ಪುರುಷ ಮತ್ತು ಮಹಿಳೆಯರಲ್ಲಿ ಫಲವತ್ತತೆ ಮಟ್ಟ ಕಡಿಮೆ ಆಗಲು ಕಾರಣಗಳೇನು?ಡಾ ಅನಿತಾ ಮನೋಜ್

ಪುರುಷ ಮತ್ತು ಮಹಿಳೆಯರಲ್ಲಿ ಫಲವತ್ತತೆ ಮಟ್ಟ ಕಡಿಮೆ ಆಗಲು ಕಾರಣಗಳೇನು?

ಈ ವಿಷಯವನ್ನ ಸ್ವಲ್ಪ ಗಮನವಿಟ್ಟು ಓದಿ. ಫಲವತ್ತತೆ ಕೊರತೆ ಅಂತೀವಲ್ಲ ಇದು ಒಂಥರಾ ಸಂಕೀರ್ಣವಾದ ಸಮಸ್ಯೆ ಗೊತ್ತಿರಲಿ, ಫಲವತ್ತತೆ ಅಂದ್ರೆ ಗರ್ಭಧರಿಸಲು ಬೇಕಾದ ಸಾಮರ್ಥ್ಯ ಅಷ್ಟೇ, ಈ ಫಲವತ್ತತೆ ಸಮಸ್ಯೆ ಹೆಣ್ಣಿಗೆ ಮಾತ್ರವಲ್ಲ ಗಂಡಿಗೂ ಒಂದು ಸಮಸ್ಯೆಯೇ ಫಲವತ್ತತೆ ಮಟ್ಟ ಯಾಕೆ ಕಡಿಮೆ ಆಗಿದೆ ಅನ್ನೋದನ್ನು ಸರಿಯಾದ ಮಾರ್ಗದಲ್ಲಿ ತಿಳಿದುಕೊಂಡರೆ ಮಾತ್ರ ನಮಗೊಂದು ಮಗು ಬೇಕು, ನಾವೊಂದು ಚಂದದ ಕುಟುಂಬ ಕಟ್ಟಿಕೊಳ್ಳಬೇಕು ಅಂತಿರೋ ದಂಪತಿಗಳ ಕನಸು ಹಂಡ್ರೆಡ್ ಪರ್ಸೆಂಟ್ ನನಸಾಗುತ್ತೆ. ಇಲ್ಲ ಅಂದ್ರೆ ಕಷ್ಟ ಕಷ್ಟ. ಹಾಗಂತ ಧೃತಿಗೆಡಬೇಕಾಗಿಲ್ಲ. ಗರ್ಭಗುಡಿ ಐವಿಎಫ್ ಸೆಂಟರ್ ನಿಮಗೆ ಬೇಕಾದ ಅರಿವು, ಮಾರ್ಗದರ್ಶನ, ಚಿಕಿತ್ಸೆ ಎಲ್ಲವನ್ನೂ ನೀಡಿ ನಿಮ್ಮ ತಾಯ್ತನದ ಕನಸು ನನಸಾಗಲು ನೆರವಾಗುತ್ತದೆ.

ಫಾರ್ ಎಕ್ಸಾಂಪಲ್, ಈ ದಂಪತಿಯ ಕಥೆ. ರವಿ ಮತ್ತು ಮಾಯಾ ಇಬ್ಬರೂ ತುಂಬಾ ಚಂದದ ಜೋಡಿ. ಎಲ್ಲರಂತೆ ಅವರಿಗೂ ಒಂದು ಸುಂದರ ಕುಟುಂಬ ಕಟ್ಟಿಕೊಳ್ಳುವ ಕನಸಿತ್ತು. ಆದ್ರೆ ಮದುವೆಯಾಗಿ ಹಲವು ತಿಂಗಳುಗಳಾದರೂ ಅವರಿಗೆ ಮಗು ಆಗಿರಲಿಲ್ಲ. ಆಗಲೇ ಅವರಿಗೆ ಚಿಂತೆ ಕಾಡಿದ್ದು. ತಡಮಾಡದೆ ತಮಗೆ ಗೊತ್ತಿದ್ದ ಗರ್ಭಗುಡಿ ಐವಿಎಫ್ ಸೆಂಟರ್ ಗೆ ಭೇಟಿ ನೀಡಿ, ತಮ್ಮ ಫಲವತ್ತತೆಯ ಸಮಸ್ಯೆಗೆ ಕಾರಣಗಳೇನು ಅದಕ್ಕೆ ಪರಿಹಾರಗಳೇನು ಅನ್ನೋದನ್ನ

ತಿಳಿದುಕೊಳ್ಳಲು ಮನಸ್ಸು ಮಾಡಿದರು. ನಿಮಗೆ ಗೊತ್ತಿರಲಿ, ಗರ್ಭಗುಡಿಯಲ್ಲಿ ದಿ ಬೆಸ್ಟ್ ಅನ್ನೋ ತಜ್ಞರಿದ್ದಾರೆ. ಅವರು ರವಿ ಮತ್ತು ಮಾಯಾರಿಗೆ ಫಲವತ್ತತೆ ಕೊರತೆ ಹೇಗೆ ಮಹಿಳೆ ಮತ್ತು ಪುರುಷರಲ್ಲಿ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತೆ ಅನ್ನೋದನ್ನು ವಿವರವಾಗಿ ತಿಳಿಸಿಕೊಟ್ಟರು. ಗರ್ಭಧರಿಸಲು ಮಹಿಳೆಯ ವಯಸ್ಸು ಎಷ್ಟು ಮುಖ್ಯವಾಗುತ್ತೆ ಮತ್ತು ವಯಸ್ಸಾಗ್ತಾ ಇದ್ದ ಹಾಗೆ ಹೇಗೆ ಫಲವತ್ತತೆ ಕಡಿಮೆ ಆಗುತ್ತೆ ಅನ್ನೋದನ್ನೂ ತಿಳಿಸಿ ಹೇಳಿದರು. ಜೊತೆಗೆ ಹಾರ್ಮೋನ್ ಗಳ ಅಸಮತೋಲನ, ಥೈರಾಯಿಡ್ ಸಮಸ್ಯೆ ಅಥವಾ ಪಾಲಿಸಿಸ್ಟಿಕ್ ಒವರಿ ಸಿಂಡೋಮ್ (PCOS) ಕೂಡ ಮಹಿಳೆ ಗರ್ಭಧರಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಅನ್ನೋದನ್ನು ಸರಳವಾಗಿ ಅರ್ಥ ಮಾಡಿಸಿದರು.

ಫಲವತ್ತತೆ ಕೊರತೆ ಇರುವ ಪುರುಷರಲ್ಲಿ ವೀರ್ಯಾಣುವಿನ ಕೊರತೆ, ಚಲನಶೀಲತೆಯ ಕೊರತೆ ಮತ್ತು ವೀರ್ಯ ರಚನೆಯಲ್ಲಿ ಅಸಹಜತೆ ಕಾಣಿಸಿಕೊಳ್ಳಬಹುದು. ಇದಕ್ಕೆ ಹಲವು ಕಾರಣಗಳಿವೆ. ಜೀವನ ವಿಧಾನ, ಧೂಮಪಾನ, ಮದ್ಯಪಾನ, ಒತ್ತಡದ ಜೀವನ ಇವೆಲ್ಲವೂ ಪುರುಷರಲ್ಲಿ ಫಲವತ್ತತೆ ಕಡಿಮೆ ಆಗಲು ಕಾರಣವಾಗುತ್ತವೆ.

ರವಿ ಮತ್ತು ಮಾಯಾರ ಮೆಡಿಕಲ್ ಹಿಸ್ಟರಿ ಕುರಿತು ಚರ್ಚಿಸಿದ ಗರ್ಭಗುಡಿ ಐವಿಎಫ್ ಸೆಂಟರ್ ನ ತಜ್ಞರು ಹಲವು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದರು. ಅದರಲ್ಲಿ ಕಂಡು ಬಂದ ಅಂಶವೆಂದರೆ ಇಬ್ಬರಿಗೂ ಫಲವತ್ತತೆಯ ಸಮಸ್ಯೆ ಇತ್ತು. ರವಿಯಲ್ಲಿ ವೀರ್ಯಾಣುವಿನ ಪ್ರಮಾಣ ಕಡಿಮೆ ಇತ್ತು. ಮಾಯಾ ಹಾರ್ಮೋನ್ ಇಂಬ್ಯಾಲೆನ್ಸ್ ನಿಂದ ಬಳಲುತ್ತಿದ್ದಳು. ಹಾಗಾಗಿಯೇ ಆಕೆ ಗರ್ಭಧರಿಸಿರಲಿಲ್ಲ.

ನಂತರ ಗರ್ಭಗುಡಿಯ ನುರಿತ ತಜ್ಞರ ತಂಡ ರವಿ ಮತ್ತು ಮಾಯಾ ಇಬ್ಬರ ಫಲವತ್ತತೆ ಮಟ್ಟವನ್ನು ಅನುಸರಿಸಿ ಪ್ರತ್ಯೇಕ ಚಿಕಿತ್ಸೆ ನೀಡಿದರು.ಜೀವನ ಕ್ರಮ ಬದಲಾಯಿಸಿಕೊಳ್ಳಲು ಸೂಚಿಸಿದರು. ಆ ಮೂಲಕ ಅವರ ಫಲವತ್ತತೆ ಸಾಮರ್ಥ್ಯವನ್ನು ಹೆಚ್ಚಿಸಿ ಆರೋಗ್ಯವಂತ ಮಗು ಪಡೆಯಲು ದೈಹಿಕವಾಗಿ ಮತ್ತು ಮಾನಸಿಕವಾಗಿ ಅಣಿಗೊಳಿಸಿದರು.

ನಿಮಗೆ ಗೊತ್ತಿರಲಿ, ಫಲವತ್ತತೆಯ ಕೊರತೆ ಪುರುಷ ಮತ್ತು ಮಹಿಳೆಯರಲ್ಲಿ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಸರಿಯಾದ ಸಹಕಾರ ಮತ್ತು ಚಿಕಿತ್ಸೆ ಪಡೆದಲ್ಲಿ ಮಾತ್ರ ಫಲವತ್ತತೆ ಕೊರತೆಯಿಂದ ಹೊರಬಂದು ಮಗು ಪಡೆಯಬಹುದು. ಇದಕ್ಕೆ ಖ್ಯಾತ ಸಂತಾನೋತ್ಪತ್ತಿ ಕೇಂದ್ರವಾದ ಗರ್ಭಗುಡಿ ಐವಿಎಫ್ ಸೆಂಟರ್ ನಿಮ್ಮ ಸರಿಯಾದ ಆಯ್ಕೆ ಆಗಿರುತ್ತದೆ.

ಬೆಂಗಳೂರಿನಲ್ಲಿ ಆರಂಭವಾದ ಗರ್ಭಗುಡಿ ಐವಿಎಫ್ ಸೆಂಟರ್ ಸಂತಾನೋತ್ಪತ್ತಿ ಆರೋಗ್ಯ ಕೇಂದ್ರವಾಗಿದ್ದು ಹಲವು ಶಾಖೆಗಳನ್ನು ಹೊಂದಿದೆ. ವೃತ್ತಿಪರತೆಯಲ್ಲಿ ಯಶಸ್ಸು, ನೈತಿಕ ಗುರಿ ಮತ್ತು ಪ್ರತಿಯೊಬ್ಬರ ಬಗ್ಗೆ ವಹಿಸುವ ಕಾಳಜಿಯಿಂದ ಗರ್ಭಗುಡಿ ನಾಡಿನಲ್ಲಿ ಮನೆಮಾತಾಗಿದೆ. ಸುಮಾರು ೮೫೦೦ ಕುಟುಂಬಗಳು ಗರ್ಭಗುಡಿ ನೆರವಿನಿಂದ ಸಂತಸದಲ್ಲಿವೆ

ಎಂದು ಹೇಳಲು ನಮಗೆ ಅತೀವ ಸಂತಸವಾಗುತ್ತದೆ. ನಿಮ್ಮ ಎಲ್ಲಾ ಆಸೆಗಳನ್ನು ಈಡೇರಿಸಲು ನಮ್ಮ ಬಳಿ ನುರಿತ ಫರ್ಟಿಲಿಟಿ ವೈದ್ಯರ ಸಮೂಹವ ಇದೆ.ಭ್ರೂಣ ತಜ್ಞರಿದ್ದಾರೆ. ನುರಿತ ಅರೆವೈದ್ಯಕೀಯ ಸಿಬ್ಬಂದಿ ಇದೆ. ನಮ್ಮ ಆಶಯ ಒಂದೇ. “ನಮ್ಮಲ್ಲಿಗೆ ಬರುವ ಪ್ರತಿ ದಂಪತಿಯೂ ಆರೋಗ್ಯವಂತ ಮಗುವಿನೊಂದಿಗೆ ಸಂತಸದಿಂದ ಮನೆಗೆ ಹೋಗಬೇಕು”.

ಆ ಆಶಯ ಈಡೇರಿಸಿದ ಸಂತೃಪ್ತಿ ನಮ್ಮ ಪಾಲಿಗಿದೆ.

ಈ ಪುಟವನ್ನು ಹಂಚಿಕೊಳ್ಳಿ

ನಮ್ಮ ಬಗ್ಗೆ

ಗರ್ಭಗುಡಿಯು ಬಂಜೆತನ ಸಮಸ್ಯೆಗಳು ಮತ್ತು ದಂಪತಿಗಳ ಮೇಲೆ ಅವರ ಭಾವನಾತ್ಮಕ ಮತ್ತು ಮಾನಸಿಕ ಪರಿಣಾಮಗಳನ್ನು ಪರಿಹರಿಸಲು ಅತ್ಯಾಧುನಿಕ-ಮೂಲಸೌಕರ್ಯ ಮತ್ತು ಅತ್ಯಾಧುನಿಕ ಐವಿಎಫ್ ತಂತ್ರಜ್ಞಾನವನ್ನು ಹೊಂದಿರುವ ಹೊಸ-ಪೀಳಿಗೆಯ ಬಂಜೆತನ ಚಿಕಿತ್ಸಾ ಆಸ್ಪತ್ರೆಗಳ ಸರಪಳಿಯಾಗಿದೆ. ನಾವು ಅರ್ಹ ಮತ್ತು ಅನುಭವಿ ವೈದ್ಯರ ತಂಡವನ್ನು ಹೊಂದಿದ್ದೇವೆ; ಅವರ ಆಳವಾದ ಜ್ಞಾನ ಮತ್ತು ಪರಿಣತಿಯು ನಿಮ್ಮ ಎಲ್ಲಾ ಬಂಜೆತನ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ಕಲ್ಲನ್ನು ಬಿಡುವುದಿಲ್ಲ. ಪ್ರಯಾಣದ ಉದ್ದಕ್ಕೂ ನಿಮ್ಮನ್ನು ಪ್ರೇರೇಪಿಸಲು ಮತ್ತು ಮಾರ್ಗದರ್ಶನ ಮಾಡಲು ಬೆಂಬಲ ಮತ್ತು ಕಾಳಜಿಯುಳ್ಳ ಸಿಬ್ಬಂದಿ ಯಾವಾಗಲೂ ನಿಮ್ಮ ಪಕ್ಕದಲ್ಲಿರುತ್ತಾರೆ. ಗರ್ಭಗುಡಿ ಐವಿಎಫ್, ಬೆಂಗಳೂರಿನ ಅತ್ಯುತ್ತಮ ಫಲವತ್ತತೆ ಚಿಕಿತ್ಸಾ ಆಸ್ಪತ್ರೆ, ಬಂಜೆತನ ಸಮಸ್ಯೆಗಳು ಮತ್ತು ಲೈಂಗಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ದಂಪತಿಗಳಿಗೆ ಭಾವನಾತ್ಮಕ ಬೆಂಬಲವನ್ನು ನೀಡುತ್ತದೆ

ಸಂಪರ್ಕಿಸಿ