ಕ್ರಿಯೋಪ್ರಿಸರ್ವೇಷನ್‌ ಎಂದರೇನು?ಡಾ ಅನಿತಾ ಮನೋಜ್

ಕ್ರಿಯೋಪ್ರಿಸರ್ವೇಷನ್‌ ಎಂದರೇನು?

ಆಧುನಿಕ ವೈದ್ಯ ವಿಜ್ಞಾನ ಬೆರಗುಹುಟ್ಟಿಸುವ ರೀತಿ ಬೆಳೆಯುತ್ತಿದೆ. ಹೊಸ ಆವಿಷ್ಕಾರ, ತಂತ್ರಜ್ಞಾನ ಚಿಕಿತ್ಸೆಯ ದಿಕ್ಕನ್ನೇ ಬದಲಿಸಿದೆ. ಅದಕ್ಕೆ ದಿ ಬೆಸ್ಟ್‌ಉದಾಹರಣೆ ಅಂದ್ರೆ ಕ್ರಿಯೋಪ್ರಿಸರ್ವೇಷನ್ ತಂತ್ರಜ್ಞಾನ. ಅತಿ ಹೆಚ್ಚು ಶೀತ ಉಷ್ಣಾಂಶದಲ್ಲಿ ಜೀವಕೋಶಗಳು ಮತ್ತು ಅಂಗಾಶಗಳನ್ನು ಸಂರಕ್ಷಿಸಿಡುವ ವಿಧಾನವೇ ಕ್ರಿಯೋಪ್ರಿಸರ್ವೇಷನ್.

ಕ್ರಿಯೋಪ್ರಿಸರ್ವೇಷನ್; ನಿಜಕ್ಕೂ ಏನದು?

ಇದು ನಿಜಕ್ಕೂ ಅತ್ಯಂತ ಕುತೂಹಲವಾದ ವಿಷಯ. ಹೇಗೆ ಅಂದ್ರೆ‌, ಜೀವಂತ ಜೀವಕೋಶಗಳು, ಅಂಗಾಂಶಗಳು ಮತ್ತು ಜೈವಿಕ ಮಾದರಿಗಳನ್ನು ಅತ್ಯಂತ ಕಡಿಮೆ ತಾಪಮಾನವಿರುವ ಫ್ರೀಜರ್‌ನಲ್ಲಿಟ್ಟು ಸಂರಕ್ಷಿಸುವ ಒಂದು ವಿಧಾನವೇ ಕ್ರಿಯೋಪ್ರಿಸರ್ವೇಷನ್. ನೀವು ನಂಬಲ್ಲ ಸುಮಾರು ೧೯೬ ಡಿಗ್ರಿ ಸೆಲ್ಸಿಯಸ್‌ ಅಥವಾ ಅದಕ್ಕಿಂತಲೂ ಕಡಿಮೆ ತಾಪಮಾನದಲ್ಲಿ ಮಾದರಿಗಳನ್ನ ಸಂಗ್ರಹಿಸಲಾಗುತ್ತದೆ. ಅಂದ್ರೆ ಜೀವಕೋಶಗಳು, ಅಂಗಾಂಶಗಳನ್ನು ಹಾಳಾಗದ ಹಾಗೆ ಸಂರಕ್ಷಿಸಿಟ್ಟು ಅವನ್ನು ಬೇಕಾದಾಗ ಬಳಸುವ ಕ್ರಿಯೆ. ಅಷ್ಟು ಡೀಪ್‌ಫ್ರೀಜರ್‌ನಲ್ಲಿ ಇಡಲಿಲ್ಲ ಅಂದ್ರೆ ಜೀವಕೋಶಗಳು ನಾಶವಾಗುತ್ತವೆ.

ಹೇಗಿದೆ ಕ್ರಿಯೋಪ್ರಿಸರ್ವೇಷನ್‌ ಪ್ರಕ್ರಿಯೆ?

ಇದೊಂದು ಕುತೂಹಲದ ಪ್ರಕ್ರಿಯೆ. ಜೀವಕೋಶಗಳು, ಅಂಡಾಣುಗಳು, ಅಂಗಾಂಶಗಳು , ವೀರ್ಯಾಣು, ಅಂಡಾಶಯದ ಅಂಗಾಂಶಗಳು ಪ್ರಿ ಇಂಪ್ಲಾಂಟೇಷನ್‌ಭ್ರೂಣಗಳು, ಅಂಗಗಳು ಇತ್ಯಾದಿಗಳನ್ನ ಅತಿಯಾದ ಶೀತ ವಾತಾವರಣದಲ್ಲಿ ಯಾವುದೇ ಕಾಂಪ್ರೊಮೈಸ್‌ ಇಲ್ಲದೆ ಜೀವಕೋಶಗಳನ್ನು ಸಂರಕ್ಷಿಸಬಹುದು. ನಂತರ ಅವುಗಳನ್ನ ಬೇಕಾದ ವ್ಯಕ್ತಿಗೆ ಅಳವಡಿಸಬಹುದು. ಇದೊಂದು ಜೀವಸಂರಕ್ಷಕ ಕೆಲಸ ಅಂದ್ರೆ ತಪ್ಪಾಗಲಾರದು.

ಸಾಮಾನ್ಯವಾಗಿ ಈ ವಿಧಾನದಲ್ಲಿ ಡ್ರೈ ಐಸ್‌ ಮತ್ತು ನೇಟ್ರೋಜೆನ್‌ ಲಿಕ್ವಿಡ್‌ನ ಬಳಸಲಾಗುತ್ತದೆ. ಯಾಕೆ ಬಳಸುತ್ತಾರೆ ಅಂದ್ರೆ, ಅತಿಯಾದ ಫ್ರೀಜರ್‌ನಲ್ಲಿಟ್ಟಾಗ ಜೀವಕೋಶಗಳ ಪೊರೆಗಳು ನಾಶವಾಗಿಹೋಗಬಹುದು. ಫ್ರೀಜಿಂಗ್‌ನ ಕಂಟ್ರೋಲ್‌ಮಾಡುವ ಮತ್ತು ಸರಿಯಾದ ಫ್ರೀಜಿಂಗ್‌ ಮೆಥಡ್‌ನ ಅಳವಡಿಸುವ ಮೂಲಕ ಜೀವಕೋಶಗಳ ಡ್ಯಾಮೇಜ್‌ ತಪ್ಪಿಸಬಹುದು.

ಕ್ರಿಯೋಪ್ರಿಸರ್ವೇಷನ್‌ನ ಹಂತಗಳು

ಕ್ರಿಯೋಪ್ರಿಸರ್ವೇಷನ್‌ನಲ್ಲಿ ಜೈವಿಕ ಮಾದರಿಗಳನ್ನು ಸಂರಕ್ಷಿಸಲು ಕೆಳಗಿನ ಹಂತಗಳನ್ನು ಅಳವಡಿಸಲಾಗುತ್ತದೆ.

* ವಸ್ತುವಿನ ಆಯ್ಕೆ: ಜೈವಿಕ ವಸ್ತುಗಳನ್ನು ಆಯ್ಕೆ ಮಾಡುವಾಗ, ಪರಿಮಾಣ, ಸಾಂದ್ರತೆ, PH, ಮಾರ್ಫಾಲಜಿ, ಮತ್ತು ಹಾನಿಯಿಲ್ಲದಿರುವ ಅಂಶಗಳನ್ನು ಪರಿಗಣಿಸುತ್ತಾರೆ.

* ಕ್ರಿಯೋಪ್ರೊಟೆಕ್ಟಿವ್‌ಏಜೆಂಟ್ ಸೇರ್ಪಡೆ: ಒಮ್ಮೆ ವಸ್ತುಗಳನ್ನ ಆಯ್ಕೆ ಮಾಡಿದ ಮೇಲೆ ಅವಕ್ಕೆ ಕ್ರಿಯೋಪ್ರೊಟೆಕ್ಟಿವ್‌ಏಜೆಂಟ್‌ನ ಸೇರಿಸಲಾಗುತ್ತದೆ.ಹಾಗೆ ಸೇರಿಸುವುದರಿಂದ ಕೂಲಿಂಗ್‌ಕಡಿಮೆಗೊಳಿಸಿ ನಿಧಾನಗತಿಗೆ ತರಬಹುದು. ಇದರಿಂದ ವಸ್ತುಗಳು ಅತಿಯಾದ ಕೋಲ್ಡ್‌ನಿಂದ ಹರಳುಗಳಾಗುವುದನ್ನು ತಪ್ಪಿಸಬಹುದು. ಕ್ರಿಯೋಪ್ರೊಟೆಕ್ಟಿವ್‌ ಏಜೆಂಟ್‌ನಲ್ಲಿ ಏನಿರುತ್ತೆ ಗೊತ್ತಾ, ಗ್ಲಿಸರಾಲ್‌,FB̧ ಲವಣ, ಸಕ್ಕರೆ ಮತ್ತು ಗ್ಲೂಕೋಲ್‌.

* ಕ್ರಿಯೋಪ್ರೊಟೆಕ್ಟಿವ್‌ ಕೆಮಿಕಲ್ಸ್‌ನ ಉಷ್ಣಾಂಶಕ್ಕೆ ಜೀವಕೋಶಗಳು ಹಾನಿಯಾಗಬಾರದು ಅಥವಾ ಸಾಯಬಾರದು ಅನ್ನೋ ಕಾರಣಕ್ಕೆ ಅವುಗಳನ್ನು ಹಲವು ಫ್ರೀಜಿಂಗ್‌ ಟೆಕ್ನಿಕ್‌ ಬಳಸಿ ಸಂರಕ್ಷಿಸುತ್ತಾರೆ.

* ಲಿಕ್ವಿಡ್‌ ನೈಟ್ರೋಜನ್‌ನಲ್ಲಿ ಶೇಖರಣೆ: ಕ್ರಿಯೋಪ್ರಿಸರ್ವಡ್‌ ಮಾದರಿಗಳನ್ನು ಶೇಖರಣಾ ಪಾತ್ರೆಗಳಿಗೆ ವರ್ಗಾಯಿಸುವ ಮೊದಲು -೮೦ ಡಿಗ್ರಿ ಸೆಲ್ಷಿಯಸ್‌ ಉಷ್ಣಾಂಶದಲ್ಲಿ ಸುಮಾರು ಐದರಿಂದ ಇಪ್ಪತ್ತನಾಲ್ಕು ಗಂಟೆಗಳವರೆಗೆ ಶೇಕರಿಸಿಡುತ್ತಾರೆ.

* ಕರಗಿಸುವುದು: ಕ್ರಿಯೋಪ್ರಿಸರ್ವೇಷನ್‌ನಲ್ಲಿ ಜೀವಕೋಶಗಳನ್ನ ಇಡಲು ಉಷ್ಣಾಂಶವನ್ನು ನಿಧಾನಗತಿಯಲ್ಲಿ ತಣ್ಣಗೆ ಮಾಡುತ್ತಾರೆ. ಇದರಿಂದ ಕೋಶಗಳು ಹರಳುಗಟ್ಟುವುದು ಮತ್ತು ಹಾಳಾಗುವುದನ್ನು ತಡೆಯಬಹುದು.

ಭ್ರೂಣದ ಕ್ರಿಯೋಪ್ರಿಸರ್ವೇಷನ್‌

ಬಂಜೆತನ ನಿವಾರಣಾ ಚಿಕಿತ್ಸೆಯಲ್ಲಿ ಅಂಡಾಣು ಉತ್ಪಾದನೆಯನ್ನು ಉತ್ತೇಜನಗೊಳಿಸಲು ಹಾರ್ಮೋನ್‌ಗಳನ್ನು ಬಳಸಲಾಗುತ್ತದೆ. ಆ ನಂತರ ಅಂಡಾಣುಗಳನ್ನು ತೆಗೆದು ಪ್ರಯೋಗಾಲಯದಲ್ಲಿ ಬೆಳೆಸಲಾಗುತ್ತದೆ. ಅಂದ್ರೆ ಹಲವು ಭ್ರೂಣಗಳನ್ನು ಲ್ಯಾಬ್‌ನಲ್ಲಿ ತಯಾರಿಸಿ ನಂತರ ಮಹಿಳೆಯ ಗರ್ಭಾಶಯಕ್ಕೆ ಅಳವಡಿಸಲಾಗುತ್ತದೆ. ಇಂಥ ಭ್ರೂಣಗಳನ್ನು ಕ್ರಿಯೋಪ್ರಿಸರ್ವೇಟಿವ್ಸ್‌ನಲ್ಲಿ ಸಂರಕ್ಷಿಸಿ ಭವಿಷ್ಯದಲ್ಲಿ ಬಳಕೆ ಮಾಡಬಹದು. ಹೀಗೆ ಮಾಡುವುದರಿಂದ ಮಹಿಳೆ ಐವಿಎಫ್‌ ಚಿಕಿತ್ಸೆಗೆ ಪಾವತಿ ಮಾಡದೆ ಭ್ರೂಣವನ್ನು ಎರಡನೇ ಸಲವೂ ಪಡೆಯಬಹುದು.

ಒಸೈಟ್ಗಳ ಕ್ರಿಯೋಪ್ರಿಸರ್ವೇಷನ್‌

ವಿಟ್ರಿಫಿಕೇಷನ್‌ವಿಧಾನದಲ್ಲಿ ಅಂಡಾಣು ಬಹಳ ಬೇಗ ಹೆಪ್ಪುಗಟ್ಟುತ್ತದೆಯಾದ್ದರಿಂದ ಹರಳುಗಟ್ಟೋದಕ್ಕೆ ಕಡಿಮೆ ಸಮಯ ಸಾಕು. ಹಾಗಾಗಿ ಸಂಗ್ರಹಿಸಿದ ಮಾದರಿಗಳ ಮೇಲೆ ಆಂಟಿ ಫ್ರೀಜ್‌ರಾಸಾಯನಿಕಗಳ ಜೊತೆಗೆ ಕ್ರಿಯೊಪ್ರೊಟೆಕ್ಟಂಟ್ಸ್‌ಗಳನ್ನೂ ಲೇಪನ ಮಾಡಲಾಗುತ್ತದೆ.

ಆಂಟಿ ಫ್ರೀಜಿಂಗ್‌ಗಳಾದ ಕ್ರಿಯೊಪ್ರೊಟೆಕ್ಟಂಟ್‌ಗಳಲ್ಲಿ ಒಸೈಟ್‌ಗಳನ್ನು ಮೊದಲು ನೆನೆಸಲಾಗುತ್ತದೆ. ನಂತರ ಅಂಡಾಣುವಿನಲ್ಲಿರುವ ಸ್ವಲ್ಪ ನೀರನ್ನು ತೆಗೆದು ಸುಕ್ರೋಸ್‌ಸೇರಿಸಲಾಗುತ್ತದೆ. ಲಿಕ್ವಿಡ್‌ನೈಟ್ರೋಜನ್‌ಗೆ ಸೇರಿಸುವ ಮೊದಲು ಅಂಡಾಣುವನ್ನ ಸ್ವಲ್ಪ ಕಾಲ ಹೆಚ್ಚು ಸಾಂದ್ರತೆ ಇರುವ ಆಂಟಿ ಫ್ರೀಜಿಂಗ್‌ಕ್ರಿಯೋಪ್ರೊಟೆಕ್ಟಂಟ್‌ ನಲ್ಲಿಡಲಾಗುತ್ತದೆ. ಅಂದ್ರೆ ಬೇಕಾದಾಗ ಡಿಫ್ರಾಸ್ಟ್‌ಆದ ಅಂಡಾಣುವನ್ನ ಮಹಿಳೆಗೆ ಕಸಿಮಾಡಲು ಬಳಸಬಹುದಾಗಿರುತ್ತದೆ.

ಪುರುಷನಿಂದ ಶೇಖರಿಸಲ್ಪಟ್ಟ ವೀರ್ಯವನ್ನು ಹೆಪ್ಪುಗಟ್ಟುವಿಕೆಯಿಂದ ಸಂರಕ್ಷಿಸಲು ಕೆಲವು ಸಲ್ಯೂಷನ್‌ಗಳನ್ನ ಸೇರಿಸಲಾಗುತ್ತದೆ. ನಂತರ ಅದನ್ನು ಪಾಲಿಪ್ರೊಪಿಲೀನ್‌ಬಾಟಲಿಗಳಿಗೆ ಹಾಕಿ ಲಿಕ್ವಿಡ್‌ನೈಟ್ರೋಜನ್‌ನಲ್ಲಿ ಫ್ರೀಜ್‌ಮಾಡಲಾಗುತ್ತದೆ.

ಈ ವಿಧಾನದ ಮೂಲಕ ಭವಿಷ್ಯದ ಗರ್ಭಧಾರಣೆ ಹೆಚ್ಚು ಸುರಕ್ಷಿತವಾಗಿರುತ್ತದೆ. ಕ್ರಿಯೋಬ್ಯಾಂಕ್‌ಮೂಲಕ ಕಡಿಮೆ ಅವಧಿಯ ವೀರ್ಯ ಶೇಖರಣೆ, ಫ್ರೀಜಿಂಗ್‌ಕೂಡ ಮಾಡಬಹುದು.ನಂತರ ಅದನ್ನು ಬಂಜೆತನವಿರುವವರಿಗೆ ಬಳಸಬಹುದು.

ಕ್ರಿಯೋಪ್ರಿಸರ್ವೇಷನ್ಸ್‌ಪ್ರಯೋಜನಗಳು

ಕ್ರಿಯೋಪ್ರಿಸರ್ವೇಷನ್‌ಕಾರ್ಯವಿಧಾನದಿಂದ ದೊರೆಯುವ ಪ್ರಯೋಜನಗಳು.

• ಫಲವತ್ತತೆಯ ವಿಧಾನ

• ಸ್ಥಳ ಮತ್ತು ಕಾರ್ಮಿಕರ ಅವಶ್ಯಕತೆ ಕಡಿಮೆ.

• ಆನುವಂಶಿಕತೆಯ ಮಾಲಿನ್ಯದ ವಿರುದ್ಧ ರಕ್ಷಣೆ

• ಆನುವಂಶಿಕತೆಯ ಸಮಗ್ರತೆಯನ್ನು ಕಾಪಾಡುವುದು.

• ಅಳಿವಿನಂಚಿನಲ್ಲಿರುವ ಪ್ರಭೇದಗಳ ಆನುವಂಶಿಕ ವಸ್ತುಗಳ ಸಂರಕ್ಷಣೆ.

• ಹಲವು ದಿನಗಳ ತನಕ ಮಾದರಿಗಳನ್ನ ಸುರಕ್ಷಿತವಾಗಿಡಬಹುದು.

• ಸೂಕ್ಷ್ಮಾಣುಗಳ ಮಾಲಿನ್ಯದಿಂದ ಮಾದರಿಗಳ ರಕ್ಷಣೆ.

• ಕ್ರಿಯೋಪ್ರಿಸರ್ವಿಂಗ್‌ಗ್ಯಾಮೆಟ್ಸ್‌, ಭ್ರೂಣಗಳು ಮತ್ತು ಇತರೆ ಜೈವಿಕ ವಸ್ತುಗಳ ʼಜೆನೆಟಿಕ್‌ ಡ್ರಿಫ್ಟ್‌ʼನ್ನು ತಡೆಯಬಹುದು.

ಈ ಪುಟವನ್ನು ಹಂಚಿಕೊಳ್ಳಿ

ನಮ್ಮ ಬಗ್ಗೆ

ಗರ್ಭಗುಡಿಯು ಬಂಜೆತನ ಸಮಸ್ಯೆಗಳು ಮತ್ತು ದಂಪತಿಗಳ ಮೇಲೆ ಅವರ ಭಾವನಾತ್ಮಕ ಮತ್ತು ಮಾನಸಿಕ ಪರಿಣಾಮಗಳನ್ನು ಪರಿಹರಿಸಲು ಅತ್ಯಾಧುನಿಕ-ಮೂಲಸೌಕರ್ಯ ಮತ್ತು ಅತ್ಯಾಧುನಿಕ ಐವಿಎಫ್ ತಂತ್ರಜ್ಞಾನವನ್ನು ಹೊಂದಿರುವ ಹೊಸ-ಪೀಳಿಗೆಯ ಬಂಜೆತನ ಚಿಕಿತ್ಸಾ ಆಸ್ಪತ್ರೆಗಳ ಸರಪಳಿಯಾಗಿದೆ. ನಾವು ಅರ್ಹ ಮತ್ತು ಅನುಭವಿ ವೈದ್ಯರ ತಂಡವನ್ನು ಹೊಂದಿದ್ದೇವೆ; ಅವರ ಆಳವಾದ ಜ್ಞಾನ ಮತ್ತು ಪರಿಣತಿಯು ನಿಮ್ಮ ಎಲ್ಲಾ ಬಂಜೆತನ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ಕಲ್ಲನ್ನು ಬಿಡುವುದಿಲ್ಲ. ಪ್ರಯಾಣದ ಉದ್ದಕ್ಕೂ ನಿಮ್ಮನ್ನು ಪ್ರೇರೇಪಿಸಲು ಮತ್ತು ಮಾರ್ಗದರ್ಶನ ಮಾಡಲು ಬೆಂಬಲ ಮತ್ತು ಕಾಳಜಿಯುಳ್ಳ ಸಿಬ್ಬಂದಿ ಯಾವಾಗಲೂ ನಿಮ್ಮ ಪಕ್ಕದಲ್ಲಿರುತ್ತಾರೆ. ಗರ್ಭಗುಡಿ ಐವಿಎಫ್, ಬೆಂಗಳೂರಿನ ಅತ್ಯುತ್ತಮ ಫಲವತ್ತತೆ ಚಿಕಿತ್ಸಾ ಆಸ್ಪತ್ರೆ, ಬಂಜೆತನ ಸಮಸ್ಯೆಗಳು ಮತ್ತು ಲೈಂಗಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ದಂಪತಿಗಳಿಗೆ ಭಾವನಾತ್ಮಕ ಬೆಂಬಲವನ್ನು ನೀಡುತ್ತದೆ

ಸಂಪರ್ಕಿಸಿ