ಅಂಡಾಣು ದಾನ

ಅಂಡಾಣು ದಾನ

ಅಂಡಾಣು ದಾನದೊಂದಿಗೆ ಐವಿಎಫ್‍ನಲ್ಲಿ ಗರ್ಭಧಾರಣೆಯ ಸಾಧ್ಯತೆಗಳು?

ಸಂತಾನೋತ್ಪತ್ತಿ ಸಮಸ್ಯೆ ಇಂದು ಸಮಾಜವನ್ನು ಬಹಳವಾಗಿ ಕಾಡುತ್ತಿದೆ. ಸಂತಾನೋತ್ಪತ್ತಿ ಸಮಸ್ಯೆ ಇರುವ ಅನೇಕ ದಂಪತಿಗಳು ಇನ್-ವಿಟ್ರೋ ಫರ್ಟಿಲೈಸೇಷನ್ (ಐವಿಎಫ್) ಚಿಕಿತ್ಸೆ ಪಡೆದು ಮಗುವನ್ನು ಹೊಂದುವ ತಮ್ಮ ಕನಸನ್ನು ನನಸಾಗಿಸಿಕೊಳ್ಳಬಹುದು. ಸಂತಾನೋತ್ಪತ್ತಿ ಔಷಧದಲ್ಲಿನ ಹೊಸ ಬೆಳವಣಿಗೆಗಳಿಂದ ಅನೇಕ ದಂಪತಿಗಳ ಪೋಷಕತ್ವದ ಕನಸು ನಿಜವಾಗಿದೆ.

ಅಂಡಾಣು ದಾನ ಎಂದರೇನು?

ಸಂತಾನೋತ್ಪತ್ತಿ ಸಮಸ್ಯೆ ಹೊಂದಿರುವ ದಂಪತಿಗಳಲ್ಲಿ ಮಹಿಳೆ ಅಸಮರ್ಪಕ ಅಂಡಾಣು ಉತ್ಪಾದನೆ ಅಥವಾ ಕಳಪೆ ಅಂಡಾಣು ಗುಣಮಟ್ಟ ಹೊಂದಿರುವುದು ತಿಳಿದುಬಂದಾಗ ಅಂಡಾಣು ದಾನದ ಅಗತ್ಯವಿರುತ್ತದೆ. ಅಂಡಾಣು ದಾನವು ಮತ್ತೊಂದು ಮಹಿಳೆಯಿಂದ (ದಾನಿ) ಅಂಡಾಣುಗಳನ್ನು ಪಡೆಯುವ ಪ್ರಕ್ರಿಯೆಯಾಗಿದೆ. ಫಲವತ್ತತೆ ಇಲ್ಲದ ದಂಪತಿಗಳಲ್ಲಿ ಪುರುಷನ ವೀರ್ಯದೊಂದಿಗೆ ದಾನಿ ಅಂಡಾಣುಗಳ ಫರ್ಟಿಲೈಸೇಷನ್, ಪ್ರಯೋಗಾಲಯದಲ್ಲಿ ಐವಿಎಫ್ ಮೂಲಕ ನಡೆಯುತ್ತದೆ. ನಂತರ ರೂಪುಗೊಂಡ ಭ್ರೂಣವನ್ನು ಬಂಜೆತನದ ಸಮಸ್ಯೆ ಇರುವ ಹೆಣ್ಣಿನ ಗರ್ಭಾಶಯಕ್ಕೆ ವರ್ಗಾಯಿಸಲಾಗುತ್ತದೆ.

ಯಾವ ಪರಿಸ್ಥಿತಿಗಳಲ್ಲಿ, ಅಂಡಾಣು ದಾನದ ಅಗತ್ಯವಿದೆ?

ಅಂಡಾಣು ದಾನದ ಅಗತ್ಯವಾಗುವುದಕ್ಕೆ ಹಲವಾರು ಕಾರಣಗಳಿವೆ.

ಕಾರ್ಯನಿರ್ವಹಿಸದ ಅಂಡಾಶಯಗಳು

• ಅಕಾಲಿಕ ಅಂಡಾಶಯದ ವೈಫಲ್ಯ- ಋತುಬಂಧವು 40 ವರ್ಷಕ್ಕಿಂತ ಮುಂಚೆಯೇ ಚಿಕ್ಕ ವಯಸ್ಸಿನಲ್ಲೇ ಪ್ರಾರಂಭವಾಗುತ್ತದೆ.

• ಋತುಬಂಧ.

• ಅಂಡಾಶಯದ ಅಜೆನೆಸಿಸ್- ಅಂಡಾಶಯಗಳು ಇಲ್ಲದಿರುವುದು.

• ದ್ವಿಪಕ್ಷೀಯ(ಬೈಲ್ಯಾಟರಲ್) ಓಫೆರೆಕ್ಟಮಿ.

• ಕ್ಯಾನ್ಸರ್ ಚಿಕಿತ್ಸೆ ಕಿಮೊಥೆರಪಿಯ ಪರಿಣಾಮ.

ಕ್ರಿಯಾತ್ಮಕ ಅಂಡಾಶಯಗಳು

• ಆನುವಂಶಿಕ ವಂಶವಾಹಿ ಸಂಬಂಧಿತ ರೋಗಗಳು.

• ಕಳಪೆ ಗುಣಮಟ್ಟದ ಅಂಡಾಣುಗಳು.

• ಪುನರಾವರ್ತಿತ ಐವಿಎಫ್ ವೈಫಲ್ಯ.

• ಪ್ರವೇಶಿಸಲಾಗದ ಅಂಡಾಶಯಗಳು.

ಅಂಡಾಣು ದಾನಿಗಳು ಯಾರು?

ಅಂಡಾಣು ದಾನಿಗಳ ಹೆಸರು ಮತ್ತು ಗುರುತು ರಹಸ್ಯವಾಗಿರುತ್ತದೆ. ಅಲ್ಲದೇ ಅವರ ಗುರುತುಗಳನ್ನು ಸ್ವೀಕರಿಸುವವರಿಗೂ ಬಹಿರಂಗಪಡಿಸುವುದಿಲ್ಲ. ಅಂಡಾಣು ದಾನ ಕಾರ್ಯಕ್ರಮಗಳು ಅಥವಾ ಕೆಲವು ಏಜೆನ್ಸಿಗಳ ಮೂಲಕ ಅಂಡಾಣು ದಾನಿಗಳು ಬರುತ್ತಾರೆ.

ಅಂಡಾಣು ದೇಣಿಗೆ ಐವಿಎಫ್ ಕಾರ್ಯಕ್ರಮ ಅಥವಾ ವಿವಿಧ ರೀತಿಯಲ್ಲಿ ದಾನಿ ಅಂಡಾಣುಗಳು ಬರಬಹುದು:

• ಅಂಡಾಣು ಬ್ಯಾಂಕುಗಳಿಂದ ಘನೀಕೃತ ಅಂಡಾಣುಗಳು. (ಸಂಗ್ರಹಿಸಿದ ಅಂಡಾಣುಗಳು).

• ಒಂದೇ ಐವಿಎಫ್ ಕೇಂದ್ರದಲ್ಲಿ ನಡೆಯುತ್ತಿರುವ ಯುವ ಐವಿಎಫ್ ರೋಗಿಗಳೊಂದಿಗೆ ಅಂಡಾಣು ಹಂಚಿಕೆ.

• ವೈದ್ಯಕೀಯವಾಗಿ ಸದೃಢವಾಗಿರುವ ಯುವ ದಾನಿಯು ತನ್ನ ಅಂಡಾಣು ದಾನ ಮಾಡುತ್ತಾಳೆ.

ಅಂಡಾಣು ದಾನ ಪ್ರಕ್ರಿಯೆಯ ವಿವರಗಳು

• ಮೊದಲು ಅಂಡಾಣು ದಾನಿಯನ್ನು ಕಂಡುಹಿಡಿಯುವುದು.

• ಭ್ರೂಣ ಸ್ವೀಕರಿಸುವ ಮಹಿಳೆಯನ್ನು ಸಿದ್ಧಪಡಿಸಲು ಹಾರ್ಮೋನ್‍ಗಳೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ. ಸ್ವೀಕರಿಸುವವರ ಅಂಡಾಶಯಗಳು ಕ್ರಿಯಾತ್ಮಕವಾಗಿದ್ದರೆ, ಆಕೆಯ ಋತು ಆವರ್ತನವು ದಾನಿಯ ಋತು ಆವರ್ತನದ ಚಿಕಿತ್ಸೆಯೊಂದಿಗೆ ಹೊಂದಿಕೆಯಾಗುತ್ತದೆ.

• ಈ ನಡುವೆ, ಸೂಪರ್- (ಒವ್ಯುಲೇಷನ್)ಅಂಡೋತ್ಪತ್ತಿಯನ್ನು ಉತ್ಪಾದಿಸಲು ದಾನಿಗೆ ಹಾರ್ಮೋನ್ ಚುಚ್ಚುಮದ್ದಿನೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ.

• ದಾನಿ ಅಂಡಾಣುಗಳು ಸಿದ್ಧವಾದ ನಂತರ, ಅವುಗಳನ್ನು ದೇಹದೊಳಗಿಂದ ಹಿಂಪಡೆಯಲಾಗುತ್ತದೆ ಮತ್ತು ಸ್ವೀಕರಿಸುವವರ ವೀರ್ಯಾಣುವಿನೊಂದಿಗೆ ಫಲವತ್ತಾಗಿಸಲಾಗುತ್ತದೆ.

• ಕೆಲವು ದಿನಗಳ ನಂತರ, ಭ್ರೂಣ/ಗಳನ್ನು ಸ್ವೀಕರಿಸುವವರ ಗರ್ಭಾಶಯದಲ್ಲಿ ಅಳವಡಿಸಲಾಗುತ್ತದೆ.

• ಇತರ ಅಗತ್ಯವಿರುವ ದಂಪತಿಗಳ ನಂತರದ ಬಳಕೆಗಾಗಿ ದಾನಿಗಳ ಕೆಲವು ಅಂಡಾಣುಗಳನ್ನು ಘನೀಕರಣಕ್ಕೆ ಒಳಗಾಗಿಸಲಾಗುತ್ತದೆ.

ಅಂಡಾಣು ದಾನದಿಂದ ಗರ್ಭಧಾರಣೆಯ ಸಾಧ್ಯತೆಗಳು

ಅಂಡಾಣು ದಾನದ ಐವಿಎಫ್ ಆವರ್ತನದ ಯಶಸ್ಸು ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿದೆ:

• ದಾನಿಗಳ ವಯಸ್ಸು: ವೈದ್ಯಕೀಯವಾಗಿ ಫಿಟ್ ಆಗಿರುವ ಯುವ ಅಂಡಾಣು ದಾನಿಗಳು ಅಂಡಾಣು ದಾನ ಕಾರ್ಯಕ್ರಮಗಳಿಗೆ ಸೂಕ್ತವಾಗಿರುತ್ತಾರೆ. ದಾನಿಯು ಚಿಕ್ಕ ವಯಸ್ಸಿನವರಾಗಿದ್ದರೆ ಅಂಡಾಣು ಸ್ವೀಕರಿಸುವ ಯುವ ಮತ್ತು ವಯಸ್ಸಾದವರಲ್ಲಿ ಗರ್ಭಧಾರಣೆಯ ಸಾಧ್ಯತೆ ಬಹುತೇಕ ಒಂದೇ ಆಗಿರುತ್ತದೆ. ಗರ್ಭಗುಡಿ ಐವಿಎಫ್ ಯುವ ಮಹಿಳಾ ದಾನಿಯಿಂದ ತಾಜಾ ದಾನಿ ಅಂಡಾಣುಗಳನ್ನು ಮಾತ್ರ ಬಳಸುತ್ತದೆ.

• ಅಂಡಾಣುವಿನ ಗುಣಮಟ್ಟ: ಅಂಡಾಣುವಿನ ಗುಣಮಟ್ಟವು ಭ್ರೂಣದ ಗುಣಮಟ್ಟ, ಗರ್ಭಧಾರಣೆ ಮತ್ತು ಜನನವನ್ನು ನಿರ್ಧರಿಸುತ್ತದೆ.

• ಎಂಡೊಮೆಟ್ರಿಯಲ್ ರಿಸೆಪ್ಟಿವಿಟಿ: ಭ್ರೂಣದ ಅಳವಡಿಕೆಯ ಸ್ಥಳವು ಅಂಡಾಣುವಿನ ದಾನದ ಯಶಸ್ಸನ್ನು ನಿರ್ಧರಿಸುತ್ತದೆ. ಗರ್ಭಗುಡಿ ಐವಿಎಫ್‍ನಲ್ಲಿ, ಗಂಡನ ವೀರ್ಯಾಣುವಿನಿಂದ ದಾನಿಗಳ ಅಂಡಾಣುಗಳ ಫರ್ಟಿಲೈಸೇಷನ್ ಪ್ರತ್ಯೇಕವಾದ ಮತ್ತು ಎಲ್ಲರಿಗೂ ಪ್ರವೇಶ ಇಲ್ಲದಂತಹ ಮುಚ್ಚಿದ ಕೋಣೆಗಳಲ್ಲಿ ನಡೆಯುತ್ತದೆ.

ಫರ್ಟಿಲೈಸೇಷನ್ ಸಮಯದಲ್ಲಿ ಅಂಡಾಣು ಮತ್ತು ವೀರ್ಯಾಣುಗಳು ಅತ್ಯುತ್ತಮ ವಾತಾವರಣವನ್ನು ಪಡೆಯುತ್ತವೆ (ಅವು ಗರ್ಭಾಶಯದಲ್ಲಿ ಇರಬೇಕಾದಂತೆಯೇ). ಹಾಗಾಗಿ ರೂಪುಗೊಂಡ ಭ್ರೂಣಗಳು ಹೆಚ್ಚು ಉತ್ತಮವಾಗಿರುತ್ತವೆ, ಯಶಸ್ಸೂ ಹೆಚ್ಚಿರುತ್ತದೆ.

• ಭ್ರೂಣ ವರ್ಗಾವಣೆ: ಗರ್ಭಾಶಯದಲ್ಲಿ ಭ್ರೂಣಗಳ ನಿಯೋಜನೆಯನ್ನು ಸೋನೋಗ್ರಫಿ ಮಾರ್ಗದರ್ಶನದಲ್ಲಿ ಮಾಡಲಾಗುತ್ತದೆ.

ದಾನಿ ಅಂಡಾಣುವಿನ ಪ್ರಯೋಜನ(ಲಾಭ)ಗಳು

ವಿಶೇಷವಾಗಿ ಹೆಚ್ಚು ವಯಸ್ಸಾಗಿರುವವರು ಸ್ವೀಕರಿಸಿದಲ್ಲಿ:

• ಗರ್ಭಪಾತದ ಅಪಾಯ ಕಡಿಮೆಯಾಗಿರುವುದು.

• ಕ್ರೋಮೋಸೋಮಲ್(ವರ್ಣತಂತು) ಅಸಹಜತೆ ಹೊಂದಿರುವ ಮಗುವನ್ನು ಗರ್ಭಧರಿಸುವ ಅಪಾಯವನ್ನು ಕಡಿಮೆ ಮಾಡಲಾಗಿರುತ್ತದೆ.

ದಾನಿ ಅಂಡಾಣುಗಳನ್ನು ಬಳಸುವ ಅಪಾಯ

• ಬಹು ಗರ್ಭಧಾರಣೆಗಳು.

ಆದ್ದರಿಂದ, ಬಹು ಗರ್ಭಧಾರಣೆಯ ಸಾಧ್ಯತೆಗಳನ್ನು ಕಡಿಮೆ ಮಾಡಲು, ಒಂದು ಅಥವಾ ಎರಡಕ್ಕೆ ವರ್ಗಾಯಿಸಲಾದ ಭ್ರೂಣಗಳ ಸಂಖ್ಯೆಯನ್ನು ಮಿತಿಗೊಳಿಸಲು ಸಲಹೆ ನೀಡಲಾಗುತ್ತದೆ. ಐಚ್ಛಿಕ ಏಕ ಭ್ರೂಣ ವರ್ಗಾವಣೆ (ಇಸೆಟ್) ಎಂದೂ ಕರೆಯಲ್ಪಡುವ ಏಕ ಉನ್ನತ-ಗುಣಮಟ್ಟದ ಭ್ರೂಣ ವರ್ಗಾವಣೆಯು ಬಹು ಗರ್ಭಧಾರಣೆಯ ಅಪಾಯವನ್ನು ಶೇಕಡಾ 1 ಕ್ಕಿಂತ ಕಡಿಮೆಯಾಗಿಸುತ್ತದೆ.

ಅಂತಿಮವಾಗಿ ಹೇಳಬೇಕೆಂದರೆ,

• ಮಹಿಳೆಗೆ ಅಂಡಾಣು ಕಡಿಮೆಯಾದಾಗ/ಅಂಡಾಣು ಗುಣಮಟ್ಟ ಕಡಿಮೆ ಇರುವ ದಂಪತಿಗಳಲ್ಲಿ ಸಂತಾನೋತ್ಪತ್ತಿ ಸಮಸ್ಯೆಗೆ ಅಂಡಾಣು ದಾನವು ಪರಿಹಾರವಾಗಿದೆ.

• ಅಂಡಾಣು ದಾನವು ವೈದ್ಯಕೀಯವಾಗಿ ಸದೃಢವಾಗಿರುವ ಯುವ ದಾನಿಯಿಂದ ಆಗಿರಬೇಕು. ಎಚ್ಚರಿಕೆಯಿಂದ ಆಯ್ಕೆ ಮಾಡಿದ ದಾನಿ ಅಂಡಾಣುಗಳೊಂದಿಗೆ ಗರ್ಭಧಾರಣೆ ಮತ್ತು ಅನುಕೂಲಕರ ಗರ್ಭಧಾರಣೆಯ ಫಲಿತಾಂಶಗಳನ್ನು ಸಾಧಿಸುವ ಯಶಸ್ಸಿನ ದರಗಳು ಹೆಚ್ಚಿರುತ್ತವೆ.

ಈ ಪುಟವನ್ನು ಹಂಚಿಕೊಳ್ಳಿ