content
ವಿಜಯ್ ಕುಮಾರ್ ಶೇಷಾದ್ರಿ

ವಿಜಯ್ ಕುಮಾರ್ ಶೇಷಾದ್ರಿ

BE, MBA | ಸ್ಥಾಪಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

ಶ್ರೀ ವಿಜಯ್ ಕುಮಾರ್ ಮೂಲತಃ ಎಲೆಕ್ಟ್ರಿಕಲ್ ಇಂಜಿನಿಯರ್ ಹಾಗೂ ಹಲವು ಯಶಸ್ವೀ ಉದ್ಯಮಗಳ ಸಂಸ್ಥಾಪಕರು. ಅವರು ಹಲವು ಎಂಜಿನಿಯರಿಂಗ್ ಕಂಪನಿಗಳನ್ನು ಪ್ರಾರಂಭಿಸಿದ್ದಾರೆ ಮತ್ತು ಯಶಸ್ವಿಯಾಗಿ ಕಟ್ಟಿ ಬೆಳೆಸಿದ್ದಾರೆ (ಶೇಷರಾನ್ ಎಂಜಿನಿಯರಿಂಗ್, ಭಾರ್ಗವ್ ಕನ್ಸಲ್ಟೆಂಟ್ಸ್ ಇತ್ಯಾದಿ.). ವಿಜಯ್‌ ಕುಮಾರ್ ಅವರು ಸನ್ನಿಧಿ ಸ್ಪೆಷಾಲಿಟಿ ಸೆಂಟರ್ ನ ಸಹ-ಸಂಸ್ಥಾಪಕರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ.

ತಮ್ಮ ಎಂಬಿಎ ಪದವಿಯಲ್ಲಿ ಹಾಗೂ ವಾಣಿಜ್ಯೋದ್ಯಮಿಯಾಗಿ ಪಡೆದುಕೊಂಡ ಅನುಭವದಿಂದ ಉದ್ಯಮವನ್ನ ಗರಿಷ್ಠ ಮಟ್ಟದಲ್ಲಿ ನಡೆಸುವುದಲ್ಲದೆ ಅದನ್ನು ಲಾಭದಾಯಕ ರೀತಿಯಲ್ಲಿ ನಡೆಸುವ ಬಗ್ಗೆಯೂ ವಿಜಯ್ ಕುಮಾರ್‌ ಅವರಿಗೆ ಅಪಾರ ಅನುಭವವಿದೆ. ಆ ಅನುಭವ ಮತ್ತು ತಮ್ಮ ಇಂಜಿನಿಯರಿಂಗ್ ಕೌಶಲ್ಯವನ್ನು ಅವರು ಇನ್ಫರ್ಟಿಲಿಟಿ ಚಿಕಿತ್ಸೆ ನೀಡುವಲ್ಲಿಯೂ ಬಳಸಿಕೊಂಡರು. ನಿಮಗೆ ಗೊತ್ತಿದೆ ಇನ್ಫರ್ಟಿಲಿಟಿ ಚಿಕಿತ್ಸೆಯಲ್ಲಿ ತಂತ್ರಜ್ಞಾನದ ಅಗತ್ಯತೆ ಇಂದು ತುಂಬಾ ಅವಶ್ಯವಾಗಿದೆ. ತಂತ್ರಜ್ಞಾನ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆಯಲ್ಲದೆ ರೋಗಿಗಳು ಕೈಗೆಟಕುವ ದರದಲ್ಲಿ ಉತ್ತಮ ಚಿಕಿತ್ಸೆ ಪಡೆಯುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಇಷ್ಟೇ ಅಲ್ಲದೆ ವಿಜಯ್ ಮೂಲಸೌಕರ್ಯ ಸೇರ್ಪಡೆಗಳು ಮತ್ತು ವಿಸ್ತರಣೆಗಳನ್ನು ಯೋಜಿಸಲು ಮತ್ತು ಅದನ್ನು ಕಾರ್ಯಗತಗೊಳಿಸಲು ಅಗತ್ಯವಿರುವಾಗಲೆಲ್ಲ ಗರ್ಭಗುಡಿಗೆ ಸಹಾಯ ಮಾಡಲು ತಮ್ಮ ಎಂಜಿನಿಯರಿಂಗ್ ಕೌಶಲ್ಯವನ್ನು ಬಳಸುತ್ತಿದ್ದಾರೆ.

ವಿಜಯ್ ಅವರು ವ್ಯವಹಾರದಲ್ಲಿ ಅತ್ಯಂತ ನಿಪುಣರು ಹಾಗೂ ಅದೇ ವ್ಯವಹಾರದಲ್ಲಿ ಫೇಲ್ಯೂರ್ ಆದಾಗ ಅದರ ಕಾರಣವನ್ನು ಪತ್ತೆಹಚ್ಚಿ ವಿಶ್ಲೇಷಿಸಿ ಸುಧಾರಣೆ ಮಾಡೋದ್ರಲ್ಲೂ ನಿಪುಣರು. ವ್ಯವಹಾರದ ಕಾರ್ಯ ವಿಧಾನ ಮತ್ತು ಅದರಲ್ಲಿ ದಕ್ಷತೆ ಹೆಚ್ಚಿಸಲು ವಿಜಯ್ ಅವರು ಸೂಕ್ಷ್ಮವಾಗಿ ಎಲ್ಲವನ್ನೂ ಗಮನಿಸುತ್ತಿರುತ್ತಾರೆ. ಹಾಗಾಗಿಯೇ ಅವರು ಅತ್ಯಂತ ಯಶಸ್ವೀ ಉದ್ಯಮಿಯಾಗಿ ಬೆಳೆದಿದ್ದಾರೆ .

ಗರ್ಭಗುಡಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ, ಸಂಸ್ಥೆಯ ವಿಸ್ತರಣಾ ಯೋಜನೆಗಳು, ಸಮಾನ ಮನಸ್ಕ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹಾಗೂ ಮಾರ್ಗಸೂಚಿಯನ್ನು ಯೋಜಿಸುವುದರ ಹಿಂದಿನ ಅದ್ಭುತ ಚಾಲನಾ ಶಕ್ತಿಯಾಗಿದ್ದಾರೆ ವಿಜಯ್. ಅವರು ಹನುಮಂತನಗರದಲ್ಲಿರುವ ಗರ್ಭಗುಡಿ ಕೇಂದ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಾರೆ.

ಈ ಪುಟವನ್ನು ಹಂಚಿಕೊಳ್ಳಿ