ಹರಿ ಶ್ರೀನಿವಾಸನ್
ಸಹ ಸಂಸ್ಥಾಪಕ ಮತ್ತು ನಿರ್ದೇಶಕ
ಶ್ರೀ ಹರಿ ಶ್ರೀನಿವಾಸನ್ ಅವರು ಓದಿದ್ದು ವೈದ್ಯಕೀಯ ಎಲೆಕ್ಟ್ರಾನಿಕ್ಸ್ ಇಂಜಿನಿಯರ್̤ ಉದ್ಯಮ ಒಂದು ಪ್ಯಾಷನ್. ಉದ್ಯಮಿಯಾಗಿ ಗರ್ಭಗುಡಿ ಅವರ ನಾಲ್ಕನೇ ಹೆಜ್ಜೆಯಾಗಿದೆ. ಇದಕ್ಕೂ ಮೊದಲು ಹರಿಯವರು ಸಾಫ್ಟ್‌ವೇರ್ ಉತ್ಪನ್ನ ಮತ್ತು ಸೇವಾ ಕಂಪನಿಗಳ ಸ್ಥಾಪಕರಲ್ಲಿಒಬ್ಬರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಾಫ್ಟ್‌ವೇರ್ ಕಂಪನಿಯಲ್ಲಿ ವಿಶ್ಲೇಷಕರಾಗಿ ಮತ್ತು ಮುಖ್ಯಸ್ಥರಾಗಿ ಹಲವು ಹುದ್ದೆಗಳನ್ನ ನಿಭಾಯಿಸಿದ್ದಾರೆ. ಈ ಅನುಭವದಿಂದ ಸಿಕ್ಕ ಅಪಾರ ಜ್ಞಾನ ಗರ್ಭಗುಡಿ ಸಂಸ್ಥೆಯ ಹಲವು ಯೋಜನೆಗಳನ್ನು ಯಶಸ್ವಿಯಾಗಿ ಯೋಜಿಸಲು ಮತ್ತು ಕಾರ್ಯಗತಗೊಳಿಸಲು ಕಾರಣವಾಗಿದೆ. ಹರಿ ಶ್ರೀನಿವಾಸನ್ ಯಾವುದೇ ಕಂಪನಿಯ CMMI ಪ್ರಕ್ರಿಯೆಗಳಿಗೆ ಪ್ರಮಾಣೀಕೃತ ಮೌಲ್ಯಮಾಪಕರಾಗಿದ್ದಾರೆ.
ವೈದ್ಯಕೀಯ ತಂತ್ರಜ್ಞಾನದಲ್ಲಿನ ಅದ್ಭುತ ಜ್ಞಾನ, ಎಂಜಿನಿಯರಿಂಗ್ ಕೌಶಲ್ಯ, ಸಾಫ್ಟ್‌ವೇರ್ ಉದ್ಮಮದಲ್ಲಿ ಸಿಕ್ಕ ಬೃಹತ್ ಯೋಜನೆ ಮತ್ತು ಅದನ್ನು ಕಾರ್ಯಗತಗೊಳಿಸುವಲ್ಲಿನ ಅನುಭವ, ಸಿಎಮ್‌ಎಮ್‌ಐ ಜ್ಞಾನ ಹರಿ ಶ್ರೀನಿವಾಸನ್ ಅತ್ಯಂತ ನಿಖರವಾಗಿ ಯೋಜನೆಗಳನ್ನು ನಿರ್ಮಿಸುವ ಸಾಮರ್ಥ್ಯ ನೀಡಿದೆ.
ಗರ್ಭಗುಡಿ ಐವಿಎಫ್ ಸೆಂಟರ್‌ನಲ್ಲಿ ಹರಿ ಶ್ರೀನಿವಾಸನ್ ಅವರು ವ್ಯಾಪಾರ ಅಭಿವೃದ್ಧಿ ಮತ್ತು ಪಾಲುದಾರಿಕೆಗಳ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.