ಬೆಂಗಳೂರಿನಲ್ಲಿ ICSI ಚಿಕಿತ್ಸೆ ಡಾ. ಅಪರ್ಣಾ ಎನ್.

ಬೆಂಗಳೂರಿನಲ್ಲಿ ICSI ಚಿಕಿತ್ಸೆ

ಇಂಟ್ರಾಸೈಟೋಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್ ಅಂದ್ರೆ ಏನು? ಅದು ಹೇಗೆ ಕೆಲಸ ಮಾಡುತ್ತದೆ?

ಎಷ್ಟೋ ದಂಪತಿಗಳು 'ಇನ್ನೂ ಮಗು ಆಗಲಿಲ್ಲ' ಅಂತ ಒದ್ದಾಡ್ತಿರ್ತಾರೆ, ಹೌದಾ? ಅಂಥ ದಂಪತಿಗಳಿಗೆ ಗರ್ಭಧರಿಸಲು ಸಹಾಯ ಮಾಡಲು ಬೆಂಗಳೂರಿನ ಗರ್ಭಗುಡಿ ಐವಿಎಫ್ ಸೆಂಟರ್ ICSI ಚಿಕಿತ್ಸೆ ಒದಗಿಸುತ್ತಿದೆ. ICSI ಅಥವಾ ಇಂಟ್ರಾ ಸೈಟೋಪ್ಲಾಸ್ಮಿಕ್ ವೀರ್ಯಾಣು ಇಂಜೆಕ್ಷನ್ ಆಗಿದ್ದು ಸಂತಾನೋತ್ಪತ್ತಿಗೆ ನೆರವು ನೀಡುವ ಪವರ್‌ಫುಲ್ ತಂತ್ರಜ್ಞಾನವಾಗಿದೆ. ಪುರುಷ ಬಂಜೆತನದಿಂದ ಬಳಲುತ್ತಿರುವವರಿಗೆ ICSI ಖಂಡಿತ ಒಂದು ವರದಾನವಾಗಿದೆ.

ICSI ಚಿಕಿತ್ಸೆಯಲ್ಲಿ ಒಂದೇ ಒಂದು ವೀರ್ಯಾಣುವನ್ನು ನೇರವಾಗಿ ಮೊಟ್ಟೆಯೊಳಕ್ಕೆ ಚುಚ್ಚಲಾಗುತ್ತದೆ. ಅದು ಫಲೀಕರಣದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಗರ್ಭಗುಡಿಯ ನುರಿತ ವೈದ್ಯರ ತಂಡ ನಿಮಗೆ ICSI ಪುಕ್ರಿಯೆ ಮೂಲಕ ಮಾರ್ಗದರ್ಶನ ನೀಡುತ್ತದೆ ಮತ್ತು ನಿಮ್ಮೆಲ್ಲಾ ಸಂದೇಹದ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ. ನಂಬಿ, ಬೆಂಗಳೂರಿನ ಗರ್ಭಗುಡಿ ನೀವು ಅಪ್ಪ- ಅಮ್ಮನಾಗುವ ಕನಸನ್ನು ICSI ಚಿಕಿತ್ಸೆ ಮೂಲಕ ಖಂಡಿತಾ ನನಸು ಮಾಡುತ್ತದೆ.

ನಿಮಗೆ ಗೊತ್ತಿರಲಿ, ಫರ್ಟಿಲೈಸೇಷನ್ ಆದಾಗ ಮೊಟ್ಟೆಯ ಹೊರಭಾಗದ ಗೋಡೆಗೆ ವೀರ್ಯಾಣುವಿನ ತಲೆ ಅಂಟಿಕೊಂಡಿರಬೇಕು. ಒಂದು ಸಲ ಹೀಗೆ ಅಂಟಿಕೊಂಡರೆ ಹೊರಪದರದ ಮೂಲಕ ವೀರ್ಯಾಣು ಮೊಟ್ಟೆಯ ಒಳಭಾಗಕ್ಕೆ ನಂತರ ತಳ್ಳಲ್ಪಡುತ್ತದೆ (ಸೈಟೋಪ್ಲಾಸಂ). ಅಲ್ಲೇ ಫಲೀಕರಣ ನಡೆಯೋದು.

ಆದ್ರೆ ಕೆಲವೊಮ್ಮೆ ವೀರ್ಯಾಣು ಹೊರ ಭಾಗವನ್ನು ಭೇದಿಸಿ ಒಳ ಹೋಗೋಕೆ ಆಗಲ್ಲ. ಯಾಕೆ ಅಂದ್ರೆ, ಹೊರಪದರ ದಪ್ಪವಾಗಿದ್ದು ಗಟ್ಟಿಯಾಗಿರುವುದರಿಂದ ವೀರ್ಯಕ್ಕೆ ಭೇದಿಸಲು ಆಗದಿರಬಹುದು. ಇಲ್ಲ ವೀರ್ಯಾಣುವಿಗೆ ಅಷ್ಟು ದೂರ ಸಾಗಲು ಸಾಮರ್ಥ್ಯವಿಲ್ಲದಿರಬಹುದು. ಇಂಥ ಸಮಯದಲ್ಲಿ ಐವಿಎಫ್ ಚಿಕಿತ್ಸೆ ಜೊತೆಗೆ ಇಂಟ್ರಾಸೈಟೋಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್ ಕೂಡ ನೀಡಲಾಗುತ್ತದೆ. ಇದರಿಂದ ಫರ್ಟಿಲೈಸೇಷನ್ ಆಗಲು ಸಹಾಯವಾಗುತ್ತದೆ. ICSI ಪ್ರಕ್ರಿಯೆಯಲ್ಲಿ ಒಂದೇ ಒಂದು ವೀರ್ಯಾಣುವನ್ನ ನೇರವಾಗಿ ಮೊಟ್ಟೆಯ ಸೈಟೋಪ್ಲಾಸಂಗೆ ಚುಚ್ಚಲಾಗುತ್ತದೆ.

ICSI, ಐವಿಎಫ್ ಚಿಕಿತ್ಸೆಯ ಒಂದು ಭಾಗ ಅಷ್ಟೆ. ICSI ಪ್ರಯೋಗಾಲಯದಲ್ಲಿ ನಡೆಯುವುದರಿಂದ ನಿಮ್ಮ ಐವಿಎಫ್ ಚಿಕಿತ್ಸೆಯು, ICSI ಇಲ್ಲದ ಐವಿಎಫ್ ಚಿಕಿತ್ಸೆಗಿಂತ ಹೆಚ್ಚು ಭಿನ್ನವಾಗಿರುವುದಿಲ್ಲ.

ಐವಿಎಫ್ ಪಡೆದ ಮಹಿಳೆ ಅಂಡಾಶಯವನ್ನು ಉತ್ತೇಜಿಸುವ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ವೈದ್ಯರು ರಕ್ತ ಪರೀಕ್ಷೆ ಮತ್ತು ಅಲ್ಟ್ರಾಸೌಂಡ್ ಮೂಲಕ ಐವಿಎಫ್ ಚಿಕಿತ್ಸೆ ಏನಾಗ್ತಿದೆ ಅನ್ನೋದನ್ನ ಗಮನಿಸ್ತಿರ್ತಾರೆ. ಒಂದುಸಲ ಮಹಿಳೆಯಲ್ಲಿ ಸರಿಯಾದ ಗಾತ್ರದಲ್ಲಿ ಫಾಲಿಕಲ್ಸ್ ಬೆಳೆಯಿತು ಅಂದಾಗ ಆಕೆ ಮೊಟ್ಟೆ, ಮರುಪಡೆಯುವಿಕೆಗೆ ಒಳಗಾಗಬೇಕಾಗುತ್ತದೆ. ಅಂದ್ರೆ ಇದು ಅಲ್ಫಾ ಸೌಂಡ್ ಮೂಲಕ ಸೂಜಿ ಬಳಸಿ ಅಂಡಾಶಯದಿಂದ ಮೊಟ್ಟೆಯನ್ನು ಹೊರತೆಗೆಯುವ ಪ್ರಕ್ರಿಯೆ.

ಬೆಂಗಳೂರಿನಲ್ಲಿ ICSI ಚಿಕಿತ್ಸೆಯ ಪ್ರಕ್ರಿಯೆ ಏನು?

ಬೆಂಗಳೂರಿನ ಗರ್ಭಗುಡಿ ಐವಿಎಫ್ ಸೆಂಟರ್‌ನ ICSI ಚಿಕಿತ್ಸೆಯ ಪ್ರಕ್ರಿಯೆ ನಮಗೆ ಅರ್ಥವಾಗಿದೆ. ಹಾಗಾಗಿ ನಾವು ರೋಗಿಗಳಿಗೆ ಸಮಗ್ರ ಆರೈಕೆ ನೀಡಲು ಮೊದಲ ಆದ್ಯತೆ ನೀಡುತ್ತೇವೆ. ಬೆಂಗಳೂರಿನಲ್ಲಿರುವ ಗರ್ಭಗುಡಿಯ ಅತ್ಯಾಧುನಿಕ ICSI ಸೆಂಟರ್‌ಇತ್ತೀಚೆಗಿನ ಆಧುನಿಕ ತಂತ್ರಜ್ಞಾನವನ್ನು ಹೊಂದಿದ್ದು ನುರಿತ ವೈದ್ಯಕೀಯ ಸಿಬ್ಬಂದಿ ಹೊಂದಿದೆ. ಈ ಟೀಮ್ ರೋಗಿಯ ಸಕ್ಸಸ್‌ಗಾಗಿ ಸದಾ ದುಡಿಯುತ್ತದೆ.

ICSI ಚಿಕಿತ್ಸೆಯಲ್ಲಿ ಅತ್ಯಂತ ಹುಷಾರಾಗಿ ಆರೋಗ್ಯವಂತ ವೀರ್ಯಾಣುವನ್ನ ಆಯ್ಕೆ ಮಾಡಿಕೊಂಡು ಅದನ್ನು ನೇರವಾಗಿ ಮೊಟ್ಟೆಗೆ ಸೇರಿಸಲಾಗುತ್ತದೆ. ಅದಕ್ಕಾಗಿ ವಿಶೇಷವಾದ ತಂತ್ರಜ್ಞಾನ ಮೈಕ್ರೋಪಿಪೆಟ್ ಅನ್ನು ಬಳಸಲಾಗುತ್ತದೆ. ವಿಶೇಷವೆಂದರೆ, ಗರ್ಭಗುಡಿಯ ತಂಡ ICSI ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶನ ಮಾಡುತ್ತದೆ. ಆರೈಕೆ ಮಾಡುತ್ತದೆ. ಹಾಗಾಗಿ ನೀವು ಮಗು ಪಡೆಯುವ ನಿಮ್ಮ ಕನಸಿನ ಜರ್ನಿಯಲ್ಲಿ ಅತ್ಯಂತ ಆತ್ಮವಿಶ್ವಾಸದಿಂದಿರಬಹುದು. ಯಾಕೆಂದ್ರೆ ನಿಮ್ಮ ಜೊತೆ ಗರ್ಭಗುಡಿ ಸದಾ ಸಿದ್ಧವಿರುತ್ತದೆ.

ಯಾಕೆ ನನಗೆ ICSI ಬೇಕು?

• ICSI ಫಲವತ್ತತೆಯ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡುತ್ತದೆ. ಹೇಗೆ ಅಂದ್ರೆ,

• ಕೃತಕ ಗರ್ಭಧಾರಣೆ ಅಥವಾ ಐವಿಎಫ್ ಚಿಕಿತ್ಸೆ ಮಾಡಲು ಕಡಿಮೆ ವೀರ್ಯ ಉತ್ಪಾದನೆ (Intrauterine Insemination - IUI).

• ವೀರ್ಯಾಣುವಿನಲ್ಲಿ ಸಹಜ ಚಲನೆ ಇಲ್ಲದಿದ್ದಾಗ.

• ಮೊಟ್ಟೆಗೆ ಅಂಟಿಕೊಳ್ಳುವಲ್ಲಿ ವೀರ್ಯಾಣುವಿಗೆ ತೊಂದರೆ ಇದ್ದರೆ.

• ಪುರುಷನ ಸಂತಾನೋತ್ಪತ್ತಿ ನಾಳ ಮುಚ್ಚಿದ್ದಾಗ. ಹೋಗಿದ್ದ ವೀರ್ಯ ಹೊರಬರಲು ಆಗದೆ ಇದ್ದಾಗ.

• ಆರೋಗ್ಯವಂತ ವೀರ್ಯವಿದ್ದೂ ಸಾಂಪ್ರದಾಯಿಕ ಐವಿಎಫ್ ಚಿಕಿತ್ಸೆಯಿಂದ ಮೊಟ್ಟೆ ಫರ್ಟಿಲೈಜ್ ಆಗದಿದ್ದಾಗ, ಇನ್‌ವಿಟ್ರೋ ಮೆಚೂರ್ಡ್ ಮೊಟ್ಟೆಗಳನ್ನು ಬಳಸಿದಾಗ.

• ಹಿಂದೆ ಸಂಸ್ಕರಿಸಿದ್ದ ಫ್ರಾಜನ್ ಎಗ್‌ಗಳನ್ನು ಬಳಸಿದಾಗ.

• ಐವಿಎಫ್ ಚಿಕಿತ್ಸೆ ವಿಫಲವಾದಾಗ.

• ಪುರುಷನಲ್ಲಿ ಕಡಿಮೆ ವೀರ್ಯ(ಆಲಿಗೋಸ್ಪರ್ಮಿಯಾ) ಅಥವಾ ಶೂನ್ಯ ವೀರ್ಯ ಇದ್ದಾಗ. (ಆಜೂಸ್ಪರ್ಮಿಯಾ).

ICSI ನಿಜವಾಗಿಯೂ ವರ್ಕ್‌ ಆಗುತ್ತಾ? ಬೆಂಗಳೂರಿನಲ್ಲಿ ICSI ಸಕ್ಸಸ್‌ ದರ ಎಷ್ಟು?

ನೀವು ಸಕ್ಸಸ್‌ ರೇಟ್‌ ಹೆಚ್ಚಿರುವ ICSI ಸೆಂಟರ್‌ನ ಬೆಂಗೂರಿನಲ್ಲಿ ಹುಡುಕ್ತಾ ಇದ್ರೆ ಗರ್ಭಗುಡಿಗಿಂತ ಉತ್ತಮವಾದದ್ದು ಇನ್ನೊಂದು ಸಿಗಲಾರದು. ಗರ್ಭಗುಡಿಯಲ್ಲಿರುವ ನುರಿತ ವೈದ್ಯರು ಮತ್ತು ಅತ್ಯಾಧುನಿಕ ತಂತ್ರಜ್ಞಾನ, ಬಂಜೆತನದಿಂದ ಬಳಲುತ್ತಿದ್ದ ಹಲವು ದಂಪತಿಗಳ ಬಾಳಿಗೆ ಬೆಳಕು ತಂದಿದೆ. ಅವರೆಲ್ಲರಿಗೂ ಮಗು ಆಗಿ ಈಗ ಖುಷಿಯಾಗಿದ್ದಾರೆ. ಗರ್ಭಗುಡಿಗೆ ಗೊತ್ತಿದೆ ಪ್ರತಿಯೊಂದು ದಂಪತಿಯ ಹಾದಿಯೂ ಭಿನ್ನ ಮತ್ತು ಪ್ರತಿಯೊಬ್ಬರಿಗೂ ವೈಯಕ್ತಿಕವಾದ ಚಿಕಿತ್ಸೆ ಮತ್ತು ಆರೈಕೆ ಬೇಕು ಅಂತ. ಅದನ್ನು ಗರ್ಭಗುಡಿ ಟೀಮ್‌ ಅದ್ಭುತವಾಗಿ ಮಾಡುತ್ತದೆ. ವಿಶೇಷ ಅಂದ್ರೆ, ಗರ್ಭಗುಡಿಯಲ್ಲಿ ICSI ಸಕ್ಸಸ್‌ ರೇಟ್‌ ಬೇರೆ ಎಲ್ಲರಿಗಿಂತ ಹೆಚ್ಚಿದೆ ಅಂತ ಹೇಳಲು ನಮಗೆ ಹೆಮ್ಮೆ ಎನಿಸುತ್ತದೆ.

ICSI ಶೇ. ೫೦ ರಿಂದ ೮೦ರಷ್ಟು ಮೊಟ್ಟೆಗಳನ್ನು ಫಲವತ್ತಾಗಿಸುತ್ತದೆ. ಐವಿಎಫ್‌ ಮತ್ತು ICSI ಸಕ್ಸಸ್ ರೇಟ್‌ ಎರಡೂ ಒಂದೇ ಆಗಿರುತ್ತದೆ. ಎಲ್ಲಾ ಮೊಟ್ಟೆಗಳೂ ICSI, IVF ನಿಂದ ಫಲವತ್ತತೆಗೊಳ್ಳುವುದಿಲ್ಲ. ಮೊಟ್ಟೆಯೊಳಕ್ಕೆ ವೀರ್ಯಾಣುವನ್ನ ನೇರವಾಗಿ ಚುಚ್ಚಿದಾಗಲೂ ಫರ್ಟಿಲೈಸೇಷನ್‌ ಗ್ಯಾರಂಟಿ ಇರಲ್ಲ. ನಿಮಗೆ ಗೊತ್ತಿರಲಿ, ಫರ್ಟಿಲೈಸೇಷನ್ ದರದಿಂದ, ಕ್ಲಿನಿಕಲ್ ಪ್ರಗ್ನೆನ್ಸಿ ಮತ್ತು ಜನನ ದರ ಗೊತ್ತಾಗುವುದಿಲ್ಲ. ICSI ಪ್ರಕ್ರಿಯೆಯಿಂದ ಈ ಕೆಳಗಿನ ಹಲವು ಸಮಸ್ಯೆಗಳು ಕಂಡುಬರಬಹುದು.

ಕೆಲವು ಅಥವಾ ಎಲ್ಲಾ ಮೊಟ್ಟೆಗಳೂ ಹಾಳಾಗಿರಬಹುದು. ವೀರ್ಯಾಣು ಸೇರಿಸಿದಾಗಲೂ ಮೊಟ್ಟೆಯು ಭ್ರೂಣವಾಗಿ ರೂಪುಗೊಳ್ಳದಿರಬಹುದು. ಭ್ರೂಣ ಬೆಳವಣಿಗೆಯನ್ನು ನಿಲ್ಲಿಸಬಹುದು. ಒಂದು ಸಲ ಫರ್ಟಿಲೈಸೇಷನ್‌ಆಗಿ ICSI ಇಲ್ಲದೆ ಅಥವಾ ಇನ್ನೂ ಐವಿಎಫ್‌ ಚಿಕಿತ್ಸೆ ಪಡೆದುಕೊಂಡಲ್ಲಿ ದಂಪತಿಗಳಿಗೆ ಒಂದು, ಎರಡು ಅಥವಾ ತ್ರಿವಳಿ ಮಗು ಹುಟ್ಟಬಹುದು.

ICSI ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತಾ? ICSIನಿಂದ ಉಂಟಾಗಬಹುದಾದ ಸಂಭಾವ್ಯ ಅಪಾಯಗಳು ಯಾವುವು?

ಪುರುಷ ಬಂಜೆತನದಿಂದ ಹೊರಬರಲು ಇರುವ ಅತಿ ಮುಖ್ಯವಾದ ಪರಿಣಾಮಕಾರಿ ಚಿಕಿತ್ಸೆ ಎಂದ್ರೆ ಅದು ICSI. ಹಾಗಾಗಿ ನೀವು ICSIನಿಂದ ಉಂಟಾಗಬಹುದಾದ ಸಂಭವನೀಯ ಅಪಾಯಗಳ ಬಗ್ಗೆ ತಿಳಿದುಕೊಂಡರೆ ಒಳ್ಳೆಯದು. ಯಾಕೆಂದ್ರೆ ICSIನಿಂದ ಬಹು ಗರ್ಭಧಾರಣೆಗಳಾಗಬಹುದು, ಒವರಿಯನ್‌ ಹೈಪರ್ ಸ್ಟಿಮ್ಯುಲೇಷನ್‌ ಸಿಂಡ್ರೋಮ್ ಉಂಟಾಗಬಹುದು ಮತ್ತು ಮಗು ಅಸಹಜವಾಗಿ ಹುಟ್ಟಬಹುದು. ಆದ್ರೆ ನಂಬಿ, ಗರ್ಭಗುಡಿ ತನ್ನ ರೋಗಿಗಳಿಗೆ ಪಾರದರ್ಶಕವಾದ ಮತ್ತು ಸಮಗ್ರವಾದ ಚಿಕಿತ್ಸೆಯನ್ನು ನೀಡುತ್ತದೆ. ಬೆಂಗಳೂರಿನ ಗರ್ಭಗುಡಿಯ ನುರಿತ ವೈದ್ಯರ ತಂಡ ICSI ಚಿಕಿತ್ಸೆಯಿಂದ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ಮೊದಲು ರೋಗಿಗಳ ಜೊತೆ ಚರ್ಚಿಸುತ್ತದೆ. ಹಾಗೆ ಸಮಸ್ಯೆಗಳನ್ನು ಕಡಿಮೆ ಮಾಡಿ ಸಕ್ಸಸ್ ರೇಟ್‌ ಹೆಚ್ಚು ಮಾಡಲು ಸದಾ ಪ್ರಯತ್ನಿಸುತ್ತದೆ.

ನಂಬಿ, ತಾಯ್ತನ ಪಡೆಯಲು ಹಂಬಲಿಸುವ ದಂಪತಿಗಳಿಗೆ ಗರ್ಭಗುಡಿಯಲ್ಲಿ ಪ್ರತಿ ಹೆಜ್ಜೆಯಲ್ಲೂ ಉತ್ತಮವಾದ ಚಿಕಿತ್ಸೆ ಮತ್ತು ಆರೈಕೆ ಸಿಗಲಿದೆ. ಅದು ನಮ್ಮಗುರಿ.

ಮಹಿಳೆ ನೈಸರ್ಗಿಕವಾಗಿ ಗರ್ಭಧರಿಸಿದಾಗ ಮಗುವಿನಲ್ಲಿ ಶೇ.೧.೫ ರಿಂದ ೩ರಷ್ಟು ಮಾತ್ರ ನ್ಯೂನತೆಗಳಾಗುವ ಸಂಭವ ಇದೆ. ICSI ಮತ್ತು ಐವಿಎಫ್‌ ಚಿಕಿತ್ಸೆ ಪಡೆದಾಗಲೂ ಇಷ್ಟೇ ಪ್ರಮಾಣದಲ್ಲಿ ನ್ಯೂನತೆಗಳಾಗಬಹುದು. ಆದ್ರೆ ಸ್ವಾಭಾವಿಕ ಗರ್ಭಕ್ಕಿಂತ ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ನ್ಯೂನತೆ ಇರುತ್ತದೆ ಅನ್ನೋದು ಸತ್ಯ.

ಯಾಕೆ ಹಾಗಾಗುತ್ತದೆ ಅಂದ್ರೆ, ಬಂಜೆತನ ಮತ್ತು ಬಂಜೆತನ ನಿವಾರಣೆಗೆ ಚಿಕಿತ್ಸೆ ಪಡೆದುಕೊಳ್ಳದೆ ಇರುವುದು. ICSI ಚಿಕಿತ್ಸೆ ಪಡೆದಾಗಲೂ ಬೆಕ್‌ವಿಥ್ವೀಡ್‌ಮನ್‌ ಸಿಂಡ್ರೊಮ್, ಏಂಜೆಲ್‌ಮನ್ ಸಿಂಡ್ರೋಮ್, ಹೈಪೋಸ್ಟೇಡಿಯಸ್‌ ಅಥವಾ ಸೆಕ್ಸ್ ಕ್ರೋಮೋಸೋಮ್‌ ಅಬ್ನಾರ್ಮಲಿಟೀಸ್ ಕಾಣಿಸಿಕೊಳ್ಳಬಹುದು. ICSI ಬಳಸಿ ಗರ್ಭಧರಿಸಿದ ೧ ಪರ್ಸೆಂಟ್‌ಗಿಂತ ಕಡಿಮೆ ಮಕ್ಕಳಲ್ಲಿ ಇಂಥ ಸಮಸ್ಯೆಗಳು ಉಂಟಾಗಬಹುದು.

ಕೆಲವೊಮ್ಮೆ ಬಂಜೆತನಕ್ಕೆ ಕಾರಣವಾಗಬಹುದಾದ ಅಂಶಗಳು ಅನುವಂಶೀಯವೂ ಆಗಿರಬಹುದು. ಉದಾಹರಣಗೆ ಹೇಳೋದಾದ್ರೆ, ICSI ಚಿಕಿತ್ಸೆಯಿಂದ ಜನಿಸಿದ ಗಂಡು ಮಕ್ಕಳು ತಂದೆಯಂತೆಯೇ ಬಂಜೆತನದ ಸಮಸ್ಯೆಯಿಂದ ಮುಂದೆ ಬಳಲಬಹುದು.

ಬೆಂಗಳೂರಿನಲ್ಲಿ ICSI ಚಿಕಿತ್ಸಾ ವೆಚ್ಚ

ಬಂಜೆತನದಿಂದ ಬಳಲುತ್ತಿರುವ ಅನೇಕ ದಂಪತಿಗಳು ಬೆಂಗಳೂರಿನಲ್ಲಿ ICSI ಚಿಕಿತ್ಸೆ ಪಡೆಯಬೇಕಾದಲ್ಲಿ ವೆಚ್ಚದ ಬಗ್ಗೆ ಸ್ವಲ್ಪ ಯೋಚಿಸಲೇಬೇಕು. ಗರ್ಭಗುಡಿಯದೊಂದು ನಂಬಿಕೆ ಇದೆ. ಪ್ರತಿಯೊಬ್ಬರೂ ಸಾಧ್ಯವಾದಷ್ಟು ಉತ್ತಮ ಆರೈಕೆ ಪಡೆಯಬೇಕು ಅನ್ನೋದೆ ಆ ನಂಬಿಕೆ.

ಹಾಗಾಗಿ ಗರ್ಭಗುಡಿ ಗುಣಮಟ್ಟದಲ್ಲಿ ಮತ್ತು ಯಶಸ್ಸಿನಲ್ಲಿ ಕಾಂಪ್ರೊಮೈಸ್‌ಮಾಡಿಕೊಳ್ಳದೆ ಕೈಗೆಟುಕುವ ದರದಲ್ಲಿ ICSI ಚಿಕಿತ್ಸೆ ನೀಡುತ್ತದೆ. ಗರ್ಭಗುಡಿಯ ನುರಿತ ವೈದ್ಯರ ಸಮೂಹ ಮತ್ತು ಅತ್ಯಾಧುನಿಕ ತಂತ್ರಜ್ಞಾನ ನಿಮಗೆ ಅತ್ಯುನ್ನತ ಮಟ್ಟದ ಆರೈಕೆ ನೀಡುತ್ತದೆ. ಯಾಕೆಂದ್ರೆ ನಮಗೆ ಹಣವೊಂದೇ ಮುಖ್ಯವಲ್ಲ.

ಗರ್ಭಗುಡಿಯಿಂದ ಇನ್ನೊಂದು ಲಾಭ ಇದೆ. ಹಲವು ಪೇಮೆಂಟ್‌ ಪ್ಲಾನ್ಸ್ ಇದ್ದು ನಿಮಗೆ ಬೇಕಾದ ಪ್ಲಾನ್‌ ಆರಿಸಿಕೊಳ್ಳಬಹುದು. ಜೊತೆಗೆ ಗರ್ಭಗುಡಿ ಟೀಮ್ ಬೆಂಗಳೂರಿನಲ್ಲಿ ICSI ವೆಚ್ಚ ಕಡಿಮೆ ಮಾಡಲು ವಿಮೆ ಪೂರೈಕೆದಾರರ ಜೊತೆ ಕೂಡ ಚರ್ಚಿಸುತ್ತದೆ.

ಈ ಪುಟವನ್ನು ಹಂಚಿಕೊಳ್ಳಿ

ನಮ್ಮ ಬಗ್ಗೆ

ಗರ್ಭಗುಡಿಯು ಬಂಜೆತನ ಸಮಸ್ಯೆಗಳು ಮತ್ತು ದಂಪತಿಗಳ ಮೇಲೆ ಅವರ ಭಾವನಾತ್ಮಕ ಮತ್ತು ಮಾನಸಿಕ ಪರಿಣಾಮಗಳನ್ನು ಪರಿಹರಿಸಲು ಅತ್ಯಾಧುನಿಕ-ಮೂಲಸೌಕರ್ಯ ಮತ್ತು ಅತ್ಯಾಧುನಿಕ ಐವಿಎಫ್ ತಂತ್ರಜ್ಞಾನವನ್ನು ಹೊಂದಿರುವ ಹೊಸ-ಪೀಳಿಗೆಯ ಬಂಜೆತನ ಚಿಕಿತ್ಸಾ ಆಸ್ಪತ್ರೆಗಳ ಸರಪಳಿಯಾಗಿದೆ. ನಾವು ಅರ್ಹ ಮತ್ತು ಅನುಭವಿ ವೈದ್ಯರ ತಂಡವನ್ನು ಹೊಂದಿದ್ದೇವೆ; ಅವರ ಆಳವಾದ ಜ್ಞಾನ ಮತ್ತು ಪರಿಣತಿಯು ನಿಮ್ಮ ಎಲ್ಲಾ ಬಂಜೆತನ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ಕಲ್ಲನ್ನು ಬಿಡುವುದಿಲ್ಲ. ಪ್ರಯಾಣದ ಉದ್ದಕ್ಕೂ ನಿಮ್ಮನ್ನು ಪ್ರೇರೇಪಿಸಲು ಮತ್ತು ಮಾರ್ಗದರ್ಶನ ಮಾಡಲು ಬೆಂಬಲ ಮತ್ತು ಕಾಳಜಿಯುಳ್ಳ ಸಿಬ್ಬಂದಿ ಯಾವಾಗಲೂ ನಿಮ್ಮ ಪಕ್ಕದಲ್ಲಿರುತ್ತಾರೆ. ಗರ್ಭಗುಡಿ ಐವಿಎಫ್, ಬೆಂಗಳೂರಿನ ಅತ್ಯುತ್ತಮ ಫಲವತ್ತತೆ ಚಿಕಿತ್ಸಾ ಆಸ್ಪತ್ರೆ, ಬಂಜೆತನ ಸಮಸ್ಯೆಗಳು ಮತ್ತು ಲೈಂಗಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ದಂಪತಿಗಳಿಗೆ ಭಾವನಾತ್ಮಕ ಬೆಂಬಲವನ್ನು ನೀಡುತ್ತದೆ

ಸಂಪರ್ಕಿಸಿ