ಬಂಜೆತನ ಭಾವದಿಂದ ಹೊರಬರುವುದು ಹೇಗೆ?ಡಾ. ನಿಕಿತಾ ಮೂರ್ತಿ ಬಿ. ಎಸ್.
ಧೈರ್ಯದಿಂದ ಬಂಜೆತನವನ್ನು ಎದುರಿಸುವುದು: ಗರ್ಭಧರಿಸುವಿಕೆಯಲ್ಲಿನ ಭಾವನಾತ್ಮಕ ಸವಾಲುಗಳನ್ನು ಎದುರಿಸಲು ಕೆಲವು ಸಲಹೆಗಳು.
ಸಾಮಾನ್ಯವಾಗಿ ಮದುವೆಯಾದ ದಂಪತಿಯಲ್ಲಿ ಒಂದು ಕನಸಿರುತ್ತದೆ. ಚಂದದ ಕುಟುಂಬ ಆರಂಭಿಸಬೇಕು ಅನ್ನೋದೆ ಆ ಬ್ಯೂಟಿಫುಲ್ ಕನಸು. ಆದ್ರೆ ತುಂಬಾ ದಂಪತಿಗಳಲ್ಲಿ ಬಂಜೆತನ ಒಂದು ಸಮಸ್ಯೆಯಾಗಿ ಭಾವನಾತ್ಮಕವಾಗಿ ಕಾಡುತ್ತದೆ ಅನ್ನೋದು ನಿಮಗೆ ಗೊತ್ತಿರಲಿ, ಅದು ಬೇಸರ,ಹತಾಶೆ ಮೂಡಿಸಿ ದುಃಖಿತರನ್ನಾಗಿಸುತ್ತದೆ. ಆದ್ರೆ ನೆನಪಿರಲಿ, ಅದಕ್ಕೆಲ್ಲ ಹತಾಶರಾಗುವುದು ಬೇಡವೇ ಬೇಡ, ಎಲ್ಲದಕ್ಕೂ ಒಂದು ದಾರಿ ಇರುವಂತೆ ಬಂಜೆತನದ ಸಮಸ್ಯೆಗೂ ಒಂದು ದಾರಿ ಇದೆ. ಭರವಸೆ ಇದೆ. ಇದಕ್ಕೆ ಪ್ರಿಯಾ ಮತ್ತು ರೋಹನ್ ದಂಪತಿಯ ಉದಾಹರಣೆ ಹೇಳಿದ್ರೆ ನಿಮಗೆ ಸುಲಭವಾಗಿ ಅರ್ಥವಾಗುತ್ತದೆ.
ಪ್ರಿಯಾ ಮತ್ತು ರೋಹನ್ ತುಂಬಾ ಪ್ರೀತಿಯಿಂದ, ಅನೋನ್ಯವಾಗಿದ್ದ ನವದಂಪತಿ, ತಮ್ಮದೇ ಆದ ಒಂದು ಕುಟುಂಬ ಕಟ್ಟಿಕೊಳ್ಳಬೇಕು ಅಂತ ಆಸೆ ಪಟ್ಟಿದ್ದರು. ಆದ್ರೆ ಮದುವೆಯಾಗಿ ಹಲವು ವರ್ಷಗಳಾದರೂ ಪ್ರಿಯಾ ಗರ್ಭಧರಿಸದಿದ್ದಾಗ ಅವರಲ್ಲಿ ಬೇಸರ ಉಂಟಾಯಿತು. ಕೂಡಲೇ ಅವರು ಪ್ರಖ್ಯಾತ ಗರ್ಭಗುಡಿ ಐವಿಎಫ್ ಸೆಂಟರ್ ಗೆ ಭೇಟಿ ನೀಡಿದರು. ಅಲ್ಲಿ ಹಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾದರು. ಆದ್ರೂ ಅವರಿಗೆ ತಕ್ಷಣಕ್ಕೆ ಬಂಜೆತನದಿಂದ ಹೊರಬರಲು ಸಾಧ್ಯವಾಗಲಿಲ್ಲ. ಅದು ಮತ್ತಷ್ಟು ಬೇಸರ ಮೂಡಿಸತೊಡಗಿತು.
ನಿಮಗೆ ಗೊತ್ತಿರಲಿ, ಬಂಜೆತನ ಒಂದು ಭಾವನಾತ್ಮಕ ಸಮಸ್ಯೆ, ಮಗು ಆಗ್ತಿಲ್ಲವಲ್ಲ ಅನ್ನೋ ಕೊರಗು ದಂಪತಿಯನ್ನು ಬಿಟ್ಟೂಬಿಡದೆ ಕಾಡತೊಡಗುತ್ತದೆ. ಅಂತರ್ಮುಖಿ ಆಗಿಸುತ್ತದೆ. ಪ್ರಿಯಾ ಮತ್ತು ರೋಹನ್ ದಂಪತಿ ಕೂಡ ಈ ಭಾವನಾತ್ಮಕ ಸಮಸ್ಯೆಯಿಂದಲೇ ದುಃಖಿತರಾದರು. ಬೇಸರಗೊಂಡರು. ಬಂಜೆತನದಿಂದ ಮುಕ್ತರಾಗಲು ದಾರಿ ಇಲ್ಲವೇ ಅಂತ ಚಿಂತಿತರಾದರು. ಒಮ್ಮೊಮ್ಮೆ ಅವರಿಗೆ ತಾವೊಂದು ಮಹಾನ್ ದುಃಖದಲ್ಲಿ ಸಿಕ್ಕಿಬಿದ್ದಿದ್ದವೇನೋ ಅನಿಸುತ್ತಿತ್ತು. ಒಂಟಿಯಾದಂತೆ ಭಾಸವಾಗುತ್ತಿತ್ತು.
ಈ ಸಂಕಷ್ಟದ ನಡುವೆಯೇ ಪ್ರಿಯಾ ಮತ್ತು ರೋಹನ್ ಹೊಸ ಹಾದಿ ಕಂಡುಕೊಳ್ಳಲು ಬಯಸಿದರು. ಅದಕ್ಕಾಗಿ ತಮ್ಮ ಕುಟುಂಬ ಮತ್ತು ಸ್ನೇಹಿತರಿಂದ ಸಹಾಯ ಪಡೆದರು ಅಷ್ಟೇ ಅಲ್ಲ ಗರ್ಭಗುಡಿ ಐವಿಎಫ್ ಕೇಂದ್ರ ನೀಡುವ ಕೌನ್ಸೆಲಿಂಗ್ ಪಡೆದುಕೊಂಡರು. ಗರ್ಭಗುಡಿಯಲ್ಲಿರುವ ತಜ್ಞರ ಜೊತೆ ತಮ್ಮ ಮನದ ಭಾವನೆಗಳನ್ನು ಹಂಚಿಕೊಂಡರು. ಆ ಮೂಲಕ ತಮ್ಮ ಬಂಜೆತನದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಾನಸಿಕವಾಗಿ ಮುಂದಾದರು. ತಮ್ಮದೇ ದೊಡ್ಡ ಸಮಸ್ಯೆ ಅಲ್ಲ. ಇತರರೂ ಇಂಥದ್ದೇ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅನ್ನೋದನ್ನು ಗಮನಿಸಿದ ಪ್ರಿಯಾ ಮತ್ತು ರೋಹನ್ ಸ್ವಲ್ಪ ಸಮಾಧಾನ ಮಾಡಿಕೊಂಡರು. ಬಂಜೆತನದಿಂದ ಭಾವನಾತ್ಮಕವಾಗಿ ಬಳಲುತ್ತಿದ್ದವರ ನೆರವಿಗೆ ನಿಂತವರ ಜೊತೆ ಸೇರಿಕೊಂಡು ತಮ್ಮ ಮನದಾಳದ ನೋವನ್ನು ಹಂಚಿಕೊಂಡರು. ಇತರರ ನೋವಿನ ಕಥೆಗಳನ್ನ ಕೇಳಿ ನಿರಾಳರಾದರು. ಆಗಲೇ ಪ್ರಿಯಾ ಮತ್ತು ರೋಹನ್ ಗೆ ಸಮಾಧಾನವಾಗಿದ್ದು, ಇದು ನಮ್ಮೊಬ್ಬರ ಸಮಸ್ಯೆ ಅಲ್ಲ. ನಮ್ಮಂತೆಯೇ ದುಃಖಿತರು ಬಹಳ ಜನ ಇದಾರೆ ಅಂತ.
ತಮ್ಮ ಮಾನಸಿಕ ಸಮಸ್ಯೆಯಿಂದ ಹೊರಬಂದು ಲವಲವಿಕೆಯಿಂದಿರಲು ಪ್ರಿಯಾ ಮತ್ತು ರೋಹನ್ ಧ್ಯಾನ ಮಾಡಿದರು. ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ಹೊಸ ಹೊಸ ಹವ್ಯಾಸಗಳನ್ನು ರೂಢಿಸಿಕೊಂಡರು. ಅದೆಲ್ಲಾ ಅವರಿಗೆ ಕಳೆದುಹೋಗಿದ್ದ ಖುಷಿಯನ್ನು ಮತ್ತೆ ತಂದುಕೊಟ್ಟಿತ್ತು.
ಇದೆಲ್ಲದರ ಹೊರತಾಗಿಯೂ ಅವರಿಗೆ ಒಂದು ಭರವಸೆ ಇತ್ತು. ತಮ್ಮದೇ ಕುಟುಂಬವನ್ನು ಹೊಂದುವ ಕನಸು ನನಸಾಗುತ್ತದೆ ಅನ್ನೋ ಆಶಾಭಾವನೆ ಇತ್ತು. ತಜ್ಞರ ಸಹಾಯ ಪಡೆದು ಪ್ರಿಯಾ ಗರ್ಭಧರಿಸಿದರು. ಆರೋಗ್ಯಕರ ಮಗುವನ್ನು ಪಡೆದು ನೆಮ್ಮದಿ ಪಡೆದುಕೊಂಡರು.
ಫೈನಲ್ ಆಗಿ ಹೇಳೋದೇನೆಂದರೆ, ಬಂಜೆತನ ಅನ್ನೋದು ತುಸು ಕಷ್ಟಕರವಾದ, ಒಂದು ಭಾವನಾತ್ಮಕ ಪಯಣ. ಆದ್ರೆ ಸರಿಯಾದ ಸಮಾಲೋಚನೆ ಮತ್ತು ಸಹಾಯ ದೊರೆತರೆ ಕಷ್ಟದ ನಡವೆಯೂ ಹೊಸ ಭರವಸೆಯನ್ನು ಕಂಡುಕೊಳ್ಳಬಹುದು. ಗೊತ್ತಿರಲಿ, ಮಗು ಪಡೆಯಬೇಕೆಂಬ ಪ್ರಿಯ ಮತ್ತು ರೋಹನ್ ರಂತಹ ದಂಪತಿಗಳಿಗೆ ಸಹಾಯ ಮಾಡಲು, ಭಾವನಾತ್ಮಕ ಸಮಸ್ಯೆಯಿಂದ ಮುಕ್ತಿ ನೀಡಲು, ಗರ್ಭಗುಡಿ ಐವಿಎಫ್ ಕೇಂದ್ರ ಸದಾ ಸಿದ್ಧವಿದೆ.
ಬೆಂಗಳೂರಿನಲ್ಲಿ ಆರಂಭವಾದ ಗರ್ಭಗುಡಿ ಐವಿಎಫ್ ಸೆಂಟರ್ ಸಂತಾನೋತ್ಪತ್ತಿ ಆರೋಗ್ಯ ಕೇಂದ್ರವಾಗಿದ್ದು ಹಲವು ಶಾಖೆಗಳನ್ನು ಹೊಂದಿದೆ. ವೃತ್ತಿಪರತೆಯಲ್ಲಿ ಯಶಸ್ಸು, ನೈತಿಕ ಗುರಿ ಮತ್ತು ಪ್ರತಿಯೊಬ್ಬರ ಬಗ್ಗೆ ವಹಿಸುವ ಕಾಳಜಿಯಿಂದ ಗರ್ಭಗುಡಿ ನಾಡಿನಲ್ಲಿ ಮನೆಮಾತಾಗಿದೆ. ಸುಮಾರು ೮೫೦೦ ಕುಟುಂಬಗಳು ಗರ್ಭಗುಡಿ ನೆರವಿನಿಂದ ಸಂತಸದಲ್ಲಿವೆ ಎಂದು ಹೇಳಲು ನಮಗೆ ಅತೀವ ಸಂತಸವಾಗುತ್ತದೆ. ನಿಮ್ಮ ಎಲ್ಲಾ ಆಸೆಗಳನ್ನು ಈಡೇರಿಸಲು ನಮ್ಮ ಬಳಿ ನುರಿತ ಫರ್ಟಿಲಿಟಿ ವೈದ್ಯರ ಸಮೂಹವೆ ಇದೆ.ಭ್ರೂಣ ತಜ್ಞರಿದ್ದಾರೆ. ನುರಿತ ಅರೆವೈದ್ಯಕೀಯ ಸಿಬ್ಬಂದಿ ಇದೆ. ನಮ್ಮ ಆಶಯ ಒಂದೆ. "ನಮ್ಮಲ್ಲಿಗೆ ಬರುವ ಪ್ರತಿ ದಂಪತಿಯೂ ಆರೋಗ್ಯವಂತ ಮಗುವಿನೊಂದಿಗೆ ಸಂತಸದಿಂದ ಮನೆಗೆ ಹೋಗಬೇಕು”. ಆ ಆಶಯ ಈಡೇರಿಸಿದ ಸಂತೃಪ್ತಿ ನಮ್ಮ ಪಾಲಿಗಿದೆ.
ಈ ಪುಟವನ್ನು ಹಂಚಿಕೊಳ್ಳಿ
ನಮ್ಮ ಬಗ್ಗೆ
ಗರ್ಭಗುಡಿಯು ಬಂಜೆತನ ಸಮಸ್ಯೆಗಳು ಮತ್ತು ದಂಪತಿಗಳ ಮೇಲೆ ಅವರ ಭಾವನಾತ್ಮಕ ಮತ್ತು ಮಾನಸಿಕ ಪರಿಣಾಮಗಳನ್ನು ಪರಿಹರಿಸಲು ಅತ್ಯಾಧುನಿಕ-ಮೂಲಸೌಕರ್ಯ ಮತ್ತು ಅತ್ಯಾಧುನಿಕ ಐವಿಎಫ್ ತಂತ್ರಜ್ಞಾನವನ್ನು ಹೊಂದಿರುವ ಹೊಸ-ಪೀಳಿಗೆಯ ಬಂಜೆತನ ಚಿಕಿತ್ಸಾ ಆಸ್ಪತ್ರೆಗಳ ಸರಪಳಿಯಾಗಿದೆ. ನಾವು ಅರ್ಹ ಮತ್ತು ಅನುಭವಿ ವೈದ್ಯರ ತಂಡವನ್ನು ಹೊಂದಿದ್ದೇವೆ; ಅವರ ಆಳವಾದ ಜ್ಞಾನ ಮತ್ತು ಪರಿಣತಿಯು ನಿಮ್ಮ ಎಲ್ಲಾ ಬಂಜೆತನ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ಕಲ್ಲನ್ನು ಬಿಡುವುದಿಲ್ಲ. ಪ್ರಯಾಣದ ಉದ್ದಕ್ಕೂ ನಿಮ್ಮನ್ನು ಪ್ರೇರೇಪಿಸಲು ಮತ್ತು ಮಾರ್ಗದರ್ಶನ ಮಾಡಲು ಬೆಂಬಲ ಮತ್ತು ಕಾಳಜಿಯುಳ್ಳ ಸಿಬ್ಬಂದಿ ಯಾವಾಗಲೂ ನಿಮ್ಮ ಪಕ್ಕದಲ್ಲಿರುತ್ತಾರೆ. ಗರ್ಭಗುಡಿ ಐವಿಎಫ್, ಬೆಂಗಳೂರಿನ ಅತ್ಯುತ್ತಮ ಫಲವತ್ತತೆ ಚಿಕಿತ್ಸಾ ಆಸ್ಪತ್ರೆ, ಬಂಜೆತನ ಸಮಸ್ಯೆಗಳು ಮತ್ತು ಲೈಂಗಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ದಂಪತಿಗಳಿಗೆ ಭಾವನಾತ್ಮಕ ಬೆಂಬಲವನ್ನು ನೀಡುತ್ತದೆ
ಸಂಪರ್ಕಿಸಿ