ಸ್ಪರ್ಮ್ ಫ್ರೀಜಿಂಗ್ (ಸೆಮೆನ್ ಫ್ರೀಜಿಂಗ್)

ಸ್ಪರ್ಮ್ ಫ್ರೀಜಿಂಗ್ (ಸೆಮೆನ್ ಫ್ರೀಜಿಂಗ್)

ಸೆಮೆನ್‌ಫ್ರೀಜಿಂಗ್‌ಅಥವಾ ವೀರ್ಯ ಘನೀಕರಣ ಪುರುಷನ ಫಲವತ್ತತೆಯನ್ನು ಸಂರಕ್ಷಿಸಲು ಬಳಸುವ ಒಂದು ವಿಧಾನ. ಸೆಮೆನ್‌ಜಿಂಗ್‌ಅಥವಾ ಸೆಮೆನ್‌ಕ್ರಿಯೋಸರ್ವೇಷನ್‌ನು ಅಂದ್ರೆ ಪುರುಷರು ತಮ್ಮ ವೀರ್ಯವನ್ನ ಸಂರಕ್ಷಿಸಲು ಅಥವಾ ಶೇಖರಿಸಿಡಲು ಬಳಸುವ ಒಂದು ಮಾರ್ಗ. ಅಂದ್ರೆ ಮುಂದೆ ಯಾವಾಗಲಾದ್ರೂ ಬೇಕಾದ್ರೆ ಅದನ್ನು ಬಳಸಿಕೊಳ್ಳುವ ಯೋಜನೆ ಇದ್ದವರು ಹೀಗೆ ಸಮೆನ್‌ನ ಫ್ರೀಜಿಂಗ್‌ಮಾಡಿಸ್ತಾರೆ. ಕೀಮೋಥೆರಪಿ ಮತ್ತು ಹಲವು ರೀತಿಯ ಕ್ಯಾನ್ಸರ್ ರೋಗಗಳಿಗೆ ಔಷಧಿಗಳನ್ನು ತೆಗೆದುಕೊಂಡಾಗ ವೀರ್ಯದ ಗುಣಮಟ್ಟ ಹಾಳಾಗುತ್ತದೆ.ಹಾಗಾಗಿ ಈ ಯಾವುದೇ ಟೀಟೆಂಟ್‌ ತೆಗೆದುಕೊಳ್ಳುವ ಮೊದಲೇ ತಮ್ಮ ವೀರ್ಯವನ್ನು ಫ್ರೀಜ್‌ಮಾಡಲು ಆಯ್ಕೆ ಮಾಡಬಹುದು.

ವೀರ್ಯ ಘನೀಕರಣಕ್ಕೆ ಸೂಚನೆಗಳು

ವೀರ್ಯ ಘನೀಕರಣ ಇದೆಯಲ್ಲ ಇದು ಇನ್ನೂ ತಂದೆಯಾಗಲು ಸಾಧ್ಯವಾಗದ ಹಲವು ರೋಗಿಗಳಿಗೆ ಸಹಾಯ ಮಾಡುತ್ತದೆ. ಎಂಥವರಿಗೆ ಅಂದ್ರೆ,

ಕ್ಯಾನ್ಸರ್‌ರೋಗಿಗಳು

ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿ ಕೀಮೋಥೆರಪಿ ಮತ್ತು ರೇಡಿಯೋಥೆರಪಿ ಚಿಕಿತ್ಸೆ ಪಡೆಯುವ ಮೊದಲು ತನ್ನ ಫಲವತ್ತತೆಯನ್ನು ಸಂರಕ್ಷಿಸಬೇಕಾಗುತ್ತದೆ. ಕಾರಣ, ಮುಂದೆ ಎಂದಾದರೂ ನಾನು ಅಪ್ಪನಾಗಬಹುದು ಅನ್ನೋ ಆಸೆಯಿಂದ ಅಷ್ಟೆ. ಒಂದ್ಬಲ ರೋಗ ವಾಸಿಯಾಗಿ ಅದರಿಂದ ಹೊರಬಂದ ನಂತರ ವೀರ್ಯದಲ್ಲಿ ಬದಲಾವಣೆ ಆಗಿರುವ ಸಂಭವವಿರುತ್ತದೆ. ಇನ್ನೂ ಒಂದು ವಿಷಯ ಏನಂದ್ರೆ, ಸಂತಾನೋತ್ಪತ್ತಿ ಮೇಲೆ ಕ್ಯಾನ್ಸರ್‌ಟೆಂಟ್‌ಏನಾದ್ರೂ ಪರಿಣಾಮ ಬೀರಿದ್ದಲ್ಲಿ ಅಂಥ ಸಂದರ್ಭದಲ್ಲಿ ಬಂಜೆತನ ನಿವಾರಣೆಗಾಗಿ ಸಂರಕ್ಷಿಸಿಟ್ಟ ಅವರದ್ದೇ ವೀರ್ಯವನ್ನ ಬಳಸಬಹುದು.

ವ್ಯಾಸೆಕ್ಟಮಿ

ಕೆಲವು ರೋಗಿಗಳಿರ್ತಾರೆ. ಇನ್ನು ಮಕ್ಕಳು ಸಾಕು ಅಂತಾನೋ ಅಥವಾ ಮಕ್ಕಳೇ ಬೇಡ ಅಂತಾನೋ ಸಂತಾನಹರಣ ಚಿಕಿತ್ಸೆ ಮಾಡಿಸಿಕೊಳ್ಳಲು ನಿರ್ಧರಿಸಿರ್ತಾರೆ. ಆದ್ರೆ ಮುಂದೆ ಯಾವುದಕ್ಕೂ ಇರಲಿ ಅಂತ ತಮ್ಮ ವೀರ್ಯವನ್ನ ಕ್ರಿಪ್ಯೂಪಿಸರ್ವಡ್‌ಮಾಡಿಡಲು ಬಯಸ್ತಾರೆ. ಇಂಟ್ರಸ್ಟಿಂಗ್‌ಅಂದ್ರೆ ಅವರು ಭವಿಷ್ಯದಲ್ಲಿ ಪೋಷಕರಾಗುವ ಅವಕಾಶವನ್ನು ಹೊಂದಿರುತ್ತಾರೆ.

ಕಳಪೆ ವೀರ್ಯದ ಗುಣಮಟ್ಟ

ಫಲವತ್ತತೆ ಚಿಕಿತ್ಸೆಯನ್ನ ಆರಂಭಿಸುವ ಮೊದಲು ವೀರ್ಯದ ಗುಣಮಟ್ಟ ಕಡಿಮೆ ಇರುವ ರೋಗಿಗಳಲ್ಲಿ ಕೆಲವು ವೀರ್ಯದ ಮಾದರಿಗಳನ್ನು ಫ್ರೀಜ್‌ಮಾಡಿಡಲು ಶಿಫಾರಸು ಮಾಡಲಾಗುತ್ತದೆ. ಅಂಡಾಣುವನ್ನು ಮರುಪಡೆಯುವ ದಿನದಂದು ಮೊಟ್ಟೆಗಳನ್ನು ಫಲೀಕರಣಗೊಳಿಸಲು ವೀರ್ಯ ಲಭ್ಯವಿದೆಯೇ ಇಲ್ಲವೇ ಅನ್ನೋದನ್ನು ಖಚಿತಪಡಿಸಿಕೊಳ್ಳುವುದೇ ಮುಖ್ಯ ಉದ್ದೇಶವಾಗಿರುತ್ತದೆ.

ಡೆಪೋಸಿಷನ್‌ಸಂಬಂಧಿ ಸಮಸ್ಯೆಗಳು

ಸ್ಪರ್ಮ್‌ಕ್ರಿಯೋಪ್ರಿಸರ್ವೇಷನ್‌ಪುರುಷರಿಗೆ ಅತ್ಯಂತ ಆರಾಮದಾಯಕ ವಿಧಾನ ಅನ್ನಬಹುದು.ಯಾಕೆಂದ್ರೆ ಐವಿಎಫ್‌ಅಥವಾ ಐಯುಐ ಚಿಕಿತ್ಸೆ ಪಡೆಯುವ ದಿನ ಪುರುಷ ವೀರ್ಯ ಸ್ಕಲನ ಮಾಡಿ ಕೊಡಬೇಕು. ಇದು ಹಲವರಿಗೆ ಮುಜುಗರ ಉಂಟುಮಾಡಬಹುದು. ಕೆಲವರಿಗೆ ಇಷ್ಟ ಇಲ್ಲದೆ ಇರಬಹುದು.ಮಾನಸಿಕವಾಗಿ ಹಿಂಸೆ ಎನಿಸಬಹುದು. ಅಥವಾ ಆಸ್ಪತ್ರೆಯಿಂದ ಮನೆ ದೂರ ಇದ್ದು ಆ ದಿನ ಬರಲಾಗದಿರಬಹುದು. ಇಲ್ಲಿ ಒಂದು ವಿಷಯ ಗಮನಿಸಬೇಕು, ಸಂಗ್ರಹಿಸಲಾದ ಮಾದರಿಗಳನ್ನು ಸರಿಯಾದ ರೀತಿಯಾಗಿ ಡೋಸ್ ಅಥವಾ ಸ್ವಲ್ಪ ಸ್ವಲ್ಪವೇ ಬಳಸಲಾಗುತ್ತದೆ. ವೃಷಣದ ಬಯಾಪ್ತಿ ಅಥವಾ ಎಪಿಡಿಡ್ರೈಮಲ್‌ಸ್ಪರ್ಮ್‌ಆಸ್ಪಿರೇಷನ್,ಎಚ್ಐವಿ ಅಥವಾ ಕ್ಯಾನ್ಸರ್‌ಇದ್ದಲ್ಲಿ ಸ್ಪರ್ಮ್‌ವಾಷಿಂಗ್ ಮಾಡಿ ವೀರ್ಯ ಪಡೆಯಲಾಗಿರುತ್ತದೆ.

ವೀರ್ಯದಾನಿಗಳು

ಇದು ವೆರಿ ವೆರಿ ಇಂಪಾರ್ಟೆಂಟ್.ಏನಂದ್ರೆ ವೀರ್ಯದ ಮಾದರಿಗಳು ಎಚ್‌ಐವಿ ಕಾಯಿಲೆಯಿಂದ ಯಾವುದೇ ತೊಂದರೆಗೊಳಗಾಗಿಲ್ಲ, ಆರೋಗ್ಯವಾಗಿವೆ ಅನ್ನೋದನ್ನು ಆಸ್ಪತ್ರೆಯವರು ಹಲವು ಪರೀಕ್ಷೆಗಳ ಮೂಲಕ ದೃಢಪಡಿಸಿಕೊಳ್ಳಬೇಕಾಗುತ್ತದೆ. ಮಾದರಿ ಸಂಗ್ರಹಿಸಿದ ತಿಂಗಳ ನಂತರ ಟ್ರೈನಿಂಗ್ ನಡೆಸಬೇಕು. ಯಾಕೆಂದ್ರೆ ಸಂಗ್ರಹಿಸಿದ ಮಾದರಿಗಳನ್ನು ಫ್ರೀಜ್‌ನಲ್ಲಿಡಬೇಕಾಗುತ್ತದೆ.

ಮಂಗಳಮುಖಿಯರು

ಲಿಂಗಪರಿವರ್ತನೆ ಶಸ್ತ್ರ ಚಿಕಿತ್ಸೆಗೆ ಒಳಪಡುವ ಮುನ್ನ ಮಂಗಳಮುಖಿ ಮಹಿಳೆ ತನ್ನ ಮಾದರಿಯನ್ನ ಕ್ರಿಯೋಪಿಸರ್ವ್ ಮೂಲಕ ಸಂಸ್ಕರಿಸಿಡಬಹುದು. ನಂತರ ಅದನ್ನು ಬಾಡಿಗೆ ತಾಯ್ತನದ ಪ್ರಕ್ರಿಯೆಯಲ್ಲಿ ಬಳಸಬಹುದು. ಸಲಿಂಗರತಿಯರು ಕೂಡ ಫಲವತ್ತತೆ ಚಿಕಿತ್ಸೆಗೆ ಒಳಗಾಗಲು ಈ ವಿಧಾನವನ್ನು ಬಳಸಬಹುದು.

ಚಿಕಿತ್ಸೆಗೆ ಮೊದಲು ಕ್ಯಾನ್ಸರ್‌ರೋಗಿಗಳಿಗೂ ಇಂಥದ್ದೊಂದು ಅವಕಾಶ ಕಲ್ಪಿಸುವುದರ ಹೊರತಾಗಿ ವೀರ್ಯದ ಕ್ರಿಯೋಪ್ರಿಸರ್ವೇಷನ್‌ನ ಸೂಚನೆಗಳೆಂದ್ರ ಪುರುಷ ಸಂಗಾತಿಯ ವೀರ್ಯ ಸಿಗದೆ ಇದ್ದಾಗ ದಾನಿ ವೀರ್ಯವನ್ನು ಸಂರಕ್ಷಿಸುವುದು ಅಗತ್ಯ. ಅದಕ್ಕೆ, ಸಂಗಾತಿ ಮಿಲಿಟರಿ ಸೇವೆಯಲ್ಲಿರುವುದು, ಪ್ರವಾಸದಲ್ಲಿರುವುದು, ಅಥವಾ ಶಸ್ತ್ರಚಿಕಿತ್ಸೆಗೂ ಮೊದಲು ಫಲವತ್ತತೆಯ ಸಂರಕ್ಷಣೆ ಆಗದಿರುವುದು ಹಾಗೂ ಸಂತಾನಹರಣ ಚಿಕಿತ್ಸೆಯಲ್ಲದೆ ಹಲವು ವೈದ್ಯಕೀಯ ಕಾರಣಗಳಿವೆ.

ವೀರ್ಯ ಹೆಪ್ಪುಗಟ್ಟುವುದು ಹೇಗೆ?

ವೀರ್ಯದ ಮಾದರಿಯನ್ನು ಸಂಗ್ರಹಿಸಿದ ನಂತರ ಅದನ್ನು ೩೭ ಡಿಗ್ರಿ ಸೆಲ್ಸಿಯಸ್‌ತಾಪಮಾನದ ಬ್ಲಾಕ್‌ನಲ್ಲಿ ಇಡಲಾಗುತ್ತದೆ. ಆಗ ವೀರ್ಯವು ದ್ರವವಾಗಿ ಬದಲಾಗುತ್ತದೆ.ನಂತರ ತಜ್ಞರು ವೀರ್ಯದ ಮಾದರಿಯನ್ನು ೧:೧ ಅನುಪಾತದಲ್ಲಿ ಘನೀಕರಿಸುತ್ತಾರೆ. ಇದು ಫ್ರೀಜಿಂಗ್‌ಮತ್ತು ಸಂಗ್ರಹ ವಿಧಾನದಲ್ಲಿ ವೀರ್ಯವು ಸೇಫ್‌ಆಗಿ ಉಳಿಯುವಂತೆ ಸಿದ್ಧಗೊಳಿಸುತ್ತದೆ.

ವೀರ್ಯ ಘನೀಕರಿಸುವ ಪ್ರಕ್ರಿಯೆ

ಸ್ಪರ್ಮ್‌ಫ್ರೀಜಿಂಗ್‌ಅಥವಾ ವೀರ್ಯದ ಘನೀಕರಣ ಐವಿಎಫ್‌ಲ್ಯಾಬ್‌ನಲ್ಲಿ ಮಾಡಬಹುದಾದ ಒಂದು ಸರಳ ವಿಧಾನವಾಗಿದೆ. ಇದಕ್ಕೆ ಗ್ಯಾರಂಟಿ ಏನು ಅಂದ್ರೆ ಲ್ಯಾಬ್‌ನಲ್ಲಿ ಮಾದರಿಗಳನ್ನು ರಕ್ಷಿಸುವ ವಿಷಯದಲ್ಲಿ ಯಾವುದೇ ರಾಜಿ ಆಗುವುದಿಲ್ಲ. ರೋಗಿಯು ಮಾದರಿ ಫ್ರೀಜ್‌ಮಾಡುವ ಮೊದಲು ಇತ್ತೀಚೆಗಿನ ಸೆರೋಲಾಜಿಗಳನ್ನು ಕೊಡಬೇಕು. ಕ್ರಿಯೋಪ್ರಿಸರ್ವೇಷನ್‌ಟಿಕ್ನಿಕ್‌ನಲ್ಲಿ ಜೀವಕೋಶಗಳು ತಮ್ಮ ಕಾರ್ಯಸಾಧ್ಯತೆ ಮತ್ತು ಫಲವತ್ತಾಗಿಸುವ ಸಾಮರ್ಥ್ಯವನ್ನು (ಗ್ಯಾಮೆಟ್‌ಗಳಿಗೆ) ಉಳಿಸಿಕೊಳ್ಳುವುದರೊಂದಿಗೆ ದೀರ್ಘಕಾಲದವರೆಗೆ ಚಯಾಪಚಯ ಸ್ತಂಭನದ ಪ್ರಾರಂಭದೊಂದಿಗೆ ಕೋಶಗಳನ್ನು ಸಂಗ್ರಹಿಸಲಾಗುತ್ತದೆ.

ಸರ್ಮಾಟೋಜಿಯಾದ ಕ್ರಿಯೋಪ್ರಿಸರ್ವೇಷನ್‌ಒಂದು ಅತ್ಯಾಧುನಿಕವಾದ ತಂತ್ರಜ್ಞಾನವಾಗಿದೆ. ಸಾಮಾನ್ಯವಾಗಿ ಕ್ರಿಯೋಪಿಸರ್ವೇಷನ್ ಒಂದು ಸ್ಟೋ ಫ್ರೀಜಿಂಗ್‌ಮೆಥಡ್ ಹೇಗೆ ಸೋ ಫ್ರೀಜಿಂಗ್‌ಮಾಡ್ತಾರೆ ಅಂದ್ರೆ ಕ್ರಿಯೋಪ್ರೊಟೆಕ್ಟಂಟ್ ಬಳಸಿ ನಿಧಾನಕ್ಕೆ ತಾಪಮಾನವನ್ನು ಕಡಿಮೆ ಗೊಳಿಸಲಾಗುತ್ತದೆ. ಆದಾಗ್ಯೂ ಈ ವಿಧಾನವು ವೀರ್ಯದ ಗುಣಮಟ್ಟದಲ್ಲಿ ಇಳಿಕೆಯನ್ನು ತೋರಿಸುತ್ತದೆ. ಇದು ಮೂಲಭೂತವಾಗಿ ಆಕ್ಸಿಡೇಟಿವ್‌ಒತ್ತಡ-ಪ್ರೇರಿತ ಬದಲಾವಣೆಗಳು ಮತ್ತು ಅಂತರ್ಜೀವಕೋಶದ ಐಸ್‌ಸ್ಪಟಿಕ ರಚನೆಗೆ ಕಾರಣವಾಗಿದೆ. ಕ್ರಿಯೋಪ್ರೊಟೆಕ್ಟರ್‌ಗಳನ್ನು ಸೇರಿಸಿದ ನಂತರ ಮಾದರಿಯನ್ನು ಕ್ರಿಯೋಟ್ಯೂಬ್‌ಗಳಲ್ಲಿ ವಿತರಿಸಲಾಗುತ್ತದೆ. ಇದು ೧೯೬ ಡಿಗ್ರಿ ಸೆಲ್ಸಿಯಸ್‌ತಾಪಮಾನದಲ್ಲಿ ದ್ರವ ಸಾರಜನಕದಲ್ಲಿ ಹೆಪ್ಪುಗಟ್ಟಲು ಸಿದ್ಧವಾಗುವವರೆಗೆ ಅವುಗಳ ತಾಪಮಾನವನ್ನು ನಿಧಾನವಾಗಿ ಕಡಿಮೆ ಮಾಡುತ್ತದೆ. ಘನೀಕರಿಸುವ ಮತ್ತು ಕರಗುವ ಹಂತಗಳಲ್ಲಿ ವೀರ್ಯಕ್ಕೆ ಹಾನಿಯಾಗುವ ಸಾಧ್ಯತೆಗಳಿವೆ.ಶೇಖರಣಾ ಪ್ರಕ್ರಿಯೆಯಲ್ಲಿ ವೀರ್ಯದ ಗುಣಮಟ್ಟವು ಪರಿಣಾಮ ಬೀರುವುದಿಲ್ಲ. ಕ್ಯಾನ್ಸರ್ ರೋಗಿಗಳ ಮೌಲ್ಯಯುತ ಮಾದರಿಗಳನ್ನು ನಿರ್ವಹಿಸುವಾಗ, ವೃಷಣ ಬಯಾಪ್ಸ, ಎಚ್‌ಐವಿ-ಪಾಸಿಟಿವ್ ರೋಗಿಗಳಲ್ಲಿ ವೀರ್ಯದ ವಾಷಿಂಗ್ ಮುಂತಾದುವುಗಳನ್ನು ಸಣ್ಣ ಮಾದರಿಗಳಲ್ಲಿ ಫ್ರೀಜ್ ಮಾಡಬಹುದು. ಇದರಿಂದ ಪ್ರತಿ ಬಾರಿಯೂ ಅವುಗಳ ಬಳಕೆಯನ್ನು ಸಮರ್ಪಕವಾಗಿ ಮಾಡಬಹುದು.

ಸ್ಪರ್ಮ್‌ವಿಟ್ರಿಫಿಕೇಶನ್ ಅಲ್ಫಾ ರಾಪಿಡ್ ಘನೀಕರಣಕ್ಕೆ ಅನುವು ಮಾಡಿಕೊಡುವ ಒಂದು ವಿಧಾನವಾಗಿದ್ದು, ಇದು ಪ್ರೊಸೀಜರ್‌ಅವಧಿಯನ್ನ ಕಡಿಮೆ ಮಾಡುತ್ತದೆ. ಈ ವಿಧಾನವನ್ನು ಮೊಟ್ಟೆಗಳು ಮತ್ತು ಭ್ರೂಣಗಳ ಕ್ರಿಯೋಪ್ರಿಸರ್ವೇಶನ್‌ನಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಏಕೆಂದರೆ ಮೊಟ್ಟೆಗಳು ಮತ್ತು ಭ್ರೂಣಗಳು ಹೆಚ್ಚಿನ ನೀರನ್ನು ಅಂಶವನ್ನು ಹೊಂದಿದ್ದು ಅವು ವೀರ್ಯಕ್ಕಿಂತ ಫ್ರೀಜಿಂಗ್‌ಮೆಥಡ್‌ಗೆ ಹೆಚ್ಚು ಸೆನ್ಸಿಟಿವ್‌ಆಗಿರುತ್ತವೆ. ಆದಾಗ್ಯೂ, ಘನೀಕರಿಸುವ ಪ್ರಕ್ರಿಯೆಯಿಂದ ವೀರ್ಯವು ಸ್ವಲ್ಪಮಟ್ಟಿಗೆ ಬದಲಾಗುವುದರಿಂದ ವಿಟ್ರಿಫಿಕೇಶನ್ ಕಾರ್ಯವಿಧಾನದ ಅಗತ್ಯವಿಲ್ಲ.

ಸೆಮೆನ್‌ಜಿಂಗ್‌ನಂತರ ಏನನ್ನು ನಿರೀಕ್ಷಿಸಬಹುದು?

ಪುರುಷನು ತನ್ನ ವೀರ್ಯವನ್ನು ಫ್ರೀಜ್‌ಮಾಡಬೇಕು ಅಂದಾಗ ಗಮನಿಸಬೇಕಾದ ಅಂಶವೆಂದರೆ ವೀರ್ಯದ ಗುಣಮಟ್ಟ, ಸ್ಪರ್ಮ್‌ ಕೌಂಟ್ ಮತ್ತು ಮಾರ್ಫಾಲಜಿ ವಯಸ್ಸು ಒಳ್ಳೆಯದೋ ಕೆಟ್ಟದ್ದೋ ಅಂತ ಪತ್ತೆ ಹಚ್ಚುವ ಅಂಶವಲ್ಲ. ವೀರ್ಯದ ಗುಣಮಟ್ಟವು ಕಳಪೆಯಾಗಿದ್ದಾರೆ ವೀರ್ಯದ ಡಿಸಾರ್ಡಸ್‌್ರ ಕೂಡ ಹೆಚ್ಚಿರುತ್ತದೆ. ಈ ಫಲಿತಾಂಶ ಸ್ಪರ್ಮ್‌ಕೌಂಟ್‌ಟೆಕ್ನಿಕ್‌ಮೇಲೆ ಪರಿಣಾಮ ಬೀರುತ್ತದೆ. (ಅದು ಐಯುಐ). ಆದಾಗ್ಯೂ, ಕೆಲವು ಪ್ಯಾರಾಮೀಟರ್‌ಗಳನ್ನು ವ್ಯತ್ಯಾಸಗೊಳಿಸಿದಾಗಲೂ ಸಹ ಕೆಲವು ಅಧ್ಯಯನಗಳು ದಾನಿಗಳ ವೀರ್ಯಗಳೊಂದಿಗೆ ಐಸಿಎಸ್‌ಐ ಫಲವತ್ತತೆ ಚಿಕಿತ್ಸೆಯ ಫಲಿತಾಂಶದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸಾಬೀತು ಪಡಿಸಿವೆ.

ಹೈಕ್ವಾಲಿಟಿ ಸ್ಯಾಂಪಲ್ಸ್‌ನಲ್ಲಿ ಕರಗುವ ಪ್ರಕ್ರಿಯೆ ಆದ ನಂತರ ಕೆಲವು ಸ್ಪರ್ಮ್‌ ಪ್ಯಾರಾಮೀಟರ್ಸ್‌ನಲ್ಲಿ ಬದಲಾವಣೆಗಳನ್ನು ಮಾಡಬಹುದು. ಈ ವಿಧಾನ ಫಲವತ್ತತೆ ಚಿಕಿತ್ಸೆಯ ಯಶಸ್ಸಿನ ಮೇಲೆ ಅಂತಹ ಪರಿಣಾಮ ಬೀರುವುದಿಲ್ಲ.

ಫಲವತ್ತತೆ ಚಿಕಿತ್ಸೆಯಲ್ಲಿ ಫ್ರಾಜನ್‌ಸ್ಪರ್ಮ್ ಅನ್ನು ಹೇಗೆ ಬಳಸಲಾಗುತ್ತದೆ?

ವೀರ್ಯವನ್ನು ವಿಶ್ಲೇಷಣೆಗೊಳಪಡಿಸಿದ ನಂತರ ಫ್ರೀಜ್‌ಮಾಡಲಾಗುತ್ತದೆ. ಹಾಗೆ ಫ್ರೀಜ್‌ಮಾಡಲಾದ ವೀರ್ಯವನ್ನು ಸ್ಪರ್ಮ್‌ಬ್ಯಾಂಕ್‌ನಲ್ಲಿ ಸಂರಕ್ಷಿಸಿಟ್ಟು ನಂತರ ಅಸಿಸ್ಟೆಟ್‌ರಿವೊಡಕ್ಕಿವ್‌ಟೆಕ್ನಾಲಜಿ (ಎಆರ್‌ಟಿ) ಯಲ್ಲಿ ಬಳಸಲಾಗುತ್ತದೆ. ಸ್ಪರ್ಮ್‌ಕ್ರಿಯೋಪ್ರಿಸರ್ವೇಷನ್‌ವೀರ್ಯದ ಗುಣಮಟ್ಟದ ಮೇಲೆ ಪರಿಣಾಮ ಬೀರುವುದಿಲ್ಲ.ಹಾಗಾಗಿ ಅದನ್ನು ಅನಿರ್ಧಿಷ್ಟ ಅವಧಿಯವರೆಗೆ ಸಂಗ್ರಹಿಸಿಡಬಹುದು. ನಂತರ ಅದನ್ನು ಭವಿಷ್ಯದಲ್ಲಿ ಫಲವತ್ತತೆ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಅವು ಯಾವುವೆಂದ್ರೆ,

ಇನ್ನಾಯುಟೆರಿನ್‌ಇನ್ಸಮಿನೇಷನ್(IUI)

ಇನ್‌ವಿಟ್ರೋ ಫರ್ಟಿಲೈಸೇಷನ್(IVF)

ಈ ಪುಟವನ್ನು ಹಂಚಿಕೊಳ್ಳಿ

ನಮ್ಮ ಬಗ್ಗೆ

ಗರ್ಭಗುಡಿಯು ಬಂಜೆತನ ಸಮಸ್ಯೆಗಳು ಮತ್ತು ದಂಪತಿಗಳ ಮೇಲೆ ಅವರ ಭಾವನಾತ್ಮಕ ಮತ್ತು ಮಾನಸಿಕ ಪರಿಣಾಮಗಳನ್ನು ಪರಿಹರಿಸಲು ಅತ್ಯಾಧುನಿಕ-ಮೂಲಸೌಕರ್ಯ ಮತ್ತು ಅತ್ಯಾಧುನಿಕ ಐವಿಎಫ್ ತಂತ್ರಜ್ಞಾನವನ್ನು ಹೊಂದಿರುವ ಹೊಸ-ಪೀಳಿಗೆಯ ಬಂಜೆತನ ಚಿಕಿತ್ಸಾ ಆಸ್ಪತ್ರೆಗಳ ಸರಪಳಿಯಾಗಿದೆ. ನಾವು ಅರ್ಹ ಮತ್ತು ಅನುಭವಿ ವೈದ್ಯರ ತಂಡವನ್ನು ಹೊಂದಿದ್ದೇವೆ; ಅವರ ಆಳವಾದ ಜ್ಞಾನ ಮತ್ತು ಪರಿಣತಿಯು ನಿಮ್ಮ ಎಲ್ಲಾ ಬಂಜೆತನ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ಕಲ್ಲನ್ನು ಬಿಡುವುದಿಲ್ಲ. ಪ್ರಯಾಣದ ಉದ್ದಕ್ಕೂ ನಿಮ್ಮನ್ನು ಪ್ರೇರೇಪಿಸಲು ಮತ್ತು ಮಾರ್ಗದರ್ಶನ ಮಾಡಲು ಬೆಂಬಲ ಮತ್ತು ಕಾಳಜಿಯುಳ್ಳ ಸಿಬ್ಬಂದಿ ಯಾವಾಗಲೂ ನಿಮ್ಮ ಪಕ್ಕದಲ್ಲಿರುತ್ತಾರೆ. ಗರ್ಭಗುಡಿ ಐವಿಎಫ್, ಬೆಂಗಳೂರಿನ ಅತ್ಯುತ್ತಮ ಫಲವತ್ತತೆ ಚಿಕಿತ್ಸಾ ಆಸ್ಪತ್ರೆ, ಬಂಜೆತನ ಸಮಸ್ಯೆಗಳು ಮತ್ತು ಲೈಂಗಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ದಂಪತಿಗಳಿಗೆ ಭಾವನಾತ್ಮಕ ಬೆಂಬಲವನ್ನು ನೀಡುತ್ತದೆ

ಸಂಪರ್ಕಿಸಿ