ಲೈಂಗಿಕವಾಗಿ ಹರಡುವ ಕಾಯಿಲೆಗಳು ಬಂಜೆತನದ ಮೇಲೆ ಪರಿಣಾಮ ಬೀರುತ್ತವಾ?
ನಿಮ್ಮ ಕುಟುಂಬ ಯೋಜನೆಯ ಹಾದಿಯಲ್ಲಿ ಲೈಂಗಿಕ ಕಾಯಿಲೆಗಳು ಅಡ್ಡ ನಿಲ್ಲಲು ಬಿಡಬೇಡಿ.
ಅದೊಂದು ಬಿರುಬಿಸಿಲಿನ ದಿನ ಸೂರ್ಯ ನಿಗಿನಿಗಿ ಕೆಂಡದಂತೆ ಉರಿಯುತ್ತಿದ್ದ. ಸಾರಾಳಿಗೆ ತನ್ನ ತೊಡೆಯ ಒಳ ಭಾಗದಲ್ಲಿ ದದ್ದು (rash) ಉಂಟಾಗಿದ್ದು ಕಾಣಿಸಿತು. ಇತ್ತೀಚೆಗೆ ಆಕೆಗೆ ಜ್ವರ ಬಂದು, ಮೂತ್ರ ವಿಸರ್ಜನೆ ಮಾಡಿದಾಗ ಉರಿ ಕಾಣಿಸಿಕೊಂಡಿತ್ತು. ಆದರೆ ಅದರ ಬಗ್ಗೆ ಸ್ವಲ್ಪ ಉದಾಸೀನ ತಾಳಿದ್ದಳು ಸಾರಾ.
ಅದಾಗಿ ಸ್ವಲ್ಪ ದಿನಗಳ ನಂತರ ಸಾರಾ ಬೆಂಗಳೂರಿನಲ್ಲಿರುವ ಪ್ರಖ್ಯಾತ ಸಂತಾನೋತ್ಪತ್ತಿ ಕೇಂದ್ರವಾದ ಗರ್ಭಗುಡಿ ಐವಿಎಫ್ ಸೆಂಟರ್ ಗೆ ವೈದ್ಯರನ್ನು ಕಾಣಲು ಹೋದಳು. ಸಾರಾಳನ್ನು ಪರೀಕ್ಷಿಸಿದ ವೈದ್ಯರು ಆಕೆಗೆ ಲೈಂಗಿಕವಾಗಿ ಹರಡುವ ಜನನಾಂಗದ ಹರ್ಪಿಸ್ ಕಾಯಿಲೆ ಇರುವುದಾಗಿ ಖಚಿತ ಪಡಿಸಿದರು. ಅದನ್ನು ಕೇಳಿದ ಸಾರಾಳಿಗೆ ನಿಜಕ್ಕೂ ಗಾಬರಿ ಆಯಿತು. ಒಂಥರಾ ಮುಜುಗರವಾಯಿತು. ಆದ್ರೆ ವೈದ್ಯರು ಇದಕ್ಕೆ ಸೂಕ್ತ ಔಷಧಿ ಇದ್ದು, ಹೆದರಬೇಕಾದ ಅವಶ್ಯಕತೆ ಇಲ್ಲ ಎಂದು ಸಮಾಧಾನ ಪಡಿಸಿದರು.
ಜೊತೆಗೆ ವೈದ್ಯರು ಸಾರಾಳಿಗೆ ಒಂದು ವಿಷಯ ಸ್ಪಷ್ಟಪಡಿಸಿದರು. ಜನನಾಂಗದ ಹರ್ಪಿಸ್ ಕಾಯಿಲೆಗೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳದೆ ನಿರ್ಲಕ್ಷ್ಯ ಮಾಡಿದಲ್ಲಿ ಅದು ಫಲವತ್ತತೆಯ ಮೇಲೆ ಪರಿಣಾಮ ಬೀರಬಹುದು. ಯಾಕೆಂದ್ರೆ ಹರ್ಪಿಸ್ ವೈರಾಣು ಜನನಾಂಗದ ಗರ್ಭಕಂಠ, ಗರ್ಭಾಶಯ ಮತ್ತು ಫಾಲೋಪಿಯನ್ ನಾಳಗಳಲ್ಲಿ ಸೋಂಕು ಉಂಟುಮಾಡುತ್ತದೆ. ಆಗ ಆ ಭಾಗದಲ್ಲಿ ತುರಿಕೆ ಮತ್ತು ಉರಿಯೂತ ಉಂಟಾಗಿ ಅದು ಅಂಡಾಣು ಮತ್ತು ವೀರ್ಯಾಣುವನ್ನು ತಡೆಯುವುದರಿಂದ ಗರ್ಭಧಾರಣೆ ಆಗದೆ ಇರಬಹುದು ಅನ್ನುವ ಎಚ್ಚರ ನೀಡಿದರು.
ಸಾರಾ ಕೂಡಲೇ ಗರ್ಭಗುಡಿಯಲ್ಲಿ ತನ್ನ ಹರ್ಪಿಸ್ ಕಾಯಿಲೆಗೆ ಸೂಕ್ತ ಚಿಕಿತ್ಸೆ ಪಡೆದಳು. ಕ್ರಮೇಣ ರೋಗಲಕ್ಷಣಗಳು ಕಡಿಮೆ ಆದವು. ಆದ್ರೆ ಈ ಕಾಯಿಲೆ ಸಾರಾ ತನ್ನ ಫಲವತ್ತತೆ ಬಗ್ಗೆ ಚಿಂತೆ ಮಾಡುವಂತೆ ಮಾಡಿತು. ಭವಿಷ್ಯದಲ್ಲಿ ತನ್ನನ್ನು ತಾನು ಕಾಪಾಡಿಕೊಳ್ಳಲು ಮತ್ತು ಮುಂಬರುವ ಸಂಗಾತಿಗಾಗಿ ಆದಷ್ಟು ಹುಷಾರಾಗಿರಬೇಕು ಅನ್ನುವ ಮನಸ್ಸು ಮಾಡಿದಳು ಆಕೆ.
ಹೇಳಬೇಕೆಂದ್ರೆ, ಹರ್ಪಿಸ್ ಸಾರಾರಂಥ ಒಬ್ಬಳಿಗೆ ಮಾತ್ರ ಬರುವ ಕಾಯಿಲೆ ಅಲ್ಲ. ವೈರಾಣುವಿನ ಮೂಲಕ ಹರಡುವ ಜನನಾಂಗದ ಹರ್ಪಿಸ್,ಕ್ಲಮಿಡಿಯಾ ಮತ್ತು ಗುನೊರಿಯಾ ಕಾಯಿಲೆಗಳು ಲೈಂಗಿಕ ಸಂಪರ್ಕದ ಮೂಲಕ ಹರಡುತ್ತವೆ. ಸರಿಯಾದ ಚಿಕಿತ್ಸೆ ತೆಗೆದುಕೊಳ್ಳದಿದ್ರೆ ಅದು ಪುರುಷ ಮತ್ತು ಮಹಿಳೆಯರಲ್ಲಿ ಬಂಜೆತನಕ್ಕೆ ಕಾರಣವಾಗಬಹುದು.
ಪುರುಷರಲ್ಲಿ ಕಂಡುಬರುವ ಕ್ಲಮಿಡಿಯಾ ಮತ್ತು ಗುನೊರಿಯಾ ರೋಗಗಳಿಂದ ಮೂತ್ರನಾಳ, ಪ್ರೊಸ್ಟೇಟ್ ಗ್ರಂಥಿ ಮತ್ತು ವೃಷಣಗಳಿಗೆ ಸೋಂಕು ಉಂಟಾಗುತ್ತದೆ. ಅದರಿಂದ ಉರಿಯೂತ ಮತ್ತು ಕಲೆಗಳು ಉಂಟಾಗಿ ಅವು ವೀರ್ಯನಾಳವನ್ನು ತಡೆಗಟ್ಟುತ್ತವೆ. ಮಹಿಳೆಯರಲ್ಲಿ ಗರ್ಭಕಂಠ, ಗರ್ಭಾಶಯ ಮತ್ತು ಫಾಲೋಪಿಯನ್ ನಾಳಗಳಿಗೆ ಸೋಂಕು ತಗಲಿ ಉರಿಯೂತ ಉಂಟಾಗಿ ನೀರು ಸೇರಿಕೊಂಡು ಅಂಡಾಣುವನ್ನು ತಡೆಗಟ್ಟುತ್ತವೆ. ಹಾಗಾಗಿ ಮಹಿಳೆ ಗರ್ಭಧರಿಸಲು ಅಸಾಧ್ಯವಾಗುತ್ತದೆ.
ನಿಮಗೆ ಗೊತ್ತಿರಲಿ, ಲೈಂಗಿಕವಾಗಿ ಹರಡುವ ರೋಗಗಳನ್ನು ತಡೆಗಟ್ಟಬಹುದು ಮತ್ತು ಸರಿಯಾದ ಚಿಕಿತ್ಸೆಯಿಂದ ಗುಣಪಡಿಸಬಹುದು. ಗರ್ಭನಿರೋಧಕಗಳನ್ನು ಬಳಸುವುದರಿಂದಲೂ ಲೈಂಗಿಕ ರೋಗಗಳನ್ನು ತಡೆಗಟ್ಟಬಹುದು. ಅಷ್ಟೇ ಅಲ್ಲ, ನಿಯಮಿತವಾಗಿ ಲೈಂಗಿಕ ರೋಗಗಳ ತಪಾಸಣೆ ಮಾಡಿಸಿಕೊಳ್ಳುವುದರಿಂದ ಹಾಗೂ ಸರಿಯಾದ
ಚಿಕಿತ್ಸೆ ತೆಗೆದುಕೊಳ್ಳುವುದರಿಂದ ಬಂಜೆತನದ ಮೇಲಾಗುವ ಪರಿಣಾಮವನ್ನು ತಪ್ಪಿಸಬಹುದು. ನೀವು ಮಾಡಬೇಕಾದ್ದೇನೆಂದರೆ, ಲೈಂಗಿಕ ಕಾಯಿಲೆಗಳಿಂದ ನಿಮ್ಮನ್ನ ರಕ್ಷಿಸಿಕೊಳ್ಳಿ ಮತ್ತು ಅದರಿಂದುಂಟಾಗುವ ಬಂಜೆತನದಿಂದ ನಿಮ್ಮನ್ನು ಕಾಪಾಡಿಕೊಳ್ಳಿ ಈ ಮುಂಜಾಗ್ರತೆ ಕ್ರಮಗಳಿಂದ ನಿಮ್ಮನ್ನು ನೀವು ಆರೋಗ್ಯವಾಗಿಟ್ಟುಕೊಳ್ಳಬಹುದಲ್ಲದೆ ನಿಮ್ಮ ಭವಿಷ್ಯದ ಕೌಟುಂಬಿಕ ಜೀವನವನ್ನೂ ಲೈಂಗಿಕ ರೋಗಗಳಿಂದ ಮುಕ್ತಗೊಳಿಸಬಹುದು. ಸಾರಾ ಕೂಡ ಅದನ್ನೇ ಮಾಡಿದ್ದು, ಲೈಂಗಿಕ ರೋಗಗಳಿಂದ ತನ್ನನ್ನು ಕಾಪಾಡಿದ್ದಕ್ಕೆ ಮುಂದೆ ಗರ್ಭಧರಿಸಲು ಆಗಬಹುದಾಗಿದ್ದ ಸಮಸ್ಯೆಯನ್ನು ಆರಂಭದಲ್ಲೇ ನಿವಾರಿಸಿ ಅರಿವು ಮೂಡಿಸಿದ್ದಕ್ಕೆ ಆಕೆ ಗರ್ಭಗುಡಿ ಐವಿಎಫ್ ಸೆಂಟರ್ ಗೆ ತುಂಬು ಹೃದಯದ ಧನ್ಯವಾದ ಹೇಳಿದಳು.
ಬೆಂಗಳೂರಿನಲ್ಲಿ ಆರಂಭವಾದ ಗರ್ಭಗುಡಿ ಐವಿಎಫ್ ಸೆಂಟರ್ ಸಂತಾನೋತ್ಪತ್ತಿ ಆರೋಗ್ಯ ಕೇಂದ್ರವಾಗಿದ್ದು ಹಲವು ಶಾಖೆಗಳನ್ನು ಹೊಂದಿದೆ. ವೃತ್ತಿಪರತೆಯಲ್ಲಿ ಯಶಸ್ಸು, ನೈತಿಕ ಗುರಿ ಮತ್ತು ಪ್ರತಿಯೊಬ್ಬರ ಬಗ್ಗೆ ವಹಿಸುವ ಕಾಳಜಿಯಿಂದ ಗರ್ಭಗುಡಿ ನಾಡಿನಲ್ಲಿ ಮನೆಮಾತಾಗಿದೆ. ಸುಮಾರು ೮೫೦೦ ಕುಟುಂಬಗಳು ಗರ್ಭಗುಡಿ ನೆರವಿನಿಂದ ಸಂತಸದಲ್ಲಿವೆ ಎಂದು ಹೇಳಲು ನಮಗೆ ಅತೀವ ಸಂತಸವಾಗುತ್ತದೆ. ನಿಮ್ಮ ಎಲ್ಲಾ ಆಸೆಗಳನ್ನು ಈಡೇರಿಸಲು ನಮ್ಮ ಬಳಿ ನುರಿತ ಫರ್ಟಿಲಿಟಿ ವೈದ್ಯರ ಸಮೂಹವೆ ಇದೆ.ಭ್ರೂಣ ತಜ್ಞರಿದ್ದಾರೆ. ನುರಿತ ಅರೆವೈದ್ಯಕೀಯ ಸಿಬ್ಬಂದಿ ಇದೆ. ನಮ್ಮ ಆಶಯ ಒಂದೆ. “ನಮ್ಮಲ್ಲಿಗೆ ಬರುವ ಪ್ರತಿ ದಂಪತಿಯೂ ಆರೋಗ್ಯವಂತ ಮಗುವಿನೊಂದಿಗೆ ಸಂತಸದಿಂದ ಮನೆಗೆ ಹೋಗಬೇಕು”.
ಆ ಆಶಯ ಈಡೇರಿಸಿದ ಸಂತೃಪ್ತಿ ನಮ್ಮ ಪಾಲಿಗಿದೆ.
ಈ ಪುಟವನ್ನು ಹಂಚಿಕೊಳ್ಳಿ
ನಮ್ಮ ಬಗ್ಗೆ
ಗರ್ಭಗುಡಿಯು ಬಂಜೆತನ ಸಮಸ್ಯೆಗಳು ಮತ್ತು ದಂಪತಿಗಳ ಮೇಲೆ ಅವರ ಭಾವನಾತ್ಮಕ ಮತ್ತು ಮಾನಸಿಕ ಪರಿಣಾಮಗಳನ್ನು ಪರಿಹರಿಸಲು ಅತ್ಯಾಧುನಿಕ-ಮೂಲಸೌಕರ್ಯ ಮತ್ತು ಅತ್ಯಾಧುನಿಕ ಐವಿಎಫ್ ತಂತ್ರಜ್ಞಾನವನ್ನು ಹೊಂದಿರುವ ಹೊಸ-ಪೀಳಿಗೆಯ ಬಂಜೆತನ ಚಿಕಿತ್ಸಾ ಆಸ್ಪತ್ರೆಗಳ ಸರಪಳಿಯಾಗಿದೆ. ನಾವು ಅರ್ಹ ಮತ್ತು ಅನುಭವಿ ವೈದ್ಯರ ತಂಡವನ್ನು ಹೊಂದಿದ್ದೇವೆ; ಅವರ ಆಳವಾದ ಜ್ಞಾನ ಮತ್ತು ಪರಿಣತಿಯು ನಿಮ್ಮ ಎಲ್ಲಾ ಬಂಜೆತನ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ಕಲ್ಲನ್ನು ಬಿಡುವುದಿಲ್ಲ. ಪ್ರಯಾಣದ ಉದ್ದಕ್ಕೂ ನಿಮ್ಮನ್ನು ಪ್ರೇರೇಪಿಸಲು ಮತ್ತು ಮಾರ್ಗದರ್ಶನ ಮಾಡಲು ಬೆಂಬಲ ಮತ್ತು ಕಾಳಜಿಯುಳ್ಳ ಸಿಬ್ಬಂದಿ ಯಾವಾಗಲೂ ನಿಮ್ಮ ಪಕ್ಕದಲ್ಲಿರುತ್ತಾರೆ. ಗರ್ಭಗುಡಿ ಐವಿಎಫ್, ಬೆಂಗಳೂರಿನ ಅತ್ಯುತ್ತಮ ಫಲವತ್ತತೆ ಚಿಕಿತ್ಸಾ ಆಸ್ಪತ್ರೆ, ಬಂಜೆತನ ಸಮಸ್ಯೆಗಳು ಮತ್ತು ಲೈಂಗಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ದಂಪತಿಗಳಿಗೆ ಭಾವನಾತ್ಮಕ ಬೆಂಬಲವನ್ನು ನೀಡುತ್ತದೆ
ಸಂಪರ್ಕಿಸಿ