ಮೂತ್ರದ ಮೂಲಕ ಗರ್ಭಧಾರಣೆ ಪರೀಕ್ಷೆಡಾ ಪ್ರಿಯಾಂಕಾ ರಾಣಿ

ಮೂತ್ರದ ಮೂಲಕ ಗರ್ಭಧಾರಣೆ ಪರೀಕ್ಷೆ

ನಿಜವಾಗಿ ಮೂತ್ರ ಗರ್ಭಧಾರಣೆ ಪರೀಕ್ಷೆ ಎಂದರೇನು? (UPT)

ನೀವು ಗರ್ಭಧರಿಸಿದ್ದೀರಾ ಇಲ್ವಾ ಅನ್ನೋದನ್ನನಿಮ್ಮ ಬೆಡ್‌ಪಕ್ಕದಲ್ಲೇ ತ್ವರಿತವಾಗಿ ಮಾಡುವ ವಿಧಾನವೇ ಮೂತ್ರ ಗರ್ಭಧಾರಣೆಯ ಪರೀಕ್ಷೆ. ಇದನ್ನು ಇಂಗ್ಲೀಷಿನಲ್ಲಿ UPT ಅಂತಾರೆ. ಈ ಟೆಸ್ಟ್‌ ಮೂತ್ರದಲ್ಲಿರುವ ಹ್ಯೂಮನ್‌ ಕೊರಿಯಾನಿಕ್‌ ಗೊನಡೊಟ್ರೋಫಿನ್‌ಹಾರ್ಮೋನ್ ಮಟ್ಟವನ್ನ ಪತ್ತೆ ಮಾಡುತ್ತದೆ. ಇದು ಮನೆಯಲ್ಲೇ ನಡೆಸುವ ಗರ್ಭಧಾರಣಾ ಪರೀಕ್ಷಾ ಕಿಟ್‌ನಂತೆಯೇ ಹೆಚ್ಚು ಸುಲಭವಾದುದು ಮತ್ತು ವಿಶ್ವಾಸಾರ್ಹವಾದುದು.

ನಿಮಗೆ ಗೊತ್ತಿರಲಿ, ಎರಡು ರೀತಿಯ ಪ್ರಗ್ನೆನ್ಸಿ ಟೆಸ್ಟ್‌ಗಳಿವೆ. ಒಂದು ಮೂತ್ರ ಪರೀಕ್ಷೆ ಇನ್ನೊಂದು ರಕ್ತ ಪರೀಕ್ಷೆ. ಎರಡೂ ಟೆಸ್ಟ್‌ಗಳಲ್ಲಿ ಪತ್ತೆಯಾಗೋದು ಒಂದೆ, ಹ್ಯೂಮನ್‌ಕೊರಿಯಾನಿಕ್‌ಗೊನಡೊಟ್ರೋಫಿನ್‌ ಹಾರ್ಮೋನ್. ಈ ಹಾರ್ಮೋನ್‌ನಿಂದ ಆರಂಭಿಕ ಗರ್ಭಧರಿಸುವಿಕೆಯನ್ನ ನಿಖರವಾಗಿ ಪತ್ತೆ ಮಾಡಬಹುದು. ಈ ವಿಧಾನ ಬಹಳ ಸರಳವಷ್ಟೇ ಅಲ್ಲ ತ್ವರಿತವಾಗಿ ಆಗುತ್ತದೆಯಾದ್ದರಿಂದ ಪ್ರಗ್ನೆನ್ಸಿ ಟೆಸ್ಟ್‌ನಲ್ಲಿ ಹೆಚ್ಚು ಪ್ರಚಲಿತದಲ್ಲಿದೆ.

ಮೂತ್ರದ ಮೂಲಕ ಗರ್ಭಧಾರಣಾ ಪರೀಕ್ಷೆಯನ್ನು ಹೇಗೆ ಮಾಡಲಾಗುತ್ತದೆ?

ಮಹಿಳೆಯ ಮೂತ್ರವನ್ನ ಸಂಗ್ರಹಿಸಿ ಆ ಮೂಲಕ UPT ಪರೀಕ್ಷೆ ಮಾಡಲಾಗುತ್ತದೆ. ಇದಕ್ಕಾಗಿ ಬಳಸಿ ಬಿಸಾಡುವ ಪ್ಲಾಸ್ಟಿಕ್‌ಸಾಧನವೊಂದನ್ನ ಬಳಸಲಾಗುತ್ತದೆ. ಈ ಸಾಧನದ ಬಣ್ಣ ಬದಲಾದರೆ ಮಹಿಳೆ ಗರ್ಭಧರಿಸಿದ್ದಾಳೆ ಅಂತ ಅರ್ಥ. ಪರೀಕ್ಷೆ ನಿಖರವಾಗಿದೆ ಅನ್ನೋದಕ್ಕೆ ಅದೇ ಸಾಧನದಲ್ಲಿರುವ ಚಿಹ್ನೆ ಕೂಡ ಬಣ್ಣ ಬದಲಿಸುತ್ತದೆ. ಇದು ಪರೀಕ್ಷೆ ನಿಖರವಾಗಿದೆ ಅನ್ನೋದರ ಎರಡನೇ ಸೂಚನೆ.

ನೀವು ಗರ್ಭವತಿಯಾಗಿದ್ದೀರಾ ಇಲ್ವ ಅನ್ನೋದನ್ನ ಪತ್ತೆ ಮಾಡಲು ಡಾಕ್ಟರ್‌ನಿಮ್ಮ ಮೂತ್ರ ಪರೀಕ್ಷೆ ಮಾಡುವ ಮೂಲಕ ತಿಳಿದು ನಿಮಗೆ ಹೇಳಬಹುದು. ಮುಟ್ಟಾಗಿಲ್ಲ ಅಥವಾ ತಡವಾದ ಮುಟ್ಟು(ಅಮೆನೋರಿಯಾ) ಎದೆ ಭಾರ ಅಥವಾ ನೋವು, ವಾಕರಿಕೆ ಅಥವಾ ವಾಂತಿ ಈ ಎಲ್ಲಾ ಸಾಮಾನ್ಯ ಲಕ್ಷಣಗಳು ಗರ್ಭಿಣಿಯಾಗಿದ್ದಲ್ಲಿ ಕಂಡುಬರುತ್ತವೆ.

ವಯಸ್ಕ ಮಹಿಳೆಯಾಗಿದ್ದು ಹೊಟ್ಟೆನೋವಿನ ಬಾಧೆ ಇದ್ದು ಹೊಟ್ಟೆಯ ಎಕ್ಸ್‌ರೇ ಮಾಡಬೇಕಾದಲ್ಲಿ ಹಾಗೂ ಗರ್ಭದಲ್ಲಿರುವ ಮಗುವಿಗೆ ರೇಡಿಯೇಷನ್‌ ಆಗಬಾರದು ಅಂತ ಪೆಲ್ವಿಕ್‌ಎಕ್ಸ್‌ರೇಯನ್ನ ಸಾಮಾನ್ಯವಾಗಿ ನಿಯಮಿತವಾಗಿ ಮಾಡಲಾಗುತ್ತದೆ.

ಮೂತ್ರ ಗರ್ಭಧಾರಣೆ ಪರೀಕ್ಷೆಯಿಂದ ರಕ್ತ ಗರ್ಭಧಾರಣೆ ಪರೀಕ್ಷೆಯನ್ನು ಯಾವುದು ಪ್ರತ್ಯೇಕಿಸುತ್ತದೆ?

ಗರ್ಭಧರಿಸಿದ ಏಳು ಮತ್ತು ಹನ್ನೆರಡನೇ ದಿನಗಳ ನಡುವೆ ರಕ್ತ ಪರೀಕ್ಷೆಯ ಮೂಲಕ ಗರ್ಭಧರಿಸಿದ್ದೀರ ಇಲ್ವ ಅನ್ನೋದನ್ನ ಪ್ರಾಥಮಿಕ ಹಂತದಲ್ಲೇ ಪತ್ತೆ ಹಚ್ಚಬಹುದು. ಆದ್ರೆ ಮೂತ್ರ ಪರೀಕ್ಷೆ ಮೂಲಕ ಗರ್ಭಧಾರಣೆ ಪತ್ತೆ ಹಚ್ಚಬೇಕಾದ್ರೆ ಕನಿಷ್ಟ ಎರಡುವಾರಗಳಾದ್ರೂ ಆಗಿರಬೇಕು. ನಿಮಗೆ ಗೊತ್ತಿರಲಿ ಹೆಚ್ಚು ಖರ್ಚಿಲ್ಲದೆ ಬಹಳ ಬೇಗ ನಡೆಸುವ ಟೆಸ್ಟ್‌ಅಂದ್ರೆ ಅದು ಮೂತ್ರ ಪರೀಕ್ಷೆ. ಬ್ಲಡ್‌ಟೆಸ್ಟ್‌ಸ್ವಲ್ಪ ದುಬಾರಿ ಮತ್ತು ರಿಸಲ್ಟ್‌ನಿಧಾನ.

ವೈದ್ಯರು ನಡೆಸುವ ಮೂತ್ರದ ಗರ್ಭಧಾರಣೆ ಪರೀಕ್ಷೆ ಸಾಮಾನ್ಯವಾಗಿ ನಿಖರವಾಗಿ ಮತ್ತು ವಿಶ್ವಾಸಾರ್ಹವಾಗಿರುತ್ತದೆ. ಹಾಗಾಗಿ ಗರ್ಭಧಾರಣೆಯನ್ನ ಖಚಿತಪಡಿಸಲು ಮತ್ತೊಂದು ರಕ್ತ ಪರೀಕ್ಷೆಯ ಅವಶ್ಯಕತೆ ಬೇಕಾಗಿಲ್ಲ.

ಹ್ಯೂಮನ್‌ಕೊರಿಯಾನಿಕ್‌ಗೊನಾಡೊಟ್ರೋಪಿನ್‌ಅಂದರೇನು? (HCG)

ಇದು ಸಖತ್‌ಇಂಟರೆಸ್ಟಿಂಗ್‌ವಿಷಯ. ಏನಂದ್ರೆ ಹ್ಯೂಮನ್‌ ಕೊರಿಯಾನಿಕ್‌ ಗೊನಾಡೊಟ್ರೋಪಿನ್‌ ಹಾರ್ಮೋನ್‌ಇದೆಯಲ್ಲ ಇದು ಗರ್ಭಕೋಶದಲ್ಲಿ ಮಗು ಅಂಕುರಿಸಿದಾಗಲೇ ಉತ್ಪತ್ತಿಯಾಗುತ್ತದೆ. ಅಂದ್ರೆ ಆರೋಗ್ಯಕರ ಗರ್ಭಧರಿಸಿದ ಮಹಿಳೆಯ ಮೂತ್ರದಲ್ಲಿ ಏಳರಿಂದ ಹನ್ನೆರಡು ದಿನಗಳಲ್ಲಿ ಈ ಹಾರ್ಮೋನ್‌ ಕಂಡುಬರುತ್ತದೆ. ಮೊದಲನೆ ಮುಟ್ಟು ನಿಂತಾಗಲೇ ಈ HCG ಹಾರ್ಮೋನ್‌ಮಟ್ಟ ಸಾಮಾನ್ಯವಾಗಿ 100MIU/ML ಅನ್ನು ತಲುಪುತ್ತದೆ ಮತ್ತು ಹತ್ತರಿಂದ ಹನ್ನೆರಡು ವಾರಗಳಲ್ಲಿ ಅದು ಗರಿಷ್ಟ 100,000-200,000 MIU/ML ಮಟ್ಟ ತಲುಪುತ್ತದೆ. ಹೇಳಬೇಕೆಂದ್ರೆ ಗರ್ಭಧಾರಣೆಯ ಆರಂಭಿಕ ಗುರುತಿಸುವಿಕೆಗೆ HCH ಸರಿಯಾದ ಮಾರ್ಗವಾಗಿದೆ.

ನಿಮ್ಮ ಪರೀಕ್ಷಾ ಫಲಿತಾಂಶಗಳನ್ನು ಅರ್ಥಮಾಡಿಕೊಳ್ಳಿ.

UPT ಧನಾತ್ಮಕವಾಗಿದ್ದಲ್ಲಿ ಗರ್ಭಧರಿಸಿರುತ್ತಾಳೆ.

UPT ಋಣಾತ್ಮಕವಾಗಿದ್ದರೆ ಗರ್ಭಿಣಿಯಾಗಿರುವುದಿಲ್ಲ.

ಇನ್ನೊಂದು ವಿಷಯವೇನೆಂದ್ರೆ, ಪ್ರಯೋಗಾಲಯವು ಟೆಸ್ಟ್‌ಗಳನ್ನ WEAKLY POSITIVE ಅಥವಾ INDETERMINATE ಎಂದು ವರ್ಗೀಕರಿಸುತ್ತದೆ. ಇದಕ್ಕೆ ಕಾರಣ ಮೂತ್ರದಲ್ಲಿ ಕಂಡುಬರುವ ಕಡಿಮೆ ಪ್ರಮಾಣದ HCG ಹಾರ್ಮೋನ್‌. ಆರಂಭದ ಗರ್ಭಧರಿಸುವಿಕೆ ಮತ್ತು ಗರ್ಭಪಾತದ ನಂತರ ಹೀಗಾಗುವ ಸಂಭವವಿದೆ. ಇಂಥ ಸಮಯದಲ್ಲಿ ರಕ್ತಪರೀಕ್ಷೆ ಪ್ರಯೋಜನಕಾರಿಯಾಗಿರುತ್ತದೆ. ಹಾಗೆ ಮೂತ್ರ ಪರೀಕ್ಷೆಯನ್ನು ಒಂದು ಅಥವಾ ಎರಡು ದಿನ ಬಿಟ್ಟು ಮಾಡಿಸಿದಲ್ಲಿ ಗರ್ಭಧಾರಣೆ ಆಗಿದ್ದೀವೋ ಇಲ್ವೋ ಅನ್ನೋದು ಸರಿಯಾಗಿ ತಿಳಿದುಬಿಡುತ್ತದೆ.

ಈ ಪುಟವನ್ನು ಹಂಚಿಕೊಳ್ಳಿ

ನಮ್ಮ ಬಗ್ಗೆ

ಗರ್ಭಗುಡಿಯು ಬಂಜೆತನ ಸಮಸ್ಯೆಗಳು ಮತ್ತು ದಂಪತಿಗಳ ಮೇಲೆ ಅವರ ಭಾವನಾತ್ಮಕ ಮತ್ತು ಮಾನಸಿಕ ಪರಿಣಾಮಗಳನ್ನು ಪರಿಹರಿಸಲು ಅತ್ಯಾಧುನಿಕ-ಮೂಲಸೌಕರ್ಯ ಮತ್ತು ಅತ್ಯಾಧುನಿಕ ಐವಿಎಫ್ ತಂತ್ರಜ್ಞಾನವನ್ನು ಹೊಂದಿರುವ ಹೊಸ-ಪೀಳಿಗೆಯ ಬಂಜೆತನ ಚಿಕಿತ್ಸಾ ಆಸ್ಪತ್ರೆಗಳ ಸರಪಳಿಯಾಗಿದೆ. ನಾವು ಅರ್ಹ ಮತ್ತು ಅನುಭವಿ ವೈದ್ಯರ ತಂಡವನ್ನು ಹೊಂದಿದ್ದೇವೆ; ಅವರ ಆಳವಾದ ಜ್ಞಾನ ಮತ್ತು ಪರಿಣತಿಯು ನಿಮ್ಮ ಎಲ್ಲಾ ಬಂಜೆತನ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ಕಲ್ಲನ್ನು ಬಿಡುವುದಿಲ್ಲ. ಪ್ರಯಾಣದ ಉದ್ದಕ್ಕೂ ನಿಮ್ಮನ್ನು ಪ್ರೇರೇಪಿಸಲು ಮತ್ತು ಮಾರ್ಗದರ್ಶನ ಮಾಡಲು ಬೆಂಬಲ ಮತ್ತು ಕಾಳಜಿಯುಳ್ಳ ಸಿಬ್ಬಂದಿ ಯಾವಾಗಲೂ ನಿಮ್ಮ ಪಕ್ಕದಲ್ಲಿರುತ್ತಾರೆ. ಗರ್ಭಗುಡಿ ಐವಿಎಫ್, ಬೆಂಗಳೂರಿನ ಅತ್ಯುತ್ತಮ ಫಲವತ್ತತೆ ಚಿಕಿತ್ಸಾ ಆಸ್ಪತ್ರೆ, ಬಂಜೆತನ ಸಮಸ್ಯೆಗಳು ಮತ್ತು ಲೈಂಗಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ದಂಪತಿಗಳಿಗೆ ಭಾವನಾತ್ಮಕ ಬೆಂಬಲವನ್ನು ನೀಡುತ್ತದೆ

ಸಂಪರ್ಕಿಸಿ