ಐವಿಎಫ್ ಎಂದರೇನು? ಅದು ಹೇಗೆ ಕೆಲಸಮಾಡುತ್ತೆ? ಡಾ ಆಶಾ ಎಸ್ ವಿಜಯ್

ಐವಿಎಫ್ ಎಂದರೇನು? ಅದು ಹೇಗೆ ಕೆಲಸಮಾಡುತ್ತೆ?

ಬೆಂಗಳೂರಿನ ಅತ್ಯಂತ ಪ್ರಮುಖ ಸಂತಾನೋತ್ಪತ್ತಿ ಚಿಕಿತ್ಸಾ ಕೇಂದ್ರವೆಂದ್ರೆ ಅದು ಗರ್ಭಗುಡಿ ಐವಿಎಫ್ ಸೆಂಟರ್. ಐವಿಎಫ್ ಚಿಕಿತ್ಸೆ ಅಲ್ಲದೆ ಗರ್ಭಗುಡಿ ಹಲವು ರೀತಿಯ ಫಲವತ್ತತೆ ಸಂಬಂಧಿ ಚಿಕಿತ್ಸೆ ನೀಡುತ್ತದೆ. ಐವಿಎಫ್ ಅಥವಾ In-Vitro Fertilization ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನವಾಗಿದ್ದು (Assisted Reproductive Technology -ART) ಬಂಜೆತನದಿಂದ ಬಳಲುತ್ತಿರುವ ಅನೇಕ ದಂಪತಿಗಳಿಗೆ ಗರ್ಭಧರಿಸಲು ಬಹು ದೊಡ್ಡ ವರದಾನವಾಗಿದೆ.

ಐವಿಎಫ್ ಅಥವಾ ಇನ್‌ವಿಟ್ರೋ ಫರ್ಟಿಲೈಸೇಷನ್ ಅತ್ಯಂತ ಪಾಪುಲರ್ ಆದ ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಿಕ್ (ART) ವಿಧಾನಗಳಲ್ಲಿ ಒಂದು. ಮಹಿಳೆಯ ಅಂಡಾಶಯದಿಂದ ಮೊಟ್ಟೆಗಳನ್ನು ಪಡೆದು ಅದನ್ನು ವೀರ್ಯಾಣುವಿನ ಜೊತೆ ಸೇರಿಸಿ ಪುಯೋಗಾಲಯದಲ್ಲಿ ಕೃತಕ ಭ್ರೂಣವನ್ನು ಬೆಳೆಸುವುದೇ ಐವಿಎಫ್. ನಂತರ ಭ್ರೂಣವನ್ನು ಮಹಿಳೆಯ ಗರ್ಭಾಶಯಕ್ಕೆ ವರ್ಗಾಯಿಸಲಾಗುತ್ತದೆ. ಈ ವಿಧಾನದಿಂದ ಮಹಿಳೆ ಗರ್ಭಧರಿಸಬಹುದು ಅನ್ನೋದು ಒಂದು ಆಶಾಭಾವನೆ. ವಿಶೇಷ ಏನಂದ್ರೆ, ಐವಿಎಫ್ ಚಿಕಿತ್ಸೆಗೆ ಒಳಪಡುವ ದಂಪತಿಗಳಿಗೆ ಅತ್ಯಾಧುನಿಕ ಸೌಲಭ್ಯವುಳ್ಳ ಚಿಕಿತ್ಸೆ ನೀಡಲು ಬೆಂಗಳೂರಿನ ಗರ್ಭಗುಡಿ ಐವಿಎಫ್ ಸೆಂಟರ್‌ನಲ್ಲಿ ನುರಿತ ವೈದ್ಯರ ತಂಡವೇ ಇದೆ. ಭ್ರೂಣಶಾಸ್ತ್ರಜ್ಞರಿದ್ದಾರೆ. ಈ ತಂಡ ದಂಪತಿಗಳ ವೈಯಕ್ತಿಕ ಆರೈಕೆ ಮಾಡುತ್ತದೆ ಮಾತ್ರವಲ್ಲ ಅವರಿಗೊಂದು ಕಂಫರ್ಟ್ ನೀಡಲು ಸದಾ ಸಿದ್ಧವಿದೆ. ಬಂಜೆತನದಿಂದ ಬಳಲುತ್ತಿರುವ ದಂಪತಿಗಳು ಐವಿಎಫ್ ಸಹಾಯದಿಂದ ಮಗು ಪಡೆದು ತಮ್ಮ ಕುಟುಂಬವನ್ನು ಹೊಂದಲು ಇದೊಂದು ಅದ್ಭುತ ಅವಕಾಶವಾಗಿದೆ.

ನಿಮಗೆ ಗೊತ್ತಿರಲಿ, ಐವಿಎಫ್ ಚಿಕಿತ್ಸೆ ಖಂಡಿತಾ ಒಂದು ಹಂತದ ಚಿಕಿತ್ಸೆಯಲ್ಲ. ಅದೊಂದು ಬಹುಹಂತದ ಚಿಕಿತ್ಸಾ ವಿಧಾನ. ಒವರಿಯನ್ ಸ್ಟಿಮ್ಯುಲೇಷನ್, ಎಗ್ ರಿಟ್ರಿವಲ್, ಫರ್ಟಿಲೈಸೇಷನ್, ಎಂಬ್ರಿಯೋ ಕಲ್ಕರ್ ಮತ್ತು ಎಂಬ್ರಿಯೋ ಟ್ರಾನ್ಸ್‌ಫರ್ -ಇವು ಐವಿಎಫ್ ಚಿಕಿತ್ಸೆಯ ಹಲವು ಹಂತಗಳು. ಈ ಚಿಕಿತ್ಸೆಯು ಗರ್ಭಗುಡಿಯ ನುರಿತ ಫಲವತ್ತತೆ ತಜ್ಞರ ನಿಗಾದಡಿ ನಡೆಯುತ್ತದೆ. ಪ್ರತಿಯೊಬ್ಬ ರೋಗಿಗೂ ವೈಯಕ್ತಿಕ ಚಿಕಿತ್ಸೆ ಮತ್ತು ಅವರ ಬೇಕು ಬೇಡಗಳನ್ನು ಗಮನಿಸಿ ಗರ್ಭಧರಿಸುವ ಸಾಧ್ಯತೆಯನ್ನ ಯಶಸ್ವಿಗೊಳಿಸಲು ಇಡೀ ತಂಡ ಒಟ್ಟಾಗಿ ಶ್ರಮಿಸುತ್ತದೆ.

ಬೆಂಗಳೂರಿನಲ್ಲಿ ಐವಿಎಫ್‌ಚಿಕಿತ್ಸೆಯ ಪ್ರಕ್ರಿಯೆ ಏನು? ಐವಿಎಫ್ ಚಿಕಿತ್ಸೆ ಹೇಗೆ ನಡೆಯುತ್ತದೆ ಅನ್ನೋದು ಕೆಲವು ಸಾಮಾನ್ಯ ಹಂತಗಳು ಇಲ್ಲಿವೆ.

• ಆರಂಭಿಕ ಸಮಾಲೋಚನೆ: ಐವಿಎಫ್ ಚಿಕಿತ್ಸೆ ಪಡೆಯಬೇಕು ಅಂತ ತೀರ್ಮಾನಿಸಿದ ದಂಪತಿಗಳು ಮೊದಲು ಫಲವತ್ತತೆ ತಜ್ಞರನ್ನು ಭೇಟಿ ಆಗಿ ಸಮಾಲೋಚಿಸಬೇಕು. ಈ ಸಮಯದಲ್ಲಿ ವ್ಯಕ್ತಿಯ ಮೆಡಿಕಲ್ ಹಿಸ್ಟರಿ, ದೈಹಿಕ ವೈದ್ಯಕೀಯ ಪರೀಕ್ಷೆ ಮತ್ತು ಬಂಜೆತನಕ್ಕೆ ಕಾರಣ ಏನು ಅನ್ನೋದನ್ನು ತಿಳಿದುಕೊಳ್ಳಲು ಕೆಲವು ಪರೀಕ್ಷೆಗಳನ್ನು ನಡೆಸಲಾಗುತ್ತದೆ.

• ಅಂಡಾಶಯದ ಪುಚೋದನೆ: ಎರಡನೇ ಹಂತ ಏನಂದ್ರೆ, ಬಹುಸಂಖ್ಯೆಯ ಮೊಟ್ಟೆಗಳ ಉತ್ಪಾದನೆಯನ್ನು ಹೆಚ್ಚಿಸುವುದು. ಅದಕ್ಕಾಗಿ ಕೆಲವು ಔಷಧಿಗಳನ್ನು ಇಂಜೆಕ್ಷನ್ ಮೂಲಕ ದೇಹಕ್ಕೆ ಸೇರಿಸಲಾಗುತ್ತದೆ. ಅವು ಗೊನಡೊಟ್ರಾಪಿನ್ಸ್ ಅಥವಾ ಗೊನಡೋಟ್ರಾಪಿನ್-ಬಿಡುಗಡೆ ಮಾಡುವ ಹಾರ್ಮೋನ್ ಅಗೊನಿಸ್ಟ್.ಈ ಚಿಕಿತ್ಸಾ ಹಂತದ ಉದ್ದೇಶ ಏನಂದ್ರೆ, ಬೆಳೆದ ಮೊಟ್ಟೆಗಳನ್ನು ಉತ್ಪಾದಿಸಿ ಅದನ್ನು ತೆಗೆದು ಫಲವತ್ತಾಗಿಸಲು ಐವಿಎಫ್ ಚಿಕಿತ್ಸೆಯಲ್ಲಿ ಬಳಸುವುದು.

• ಎಗ್ ರಿಟ್ರೇವಲ್ ಅಥವಾ ಮೊಟ್ಟೆಗಳ ಹಿಂಪಡೆಯುವಿಕೆ: ಒಂದು ಸಲ ಮೊಟ್ಟೆಗಳು ಮೆಚೂರ್ ಆದ್ರೆ ಅವನ್ನು ಹಿಂಪಡೆಯಲಾಗುತ್ತದೆ, ಈ ವಿಧಾನವನ್ನು ಟ್ರಾನ್ಸ್ ವಜೈನಲ್ ಅಲ್ಮಾಸೌಂಡ್ ಗೈಡೆಡ್‌ ಓಸ್ಕೆಟ್ ರಿಟ್ರಿವಲ್ ಎನ್ನುತ್ತಾರೆ. ಸಾಮಾನ್ಯ ಅರಿವಳಿಕೆ ಮದ್ದನ್ನು ನೀಡಿ ಸೂಜಿ ಮೂಲಕ ಮಹಿಳೆಯ ಅಂಡಾಶಯದಿಂದ ಮೊಟ್ಟೆಗಳನ್ನು ಹೊರತೆಗೆಯಲಾಗುತ್ತದೆ.

• ಫಲೀಕರಣ ವಿಧಾನ: ಮಹಿಳೆಯ ಅಂಡಾಶಯದಿಂದ ಪಡೆದ ಮೊಟ್ಟೆಗಳನ್ನು ಪುಯೋಗಾಲಯದಲ್ಲಿ ವೀರ್ಯಾಣುವಿನ ಜೊತೆ ಸೇರಿಸಿ ಫಲೀಕರಣಗೊಳ್ಳಲು ಬಿಡಲಾಗುತ್ತದೆ. ಫಲೀಕರಣಗೊಂಡ ಮೊಟ್ಟೆ ಆರೋಗ್ಯವಾಗಿದ್ದರೆ ಅದನ್ನು ಮತ್ತೆ ಹಲವು ದಿನ ಪ್ರಯೋಗಾಲಯದಲ್ಲೇ ಬೆಳೆಯಲು ಬಿಡಲಾಗುತ್ತದೆ.

• ಭ್ರೂಣ ವರ್ಗಾವಣೆ: ಫಲೀಕರಣಗೊಂಡ ಮೊಟ್ಟೆಗಳು ಭ್ರೂಣವಾಗಿ ಬೆಳೆದಾಗ ಆರೋಗ್ಯವಾಗಿರುವ ಒಂದು ಅಥವಾ ಎರಡನ್ನು ಗರ್ಭಾಶಯಕ್ಕೆ ವರ್ಗಾಯಿಸಲಾಗುತ್ತದೆ. ಸಾಮಾನ್ಯವಾಗಿ ಭ್ರೂಣ ವರ್ಗಾವಣೆಯ ವಿಧಾನವನ್ನು ಮೊಟ್ಟೆಗಳನ್ನು ಹಿಂಪಡೆದ ಕೆಲವು ದಿನಗಳ ನಂತರ, ಗರ್ಭಕಂಠ ಮತ್ತು ಗರ್ಭಾಶಯದ ಮೂಲಕ ಒಂದು ತೆಳುವಾದ ನಾಳವನ್ನು ಸೇರಿಸುವ ಮೂಲಕ ಮಾಡಲಾಗುತ್ತದೆ. ನಂತರ ಭ್ರೂಣಗಳನ್ನು ಬಹಳ ಹುಷಾರಾಗಿ ನಿಧಾನವಾಗಿ ಗರ್ಭಾಶಯದೊಳಕ್ಕೆ ಸೇರಿಸಲಾಗುತ್ತದೆ.

• ಗರ್ಭಧಾರಣೆ ಪರೀಕ್ಷೆ: ಐವಿಎಫ್ ಚಿಕಿತ್ಸೆ ಫಲಿಸಿದೆಯೇ ಇಲ್ಲವೇ ಅನ್ನೋದನ್ನು ಪತ್ತೆ ಮಾಡಲು ಭ್ರೂಣವನ್ನು ಗರ್ಭಾಶಯದೊಳಕ್ಕೆ ವರ್ಗಾವಣೆ ಮಾಡಿದ ಎರಡು ವಾರಗಳ ನಂತರ ಗರ್ಭಧಾರಣೆ ಪರೀಕ್ಷೆಯನ್ನು ನಡೆಸಲಾಗುತ್ತದೆ. ಪರೀಕ್ಷೆ ಧನಾತ್ಮಕವಾಗಿದ್ದಲ್ಲಿ ಮಹಿಳೆ ಗರ್ಭಧರಿಸಿದ್ದಾಳೆ ಅಂತ ಅರ್ಥ. ಅದೊಂದು ಅಮೃತ ಘಳಿಗೆ.

ಇಲ್ಲೊಂದು ವಿಷಯ ಹೇಳಲೇಬೇಕು, ಒಂದು ಪೂರ್ಣ ಐವಿಎಫ್ ಚಕ್ರದ ಅವಧಿ ಮುಗಿಯಲು ಮೂರು ವಾರಗಳು ಬೇಕು. ಆದ್ರೆ ಕೆಲವು ದಂಪತಿಗಳು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ಅದನ್ನು ಹಲವು ಭಾಗಗಳನ್ನಾಗಿ ವಿಭಾಗಿಸಲಾಗುತ್ತದೆ. ಈ ಪ್ರಕ್ರಿಯೆ ನಿಧಾನವಾಗಬಹುದು. ಐವಿಎಫ್ ಅನ್ನು ಮಹಿಳೆಯ ಮೊಟ್ಟೆ ಮತ್ತು ಪುರುಷ ಸಂಗಾತಿಯ ವೀರ್ಯವನ್ನು ಬಳಸಿ ಮಾಡಬಹುದು. ಅಥವಾ ಬೇರೆ ಯಾರದಾದ್ರೂ ದಾನಿಗಳ ಮೊಟ್ಟೆ ವೀರ್ಯ ಅಥವಾ ಭ್ರೂಣವನ್ನೂ ಬಳಸಬಹುದು. ಕೆಲವು ಸಲ ದಂಪತಿಗಳು ತಮ್ಮದೇ ಭ್ರೂಣವನ್ನು ಇನ್ನೊಬ್ಬರ ಗರ್ಭದಲ್ಲಿ ಬೆಳೆಸಿ ಮಗುವನ್ನು ಹೆತ್ತುಕೊಡಲು ಬಯಸುತ್ತಾರೆ. ಇದೇ ಬಾಡಿಗೆ ಗರ್ಭ ಅಥವಾ ಬಾಡಿಗೆ ತಾಯಿ.

ಬೆಂಗಳೂರಿನ ಗರ್ಭಗುಡಿ ಐವಿಎಫ್ ಸೆಂಟರ್‌ನಲ್ಲಿ ಅತ್ಯುತ್ತಮ ಐವಿಎಫ್ ಚಿಕಿತ್ಸೆಯನ್ನು ನೀಡಲಾಗುತ್ತದೆ. ಇತ್ತೀಚೆಗಿನ ಟೆಕ್ನಾಲಜಿ ಮತ್ತು ತಂತ್ರಜ್ಞಾನವನ್ನು ಬಳಸಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತದೆ. ಅತ್ಯಾಧುನಿಕ ಪುಯೋಗಾಲಯದಲ್ಲಿ ಅತ್ಯಾಧುನಿಕ ಸಲಕರಣೆಗಳಿವೆ ಮತ್ತು ಅತ್ಯಂತ ನುರಿತ ವೈದ್ಯಕೀಯ ಸಿಬ್ಬಂದಿ ಮತ್ತು ಭ್ರೂಣಶಾಸ್ತ್ರಜ್ಞರಿದ್ದಾರೆ. ಈ ಎಲ್ಲರಿಂದ ರೋಗಿಗೆ ದಿ ಬೆಸ್ಟ್ ಅನ್ನೋ ಚಿಕಿತ್ಸೆ ಮತ್ತು ಮಾರ್ಗದರ್ಶನ ಸಿಗುತ್ತದೆ ಅನ್ನೋದು ಗರ್ಭಗುಡಿಯ ಹೆಮ್ಮೆ

ಗಮನಿಸಬೇಕಾದ ಅಂಶವೆಂದ್ರೆ, ಐವಿಎಫ್ ಮಾಡಿಸಿದ ಮಾತ್ರಕ್ಕೆ ಗರ್ಭಧರಿಸುತ್ತಾರೆ ಅಂತಲ್ಲ. ಕೆಲವೊಮ್ಮೆ ಐವಿಎಫ್ ಚಿಕಿತ್ಸೆಯನ್ನು ಎರಡು ಮೂರು ಸಲ ಮಾಡಿಸಿಕೊಳ್ಳಬೇಕಾಗುತ್ತದೆ. ಅಂದ್ರೆ ಗರ್ಭಿಣಿ ಆಗುವ ತನಕ ಚಿಕಿತ್ಸೆ ನೀಡಲೇಬೇಕು. ಯಾಕೆ ಅಂದ್ರೆ ಐವಿಎಫ್ ಚಿಕಿತ್ಸೆಯ ಯಶಸ್ಸಿಗೆ ಹಲವು ಕಾರಣಗಳು ಮುಖ್ಯವಾಗುತ್ತವೆ. ವ್ಯಕ್ತಿಯ ವಯಸ್ಸು, ಬಂಜೆತನ, ಮತ್ತು ಗುಣಮಟ್ಟದ ಮೊಟ್ಟೆ ಮತ್ತು ವೀರ್ಯ ಇಲ್ಲದಿದ್ದಲ್ಲಿ ಐವಿಎಫ್ ಸಕ್ಸಸ್ ಮೊದಲ ಬಾರಿಗೆ ಆಗದಿರಬಹುದು.

ನೀವು ಬಂಜೆತನದಿಂದ ಬಳಲುತ್ತಿದ್ದರೆ ಬೆಂಗಳೂರಿನಲ್ಲಿ ಐವಿಎಫ್ ಚಿಕಿತ್ಸೆ ಪಡೆದುಕೊಳ್ಳಬೇಕು ಅಂತ ಬಯಸಿದ್ದರೆ ಗರ್ಭಗುಡಿ ಐವಿಎಫ್ ಸೆಂಟರ್ ದಿ ಬೆಸ್ಟ್ ಆಯ್ಕೆ. ಖಂಡಿತ ಗರ್ಭಗುಡಿ ನಿಮಗೆ ಸಹಾಯ ಮಾಡುತ್ತದೆ. ಗರ್ಭಗುಡಿಯಲ್ಲಿರುವ ಅನುಭವೀ ಫಲವತ್ತತೆ ತಜ್ಞರು ನಿಮ್ಮ ಮಗುವಿನ ಕನಸನ್ನು ನನಸು ಮಾಡಲು ಪ್ರತಿ ಹಂತದಲ್ಲೂ ಸಹಕರಿಸುತ್ತಾರೆ.

ಇನ್ನೊಂದು ವಿಷಯ, ಐವಿಎಫ್ ಚಿಕಿತ್ಸೆಯ ವೆಚ್ಚ ಸಾಧ್ಯವಾದಷ್ಟು ಕೈಗೆಟಕುವಂತೆ ಮಾಡಲು ದಂಪತಿಗಳಿಗೆ ಹಲವು ಆಯ್ಕೆಗಳನ್ನು ನೀಡಲಾಗುತ್ತದೆ. ಹಾಗಿದ್ದಲ್ಲಿ ತಡಯಾಕೆ. ಈಗಲೇ ಗರ್ಭಗುಡಿಯನ್ನು ಸಂಪರ್ಕಿಸಿ. ನಿಮ್ಮ ಕನಸನ್ನು ನನಸು ಮಾಡಿಕೊಳ್ಳಲು ಭೇಟಿ ನೀಡಿ. ಖಂಡಿತ ನಿಮ್ಮ ಮನೆಯಲ್ಲಿ ಮುದ್ದಾದ ಮಗುವಿನ ನಗು ಕೇಳಿಸುತ್ತದೆ.

ಐವಿಎಫ್ ಚಿಕಿತ್ಸೆಯನ್ನು ಯಾವಾಗ ಶಿಫಾರಸು ಮಾಡಲಾಗುತ್ತದೆ?

ಐವಿಎಫ್ ಚಿಕಿತ್ಸೆಯನ್ನು ಈ ಸಾಮಾನ್ಯ ಕಾರಣಗಳಿಗಾಗಿ ಶಿಫಾರಸು ಮಾಡಲಾಗುತ್ತದೆ.

• ಮುಚ್ಚಿಹೋದ ಅಥವಾ ಹಾನಿಗೊಳಗಾದ ಫಲೋಪಿಯನ್ ನಾಳಗಳು: ಫಲೋಪಿಯನ್ ನಾಳಗಳು ಮುಚ್ಚಿಹೋಗಿದ್ದರೆ ಅಥವಾ ಹಾನಿಗೊಳಗಾಗಿದ್ದರೆ ಮೊಟ್ಟೆ ಅಂಡಾಶಯದಿಂದ ಗರ್ಭಾಶಯ ಸೇರಲು ಸಾಧ್ಯವಿಲ್ಲ.

• ಪುರುಷ ಫಲವತ್ತತೆಯ ಸಮಸ್ಯೆಗಳು: ಪುರುಷ ಸಂಗಾತಿಯ ವೀರ್ಯ ಗುಣಮಟ್ಟ ಇಲ್ಲದಿದ್ದಲ್ಲಿ, ಕೌಂಟ್ ರೇಟ್ ಕಡಿಮೆ ಇದ್ದಲ್ಲಿ ಐವಿಎಫ್ ಶಿಫಾರಸು ಮಾಡಲಾಗುತ್ತದೆ

• ವಿವರಿಸಲಾಗದ ಬಂಜೆತನ: ಕೆಲವೊಮ್ಮೆ ಬಂಜೆತನಕ್ಕೆ ನಿಖರವಾದ ಕಾರಣ ಏನು ಅಂತ ತಿಳಿಯಲ್ಲ. ಆಗ ಐವಿಎಫ್ ಚಿಕಿತ್ಸೆಯನ್ನು ಶಿಫಾರಸ್ಸು ಮಾಡಲಾಗುತ್ತದೆ.

• ಅಂಡೋತ್ಪತ್ತಿ ಡಿಸಾರ್ಡರ್ಸ್ : ಮಹಿಳೆ ನಿಯಮಿತವಾಗಿ ಅಥವಾ ಸಂಪೂರ್ಣವಾಗಿ ಅಂಡೋತ್ಪತ್ತಿ ಮಾಡದಿದ್ದಲ್ಲಿ ಐವಿಎಫ್ ಶಿಫಾರಸು ಮಾಡಲಾಗುತ್ತದೆ.

• ಎಂಡೋಮೆಟ್ರಿಯೋಸಿಸ್: ಇದು ಗರ್ಭಾಶಯದ ಹೊರಭಾಗದಲ್ಲಿ ಬೆಳೆಯುವ ಅಂಗಾಂಶವಾಗಿದ್ದು ಫಲವತ್ತತೆ ಸಮಸ್ಯೆಗೆ ಕಾರಣವಾಗುತ್ತದೆ. ಆಗ ಐವಿಎಫ್ ಶಿಫಾರಸು ಮಾಡಲಾಗುತ್ತದೆ.

• ಮಹಿಳೆಗೆ ವಯಸ್ಸಾಗಿರುವುದು: ಮಹಿಳೆಗೆ ವಯಸ್ಸಾಗಿದ್ದಲ್ಲಿ ಫಲವತ್ತತೆ ಕ್ಷೀಣಿಸುತ್ತಾ ಹೋಗುತ್ತದೆ. ೩೫ ವರ್ಷ ಮೇಲ್ಪಟ್ಟು ವಯಸ್ಸಾಗಿರುವ ಮಹಿಳೆ ಗರ್ಭಧರಿಸಲು ಪುಯತ್ನಪಟ್ಟು ಸೋಲುತ್ತಿದ್ದಲ್ಲಿ ಐವಿಎಫ್ ಶಿಫಾರಸು ಮಾಡಲಾಗುತ್ತದೆ.

ನಿಮಗೆ ಗೊತ್ತಿರಲಿ, ಐವಿಎಫ್ ಒಂದು ಸಂಕೀರ್ಣವಾದ ಮತ್ತು ದುಬಾರಿ ಚಿಕಿತ್ಸಾ ವಿಧಾನವಾಗಿದೆ. ಎಲ್ಲಾ ಸಮಯದಲ್ಲೂ ಸಕ್ಸಸ್ ಸಿಗಲ್ಲ. ಐವಿಎಫ್ ಚಿಕಿತ್ಸೆ ಪಡೆದುಕೊಳ್ಳುವ ಮೊದಲು ಅದರಿಂದ ಉಂಟಾಗುವ ಅಪಾಯಗಳು ಮತ್ತು ಪ್ರಯೋಜನಗಳ ಕುರಿತು ಫರ್ಟಿಲಿಟಿ ತಜ್ಞರ ಜೊತೆ ಚರ್ಚಿಸಿ ಬೇಕಾ ಬೇಡವಾ ಅನ್ನೋದನ್ನು ನಿರ್ಧಾರ ಮಾಡಿ

ಐವಿಎಫ್ ಆವರ್ತದ ಯಶಸ್ಸಿನ ದರದ ಮೇಲೆ ಪರಿಣಾಮ ಬೀರುವ ಅಂಶಗಳು

ನಿಮಗೆ ಗೊತ್ತಿರಲಿ, ಐವಿಎಫ್ ಸಕ್ಸಸ್ ರೇಟ್ ಮೇಲೆ ಹಲವು ಅಂಶಗಳು ಪರಿಣಾಮ ಬೀರುತ್ತವೆ. ಅವು ಹೀಗಿವೆ.

• ವಯಸ್ಸು: ಐವಿಎಫ್ ಚಿಕಿತ್ಸೆಗೆ ಒಳಪಡುವ ಮಹಿಳೆಯ ವಯಸ್ಸು ಚಿಕಿತ್ಸೆಯ ಯಶಸ್ಸಿನ ಮೇಲೆ ಗಮನಾರ್ಹವಾದ ಪರಿಣಾಮ ಬೀರುತ್ತದೆ. ೩೫ ಕ್ಕಿಂತ ಕಡಿಮೆ ವಯಸ್ಸಿದಲ್ಲಿ ಐವಿಎಫ್ ಸಕ್ಸಸ್ ರೇಟ್ ಹೆಚ್ಚು. ೩೫ಕ್ಕಿಂತ ಹೆಚ್ಚು ವಯಸ್ಸಾಗಿದ್ದರೆ ಐವಿಎಫ್ ಸಕ್ಸಸ್ ರೇಟ್ ಕಡಿಮೆ ಇರುತ್ತದೆ .

• ಫಲವತ್ತತೆ ಪರೀಕ್ಷೆ : ಫಲವತ್ತತೆ ಸಮಸ್ಯೆಗಳ ಮೂಲ ಕಾರಣವು ಐವಿಎಫ್ ಸಕ್ಸಸ್ ರೇಟ್ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ ಹೇಳೋದಾದ್ರೆ, ಮಹಿಳೆಯ ಫಲೋಪಿಯನ್ ನಾಳ ಮುಚ್ಚಿದ್ದರೆ ಅಥವಾ ಎಂಡೋಮೆಟ್ರಿಯೋಸಿಸ್ ಇದ್ದರೆ ಐವಿಎಫ್ ಸಕ್ಸಸ್ ರೇಟ್ ಕಡಿಮೆ ಇರುತ್ತದೆ.

• ಮೊಟ್ಟೆ ಮತ್ತು ವೀರ್ಯದ ಗುಣಮಟ್ಟ: ಐವಿಎಫ್ ಚಿಕಿತ್ಸೆಯಲ್ಲಿ ಬಳಸಲಾದ ವೀರ್ಯ ಮತ್ತು ಮೊಟ್ಟೆಯ ಗುಣಮಟ್ಟ ಕೂಡ ಸಕ್ಸಸ್ ರೇಟ್ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ, ವೀರ್ಯ ಅಥವಾ ಮೊಟ್ಟೆಯ ಗುಣಮಟ್ಟ ಕಳಪೆ ಇದ್ದಲ್ಲಿ ಐವಿಎಫ್ ಮೂಲಕ ಗರ್ಭಿಣಿಯಾಗುವುದು ತುಸು ಕಷ್ಟವೇ ಸರಿ.

• ವರ್ಗಾವಣೆಗೊಂಡ ಭ್ರೂಣಗಳ ಸಂಖ್ಯೆ: ಐವಿಎಫ್ ಪ್ರಕ್ರಿಯೆಯಲ್ಲಿ ವರ್ಗಾವಣೆಗೊಂಡ ಭ್ರೂಣಗಳ ಸಂಖ್ಯೆ ಕೂಡ ಸಕ್ಸಸ್ ರೇಟ್ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚು ಹೆಚ್ಚು ಭ್ರೂಣಗಳನ್ನು ವರ್ಗಾವಣೆ ಮಾಡಿದ್ದಲ್ಲಿ ಮಾತ್ರ ಗರ್ಭಧರಿಸುವ ಅವಕಾಶ ಹೆಚ್ಚಿರುತ್ತದೆ. ಆದ್ರೆ ಇದರಿಂದ ಸಮಸ್ಯೆಗಳೂ ಜಾಸ್ತಿ.

• ಜೀವನಶೈಲಿ ಅಂಶಗಳು: ಧೂಮಪಾನ ಮಾಡುವುದು, ಬೊಜ್ಜು, ಒತ್ತಡದ ಜೀವನ ಶೈಲಿ ಐವಿಎಫ್ ಸಕ್ಸಸ್ ರೇಟ್ ಮೇಲೆ ಪರಿಣಾಮ ಬೀರುತ್ತವೆ. ರೋಗಿಗಳು ತಮ್ಮ ಫಲವತ್ತತೆಯ ಮೇಲೆ ಪರಿಣಾಮ ಬೀರುವ ಯಾವುದೇ ಜೀವನ ಶೈಲಿಯ ಅಂಶಗಳನ್ನು ವೈದ್ಯರ ಜೊತೆ ಚರ್ಚಿಸುವುದು ಒಳ್ಳೆಯದು.

• ಭ್ರೂಣದ ಗುಣಮಟ್ಟ: ಐವಿಎಫ್ ಪ್ರಕ್ರಿಯೆಯಲ್ಲಿ ಎಷ್ಟು ಗುಣಮಟ್ಟದ ಭ್ರೂಣವನ್ನು ಬಳಸುತ್ತೇವೆ ಅನ್ನೋದು ಯಶಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಉತ್ತಮ ಗುಣಮಟ್ಟದ ಭ್ರೂಣವನ್ನು ಅಳವಡಿಸಿದ್ದಲ್ಲಿ ಗರ್ಭಿಣಿಯಾಗುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ.

• ಒಟ್ಟಾರೆ ಹೇಳೋದಾದ್ರೆ ಈ ಎಲ್ಲಾ ಅಂಶಗಳ ಮೇಲೆ ಐವಿಎಫ್ ಸಕ್ಸಸ್ ರೇಟ್ ವ್ಯತ್ಯಾಸಗೊಳ್ಳುತ್ತದೆ. ಚಿಕಿತ್ಸೆ ಪಡೆಯುವ ಮೊದಲು ರೋಗಿಗಳು ತಮಗಿರುವ ಸಮಸ್ಯೆಗಳ ಕುರಿತು ವೈದ್ಯರ ಬಳಿ ಕೂಲಂಕುಶವಾಗಿ ಚರ್ಚಿಸಿದರೆ ಒಳ್ಳೆಯದು.

ಪದೇಪದೆ ಕೇಳಲಾಗುವ ಪ್ರಶ್ನೆಗಳು

ಬೆಂಗಳೂರಿನಲ್ಲಿ ಸರಾಸರಿ ಐವಿಎಫ್‌ವೆಚ್ಚ ಎಷ್ಟಿರುತ್ತೆ?

ಐವಿಎಫ್‌ಚಿಕಿತ್ಸಾ ವೆಚ್ಚ, ಯಾವ ಸ್ಥಳದಲ್ಲಿ ನೀವು ಚಿಕಿತ್ಸೆ ಪಡೀತೀರಿ, ನಿರ್ದಿಷ್ಟವಾದ ಐವಿಎಫ್‌ಚಿಕಿತ್ಸಾ ವಿಧಾನವನ್ನೇನಾದ್ರೂ ಪಡೆದುಕೊಳೀರ, ಫಲವತ್ತತೆಯ ಸಮಸ್ಯೆಗಳೇನಾದ್ರು ಇವೆಯಾ ಅನ್ನೋದ್ರ ಮೇಲೆ ನಿರ್ಧಾರ ಆಗುತ್ತೆ. ಬೆಂಗಳೂರಿನಲ್ಲಿ ಐವಿಎಫ್‌ಚಿಕಿತ್ಸೆ ಪಡೀತೀನಿ ಅಂತೇನಾದ್ರೂ ನೀವು ನಿರ್ಧರಿಸಿದ್ರೆ ಅದರ ಶುಲ್ಕ ಸುಮಾರು ೧,೫೦,೦೦೦ ದಿಂದ ೩,೫೦,೦೦೦ದ ವರೆಗೆ ಇರುತ್ತೆ. ಅಂದ್ರೆ ಇದು ಒಂದು ಆವರ್ತದ ಚಿಕಿತ್ಸೆಯ ಶುಲ್ಕ. ಈ ಶುಲ್ಕ ಬೇರೆ ಬೇರೆ ಕ್ಲಿನಿಕ್‌ಗಳಲ್ಲಿ ಕಡಿಮೆ ಅಥವಾ ಹೆಚ್ಚು ಇರಬಹುದು. ನೀವು ಗಮನಿಸಬೇಕಾದ ವಿಷಯವೆಂದ್ರೆ, ಗರ್ಭ ಧರಿಸಲು ಕೆಲವೊಮ್ಮೆ ಹೆಚ್ಚು ಆವರ್ತದ ಚಿಕಿತ್ಸೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆಗ ಶುಲ್ಕ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ ಕೆಲವು ರೋಗಿಗಳಿಗೆ ಇನ್ನೂ ಹೆಚ್ಚಿನ ಚಿಕಿತ್ಸೆ ಬೇಕಾಗಬಹುದು ಆಗ ಚಿಕಿತ್ಸೆಯ ಒಟ್ಟಾರೆ ಶುಲ್ಕ ಇನ್ನೂ ಹೆಚ್ಚಾಗುವ ಸಂಭವವಿರುತ್ತದೆ.

ಬೆಂಗಳೂರಿನಲ್ಲಿರುವ ಐವಿಎಫ್‌ಚಿಕಿತ್ಸಾ ಕೇಂದ್ರಗಳು

ಗರ್ಭಗುಡಿ ಐವಿಎಫ್‌ಸೆಂಟರ್‌ಬಗ್ಗೆ ಹೇಳೋದಾದ್ರೆ ನಿಮ್ಮ ಕನಸು ನನಸಾಗುವ ಸ್ಥಳ ಇದು. ಇಲ್ಲಿ ಭರವಸೆಗಳು ಯಾವತ್ತೂ ಹುಸಿಯಾಗಲ್ಲ, ಸಾಧ್ಯತೆಗಳಿಗೆ ಯಾವತ್ತೂ ಕೊನೆಯೆಂಬುದೇ ಇಲ್ಲ. ನಿಮ್ಮ ಮುದ್ದಾದ ಕಂದನನ್ನು ಪಡೆಯಲು ಗರ್ಭಗುಡಿ ಟೀಮ್‌ಶ್ರಮಮೀರಿ ಪ್ರಯತಿಸುತ್ತದೆ ಮತ್ತು ಸಹಕರಿಸುತ್ತದೆ. ಯಾಕೆಂದ್ರೆ ಅದೊಂದು ಬಂಗಾರದ ಕ್ಷಣ. ಆ ಕ್ಷಣವನ್ನು ಖಂಡಿತಾ ಗರ್ಭಗುಡಿ ನಿಮ್ಮದಾಗಿಸುತ್ತದೆ.

ಫಲವತ್ತತೆ ಚಿಕಿತ್ಸೆ ಪಡೆಯಲು ನೀವು ತುಂಬಾ ದೂರವೇನೂ ಹೋಗಬೇಕಾಗಿಲ್ಲ. ನಿಮ್ಮ ಹತ್ತಿರದಲ್ಲೇ ಗರ್ಭಗುಡಿ ಕೇಂದ್ರಗಳಿವೆ. ಯಾಕೆಂದ್ರೆ ಗರ್ಭಗುಡಿ ಈಗ ಬೆಂಗಳೂರಿನ ಐದು ಪಮುಖ ಸ್ಥಳಗಳಲ್ಲಿ ಶಾಖೆಗಳನ್ನು ತೆರೆದಿದೆ. ಮುಂದೆ ಇನ್ನಷ್ಟು ಸ್ಥಳಗಳಲ್ಲಿ ಶಾಖೆಗಳನ್ನು ತೆರೆಯುವ ಉದ್ದೇಶ ಹೊಂದಿದೆ.

ಗರ್ಭಗುಡಿ ಶಾಖೆಗಳು.

• ಹನುಮಂತ ನಗರ

• ಕಲ್ಯಾಣ ನಗರ

• ಎಲೆಕ್ಟ್ರಾನಿಕ್‌ಸಿ

• ಜಯನಗರ

• ಮಾರತ್ತಹಳ್ಳಿ

• ನಾಗರಬಾವಿ

• ಆರ್. ಎಂ. ವಿ. ಎಕ್ಸಟೆನ್ಶನ್

ಐವಿಎಫ್‌ಚಿಕಿತ್ಸೆಯಲ್ಲಿ ಯಶಸ್ಸಿನ ಪ್ರಮಾಣ ಮತ್ತು ಅಪಾಯದ ಪ್ರಮಾಣ ಎಷ್ಟಿದೆ?

ಐವಿಎಫ್‌ಚಿಕಿತ್ಸೆಯ ಯಶಸ್ಸಿನ ಪ್ರಮಾಣ ರೋಗಿಯ ವಯಸ್ಸು, ಬಂಜೆತನದ ಕಾರಣ, ಭ್ರೂಣದ ಗುಣಮಟ್ಟ, ಮುಂತಾದುವನ್ನು ಅವಲಂಬಿಸಿರುತ್ತದೆ. ೩೫ ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನ ಮಹಿಳೆಯರಲ್ಲಿ ಐವಿಎಫ್‌ಯಶಸ್ಸಿನ ಪ್ರಮಾಣ ಸುಮಾರು ೩೫ ಪರ್ಸೆಂಟ್‌ಇರುತ್ತೆ. ೪೦ ವರ್ಷ ಆಗಿಬಿಟ್ಟರೆ ಸಕ್ಸಸ್‌ರೇಟ್‌ಇನ್ನೂ ೧೦ರಿಂದ ೨೦ ಪರ್ಸೆಂಟ್ ಇಳಿಯುತ್ತೆ. ಆದ್ರೆ ನಿಮಗೆ ಗೊತ್ತಿರಲಿ ಇದೆಲ್ಲಾ ಒಂದು ಅಂದಾಜು ಅಷ್ಟೆ. ರೋಗಿಯಿಂದ ರೋಗಿಗೆ ಯಶಸ್ಸಿನ ಪ್ರಮಾಣ ಬದಲಾಗುತ್ತದೆ.

ಐವಿಎಫ್‌ಚಿಕಿತ್ಸೆ ಪಡೆದಾಗ ಏನಾಗುತ್ತೋ ಏನೋ ಅನ್ನೋ ಸಣ್ಣದೊಂದು ಭಯ ಇರುತ್ತಲ್ಲ. ಡೋಂಟ್‌ವರಿ, ರಿಸ್ಕ್ ತುಂಬಾನೆ ಕಡಿಮೆ ಇರುತ್ತೆ. ಅಂಥ ಯಾವ ಗಂಭೀರ ಸಮಸ್ಯೆಯೂ ಇರಲ್ಲ. ಆದ್ರೂ ಸಣ್ಣಪುಟ್ಟ ಅಡ್ಡಪರಿಣಾಮಗಳಿವೆ. ಉಬ್ಬುವುದು, ಸೆಳೆತ, ಸ್ತನ ಮೃದುತ್ವ,ಚಿತ್ತ ಬದಲಾವಣೆ ಉಂಟಾಗಬಹುದು. ಅತಿಯಾದ ರಕ್ತಸ್ರಾವ ಅಥವಾ ಸೋಂಕಿನಂಥ ಗಂಭೀರ ಸಮಸ್ಯೆ ಅಪರೂಪ. ಆದ್ರೆ ಸಾಧ್ಯತೆಯನ್ನು ತಳ್ಳಿಹಾಕುವ ಹಾಗಿಲ್ಲ. ಇನ್ನೊಂದು ವಿಷಯ ಏನಂದ್ರೆ, ಒಂದಕ್ಕಿಂತ ಹೆಚ್ಚು ಗರ್ಭಧಾರಣೆಯಾಗಬಹುದು. ಇದು ತಾಯಿ ಮತ್ತು ಮಗುವಿಗೆ ಆರೋಗ್ಯ ಮೇಲೆ ಪರಿಣಾಮ ಬೀರುತ್ತದೆ.

ಬೆಂಗಳೂರು ಮತ್ತು ಹತ್ತಿರದ ಇತರೆ ಸ್ಥಳಗಳಲ್ಲಿ ಐವಿಎಫ್‌ಚಿಕಿತ್ಸೆಗೆ ತಗಲುವ ಹೆಚ್ಚುವರಿ ವೆಚ್ಚಗಳು ಯಾವುವು?

ಐವಿಎಫ್‌ಚಿಕಿತ್ಸೆಗೆ ಈ ಕೆಳಗಿನ ಹಲವು ಹೆಚ್ಚುವರಿ ಶುಲ್ಕಗಳು ತಗಲುತ್ತವೆ.

• ಔಷಧಿಗಳು: ಅಂಡಾಣು ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ಗರ್ಭಾಶಯವನ್ನು ಗರ್ಭಧಾರಣೆಗೆ ಸಿದ್ಧಪಡಿಸಲು ಬೇಕಾದ ಔಷಧಿಗಳು ದುಬಾರಿಯಾಗಿರುತ್ತವೆ. ಈ ಔಷಧಿಗಳು ಯಾವುದೇ ವಿಮೆ ವ್ಯಾಪ್ತಿಯಲ್ಲಿ ಬರಲ್ಲ.

• ಆನುವಂಶಿಕ ಪರೀಕ್ಷೆ: ಗರ್ಭಾಶಯಕ್ಕೆ ವರ್ಗಾಯಿಸುವ ಮೊದಲು ಭ್ರೂಣದ ಆರೋಗ್ಯವನ್ನು ಪರೀಕ್ಷಿಸಲು ಪ್ರಿ-ಇಂಪ್ಲಾಂಟೇಷನ್‌ ಜೆನೆಟಿಕ್‌ ಟೆಸ್ಟಿಂಗ್ (PGT) ಮಾಡಲಾಗುತ್ತದೆ. ಇದಕ್ಕೆ ಸಾವಿರಾರು ಡಾಲರ್‌ಹಣ ವೆಚ್ಚವಾಗಬಹುದು.

• ಅರಿವಳಿಕೆ ಮದ್ದು: ಕೆಲವು ರೋಗಿಗಳಿಗೆ ಅಂಡಾಣು ಹಿಂಪಡೆಯಬೇಕಾಗಿರುತ್ತದೆ. ಆ ವಿಧಾನದಲ್ಲಿ ಅರಿವಳಿಕೆ ಮದ್ದು ನೀಡಬೇಕಾಗುತ್ತದೆ. ಇದರಿಂದ ಚಿಕಿತ್ಸೆ ಖರ್ಚು ಹೆಚ್ಚಾಗುತ್ತದೆ.

• ಫ್ರಾಜನ್‌ಎಂಬ್ರಿಯೋಸ್‌ಗಳ ಸಂಗ್ರಹಣೆ: ಐವಿಎಫ್‌ಚಿಕಿತ್ಸೆ ನಂತರವೂ ಕೆಲವು ಆರೋಗ್ಯವಂತ ಭ್ರೂಣಗಳು ಉಳಿದಿದ್ದು ನಿಮಗೆ ಅದನ್ನು ಭವಿಷ್ಯಕ್ಕಾಗಿ ಸಂರಕ್ಷಿಸಬೇಕು ಅಂತ ಅನಿಸಿದಲ್ಲಿ ಫ್ರೀಜ್‌ಮಾಡಿಡಬಹುದು. ಹಾಗೆ ಮಾಡಬೇಕಾದ್ರೆ ನೀವು ವರ್ಷಕ್ಕೆ ಸಾವಿರಾರು ಡಾಲರ್‌ಹಣ ಕೊಡಬೇಕಾಗುತ್ತದೆ.

• ಬಹು ಆವರ್ತಗಳು: ಗರ್ಭಧರಿಸಲು ರೋಗಿಗೆ ಒಂದಕ್ಕಿಂತ ಹೆಚ್ಚು ಸಲ ಐವಿಎಫ್ ಚಿಕಿತ್ಸೆ ನೀಡಬೇಕಾಗುತ್ತದೆ. ಪ್ರತಿ ಹೆಚ್ಚುವರಿ ಆವರ್ತದ ಚಿಕಿತ್ಸೆ ಒಟ್ಟು ವೆಚ್ಚವನ್ನು ಹೆಚ್ಚಿಸುತ್ತದೆ.

• ಬಾಡಿಗೆ ತಾಯ್ತನ: ನಿಮಗೆ ಗರ್ಭಧರಿಸಲು ಸಾಧ್ಯವಿಲ್ಲ ಅಂತಾದ್ರೆ ಅದಕ್ಕಾಗಿ ಬಾಡಿಗೆ ತಾಯಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ಚಿಕತ್ಸೆಯ ವೆಚ್ಚವನ್ನು ಹೆಚ್ಚಿಸುತ್ತದೆ. ಬಾಡಿಗೆ ತಾಯಿಗೆ ಹಣ ಕೊಡಬೇಕಾಗುತ್ತದೆ ಮತ್ತು ಆಕೆಯ ವೈದ್ಯಕೀಯ ವೆಚ್ಚವನ್ನೂ ನೀವೇ ಪಾವತಿಸಬೇಕಾಗಿದ್ರಿಂದ ಒಟ್ಟು ಖರ್ಚು ಹೆಚ್ಚಾಗುತ್ತದೆ.

ಐವಿಎಫ್‌ಚಿಕಿತ್ಸೆಗೆ ಎಷ್ಟು ಖರ್ಚಾಗುತ್ತದೆ ಅನ್ನೋದನ್ನು ಸರಿಯಾಗಿ ತಿಳಿದುಕೊಳ್ಳಲು ನೀವು ನಿಮ್ಮ ವೈದ್ಯರ ಜೊತೆ ಹಾಗೂ ಫಲವತ್ತತೆ ತಜ್ಞರ ಜೊತೆ ಮೊದಲೇ ಚರ್ಚಿಸಿ ನಿರ್ಧಾರಕ್ಕೆ ಬಂದರೆ ಒಳ್ಳೆಯದು.

ಐವಿಎಫ್‌ಚಿಕಿತ್ಸೆಯ ಸಂಭಾವ್ಯ ಅಪಾಯಗಳು

ಇನ್‌ವಿಟ್ರೋ ಫರ್ಟಿಲೈಸೇಷನ್(IVF) ಫಲವತ್ತತೆಯನ್ನು ಹೆಚ್ಚಿಸಲು, ಆನುವಂಶಿಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಗರ್ಭಧಾರಣೆಯಲ್ಲಿ ಚಿಕಿತ್ಸೆ ನೀಡಲು ಬಳಸುವ ಅತ್ಯಾಧುನಿಕ ಚಿಕಿತ್ಸಾ ವಿಧಾನವಾಗಿದೆ. ಐವಿಎಫ್‌ಚಿಕಿತ್ಸೆಯ ಯಶಸ್ಸು ವಯಸ್ಸು ಮತ್ತು ಬಂಜೆತನದ ಕಾರಣಗಳ ಮೇಲೆ ಅವಲಂಬಿತವಾಗಿದೆ. ಐವಿಎಫ್‌ಚಿಕಿತ್ಸೆ ದುಬಾರಿಯಾಗಿದ್ದು ಸಾಕಷ್ಟು ಸಮಯ ಬೇಕಾಗುತ್ತದೆ. ಇನ್ನೊಂದು ವಿಷಯ, ಐವಿಎಫ್‌ಬಂಜೆತನಕ್ಕೆ ಯಶಸ್ವಿಯಾದ ಚಿಕಿತ್ಸೆಯಾಗಿದ್ರೂ ಅಪಾಯಗಳಿಂದ ಮುಕ್ತವಾಗಿಲ್ಲ. ಇಲ್ಲಿದೆ ಐವಿಎಫ್‌ನಿಂದ ಉಂಟಾಗಬಹುದಾದ ಸಂಭಾವ್ಯ ಅಪಾಯಗಳು.

• ಹಲವು ಗರ್ಭಧಾರಣೆಗಳಾಗಬಹುದು: ಐವಿಎಫ್‌ಚಿಕಿತ್ಸೆಯ ಬಹುಮುಖ್ಯ ಅಪಾಯವೆಂದ್ರೆ ಒಂದಲ್ಲ ಹಲವು ಗರ್ಭ ಧರಿಸಿಬಿಡಬಹುದು. ಒಂದಕ್ಕಿಂತ ಹೆಚ್ಚು ಭ್ರೂಣಗಳನ್ನು ಗರ್ಭಾಶಯಕ್ಕೆ ವರ್ಗಾಯಿಸಿದಾಗ ಈ ಅಪಾಯ ಉಂಟಾಗಬಹುದು. ಬಹುಗರ್ಭಧಾರಣೆಯಿಂದ ಮಗು ಅವಧಿಗೂ ಮುನ್ನವೇ ಜನಿಸಬಹುದು, ಮಗು ಇವನ ತೂಕ ಕಡಿಮೆ ಇರಬಹುದು ಜೊತೆಗೆ ಇನ್ನಿತರ ಸಮಸ್ಯೆಗಳೂ ಉಂಟಾಗಬಹುದು.

• ಒವರಿಯನ್‌ಹೈಪರ್ ಸ್ಟಿಮ್ಯುಲೇಷನ್‌ಸಿಂಡೋಮ್ (OHSS): OHSS ಏನಂದ್ರೆ, ಐವಿಎಫ್‌ಚಿಕಿತ್ಸೆಯಲ್ಲಿ ಮೊಟ್ಟೆ ಉತ್ಪಾದನೆ ಸರಿಯಾಗಿ ಆಗಲಿ ಅಂತ ಔಷಧಿಗಳನ್ನು ಕೊಡ್ತಾರೆ. ಹಾಗೆ ಕೊಟ್ಟಾಗ ಅಂಡಾಶಯಗಳು ಊದಿಕೊಂಡು ನೋವುಂಟಾಗಬಹುದು. ಇದರಿಂದ ಕೆಲವು ಸಲ ರೋಗಿಗೆ ಉಸಿರಾಡಲು ಕಷ್ಟವಾಗಬಹುದು. ಕಿಬ್ಬೊಟ್ಟೆಯ ನೋವು ಅಲ್ಲದೆ ಇನ್ನಿತರ ಗಂಭೀರ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು.

• ಎಕ್ಟೋಪಿಕ್‌ುನ್ನಿ: ಎಕ್ಟೋಪಿಕ್‌ ಅಂದ್ರೆ ಗರ್ಭಾಶಯದ ಹೊರಗೆ ಫಲೋಪಿಯನ್‌ನಾಳದಲ್ಲಿ ಉಂಟಾಗುವ ಗರ್ಭಧಾರಣೆ. ಇದು ಐವಿಎಫ್‌ಚಿಕಿತ್ಸೆಯ ನಂತರ ಕಾಣಬರುವ ಅಪರೂಪದ ಆದ್ರೆ ಅತ್ಯಂತ ಗಂಭೀರವಾದ ಸಮಸ್ಯೆ. ಈ ಎಕ್ಟೋಪಿಕ್‌ಗರ್ಭಧಾರಣೆ ಆದಲ್ಲಿ ಅದನ್ನು ಮುಂದುವರೆಸಲು ಆಗಲ್ಲ. ಕೂಡಲೇ ರೋಗಿಗೆ ಸೂಕ್ತ ಚಿಕಿತ್ಸೆ ಬೇಕಾಗುತ್ತದೆ.

• ಮಾನಸಿಕ ಒತ್ತಡ: ಐವಿಎಫ್‌ಚಿಕಿತ್ಸೆಯ ಮೂಲಕ ಗರ್ಭಧರಿಸುವುದು ಒಂದು ಭಾವನಾತ್ಮಕವಾದುದು ಎರಡು ಆರ್ಥಿಕವಾಗಿ ಹೆಚ್ಚು ಹೊರೆ ಆಗುವಂಥದ್ದು. ಇದು ದಂಪತಿಯ ಮಾನಸಿಕ ಒತ್ತಡವನ್ನು ಹೆಚ್ಚಿಸಬಹುದು. ಐವಿಎಫ್‌ನಿಂದ ಯಶಸ್ಸು ಸಿಗದಿದ್ದಲ್ಲಿ ನಿರಾಶೆ ಉಂಟಾಗಿ ಅದರಿಂದ ಹೊರಬರುವುದಕ್ಕೆ ಸ್ವಲ್ಪ ಕಷ್ಟ ವಾಗಬಹುದು.

• ಹುಟ್ಟಿನ ನ್ಯೂನತೆಗಳು: ಕೆಲವು ಅಧ್ಯಯನಗಳ ಪುಕಾರ ಐವಿಎಫ್‌ಚಿಕಿತ್ಸೆಯಿಂದ ಹುಟ್ಟುವ ಮಕ್ಕಳಲ್ಲಿ ಹೃದಯದ ಸಮಸ್ಯೆ, ಕ್ರೋಮೋಸಮ್‌ಅಸಹಜತೆಗಳಂಥ ನ್ಯೂನತೆಗಳು ಕಂಡುಬರಬಹುದು. ಹಾಗಿದ್ರೂ ಐವಿಎಫ್‌ ಚಿಕಿತ್ಸೆಯಿಂದ ಹುಟ್ಟುವ ಮಕ್ಕಳಲ್ಲಿ ನ್ಯೂನತೆ ಬಹಳ ಕಡಿಮೆ ಇರುತ್ತದೆ. ಯಾವ ಅಧ್ಯಯನವೂ ಸಿಕ್ಕಾಪಟ್ಟೆ ಅಪಾಯ ಇದೆ ಅಂತ ಇದುವರೆಗೆ ಹೇಳಿಲ್ಲ.

• ಔಷಧಿಗಳ ಅಡ್ಡಪರಿಣಾಮಗಳು: ಐವಿಎಫ್‌ಚಿಕಿತ್ಸೆಯಲ್ಲಿ ಮೊಟ್ಟೆ ಉತ್ಪಾದನೆಯನ್ನ ಉತ್ತೇಜಿಸಲು ಔಷಧಿಗಳನ್ನು ನೀಡಲಾಗುತ್ತದೆ. ಇದರಿಂದ ಚರ್ಮ ಕೆಂಪಾಗುವಿಕೆ, ಮಾನಸಿಕ ಬದಲಾವಣೆ, ಸ್ತನಗಳಲ್ಲಿ ಮೃದುತ್ವದಂಥ ಅಡ್ಡಪರಿಣಾಮಗಳು ಉಂಟಾಗಬಹುದು. ಈ ಅಡ್ಡ ಪರಿಣಾಮಗಳಿಗೆ ಹೆದರಬೇಕಾಗಿಲ್ಲ. ಔಷಧಿ ನಿಲ್ಲಿಸಿದ ತಕ್ಷಣ ಅವು ಮಾಯವಾಗುತ್ತವೆ.

• ನೋವು ಮತ್ತು ಅಸಹನೆ: ಐವಿಎಫ್‌ಚಿಕಿತ್ಸೆಯಲ್ಲಿ ಇಂಜೆಕ್ಷನ್‌ಮತ್ತು ಇನ್ನಿತರ ಚಿಕಿತ್ಸೆ ನೀಡುವುದರಿಂದ ರೋಗಿಗೆ ನೋವು ಮತ್ತು ಕಿರಿಕಿರಿ ಉಂಟಾಗಬಹುದು.

• ಸೋಂಕಿನ ಅಪಾಯ: ಐವಿಎಫ್‌ಚಿಕಿತ್ಸೆಯಲ್ಲಿ ಸಣ್ಣಪುಟ್ಟ ಸೋಂಕು ಉಂಟಾಗುವ ಸಂಭವ ಇದೆ. ಅದರಲ್ಲೂ ಅರಿವಳಿಕೆ ಮದ್ದು ನೀಡಿ ಮೊಟ್ಟೆಗಳನ್ನು ಹಿಂಪಡೆವ ಪ್ರಕ್ರಿಯೆ ಇದೆಯಲ್ಲ ಆವಾಗ ಅಷ್ಟೆ.

• ಖರ್ಚು: ಐವಿಎಫ್‌ಒಂದು ದುಬಾರಿ ಚಿಕಿತ್ಸಾ ವಿಧಾನ. ಇದಕ್ಕೆ ಯಾವುದೇ ಇನ್ಸುರೆನ್ಸ್ ಕವರ್‌ಆಗಲ್ಲ. ಐವಿಎಫ್‌ಚಿಕಿತ್ಸೆ ಪಡೆಯಬೇಕು ಅಂದುಕೊಂಡವರು ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಮೊದಲೇ ಸಿದ್ಧವಾಗಬೇಕು. ಇಲ್ಲ ಅಂದ್ರೆ ಇದೊಂದು ಆರ್ಥಿಕ ಹೊರೆಯಾಗುತ್ತದೆ.

• ಬೆಂಗಳೂರಿನಲ್ಲಿ ಐವಿಎಫ್‌ಚಿಕಿತ್ಸೆ ಪಡೆಯಬೇಕೆ ಬೇಡವೇ ಎಂಬುದನ್ನು ನಿರ್ಧರಿಸುವ ಮೊದಲು ಫಲವತ್ತತೆ ತಜ್ಞರೊಂದಿಗೆ ಚಿಕಿತ್ಸೆಯಿಂದ ಒದಗಬಹುದಾದ ಅಪಾಯಗಳು ಮತ್ತು ಪ್ರಯೋಜನಗಳ ಬಗ್ಗೆ ಚರ್ಚಿಸಿ, ನಂತರ ಮುಂದುವರೆಯಿರಿ. ಬಹಳ ಮುಖ್ಯವಾದ ವಿಷಯವೆಂದೆ, ಆರ್ಥಿಕವಾಗಲ್ಲದೆ ಮಾನಸಿಕವಾಗಿಯೂ ನೀವು ಸ್ಟ್ಯಾಂಗ್‌ಆಗಿರಬೇಕು ಮತ್ತು ನಿಮ್ಮ ಜೊತೆ ನಿಮ್ಮ ಕುಟುಂಬ ನಿಲ್ಲಬೇಕು. ಆಗಲೇ ಯಶಸ್ಸು ಸಿಗಲು ಸಾಧ್ಯ.

ಈ ಪುಟವನ್ನು ಹಂಚಿಕೊಳ್ಳಿ

ನಮ್ಮ ಬಗ್ಗೆ

ಗರ್ಭಗುಡಿಯು ಬಂಜೆತನ ಸಮಸ್ಯೆಗಳು ಮತ್ತು ದಂಪತಿಗಳ ಮೇಲೆ ಅವರ ಭಾವನಾತ್ಮಕ ಮತ್ತು ಮಾನಸಿಕ ಪರಿಣಾಮಗಳನ್ನು ಪರಿಹರಿಸಲು ಅತ್ಯಾಧುನಿಕ-ಮೂಲಸೌಕರ್ಯ ಮತ್ತು ಅತ್ಯಾಧುನಿಕ ಐವಿಎಫ್ ತಂತ್ರಜ್ಞಾನವನ್ನು ಹೊಂದಿರುವ ಹೊಸ-ಪೀಳಿಗೆಯ ಬಂಜೆತನ ಚಿಕಿತ್ಸಾ ಆಸ್ಪತ್ರೆಗಳ ಸರಪಳಿಯಾಗಿದೆ. ನಾವು ಅರ್ಹ ಮತ್ತು ಅನುಭವಿ ವೈದ್ಯರ ತಂಡವನ್ನು ಹೊಂದಿದ್ದೇವೆ; ಅವರ ಆಳವಾದ ಜ್ಞಾನ ಮತ್ತು ಪರಿಣತಿಯು ನಿಮ್ಮ ಎಲ್ಲಾ ಬಂಜೆತನ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ಕಲ್ಲನ್ನು ಬಿಡುವುದಿಲ್ಲ. ಪ್ರಯಾಣದ ಉದ್ದಕ್ಕೂ ನಿಮ್ಮನ್ನು ಪ್ರೇರೇಪಿಸಲು ಮತ್ತು ಮಾರ್ಗದರ್ಶನ ಮಾಡಲು ಬೆಂಬಲ ಮತ್ತು ಕಾಳಜಿಯುಳ್ಳ ಸಿಬ್ಬಂದಿ ಯಾವಾಗಲೂ ನಿಮ್ಮ ಪಕ್ಕದಲ್ಲಿರುತ್ತಾರೆ. ಗರ್ಭಗುಡಿ ಐವಿಎಫ್, ಬೆಂಗಳೂರಿನ ಅತ್ಯುತ್ತಮ ಫಲವತ್ತತೆ ಚಿಕಿತ್ಸಾ ಆಸ್ಪತ್ರೆ, ಬಂಜೆತನ ಸಮಸ್ಯೆಗಳು ಮತ್ತು ಲೈಂಗಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ದಂಪತಿಗಳಿಗೆ ಭಾವನಾತ್ಮಕ ಬೆಂಬಲವನ್ನು ನೀಡುತ್ತದೆ

ಸಂಪರ್ಕಿಸಿ