸ್ಥತೆಗಳು ಅಂಡಾಶಯದಲ್ಲಿನ ಸಮಸ್ಯೆಗಳಿಂದ ಉಂಟಾಗಬಹುದು. ಉದಾಹರಣೆಗೆ, ಕೆಲವು ಮಹಿಳೆಯರು ಅಂಡಾಶಯಗಳಿಲ್ಲದೆಯೇ ಜನಿಸುತ್ತಾರೆ ಅಥವಾ ಅಂಡಾಶಯಗಳು ಅಕಾಲಿಕವಾಗಿ ವಿಫಲಗೊಳ್ಳುತ್ತವೆ (ಅಕಾಲಿಕ ಅಂಡಾಶಯ ವೈಫಲ್ಯ). ಇತರರು ಅಂಡಾಶಯಗಳನ್ನು ಹೊಂದಿದ್ದು ಅದು ಹಾರ್ಮೋನುಗಳ ಪರಿಣಾಮಗಳಿಗೆ ಪ್ರತಿರೋಧಕವಾಗಿದೆ ಮತ್ತು ಆದ್ದರಿಂದ ಅಂಡಾಣುಗಳು ಬೆಳವಣಿಗೆಯಾಗುವುದಿಲ್ಲ (ಅಂಡಾಶಯ ಸಿಂಡ್ರೋಮ್) ಅಥವಾ ಅಂಡಾಶಯಗಳು ಔಷಧಿ, ವಿಕಿರಣ ಅಥವಾ ಶಸ್ತ್ರಚಿಕಿತ್ಸೆಯಿಂದ ಹಾನಿಗೊಳಗಾಗುತ್ತವೆ.

ನೀವು ಅಂಡೋತ್ಪತ್ತಿ ನಿಲ್ಲಿಸಿದಾಗ ಅಥವಾ ಅಂಡೋತ್ಪತ್ತಿ ಪ್ರಕ್ರಿಯೆಯು ಅಡ್ಡಿಪಡಿಸಿದಾಗ ಸಂತಾನೋತ್ಪತ್ತಿ ಸಮಸ್ಯೆಗಳು ಸಂಭವಿಸುತ್ತವೆ. ಇದು ನಿಮಗೆ ಗರ್ಭಧರಿಸಲು ಅಸಾಧ್ಯವಾಗಿಸದಿದ್ದರೂ ಕಷ್ಟವಾಗಿಸುತ್ತದೆ. ಸಾಮಾನ್ಯ ಋತು ಆವರ್ತನದಲ್ಲಿ ಹಾರ್ಮೋನುಗಳನ್ನು ಸ್ರವಿಸುವ ಮೂಲಕ ದೇಹವು ಗರ್ಭಧಾರಣೆಗೆ ಸಿದ್ಧವಾಗುತ್ತದೆ. ಅವುಗಳಲ್ಲಿ ಕೆಲವು ಗೊನಾಡೋಟ್ರೋಪಿನ್-ಬಿಡುಗಡೆ ಮಾಡುವ ಹಾರ್ಮೋನ್ (ಜಿಎನ್‍ಆರ್‍ಎಚ್), ಫಾಲಿಕ್ಯುಲರ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್ (ಎಫ್‍ಎಸ್‍ಎಚ್), ಲ್ಯುಟೈನೈಜಿಂಗ್ ಹಾರ್ಮೋನ್ (ಎಲ್‍ಎಚ್), ಜಿಎನ್‍ಆರ್‍ಎಚ್ ಮತ್ತು ಎಫ್‍ಎಸ್‍ಎಚ್‍ಗಳು ಮಹಿಳೆಯ ಅಂಡಾಶಯದಲ್ಲಿ ಅಂಡಾಣು ಪ್ರಬುದ್ಧವಾಗಲು ಕಾರಣವಾಗುವ ಹಾರ್ಮೋನುಗಳು. ಎಲ್‍ಎಚ್ ಪ್ರಬುದ್ಧ ಅಂಡಾಣು (ಓವಮ್) ಅಂತಿಮವಾಗಿ ಫಾಲೋಪಿಯನ್ ಟ್ಯೂಬ್‍ಗೆ ಬಿಡುಗಡೆಯಾಗುವುದನ್ನು ಉತ್ತೇಜಿಸುತ್ತದೆಯಲ್ಲದೆ ಅಲ್ಲಿ ಅದು ಮನುಷ್ಯನ ವೀರ್ಯದಿಂದ ಫಲವತ್ತಾಗುತ್ತದೆ.

ಋತು ಆವರ್ತನದ ಅವಧಿಗಳು ಬದಲಾಗುತ್ತಿದ್ದರೂ, ನಿಗದಿತವಾಗಿ ಅಂಡೋತ್ಪತ್ತಿ ಮಾಡುವ ಮಹಿಳೆಯರು 28 ದಿನಗಳ ಉದ್ದದ ಆವರ್ತನವನ್ನು ಹೊಂದಿರುತ್ತಾರೆ ಮತ್ತು ಈ 28 ದಿನಗಳಲ್ಲಿ ಒಮ್ಮೆ ಅಂಡೋತ್ಪತ್ತಿ ಮಾಡುತ್ತಾರೆ. ಹಾರ್ಮೋನ್ ಅಸಮತೋಲನ ಅಥವಾ ಹಾರ್ಮೋನ್ ಕೊರತೆಯಿರುವ ಮಹಿಳೆಯರು ಅಪರೂಪದ ಅಥವಾ ಅಂಡೋತ್ಪತ್ತಿ ಇಲ್ಲದಿರುವ (ಅನೋವ್ಯುಲೇಶನ್) ಮತ್ತು ಸಂತಾನೋತ್ಪತ್ತಿ ಸಮಸ್ಯೆ ಪರಿಣಾಮ ಅನುಭವಿಸುತ್ತಾರೆ. ಅಂಡೋತ್ಪತ್ತಿ ಅಸ್ವಸ್ಥತೆಗಳು ಮಹಿಳೆಯ ದೇಹದ ಮೇಲೆ ಪರಿಣಾಮ ಬೀರುವ ಪರಿಸ್ಥಿತಿಗಳ ಗುಂಪಾಗಿವೆ. ಅಂತಃಸ್ರಾವಕ ವ್ಯವಸ್ಥೆಯು ಮಹಿಳೆಯ ಹಾರ್ಮೋನುಗಳನ್ನು ಮತ್ತು ಅಂಡೋತ್ಪತ್ತಿ ಮಾದರಿಗಳನ್ನು ಅಂದರೆ, ಆವರ್ತನದಲ್ಲಿ ಅಂಡಾಶಯವು ಮೊಟ್ಟೆಯನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ. ಅಂಡೋತ್ಪತ್ತಿ ಅಸ್ವಸ್ಥತೆಗಳು ಅಪರೂಪದ ಮತ್ತು ಅನಿಗದಿತ ಅಂಡೋತ್ಪತ್ತಿಗೆ ಕಾರಣವಾಗಬಹುದು. ಅನೋವ್ಯುಲೇಶನ್ ಅಥವಾ ಅಂಡೋತ್ಪತ್ತಿ ಇಲ್ಲದಿರುವುದು, ಇದು ಅನಿಗದಿತ ಮುಟ್ಟಿನ ಆವರ್ತನಗಳಿಗೆ ಪ್ರಮಾಣಿತ ವಿವರಣೆಯಾಗಿದೆ.

ಕೆಲವು ಜೀವನಶೈಲಿ ಅಂಶಗಳು, ಔಷಧಿಗಳು, ಪರಿಸ್ಥಿತಿಗಳು ಹಾರ್ಮೋನ್ ಮಟ್ಟದ ಮೇಲೆ ಪರಿಣಾಮ ಬೀರಬಹುದು ಮತ್ತು ಅಂಡೋತ್ಪತ್ತಿ ಅಸ್ವಸ್ಥತೆಯನ್ನು ಉಂಟುಮಾಡಬಹುದು. ಡಬ್ಲ್ಯುಎಚ್‍ಒ ಪ್ರಕಾರ, ದಂಪತಿಗಳಲ್ಲಿ ಶೇ. 25ರಷ್ಟು ಸಂತಾನೋತ್ಪತ್ತಿ ಸಮಸ್ಯೆ ಪ್ರಕರಣಗಳಿಗೆ ಅಸ್ತವ್ಯಸ್ತವಾಗಿರುವ ಅಂಡೋತ್ಪತ್ತಿ ಕಾರಣ.

ಅಂಡೋತ್ಪತ್ತಿ ಅಸ್ವಸ್ಥತೆಯ ಲಕ್ಷಣಗಳು ಮತ್ತು ರೋಗನಿರ್ಣಯ

ಅಸಹಜ ಮುಟ್ಟಿನ ಆವರ್ತನಗಳು ಸಾಮಾನ್ಯವಾಗಿ ಆಗಾಗ್ಗೆ ಅಥವಾ ಅಪರೂಪದ ಅವಧಿಗಳು, ಮತ್ತು/ಅಥವಾ ಅನಿಗದಿತ ಆವರ್ತನದ ಅವಧಿಗಳು ಸಾಮಾನ್ಯವಾಗಿ ಅಂಡೋತ್ಪತ್ತಿ ಅಸ್ವಸ್ಥತೆಯ ಸ್ಪಷ್ಟ ಸೂಚನೆಯಾಗಿದೆ. ಅಥವಾ ನಿಗದಿತ ಮುಟ್ಟಿನ ಚಕ್ರಗಳು ಇರಬಹುದಾದರೂ ಅಂಡೋತ್ಪತ್ತಿಯಾಗುವುದಿಲ್ಲ. ರೋಗಿಯ ಹಿಂದಿನ ಋತುಆವರ್ತನದ ವಿವರಗಳನ್ನು ಚರ್ಚಿಸುವ ಮೂಲಕ ವೈದ್ಯರು ಅಂಡೋತ್ಪತ್ತಿ ಅಸ್ವಸ್ಥತೆಗಳನ್ನು ನಿರ್ಣಯಿಸುತ್ತಾರೆ ಮತ್ತು ಅಂಡೋತ್ಪತ್ತಿ ಸಂಭವಿಸುತ್ತಿದೆಯೇ ಎಂಬುದನ್ನು ಸ್ಪಷ್ಟಪಡಿಸಲು ರಕ್ತ ಪರೀಕ್ಷೆಗಳು ಮತ್ತು ಅಂಡಾಶಯದ ಅಲ್ಟ್ರಾಸೌಂಡ್ ಅಧ್ಯಯನಗಳನ್ನು ಮಾಡಲಾಗುತ್ತದೆ.

ವಿವಿಧ ರೀತಿಯ ಅಂಡೋತ್ಪತ್ತಿ ಅಸ್ವಸ್ಥತೆಗಳು

ಅಂಡೋತ್ಪತ್ತಿ ಅಸ್ವಸ್ಥತೆಗಳನ್ನು ಉಂಟುಮಾಡುವ ಕೆಲವು ವೈದ್ಯಕೀಯ ಸಮಸ್ಯೆಗಳೆಂದರೆ:

ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ (ಪಿಸಿಒಎಸ್)

ಪಿಸಿಒಎಸ್‍ಗೆ ನಿಖರವಾದ ವಿವರಣೆಯು ಬಹುಶಃ ಮಹಿಳೆಯ ಆಂಡ್ರೊಜೆನ್ (ಟೆಸ್ಟೋಸ್ಟೆರಾನ್) ಮಟ್ಟಗಳು ಮತ್ತು ಇನ್ಸುಲಿನ್ ಗ್ರಹಿಕೆಯ ಮೇಲೆ ಪರಿಣಾಮ ಬೀರುವ ಹಾರ್ಮೋನ್ ಅಸಮತೋಲನವಾಗಿದೆ. ಕಡಿಮೆ ಮಟ್ಟದ ಇನ್ಸುಲಿನ್ ಗ್ರಹಿಕೆಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟದಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು ಮತ್ತು ಟೆಸ್ಟೋಸ್ಟೆರಾನ್ ಹೆಚ್ಚಳಕ್ಕೆ ಕಾರಣವಾಗಬಹುದು. ಟೆಸ್ಟೋಸ್ಟೆರಾನ್ ಮಹಿಳೆಯರಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುತ್ತದೆ. ಪಿಸಿಒಎಸ್ ಹೊಂದಿರುವ ಮಹಿಳೆಯರಲ್ಲಿ, ಉನ್ನತ ಟೆಸ್ಟೋಸ್ಟೆರಾನ್ ಮಟ್ಟಗಳು ಇರುತ್ತದೆ ಮತ್ತು ಅವರು ಅನಿಗದಿತ ಮುಟ್ಟು ಅಥವಾ ಮುಟ್ಟಾಗದಿರುವ ಅವಧಿಗಳನ್ನು ಅನುಭವಿಸಬಹುದು, ಅನೋವ್ಯುಲೇಶನ್ ಮತ್ತು ಅಂಡಾಶಯದ ಚೀಲಗಳನ್ನು ಹೊಂದಿರಬಹುದು - ಅಂಡಾಶಯದ ಕೋಶಕಗಳನ್ನು ಪ್ರೌಢ ಅಂಡಾಣುಗಳನ್ನು ಉತ್ಪಾದಿಸುವುದನ್ನು ತಡೆಯುವ ಬಹು ಚೀಲಗಳ ಉತ್ಪಾದನೆ. ಟೆಸ್ಟೋಸ್ಟೆರಾನ್ ಅಧಿಕವು ಅಂಡೋತ್ಪತ್ತಿಯನ್ನು ಅಡ್ಡಿಪಡಿಸುತ್ತದೆ ಮತ್ತು ಸಂತಾನೋತ್ಪತ್ತಿ ಸಮಸ್ಯೆಗೆ ಕಾರಣವಾಗಬಹುದು. ಪಿಸಿಒಎಸ್‍ನ ಇತರ ಲಕ್ಷಣಗಳೆಂದರೆ ಮುಖ, ಎದೆ, ಹೊಟ್ಟೆ ಮತ್ತು ತೊಡೆಯ ಮೇಲಿನ ಅತಿಯಾದ ಕೂದಲು, ತೂಕ ಹೆಚ್ಚಾಗುವುದು, ತೀವ್ರವಾದ ಮೊಡವೆ ಮತ್ತು ಎಣ್ಣೆಯುಕ್ತ ಚರ್ಮ, ಪುರುಷ ಮಾದರಿಯಲ್ಲಿ ತಲೆ ಬೋಳಾಗುವುದು, ಅನಿಗದಿತ ಮುಟ್ಟಿನ ಅವಧಿಗಳು, ಅಮೆನೋರಿಯಾ ಅಥವಾ ಯಾವುದೇ ಅವಧಿ, ಮತ್ತು ತೀವ್ರವಾದ ಸೊಂಟದ ನೋವು.

ಹೈಪೋಥಾಲಾಮಿಕ್ ಅಮೆನೋರಿಯಾ

ಎಫ್‍ಎಸ್‍ಎಚ್ ಮತ್ತು ಎಲ್‍ಹೆಚ್ ಗರ್ಭಧಾರಣೆಯನ್ನು ಪಡೆಯಲು ಅಗತ್ಯವಾದ ಪ್ರಮುಖ ಹಾರ್ಮೋನುಗಳು. ಋತು ಆವರ್ತನದ ಸಮಯದಲ್ಲಿ, ಕೋಶಕವು ಅಂಡಾಣುವಾಗಿ ಪಕ್ವವಾಗಬೇಕೆಂದು ಅಂಡಾಶಯಗಳಿಗೆ ಸಂಕೇತಿಸಲು ಪಿಟ್ಯುಟರಿಯು ಎಫ್‍ಎಸ್‍ಎಚ್‍ಅನ್ನು ಬಿಡುಗಡೆ ಮಾಡುತ್ತದೆ. ಹೈಪೋಥಾಲಾಮಿಕ್ ಅಮೆನೋರಿಯಾ ಹೊಂದಿರುವ ಮಹಿಳೆಯರು ಅನಿಗದಿತ ಅಂಡೋತ್ಪತ್ತಿ ಅಥವಾ ಅಂಡೋತ್ಪತ್ತಿ ಇಲ್ಲದಿರುವ ಸ್ಥಿತಿ ಹೊಂದಿರುತ್ತಾರೆ. ಏಕೆಂದರೆ ಅಂಡಾಶಯಗಳಿಗೆ ಹಾರ್ಮೋನ್ ಪ್ರಚೋದನೆಗಳನ್ನು ಕಳುಹಿಸಲು ಸಹಾಯ ಮಾಡುವ ಪೋಷಕಾಂಶಗಳು ಅಥವಾ ಕೊಬ್ಬಿನಂಶವನ್ನು ಅವರ ದೇಹವು ಹೊಂದಿರುವುದಿಲ್ಲ. ಅತಿಯಾದ ಒತ್ತಡ, ಹೆಚ್ಚಿನ ಅಥವಾ ಕಡಿಮೆ ತೂಕ, ಅತಿಯಾದ ತೂಕ ಹೆಚ್ಚಾಗುವುದು ಅಥವಾ ತೂಕ ನಷ್ಟ ಇವೆಲ್ಲವೂ ಕೊಡುಗೆಯ ಅಂಶಗಳಾಗಿರಬಹುದು. ವೃತ್ತಿಪರ ಕ್ರೀಡಾಪಟುಗಳು, ನೃತ್ಯಗಾರರು ಮತ್ತು ಅನೋರೆಕ್ಸಿಯಾ ನರ್ವೋಸಾ ಹೊಂದಿರುವ ಮಹಿಳೆಯರಲ್ಲಿ ಹೈಪೋಥಾಲಾಮಿಕ್ ಅಮೆನೋರಿಯಾ ಸಾಮಾನ್ಯವಾಗಿದೆ.

ಹೈಪೋಥೈರಾಯ್ಡಿಸಮ್/ಹೈಪರ್ ಥೈರಾಯ್ಡಿಸಮ್

ಹೆಚ್ಚಿನ ಅಥವಾ ಕಡಿಮೆ ಮಟ್ಟದ ಹಾರ್ಮೋನ್ ಅಂಡೋತ್ಪತ್ತಿ ಅಸ್ವಸ್ಥತೆಗಳನ್ನು ಉಂಟುಮಾಡಬಹುದು ಮತ್ತು ಸರಳ ಬಯಾಪ್ಸಿ ರೋಗನಿರ್ಣಯಕ್ಕೆ ಸಹಾಯ ಮಾಡುತ್ತದೆ.

ಹೈಪರ್‍ಪ್ರೊಲ್ಯಾಕ್ಟಿನೆಮಿಯಾ

ಪ್ರೊಲ್ಯಾಕ್ಟಿನ್ ಪಿಟ್ಯುಟರಿ ಗ್ರಂಥಿಯಿಂದ ಉತ್ಪತ್ತಿಯಾಗುವ ಹಾರ್ಮೋನ್ ಮತ್ತು ಪ್ರೊಲ್ಯಾಕ್ಟಿನ್ ಅಧಿಕವಾಗುವುದು ಹೈಪರ್‍ಪ್ರೊಲ್ಯಾಕ್ಟಿನೆಮಿಯಾಕ್ಕೆ ಕಾರಣವಾಗಬಹುದು. ಪ್ರೊಲ್ಯಾಕ್ಟಿನ್ ಹಾರ್ಮೋನ್‍ನ ಹೆಚ್ಚಿದ ಮಟ್ಟಗಳು ಅಂಡೋತ್ಪತ್ತಿ ಅಸ್ವಸ್ಥತೆಗಳಿಗೆ ಕಾರಣವಾಗಬಹುದು. ಹೆಚ್ಚಿನ ಪ್ರೊಲ್ಯಾಕ್ಟಿನ್ ಎಸ್ಟ್ರೊಜೆನ್ ಮಟ್ಟವನ್ನು ಕಡಿಮೆ ಮಾಡುತ್ತದೆ, ಇದು ಸಂತಾನೋತ್ಪತ್ತಿ ಸಮಸ್ಯೆಗೆ ಕಾರಣವಾಗುತ್ತದೆ. ಪ್ರೊಲ್ಯಾಕ್ಟಿನ್ ಹಾರ್ಮೋನ್ ಎದೆ ಹಾಲಿನ ಉತ್ಪಾದನೆಗೆ ಕಾರಣವಾಗಿದೆ. ಗರ್ಭಿಣಿಯಾಗದ ಮಹಿಳೆಯರಲ್ಲಿ ಈ ಹಾರ್ಮೋನ್‍ನ ಹೆಚ್ಚಿನ ಮಟ್ಟದಿಂದಾಗಿ ದೇಹವು ಮೋಸಕ್ಕೊಳಗಾಗುತ್ತದೆ ಮತ್ತು ಹೆರಿಗೆಯ ಸಂಭವವನ್ನು ಊಹಿಸಿಕೊಂಡು ಅಂಡೋತ್ಪತ್ತಿ ನಿಲ್ಲಿಸುತ್ತದೆ.

ಅಡ್ರೆನಲ್ ಕಾರ್ಯಲೋಪ ಅಪಸಾಮಾನ್ಯ ಕ್ರಿಯೆಗಳು

ಮೂತ್ರಜನಕಾಂಗದ ಮೇಲೆ ಇರುವ ಅಡ್ರೆನಲ್ ಗ್ರಂಥಿಗಳಿಂದ ಉತ್ಪತ್ತಿಯಾಗುವ ಆಂಡ್ರೋಜೆನ್‍ಗಳು ಮತ್ತು ಆಂಡ್ರೋಜೆನ್‍ಗಳ ಅಸಹಜ ಮಟ್ಟಗಳು ಅನಿಗದಿತ ಅಂಡೋತ್ಪತ್ತಿಗೆ ಕಾರಣವಾಗಬಹುದು. ಹೆಚ್ಚಿನ ಮಟ್ಟದ ಆಂಡ್ರೋಜೆನ್‍ಗಳು ಪ್ರತಿಯಾಗಿ ಸಂತಾನೋತ್ಪತ್ತಿ ಸಮಸ್ಯೆಗಳಿಗೆ ಕಾರಣವಾಗಬಹುದು.

ಅಂಡಾಶಯದ ಅಕಾಲಿಕ ವೈಫಲ್ಯ ಮತ್ತು ಋತುಬಂಧ(ಮೆನೋಪಾಸ್)

ಅಂಡಾಶಯದ ಅಕಾಲಿಕ ವೈಫಲ್ಯ (ಪಿಒಎಫ್) ಪ್ರಾಥಮಿಕ ಅಂಡಾಶಯದ ಕೊರತೆ (ಪಿಒಐ) ಎಂದೂ ಕರೆಯಲ್ಪಡುತ್ತದೆ. ಇದು 40 ವರ್ಷಕ್ಕಿಂತ ಮುಂಚೆಯೇ ಋತುಬಂಧ(ಮುಟ್ಟು ನಿಲ್ಲುವುದು) ಬರುವುದಾಗಿದೆ. ಅಂಡಾಶಯದ ಅಕಾಲಿಕ ವೈಫಲ್ಯ ಮತ್ತು ಋತುಬಂಧದಲ್ಲಿ, ಅಂಡಾಶಯಗಳು ಎಸ್ಟ್ರೊಜೆನ್ ಅನ್ನು ಉತ್ಪಾದಿಸುವುದನ್ನು ನಿಲ್ಲಿಸುತ್ತವೆ. ಅಕಾಲಿಕ ಅಂಡಾಶಯದ ವೈಫಲ್ಯವು ವಿಶಿಷ್ಟವಾಗಿ ಸಂಭವಿಸುತ್ತದೆ. ಏಕೆಂದರೆ ದೇಹವು ಕಾರ್ಯನಿರ್ವಹಿಸುವ ಅಂಡಾಶಯದ ಕಿರುಚೀಲಗಳು (ಮೊಟ್ಟೆಗಳಾಗಿ ಬೆಳೆಯುವ ಚೀಲಗಳು) “ಇರುವುದಿಲ್ಲ” ಅಥವಾ ಅಂಡಾಶಯದ ಕಿರುಚೀಲಗಳು ಸರಿಯಾಗಿ ಕೆಲಸ ಮಾಡುತ್ತಿರುವುದಿಲ್ಲ. ವಯಸ್ಸಾದಂತೆ ಮಹಿಳೆಯ ದೇಹವು ಕಡಿಮೆ ಎಸ್ಟ್ರೊಜೆನ್ ಉತ್ಪಾದಿಸುತ್ತದೆ. ಆದರೆ ಅಂಡಾಶಯದ ಅಕಾಲಿಕ ವೈಫಲ್ಯದ ಕಾರಣ ಇನ್ನೂ ತಿಳಿದಿಲ್ಲ. ಕೀಮೋಥೆರಪಿ ಅಥವಾ ವಿಕಿರಣವನ್ನು ಪಡೆದ ಅಥವಾ ಕೆಲವು ಆನುವಂಶಿಕ ಅಸ್ವಸ್ಥತೆಗಳನ್ನು ಹೊಂದಿರುವ ಆಟೋಇಮ್ಯೂನ್ ಅಸ್ವಸ್ಥತೆಗಳಿರುವ ಮಹಿಳೆಯರು ಅಂಡಾಶಯದ ಅಕಾಲಿಕ ವೈಫಲ್ಯವನ್ನು ಅನುಭವಿಸುವ ಸಾಧ್ಯತೆಯಿದೆ.

ಕೆಲವು ಮಹಿಳೆಯರು ವೈದ್ಯಕೀಯ ಸಮಸ್ಯೆಗಳಿಲ್ಲದಿದ್ದರೂ ಅಂಡೋತ್ಪತ್ತಿ ಸಮಸ್ಯೆಗಳನ್ನು ಅನುಭವಿಸಬಹುದು. ಅತಿಯಾದ ಒತ್ತಡ, ಹೆಚ್ಚಿನ ಅಥವಾ ಕಡಿಮೆ ದೇಹದ ತೂಕ, ಮತ್ತು ಅತಿಯಾದ ತೂಕ ಹೆಚ್ಚಾಗುವುದು ಅಥವಾ ತೂಕ ನಷ್ಟ ಇವೆಲ್ಲವೂ ಕೊಡುಗೆಯ ಅಂಶಗಳಾಗಿರಬಹುದು. ಅಧಿಕ ತೂಕ, ಮಹಿಳೆಯ ಚಟುವಟಿಕೆಯ ಮಟ್ಟ ಮತ್ತು ಔಷಧಿಗಳ ಬಳಕೆಯಂತಹ ಕೆಲವು ಅಂಶಗಳು ಹಾರ್ಮೋನ್ ಮಟ್ಟದ ಮೇಲೆ ಪರಿಣಾಮ ಬೀರಬಹುದು ಮತ್ತು ಸಂತಾನೋತ್ಪತ್ತಿ ಸಮಸ್ಯೆಗೆ ಕಾರಣವಾಗಬಹುದು. ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವ ಮಹಿಳೆಯರು ಗರ್ಭಧರಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಹಾರ್ಮೋನ್ ಅಸಮತೋಲನವನ್ನು ಅನುಭವಿಸುತ್ತಾರೆ.

ಔಷಧಿಯ ಅಡ್ಡ ಪರಿಣಾಮಗಳು

ಸ್ಟಿರಾಯ್ಡ್ ಅಲ್ಲದ ಉರಿಯೂತದ ಔಷಧಗಳು (ಎನ್‍ಎಸ್‍ಎಐಡಿಗಳು) ಐಬುಪ್ರೊಫೇನ್ ಅನ್ನು ದೀರ್ಘಕಾಲದವರೆಗೆ ತೆಗೆದುಕೊಂಡಾಗ ಅಂಡೋತ್ಪತ್ತಿ ಮೇಲೆ ಪರಿಣಾಮ ಬೀರಬಹುದು. ವೈದ್ಯಕೀಯ ಬಳಕೆಗಾಗಿ ವೈದ್ಯರು ಶಿಫಾರಸು ಮಾಡಿದ ಸ್ಟಿರಾಯ್ಡ್‌ಗಳು, ಕೆಲವು ಅಪಸ್ಮಾರ ಔಷಧಿಗಳಂತೆ ಅಂಡೋತ್ಪತ್ತಿಗೆ ಅಗತ್ಯವಾದ ಹಾರ್ಮೋನುಗಳೊಂದಿಗೆ ಹಸ್ತಕ್ಷೇಪ ಮಾಡುತ್ತವೆ.

ಅನೇಕ ಗರ್ಭನಿರೋಧಕ ವಿಧಾನಗಳು ಅಂಡಾಶಯಗಳ ಅಂಡಾಣುಗಳನ್ನು ರೂಪಿಸುವ ಮತ್ತು ಬಿಡುಗಡೆ ಮಾಡುವ ಸಾಮರ್ಥ್ಯವನ್ನು ಅಡ್ಡಿಪಡಿಸುವ ಹಾರ್ಮೋನುಗಳನ್ನು ಬಳಸುತ್ತವೆ.

ಜೀವನಶೈಲಿಯ ಅಂಶಗಳು

ತಿನ್ನುವ ಸಮಸ್ಯೆಗಳು, ತೀವ್ರ ಒತ್ತಡ, ಅತಿಯಾದ ತೂಕ ನಷ್ಟ, ತೂಕ ಹೆಚ್ಚಾಗುವುದು ಮತ್ತು ಅತಿಯಾದ ವ್ಯಾಯಾಮವು ಅಂಡೋತ್ಪತ್ತಿ ಮೇಲೆ ಪರಿಣಾಮ ಬೀರಬಹುದು. ಆರೋಗ್ಯಕರ ಆಹಾರ ಸೇವನೆ ಮತ್ತು ನಿಗದಿತ ವ್ಯಾಯಾಮ ಮುಖ್ಯವಾಗಿರುತ್ತದೆ. ಅತಿ ಹೆಚ್ಚಿನ ವ್ಯಾಯಾಮ ಅಥವಾ ಕಡಿಮೆ ವ್ಯಾಯಾಮ ಅಂಡೋತ್ಪತ್ತಿ ಮೇಲೆ ಪರಿಣಾಮ ಬೀರುತ್ತದೆ.

ಅಂಡೋತ್ಪತ್ತಿ ಅಸ್ವಸ್ಥತೆಗಳ ರೋಗನಿರ್ಣಯ ಮತ್ತು ಚಿಕಿತ್ಸೆ

ಅಂಡೋತ್ಪತ್ತಿ ಅಸ್ವಸ್ಥತೆಗಳನ್ನು ವಿವರವಾದ ಪ್ರಕರಣದ ಇತಿಹಾಸ ಮತ್ತು ಮುಟ್ಟಿನ ಇತಿಹಾಸ ಮತ್ತು ದೈಹಿಕ ಪರೀಕ್ಷೆಯೊಂದಿಗೆ ರೋಗನಿರ್ಣಯ ಕೈಗೊಳ್ಳಲಾಗುತ್ತದೆ. ಆದರೆ ಇತರೆ ಅಸ್ವಸ್ಥತೆಗಳಿಗೆ ರೋಗನಿರ್ಣಯ ಮಾಡಲು ಪ್ರಯೋಗಾಲಯದ ರಕ್ತ ಪರೀಕ್ಷೆಯ ಅಗತ್ಯವಿರುತ್ತದೆ. ರೋಗಲಕ್ಷಣಗಳ ಆಧಾರದ ಮೇಲೆ, ವೈದ್ಯರು ವಿವಿಧ ಹಾರ್ಮೋನ್ ಮಟ್ಟವನ್ನು ಪರೀಕ್ಷಿಸುತ್ತಾರೆ. ಒಂದು ಮಹಿಳೆ ಪಿಸಿಒಎಸ್ ರೋಗಲಕ್ಷಣಗಳನ್ನು ಹೊಂದಿದ್ದರೆ, ಉದಾಹರಣೆಗೆ, ವೈದ್ಯರು ಆಕೆಯ ಟೆಸ್ಟೋಸ್ಟೆರಾನ್ ಮತ್ತು ಇನ್ಸುಲಿನ್ ಮಟ್ಟವನ್ನು ಪರೀಕ್ಷಿಸುತ್ತಾರೆ.

ರೋಗನಿರ್ಣಯ ಮಾಡಿದ ನಂತರ, ಜೀವನಶೈಲಿಗೆ ಸಂಬಂಧಿಸಿದ ಒಂದು ಅಂಶದಿಂದ ಅಂಡೋತ್ಪತ್ತಿ ಪ್ರಭಾವಿತವಾಗಿದ್ದರೆ ಜೀವನಶೈಲಿಯ ಬದಲಾವಣೆಗಳನ್ನು ಮಾಡುವುದು ಮುಖ್ಯವಾಗಿರುತ್ತದೆ. ಹೆಚ್ಚಿನ ಅಂಡೋತ್ಪತ್ತಿ ಅಸ್ವಸ್ಥತೆಗಳಿಗೆ ಹೆಚ್ಚಾಗಿ ಜೀವನಶೈಲಿಯ ಬದಲಾವಣೆಗಳು ಅಥವಾ ಔಷಧಿಗಳೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ. ಆರೋಗ್ಯಕರ ರೀತಿಯ ಆಹಾರ ಸೇವನೆ ಮತ್ತು ನಿಯಮಿತ ವ್ಯಾಯಾಮ ಮುಖ್ಯವಾಗಿರುತ್ತದೆ ಆದರೆ ಹೆಚ್ಚು ಅಥವಾ ತುಂಬಾ ಕಡಿಮೆ ವ್ಯಾಯಾಮವು ಅಂಡೋತ್ಪತ್ತಿ ಮೇಲೆ ಪರಿಣಾಮ ಬೀರಬಹುದು.

ವೈದ್ಯರು ಸೂಚಿಸುವ(ಪ್ರಿಸ್ಕ್ರಿಪ್ಷನ್) ಕೆಲವು ಔಷಧಿಗಳು ಅಂಡೋತ್ಪತ್ತಿಯನ್ನು ಬದಲಾಯಿಸಬಹುದು

ಅವುಗಳನ್ನು ತೆಗೆದುಹಾಕುವ ಮೊದಲು ಶಿಫಾರಸು ಮಾಡುವ ವೈದ್ಯರೊಂದಿಗೆ ಔಷಧಿಗಳನ್ನು ತೆಗೆದುಹಾಕುವ ಬಗ್ಗೆ ಮಾತನಾಡುವುದು ಮುಖ್ಯವಾಗಿದೆ. ವೈದ್ಯರು ಆಹಾರ ಮತ್ತು ಪೋಷಣೆಯಲ್ಲಿ ಬದಲಾವಣೆ, ಹೊಂದಾಣಿಕೆಗಳನ್ನು ಸಲಹೆ ಮಾಡಬಹುದು. ಫರ್ಟಿಲಿಟಿ ಇಂಡಕ್ಷನ್ ಮಾಡಬಹುದಾಗಿದ್ದು, ಅದು ಇಲ್ಲದ ಹಾರ್ಮೋನುಗಳಿಗೆ ಬದಲಿಯಾಗಿರುವುದಲ್ಲದೇ ಒತ್ತಡವನ್ನು ಕಡಿಮೆ ಮಾಡುತ್ತದೆ.

ಅನಿಗದಿತ ಅಥವಾ ನಿಗದಿತ ಮುಟ್ಟಿನ ಆವರ್ತನದೊಂದಿಗೆ ಯಾವುದೇ ಮಹಿಳೆಯು ಅಸುರಕ್ಷಿತ ಲೈಂಗಿಕತೆಯಲ್ಲಿ ತೊಡಗಿದ 12 ತಿಂಗಳೊಳಗೆ ಗರ್ಭಿಣಿಯಾಗಲು ಸಾಧ್ಯವಾಗದಿದ್ದರೆ (ಮಹಿಳೆ 35 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ಆರು ತಿಂಗಳು) ಫರ್ಟಿಲಿಟಿ ತಜ್ಞರನ್ನು ಭೇಟಿ ಮಾಡಬೇಕು.

ನಾವು ಗರ್ಭಗುಡಿಯಲ್ಲಿ ಅಂಡೋತ್ಪತ್ತಿ ಅಸ್ವಸ್ಥತೆಗಳಿಗೆ ಮನಸ್ಸು ಮತ್ತು ದೇಹ ಎರಡನ್ನೂ ಗಮನಿಸುವ ಸಂಪೂರ್ಣ ವಿಧಾನವನ್ನು ಬಳಸಿಕೊಂಡು ಚಿಕಿತ್ಸೆ ನೀಡುತ್ತೇವೆ. ತೂಕ, ಜೀವನಶೈಲಿ, ಒತ್ತಡ, ಪೋಷಣೆ, ವ್ಯಾಯಾಮ, ಹೈಡ್ರೇಷನ್ ಮತ್ತು ಇತರ ಅಂಶಗಳನ್ನು ನಿರ್ವಹಿಸುವ ಕಾರ್ಯಕ್ರಮಗಳೊಂದಿಗೆ ಋತು ಆವರ್ತನವನ್ನು ನಿಯಂತ್ರಿಸಲು ಅಥವಾ ಐವಿಎಫ್ ಚಿಕಿತ್ಸೆಯೊಂದಿಗೆ ಔಷಧಿಗಳನ್ನು ಸಲಹೆ ಮಾಡಬಹುದು. ಚಿಕಿತ್ಸೆಯು ಅಸ್ವಸ್ಥತೆಯ ನಿಖರವಾದ ಸ್ವರೂಪವನ್ನು ಅವಲಂಬಿಸಿರುತ್ತದೆ. ವೈದ್ಯರು ಆಯಾ ವ್ಯಕ್ತಿಗೆ ಸೂಕ್ತವಾದ ಚಿಕಿತ್ಸಾ ಯೋಜನೆಯನ್ನು ಸೂಚಿಸುತ್ತಾರೆ.

ಗರ್ಭಗುಡಿಯು ಅತ್ಯಾಧುನಿಕ ಮೂಲಸೌಕರ್ಯಗಳನ್ನು ಹೊಂದಿರುವ ಇತ್ತೀಚಿನ ಪೀಳಿಗೆಯ ಸಂತಾನೋತ್ಪತ್ತಿ ಚಿಕಿತ್ಸಾ ಕೇಂದ್ರಗಳ ಸರಣಿಯಾಗಿದ್ದು, ಸಂತಾನೋತ್ಪತ್ತಿ ಸಮಸ್ಯೆಯ ನಿರಂತರ ಹೆಚ್ಚುತ್ತಿರುವ ಸವಾಲುಗಳನ್ನು ಎದುರಿಸಲು ಸಂತಾನೋತ್ಪತ್ತಿ ಚಿಕಿತ್ಸೆಯಲ್ಲಿ ತರಬೇತಿ ಪಡೆದ ವೈದ್ಯರು, ಸಿಬ್ಬಂದಿ ಮತ್ತು ಭ್ರೂಣಶಾಸ್ತ್ರಜ್ಞರನ್ನು ಒಳಗೊಂಡಿದೆ. ಇಲ್ಲಿಯವರೆಗೆ, ನಾವು ಸಾವಿರಾರು ದಂಪತಿಗಳಿಗೆ ಗರ್ಭಧರಿಸಲು ಮತ್ತು ಪೋಷಕರಾಗುವ ಆನಂದವನ್ನು ಅನುಭವಿಸಲು ಸಹಾಯ ಮಾಡಿದ್ದೇವೆ.

ಈ ಪುಟವನ್ನು ಹಂಚಿಕೊಳ್ಳಿ