ಶಸ್ತ್ರಚಿಕಿತ್ಸೆಯ ತೊಡಕುಗಳು

ಶಸ್ತ್ರಚಿಕಿತ್ಸೆಯ ತೊಡಕುಗಳು

ಇತ್ತೀಚಿನ ದಿನಗಳಲ್ಲಿ ನಾವು ಅನುಸರಿಸುವ ಜೀವನಶೈಲಿ, ಪರಿಸರ, ಒಟ್ಟಾರೆ ಸಾಮಾನ್ಯ ಆರೋಗ್ಯ, ಇತ್ಯಾದಿ ಸೇರಿದಂತೆ ಹಲವಾರು ಅಂಶಗಳು ಅತಿಯಾದ ಸಂತಾನೋತ್ಪತ್ತಿ ಸಮಸ್ಯೆಗೆ ಕಾರಣವಾಗಿದೆ. ಪ್ರಜನನ ಔಷಧದಲ್ಲಿ ಅಭಿವೃದ್ಧಿಯು ಸಂತಾನೋತ್ಪತ್ತಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ವಿವಿಧ ಚಿಕಿತ್ಸಾ ಕ್ರಮಗಳನ್ನು ಪರಿಚಯಿಸಿದೆ. ಇವುಗಳಲ್ಲಿ ಕೆಲವು ಶಸ್ತ್ರಚಿಕಿತ್ಸೆಯೇತರವಾದರೆ ಇನ್ನೂಕೆಲವು ಶಸ್ತ್ರಚಿಕಿತ್ಸೆ ಒಳಗೊಂಡಿರುತ್ತವೆ. ಆಧಾರವಾಗಿರುವ ಕಾರಣವನ್ನು ಅವಲಂಬಿಸಿ, ಚಿಕಿತ್ಸೆಯು ಶಸ್ತ್ರಚಿಕಿತ್ಸೆಯೇತರ ಅಥವಾ ಶಸ್ತ್ರಚಿಕಿತ್ಸೆ ಒಳಗೊಂಡಿರುತ್ತದೆ ಎಂದು ತಜ್ಞರು ನಿರ್ಧರಿಸುತ್ತಾರೆ. ಸಂತಾನೋತ್ಪತ್ತಿ ಸಮಸ್ಯೆಯನ್ನು ಪತ್ತೆಹಚ್ಚಲು ಮತ್ತು ಚಿಕಿತ್ಸೆ ನೀಡಲು ಕೆಲವು ಶಸ್ತ್ರಚಿಕಿತ್ಸಾ ವಿಧಾನಗಳು:

• ಲ್ಯಾಪರೊಸ್ಕೋಪಿ

• ಲ್ಯಾಪರೊಟಮಿ

• ವೆರಿಕೊಸೆಲೆಕ್ಟಮಿ

ಲ್ಯಾಪರೊಸ್ಕೋಪಿ ಮತ್ತು ಲ್ಯಾಪರೊಟಮಿ

ಹೊಟ್ಟೆಯನ್ನು ಮೊದಲು ಅನಿಲದಿಂದ ಉಬ್ಬಿಸಲಾಗುತ್ತದೆ ಮತ್ತು ಹೊಟ್ಟೆ ಉಬ್ಬಿಕೊಂಡ ನಂತರ, ಹೊಟ್ಟೆಯ ಮೇಲೆ ಸಣ್ಣ ಛೇದನದ ಮೂಲಕ ಲ್ಯಾಪರೊಸ್ಕೋಪ್ ಅನ್ನು ಸೇರಿಸಲಾಗುತ್ತದೆ. ಕೆಳಗಿನ ಪರಿಸ್ಥಿತಿಗಳಿಂದ ಸಂತಾನೋತ್ಪತ್ತಿ ತೊಂದರೆಯ ಕಾರಣಗಳನ್ನು ಗುರುತಿಸಲು ಲ್ಯಾಪರೊಸ್ಕೋಪಿಕ್ ವಿಧಾನವನ್ನು ನಡೆಸಲಾಗುತ್ತದೆ:

• ಗಾಯದ ಅಂಗಾಂಶ.(ಸ್ಕಾರ್ ಟಿಷ್ಯೂ)

• ಎಂಡೊಮೆಟ್ರಿಯೊಸಿಸ್.

• ಫಾಲೋಪಿಯನ್ ಟ್ಯೂಬ್‍ಗಳ ಅಸಹಜತೆ.

• ಫೈಬ್ರಾಯ್ಡ್ ಗೆಡ್ಡೆಗಳು.

• ಗರ್ಭಾಶಯ ಮತ್ತು ಅಂಡಾಶಯಗಳ ಅಸಹಜತೆಗಳು.

ಕಾರಣವನ್ನು ಗುರುತಿಸಿದ ನಂತರ, ಸಣ್ಣ ಛೇದನದ(ಸೀಳುಗಾಯ) ಮೂಲಕ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಬಳಸಿ ಚಿಕಿತ್ಸೆ ನೀಡಲಾಗುತ್ತದೆ. ಇದರ ಜೊತೆಯಲ್ಲಿ, ಶಸ್ತ್ರಚಿಕಿತ್ಸೆಯ ಮೂಲಕ ಮುಚ್ಚಿದ ಫಾಲೋಪಿಯನ್ ಟ್ಯೂಬ್‍ಗಳನ್ನು ಮರುಸಂಪರ್ಕಿಸಲು ಲ್ಯಾಪರೊಟಮಿಯಂತಹ ತೆರೆದ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತದೆ. ಎಂಡೊಮೆಟ್ರಿಯೊಸಿಸ್ ಅಥವಾ ಫೈಬ್ರಾಯ್ಡ್‌ಗಳ ಕೆಲವು ಸಂಕೀರ್ಣ ಪ್ರಕರಣಗಳಲ್ಲಿ ಲ್ಯಾಪರೊಟಮಿ ಸಹ ನಡೆಸಲಾಗುತ್ತದೆ.

ವೆರಿಕೊಸೆಲೆಕ್ಟೊಮಿ

ವೃಷಣ ಕೋಶ(ಸ್ಕ್ರೋಟಮ್)ದೊಳಗಿನ ಉಬ್ಬಿರುವ ರಕ್ತನಾಳಗಳು ಸಂತಾನೋತ್ಪತ್ತಿ ಸಮಸ್ಯೆಗೆ ಕಾರಣವಾಗಬಹುದು. ಏಕೆಂದರೆ ಇದು ವೀರ್ಯದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ತೊಡೆಸಂದು ಪ್ರದೇಶದಲ್ಲಿ ಸಣ್ಣ ಛೇದನದ ಮೂಲಕ ಉಬ್ಬಿರುವ ರಕ್ತನಾಳಗಳನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಲು ಅಥವಾ ಲಿಗೇಟ್(ಬಿಗಿಯಾಗಿ ಕಟ್ಟುವುದು) ಮಾಡಲು ವೆರಿಕೊಸೆಲೆಕ್ಟಮಿ ನಡೆಸಲಾಗುತ್ತದೆ. ಈ ವಿಧಾನವನ್ನು ಸಾಮಾನ್ಯವಾಗಿ ಮೂತ್ರಶಾಸ್ತ್ರ ತಜ್ಞರ ಸಹಯೋಗದಲ್ಲಿ ನಡೆಸಲಾಗುತ್ತದೆ.

ವಾಸೋಪಿಡಿಡಿಮೋಸ್ಟೊಮಿ ಅಥವಾ ವಾಸೊವಾಸೊಸ್ಟೊಮಿ

ವೆರಿಕೊಸೆಲೆಕ್ಟಮಿಗೆ ಹೋಲುವ ಈ ವಿಧಾನವನ್ನು ಮೂತ್ರಶಾಸ್ತ್ರಜ್ಞರೊಂದಿಗೆ ನಡೆಸಲಾಗುತ್ತದೆ. ವಾಸ್ ಡಿಫರೆನ್ಸ್ ಜೊತೆಗೆ ಮರುಸಂಪರ್ಕ ಕಲ್ಪಿಸಲು ಈ ಕಾರ್ಯವಿಧಾನವನ್ನು ನಡೆಸಲಾಗುತ್ತದೆ. ಇದರಿಂದಾಗಿ ವೀರ್ಯವು ಸೆಮಿನಲ್ ದ್ರವಕ್ಕೆ ಹರಿಯುತ್ತದೆ.

ಈ ಶಸ್ತ್ರಕ್ರಿಯೆಗಳಿಗೆ ಸಂಬಂಧಿಸಿದ ಕೆಲವು ಶಸ್ತ್ರಚಿಕಿತ್ಸಾ ತೊಡಕುಗಳಿವೆ ಎಂದು ಗಮನಿಸಬೇಕು. ಕೆಲವು ಶಸ್ತ್ರಚಿಕಿತ್ಸಾ ತೊಡಕುಗಳು:

• ಅಲರ್ಜಿ ಪ್ರತಿಕ್ರಿಯೆ - ಕಾರ್ಯವಿಧಾನವನ್ನು ನಿರ್ವಹಿಸುವ ಮೊದಲು ನೀಡಲಾದ ಅರಿವಳಿಕೆಗೆ ಅಲರ್ಜಿಯ ಪ್ರತಿಕ್ರಿಯೆ ಉಂಟಾಗುವ ಸಾಧ್ಯತೆಯಿದೆ.

• ಹೆಮಟೋಮಾ ರಚನೆ - ಲ್ಯಾಪರೊಸ್ಕೋಪಿಕ್ ಪೋರ್ಟ್ ಸೈಟ್‍ಗಳಲ್ಲಿ ಹೆಮಟೋಮಾ ರಚನೆಯಾಗಬಹುದು. ಇದು ಅಪರೂಪದ ಸಾಧ್ಯತೆಯಾಗಿದ್ದರೂ ಗಮನಾರ್ಹವಾಗಿದೆ.

• ಅಂಟಿಕೊಳ್ಳುವ ರಚನೆ - ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆಯ ನಂತರ ಅಂಟಿಕೊಳ್ಳುವ ರಚನೆ ಉಂಟಾಗುವುದು ಸಾಮಾನ್ಯ.

• ನರಗಳಿಗೆ ಹಾನಿ.

• ಸುತ್ತಮುತ್ತಲಿನ ರಚನೆಗಳಿಗೆ ಗಾಯ - ಶಸ್ತ್ರಚಿಕಿತ್ಸಾ ಉಪಕರಣದಿಂದ ಶಸ್ತ್ರಚಿಕಿತ್ಸೆ ನಡೆಸಲಾಗುವ ಸ್ಥಳದ ಸುತ್ತ ಗಾಯ ಆಗುವ ಸಂಭವವೂ ಇದೆ.

ತೊಡಕುಗಳ ಹೊರತಾಗಿಯೂ, ರೋಗಲಕ್ಷಣದ ಚಿಕಿತ್ಸೆಯು ಅವುಗಳನ್ನು ಪರಿಹರಿಸಲು ಒಂದು ಮಾರ್ಗವಾಗಿದೆ.

ಸಂತಾನೋತ್ಪತ್ತಿ ಸಮಸ್ಯೆಯ ಕಾರಣವನ್ನು ಉತ್ತಮವಾಗಿ ವಿವರಿಸಲು ಮತ್ತು ಸಮಸ್ಯೆಗೆ ಚಿಕಿತ್ಸೆ ನೀಡಲು ಮೇಲಿನ ಯಾವುದೇ ಕಾರ್ಯವಿಧಾನಗಳನ್ನು ನಿರ್ವಹಿಸಬಹುದು. ಈ ಎಲ್ಲಾ ಕಾರ್ಯವಿಧಾನಗಳಿಗೆ ಪರಿಣಿತಿಯ ಅಗತ್ಯವಿರುವುದರಿಂದ, ಕಾರ್ಯವಿಧಾನಗಳನ್ನು ನಿರ್ವಹಿಸುವಲ್ಲಿ ಪರಿಣಿತ ತಜ್ಞರನ್ನು ಸಂಪರ್ಕಿಸುವುದು ಸೂಕ್ತವಾಗಿದೆ.

ಸಮಸ್ಯೆಯ ವೈಶಾಲ್ಯ ಮತ್ತು ಒಳಗೊಂಡಿರುವ ಕಾರ್ಯವಿಧಾನಗಳಿಗೆ ಸಂಬಂಧಿಸಿದ ತೊಡಕುಗಳು ಏನೇ ಇರಲಿ, ಗರ್ಭಗುಡಿ ಉತ್ತಮ ಯಶಸ್ಸಿನ ಮಟ್ಟಗಳೊಂದಿಗೆ ಉತ್ತಮ ಚಿಕಿತ್ಸೆಯ ಖಾತ್ರಿ ನೀಡುತ್ತದೆ. ನಮ್ಮ ಸುಸಜ್ಜಿತ ಪ್ರಯೋಗಾಲಯಗಳು, ಕಾರ್ಯವಿಧಾನ ಕೊಠಡಿಗಳು ಮತ್ತು ಪರಿಣಿತ ವೈದ್ಯರೊಂದಿಗೆ, ಚಿಕಿತ್ಸೆಯು ಯಶಸ್ವಿಯಾಗುವುದು ಖಚಿತ. ಇದು ಪ್ರಾರಂಭದಿಂದ ಚಿಕಿತ್ಸೆ ಪೂರ್ಣಗೊಳ್ಳುವವರೆಗೆ ಹಲವಾರು ಕಾರ್ಯವಿಧಾನಗಳನ್ನು ಒಳಗೊಂಡಿದ್ದರೂ ಕೂಡ ರೋಗಿಗಳಿಗೆ ಒಂದೇ ಸೂರಿನಡಿ, ಎಲ್ಲ ಚಿಕಿತ್ಸೆಗೆ ಒಳಗಾಗಲು ಸುಲಭವಾಗುತ್ತದೆ.

ಈ ಪುಟವನ್ನು ಹಂಚಿಕೊಳ್ಳಿ