ಸೊಂಟದಲ್ಲಿನ ಉರಿಯೂತದ ಕಾಯಿಲೆ
ಸಂತಾನೋತ್ಪತ್ತಿ ಸಮಸ್ಯೆಯ ಸಾಮಾನ್ಯ ಕಾರಣಗಳಲ್ಲಿ ಪಿಐಡಿ ಒಂದಾಗಿದೆ. ಇದಕ್ಕೆ ಯಶಸ್ವಿಯಾಗಿ ಚಿಕಿತ್ಸೆ ನೀಡಬಹುದು.
ನಿಮಗೆ ತಿಳಿದಿರುವಂತೆ, ಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆಯು ಗರ್ಭಾಶಯ, ಅಂಡಾಶಯಗಳು, ಫಾಲೋಪಿಯನ್ ಟ್ಯೂಬ್‍ಗಳು ಮತ್ತು ಯೋನಿ ಸೇರಿದಂತೆ ವಿವಿಧ ಅಂಗಗಳನ್ನು ಒಳಗೊಂಡಿರುತ್ತದೆ. ನೀವು ಕುಟುಂಬವನ್ನು ಹೊಂದಲು ಮತ್ತು ತಾಯಿಯಾಗಲು ಬಯಸಿದಾಗ ಪ್ರತಿಯೊಂದೂ ಮಹತ್ವದ ಪಾತ್ರ ವಹಿಸುತ್ತವೆ. ಈ ಅಂಗಗಳು ಸೋಂಕಿಗೆ ಒಳಗಾಗುವ ಮತ್ತು ಫರ್ಟಿಲಿಟಿ ಮಟ್ಟದ ಮೇಲೆ ಪರಿಣಾಮ ಬೀರುವ ಹಲವು ಸಂದರ್ಭಗಳಿವೆ.
ಪಿಐಡಿ ಎಂದರೇನು?
ಪೆಲ್ವಿಕ್ ಇನ್‍ಫ್ಲಮೇಟರಿ ಡಿಸೀಸ್(ಪಿಐಡಿ) ಮಹಿಳೆಯರ ಸಂತಾನೋತ್ಪತ್ತಿ ಅಂಗಗಳ ಸೋಂಕಿನ ಸ್ಥಿತಿಯಾಗಿದೆ. ಇದಕ್ಕೆ ಸೂಕ್ತ ಚಿಕಿತ್ಸೆ ನೀಡದಿದ್ದರೆ ಸಂತಾನೋತ್ಪತ್ತಿ ಸಮಸ್ಯೆಗೆ ಕಾರಣವಾಗಬಹುದು.
ಸೋಂಕು ಸಾಮಾನ್ಯವಾಗಿ ಯೋನಿಯಲ್ಲಿ ಪ್ರಾರಂಭವಾಗಿ, ಸಂತಾನೋತ್ಪತ್ತಿ ವ್ಯವಸ್ಥೆಯ ಇತರೆ ಅಂಗಗಳಿಗೆ ಹರಡಬಹುದು. ಸೋಂಕಿಗೆ ಕಾರಣ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರವಾಗಿರಬಹುದು. ಪಿಐಡಿ ಫಾಲೋಪಿಯನ್ ಟ್ಯೂಬ್‍ಗಳಲ್ಲಿ ಗಾಯದ ಗುರುತುಗಳನ್ನು ಉಂಟುಮಾಡುತ್ತದೆ. ಇದು ಟ್ಯೂಬ್‍ಗಳಲ್ಲಿ ಮತ್ತಷ್ಟು ಅಡ್ಡಿ ಉಂಟು ಮಾಡಬಹುದು. ಇದು ಫಲೀಕರಣ(ಫರ್ಟಿಲೈಸೇಷನ್) ಪ್ರಕ್ರಿಯೆಯನ್ನು ತಡೆಯುತ್ತದೆ. ಕೊಳವೆಗಳಲ್ಲಿನ ಗಾಯದ ಗುರುತುಗಳು ಗರ್ಭಾಶಯಕ್ಕೆ ಫಲವತ್ತಾದ ಅಂಡಾಣುವಿನ ಚಲನೆಯನ್ನು ಅಡ್ಡಿಪಡಿಸಬಹುದು. ತರುವಾಯ ಅದು ಫಾಲೋಪಿಯನ್ ಟ್ಯೂಬ್‍ಗಳಲ್ಲಿ ಬೆಳೆಯಲು ಮತ್ತು ಅಭಿವೃದ್ಧಿಪಡಿಸಲು ಕಾರಣವಾಗುತ್ತದೆ. ಕಿಬ್ಬೊಟ್ಟೆ ಅಥವಾ ಸೊಂಟದ ಪ್ರದೇಶದಲ್ಲಿ ಅತಿಯಾದ ರಕ್ತಸ್ರಾವ ಉಂಟುಮಾಡುವ ಟ್ಯೂಬ್‍ನ ಛಿದ್ರತೆಯ ಅಪಾಯವಿದೆ.
ಪಿಐಡಿಯ ಕಾರಣಗಳು
ಸಾಮಾನ್ಯವಾಗಿ, ಕ್ಲಮೈಡಿಯ ಮತ್ತು ಗೊನೊರಿಯಾದಂತಹ ಲೈಂಗಿಕವಾಗಿ ಹರಡುವ ರೋಗಗಳಿಂದ ಪಿಐಡಿ ಉಂಟಾಗುತ್ತದೆ.
• ಕ್ಲಮೈಡಿಯ: ಇದು ಕ್ಲಮೈಡಿಯ ಟ್ರಾಕೊಮಾಟಿಸ್ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ ಮತ್ತು ಸೂಕ್ತವಾದ ಆ್ಯಂಟಿಬಯಾಟಿಕ್‌ಗಳ ಮೂಲಕ ಚಿಕಿತ್ಸೆ ನೀಡಬಹುದು. ಚಿಕಿತ್ಸೆ ನೀಡದಿದ್ದರೆ, ಇದು ಇತರ ಅಂಗಗಳಿಗೆ ಹರಡಬಹುದು.
• ಗೊನೊರಿಯಾ: ಇದು ಬ್ಯಾಕ್ಟೀರಿಯಾದ ಸೋಂಕಿನ ಒಂದು ವಿಧವಾಗಿದೆ, ಇದು ಗುದನಾಳ, ಮೂತ್ರನಾಳ ಅಥವಾ ಗಂಟಲಿನ ಮೇಲೆ ಸಾಕಷ್ಟು ಬಾರಿ ಪರಿಣಾಮ ಬೀರುತ್ತದೆ. ಇದು ಕೆಲವೊಮ್ಮೆ ಮಹಿಳೆಯರಲ್ಲಿ ಗರ್ಭಕಂಠದ(ಸರ್ವಿಕ್ಸ್) ಮೇಲೆ ಪರಿಣಾಮ ಬೀರಬಹುದು.
ಪಿಐಡಿಯ ಲಕ್ಷಣಗಳು
ಹೆಚ್ಚಿನ ಸಮಯ ಪಿಐಡಿ ಲಕ್ಷಣರಹಿತವಾಗಿರುತ್ತದೆ. ಆದರೆ ಅದು ಅಸ್ತಿತ್ವದಲ್ಲಿದ್ದರೆ, ರೋಗಲಕ್ಷಣಗಳು ತುಂಬಾ ಸೌಮ್ಯವಾಗಿರುತ್ತವೆ. ಪಿಐಡಿಯ ಕೆಲವು ಸಾಮಾನ್ಯ ರೋಗಲಕ್ಷಣಗಳು ಹೀಗಿವೆ.
• ಹೊಟ್ಟೆಯ ಕೆಳಭಾಗದಲ್ಲಿ ನೋವು.
• ಅಸಾಮಾನ್ಯ ಯೋನಿ ಸ್ರಾವ.
• ಮೂತ್ರ ವಿಸರ್ಜನೆಯೊಂದಿಗೆ ನೋವು.
• ಅಸಾಮಾನ್ಯ ಮುಟ್ಟಿನ ರಕ್ತಸ್ರಾವ.
• ಡಿಸ್ಮೆನೋರಿಯಾ
ಸಮಸ್ಯೆಯನ್ನು ಗುರುತಿಸಲು ಒಂದೇ ಪರೀಕ್ಷೆ ಇಲ್ಲ. ನೀವು ಪಿಐಡಿ ಹೊಂದಿದ್ದೀರಾ ಎಂದು ತಿಳಿಯಲು, ನಿಮ್ಮ ವೈದ್ಯರು ನಿಮ್ಮ ವೈದ್ಯಕೀಯ ಇತಿಹಾಸ, ಜನನ ನಿಯಂತ್ರಣ ತಂತ್ರಗಳು, ನಿಮ್ಮ ಲೈಂಗಿಕ ಅಭ್ಯಾಸಗಳು ಅಥವಾ ನೀವು ಅನುಭವಿಸುತ್ತಿರುವ ಯಾವುದೇ ಚಿಹ್ನೆಗಳು ಅಥವಾ ರೋಗಲಕ್ಷಣಗಳ ಬಗ್ಗೆ ನಿಮ್ಮನ್ನು ಪ್ರಶ್ನಿಸುವ ಮೂಲಕ ಪರೀಕ್ಷಿಸಲು ಪ್ರಾರಂಭಿಸಬಹುದು.
ನೀವು ಪಿಐಡಿ ಹೊಂದಿರಬಹುದು. ಆದರೆ ಖಚಿತವಾಗಿಲ್ಲದಿರುವ ಸಣ್ಣ ಸಂದೇಹವಿದ್ದರೂ, ನಿಮ್ಮ ವೈದ್ಯರು ನಿಮ್ಮನ್ನು ಈ ಕೆಳಗಿನ ಪರೀಕ್ಷೆಗಳಿಗೆ ಒಳಪಡಲು ಸೂಚಿಸಬಹುದು:
• ಪೆಲ್ವಿಕ್(ಸೊಂಟದ ಭಾಗ) ಪರೀಕ್ಷೆ - ಯಾವುದೇ ಊತ ಅಥವಾ ಮೃದುತ್ವಕ್ಕಾಗಿ ಸೊಂಟದ ಪ್ರದೇಶವನ್ನು ಪರೀಕ್ಷಿಸಲು. ಕ್ಲಮೈಡಿಯ ಅಥವಾ ಗೊನೊರಿಯಾವನ್ನು ಪರೀಕ್ಷಿಸಲು ಯೋನಿಯ ಅಥವಾ ಗರ್ಭಕಂಠದ ದ್ರವಗಳ ಮಾದರಿಗಳನ್ನು ಸಹ ತೆಗೆದುಕೊಳ್ಳಬಹುದು.
• ರಕ್ತ/ಮೂತ್ರ ಪರೀಕ್ಷೆ – ಎಚ್‍ಐವಿ ಅಥವಾ ಇತರೆ ಲೈಂಗಿಕವಾಗಿ ಹರಡುವ ರೋಗಗಳನ್ನು ಪರೀಕ್ಷಿಸಲು. ಬಿಳಿ ರಕ್ತ ಕಣಗಳ ಎಣಿಕೆ ಅಥವಾ ಉರಿಯೂತ ಅಥವಾ ಸೋಂಕಿನ ಯಾವುದೇ ಇತರೆ ಗುರುತುಗಳನ್ನು ಪರೀಕ್ಷಿಸಲು ಸಹ ಇದನ್ನು ಬಳಸಲಾಗುತ್ತದೆ.
• ಅಲ್ಟ್ರಾಸೌಂಡ್ - ಇಮೇಜಿಂಗ್ ಅಗತ್ಯವಿರುವ, ಒಂದು ಆಧಾರವಾಗಿರುವ ಕಾರಣವನ್ನು ಉತ್ತಮವಾಗಿ ವಿವರಿಸಲು ಈ ಪರೀಕ್ಷೆ ನಡೆಸಲಾಗುತ್ತದೆ. ಮೇಲಿನ ಪರೀಕ್ಷೆಗಳು ಏನನ್ನೂ ಬಹಿರಂಗಪಡಿಸಲು ವಿಫಲವಾದರೆ, ಆದರೆ ಇನ್ನೂ ಸೋಂಕಿನ ಅನುಮಾನವಿದ್ದರೆ, ಹೆಚ್ಚುವರಿ ಪರೀಕ್ಷೆಗೆ ಒಳಗಾಗಲು ನಿಮಗೆ ಸೂಚಿಸಬಹುದು.
• ಎಂಡೊಮೆಟ್ರಿಯಲ್ ಬಯಾಪ್ಸಿ - ಸೋಂಕು ಅಥವಾ ಉರಿಯೂತದ ಯಾವುದೇ ಚಿಹ್ನೆಗಳನ್ನು ಪರೀಕ್ಷಿಸಲು ಗರ್ಭಾಶಯದೊಳಗೆ ತೆಳುವಾದ ಟ್ಯೂಬ್ ಅನ್ನು ಸೇರಿಸುವ ಮೂಲಕ ಎಂಡೊಮೆಟ್ರಿಯಲ್ ಅಂಗಾಂಶದ ಮಾದರಿಯನ್ನು ಪಡೆಯಲಾಗುತ್ತದೆ.
ಯಾವುದೇ ವಯಸ್ಸಿನ ಮಹಿಳೆಯರು ಪಿಐಡಿ ಹೊಂದಬಹುದು; ಆದರೂ, ಇದು 25 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಸೊಂಟದಲ್ಲಿನ ಉರಿಯೂತದ ಕಾಯಿಲೆಯ ಹೆಚ್ಚಿನ ಅಪಾಯವನ್ನು ಯಾರು ಹೊಂದಿರುತ್ತಾರೆ?
ಕೆಳಗಿನ ಕಾರಣಗಳಿಗಾಗಿ ನೀವು ಪಿಐಡಿಗೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಹೊಂದಿರಬಹುದು:
• ಈ ಹಿಂದೆ ಪಿಐಡಿಗೆ ಗುರಿಯಾದವರು.
• ಬಹು ಲೈಂಗಿಕ ಪಾಲುದಾರರು ಇರುವುದು.
• ಬಹು ಲೈಂಗಿಕ ಪಾಲುದಾರರನ್ನು ಹೊಂದಿರುವ ಲೈಂಗಿಕ ಸಂಗಾತಿ.
• ಡೌಚಿಂಗ್.
ಆ್ಯಂಟಿಬಯಾಟಿಕ್ಸ್(ಪ್ರತಿಜೀವಕಗಳು) - ಪಿಇಡಿಗೆ ಕಾರಣವಾಗುವ ಆಧಾರವಾಗಿರುವ ರೋಗಶಾಸ್ತ್ರವನ್ನು ಕಂಡುಹಿಡಿಯಲು ಮಾಡಿದ ಪರೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ, ಕೆಲವು ಆ್ಯಂಟಿಬಯಾಟಿಕ್‌ಗಳು ಅಥವಾ ಆ್ಯಂಟಿಬಯಾಟಿಕ್‌ಗಳ ಸಂಯೋಜನೆಯನ್ನು ನಿರ್ದಿಷ್ಟ ಅವಧಿಗೆ ಶಿಫಾರಸು ಮಾಡಬಹುದು. ಉತ್ತಮ ಫಲಿತಾಂಶಗಳಿಗಾಗಿ ಇವುಗಳ ಸೇವನೆಯನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕಾಗುತ್ತದೆ.
• ಎಸ್‍ಟಿಡಿಗಳಿಗೆ ನಿಗದಿತ ಸಪಾಸಣೆ - ಲೈಂಗಿಕವಾಗಿ ಸಕ್ರಿಯವಾಗಿರುವ ಮತ್ತು 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಿಗೆ, ಸುರಕ್ಷತಾ ಕ್ರಮವಾಗಿ, ಕನಿಷ್ಠ ವರ್ಷಕ್ಕೊಮ್ಮೆ ಎಸ್‍ಟಿಡಿ(ಲೈಂಗಿಕ ಸಂಪರ್ಕದಿಂದ ಹರಡುವ ರೋಗ)ಗಾಗಿ ಪರೀಕ್ಷೆಗೆ ಒಳಗಾಗುವುದು ಯಾವಾಗಲೂ ಉತ್ತಮ.
• ಇಂದ್ರಿಯ ನಿಗ್ರಹ - ಲೈಂಗಿಕ ಪಾಲುದಾರರಲ್ಲಿ ಯಾರಾದರೂ ಎಸ್‍ಟಿಡಿ ಇದೆ ಎಂದು ರೋಗನಿರ್ಣಯ ಮಾಡಿದ್ದರೆ, ಚಿಕಿತ್ಸೆಯ ಕೋರ್ಸ್ ಪೂರ್ಣಗೊಳ್ಳುವವರೆಗೆ ಮತ್ತು ರೋಗಲಕ್ಷಣಗಳು ಸಂಪೂರ್ಣವಾಗಿ ಕಡಿಮೆಯಾಗುವವರೆಗೆ ಯಾವುದೇ ಲೈಂಗಿಕ ಚಟುವಟಿಕೆಯಿಂದ ದೂರವಿರುವುದು ಬುದ್ಧಿವಂತ ಕ್ರಮವಾಗಿರುತ್ತದೆ.
ನೀವು ಮೇಲಿನ ಯಾವುದೇ ರೋಗಲಕ್ಷಣಗಳಿಂದ ಬಳಲುತ್ತಿದ್ದರೆ ಮತ್ತು ಗರ್ಭಿಣಿಯಾಗಲು ಸಿದ್ಧರಿದ್ದರೆ, ನೀವು ಸೊಂಟದ ಉರಿಯೂತದ ಕಾಯಿಲೆಯನ್ನು ಹೊಂದಿರಬಹುದು ಎಂದು ಇದರ ಅರ್ಥವಲ್ಲ. ಎಲ್ಲಾ ಸಾಧ್ಯತೆಗಳ ಪ್ರಕಾರ, ಇತರ ಪರಿಸ್ಥಿತಿಗಳೂ ಇರಬಹುದು. ಪರಿಣಿತ ಆರೋಗ್ಯ ವೃತ್ತಿಪರರ ಆರೈಕೆಯಲ್ಲಿ ನಿರ್ಣಾಯಕ ರೋಗನಿರ್ಣಯದ ಮೂಲಕ ಮಾತ್ರ ಇದನ್ನು ಕಂಡುಹಿಡಿಯಬಹುದು. ನಿಮ್ಮ ಪ್ರಯಾಣದಲ್ಲಿ ಪಿಐಡಿ ಒಂದು ಅಡಚಣೆಯಾಗಿದೆಯೇ ಎಂದು ತಿಳಿಯಲು ಫರ್ಟಿಲಿಟಿ ತಜ್ಞರೊಂದಿಗೆ ಮುಕ್ತವಾಗಿ ಚರ್ಚಿಸಿ.