ನಿಮಗೆ ಬಂಜೆತನ ಚಿಕಿತ್ಸೆ ಯಾಕೆ ಬೇಕು ಗೊತ್ತಾ?ಡಾ ಅನಿತಾ ಮನೋಜ್

ನಿಮಗೆ ಬಂಜೆತನ  ಚಿಕಿತ್ಸೆ ಯಾಕೆ ಬೇಕು ಗೊತ್ತಾ?

ಇಲ್ಲದಿರೋದಕ್ಕಿಂತ ತಡವಾಗಿಯಾದ್ರೂ ಒಳ್ಳೇದು

ಅದೊಂದು ಕಾಲ ಇತ್ತು. ವೃತ್ತಿ ಜೀವನವನ್ನ ಇನ್ನಷ್ಟು ಚೆನ್ನಾಗಿ ರೂಪಿಸಿಕೊಳ್ಳಬೇಕು ಅನ್ನೋದೆ ನನ್ನ ಗುರಿಯಾಗಿತ್ತು. ನನ್ನ ಅಪ್ಪ ಅಮ್ಮ ನನಗೆ ಹಲವಾರು ಸಂಬಂಧಗಳನ್ನು ತೋರಿಸಿದ್ರು. ಆದ್ರೆ ನಾನು ಸದ್ಯಕ್ಕೆ ಮದುವೆ ಬೇಡ ಅಂತ ತಿರಸ್ಕರಿಸಿದ್ದೆ. ಏನಾದ್ರೂ ಸಾಧಿಸಬೇಕು, ವೃತ್ತಿಜೀವನದಲ್ಲಿ ಮೇಲೇರಬೇಕು ಅನ್ನೋದಷ್ಟೇ ನನ್ನ ಕನಸಾಗಿತ್ತು.

ಹೀಗಿರಬೇಕಾದ್ರೆ ನಾನು ಒಮ್ಮೆ ರೋಹನ್‌ರನ್ನ ಭೇಟಿ ಆದೆ. ರೋಹನ್‌ಒಬ್ಬ ಸ್ಫೂರ್ತಿದಾಯಕ ವ್ಯಕ್ತಿಯಾಗಿದ್ರು. ನಮ್ಮಿಬ್ಬರ ಪರಿಚಯ ಪ್ರೇಮಕ್ಕೆ ತಿರುಗಿತು. ನಾವು ಪ್ರೇಮ ಪಕ್ಷಿಗಳಾಗಿ ಹಾರಾಡುತ್ತಾ ಪ್ರೀತಿಯ ದಾರಿಯಲ್ಲಿ ಸಾಗಿ ಮದುವೆ ಅನ್ನೋ ತಿರುವಿನಲ್ಲಿ ನಿಂತೆವು. ನಮಗೆ ಎರಡೂ ಕುಟುಂಬಗಳ ತುಂಬು ಆಶೀರ್ವಾದ ಸಿಕ್ಕಿತು. ಮದುವೆ ಆದಮೇಲೆ ಕೂಡ ನಾವು ನಮ್ಮ ವೃತ್ತಿ ಬಗ್ಗೆ ಹೆಚ್ಚು ಗಮನ ಹರಿಸಿದೆವು.

ನಮ್ಮ ಕೆಲಸ ಮತ್ತು ಮೀಟಿಂಗ್‌ಗಳು ವಾರಾಂತ್ಯದವರೆಗೂ ಮುಂದುವರೆದವು. ಅಂತಹ ಚಿಂತೆಗಳೇನಿರಲಿಲ್ಲ ಬಿಡಿ. ಆದ್ರೆ ಸವಾಲುಗಳು ನಮಗಾಗಿ ಕಾದುಕುಳಿತಿದ್ದವು ಅನ್ನೋದಂತೂ ಸತ್ಯ. ದಿನಗಳು ತಿಂಗಳುಗಳು ಕಳೆದವು. ಮದುವೆಯಾಗಿ ಬರೋಬ್ಬರಿ ಐದು ವರ್ಷಗಳಾದ್ರೂ ನಮಗೆ ಮಗು ಆಗಲಿಲ್ಲ. ಹೇಳಿಕೇಳಿ ನಮ್ಮದು ಸಂಪ್ರದಾಯಬದ್ಧ ಕುಟುಂಬ. ಬಿಟ್ಟಾರೆಯೇ? ಸಂಬಂಧಿಕರು,ಸ್ನೇಹಿತರು ಪ್ರಶ್ನೆ ಮೇಲೆ ಪ್ರಶ್ನೆ ಹಾಕಿದರು.

ಅದು ಸಹಜ ತಾನೆ.

ಎಲ್ರೂ ಕೇಳುವಾಗ ನಾವು ವಿಮುಖರಾಗುವುದು ಸರಿಯಲ್ಲ ಅನಿಸಿತು. ಹಾಗಾಗಿ ನಮ್ಮ ಬದುಕನ್ನ ಸ್ವಲ್ಪ ಬದಲಿಸಿಕೊಂಡೆವು. ನಮಗೂ ಒಂದು ಮಗು ಬೇಕು ಅಂತ ಸೀರಿಯಸ್‌ಆಗಿ ತೀರ್ಮಾನಿಸಿದೆವು. ಅದಕ್ಕಾಗಿ ಪ್ರಯತ್ನ ಸಾಗಿತು. ಆದ್ರೆ ಅಂದುಕೊಂಡಹಾಗೆ ಎಲ್ಲಾ ಆಗಬೇಕಲ್ಲ. ನಮಗೆ ಮಗು ಆಗಲಿಲ್ಲ. ಪ್ರತಿ ಟೆಸ್ಟ್‌ನಲ್ಲೂ ಯುಪಿಟ್‌ಕಿಟ್‌ನೆಗೆಟಿವ್‌ಅಂತಾನೆ ತೋರಿಸುತ್ತಿತ್ತು. ಆಗಲೇ ನಾವು ಸ್ವಲ್ಪ ವಿಚಲಿತರಾಗಿದ್ದು.

ಕೆಲವು ಸಲ ನಾವು ಸೌಮ್ಯವಾಗಿರ್ತೇವೆ ಅಲ್ವ. ಆಗ ಜೀವನದ ಕಟು ಸತ್ಯಗಳನ್ನ ಎದುರಿಸಲು ಕಷ್ಟವಾಗುತ್ತದೆ. ಥೇಟ್‌ಅದೇ ಅನುಭವ ನನಗೂ ಆಯಿತು. ಸತತ ಎರಡು ವರ್ಷ ಪ್ರಯತ್ನಪಟ್ಟರೂ ಮಗುವಾಗುವ ಲಕ್ಷಣಗಳು ಕಾಣದಿದ್ದಾಗ ನಾವು ಮಕ್ಕಳಾಗದ ದಂಪತಿಗಳ ಆಶಾಕಿರಣದಂತಿರೋ ಗರ್ಭಗುಡಿ ಐವಿಎಫ್‌ಸೆಂಟರ್‌ಗೆ ಹೋಗಿ ವೈದ್ಯರನ್ನು ಭೇಟಿ ಮಾಡಿದೆವು. ಪರೀಕ್ಷಿಸಿದ ನಂತರ ವೈದ್ಯರು, ನಿಮಗೆ ಪಾಲಿಸಿಸ್ಟಿಕ್‌ಓವರಿ ಸಿಂಡ್ರೋಮ್‌ಇದೆ. ನೈಸರ್ಗಿಕವಾಗಿ ಮಕ್ಕಳನ್ನು ಪಡೆಯಲು ಆಗುವುದಿಲ್ಲ ಅಂತ ಹೇಳಿದರು.

ನನಗೆ ನಿಜಕ್ಕೂ ಅಪಾರ ದುಃಖವಾಗಿತ್ತು. ಸಿಂಡ್ರೋಮ್‌ಅನ್ನೋ ಪದ ನನ್ನ ಜೀವನದ ಮೊದಲ ಶಾಕ್‌ಆಗಿತ್ತು. ಬೇರೆ ಆಸ್ಪತ್ರೆಗೆ ಹೋಗಿದ್ರೆ ಬಹುಶಃ ನಾನು ಗೊಳೋ ಅಂತ ಅಳುತ್ತಾ ಕೂತುಬಿಡುತ್ತಿದ್ದೆನೇನೋ, ಆದ್ರೆ ಗರ್ಭಗುಡಿಯ ವೈದ್ಯರು ಅಂತಃಕರಣ ಉಳ್ಳವರಾಗಿದ್ದು ನನ್ನನ್ನು ಸಮಾಧಾನ ಪಡಿಸಿದರು.

ಗರ್ಭಗುಡಿಯ ಡಾಕ್ಟರ್‌ನನಗೆ ಪಾಲಿಸಿಸ್ಟಿಕ್‌ಓವರಿ ಸಿಂಡ್ರೋಮ್‌ಬಗ್ಗೆ ಎಲ್ಲವನ್ನೂ ಸವಿಸ್ತಾರ ವಿವರಿಸಿದರು. ಜಗತ್ತಿನಲ್ಲಿ ನೀನೊಬ್ಬಳೇ ಈ ನೋವನ್ನ ಅನುಭವಿಸುತ್ತಿಲ್ಲ. ನಿನ್ನಂತೆ ಕೆಲಸ ಮಾಡುವ ಸುಮಾರು ೨೦ % ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅಂತ ನನ್ನಲ್ಲಿ ಆತ್ಮವಿಶ್ವಾಸ ತುಂಬಿದರು. ರೋಹನ್‌ಗೆ ಕೂಡ ಕೆಲವು ಸಲಹೆ ನೀಡಿದರು. ರೋಹನ್‌ಪ್ರೋತ್ಸಾಹವನ್ನಂತೂ ನಾನು ಮರೆಯುವ ಹಾಗಿಲ್ಲ. ನಾವಿಬ್ಬರೂ ಗರ್ಭಗುಡಿಯಲ್ಲಿ ಮೊದಲ ಹಂತದ ಸಂತಾನೋತ್ಪತ್ತಿ ಚಿಕಿತ್ಸೆ ಪಡೆದುಕೊಂಡೆವು. ಆದ್ರೆ ಮತ್ತೆ ನಾನು ಗರ್ಭಧರಿಸುವಲ್ಲಿ ವಿಫಲಳಾಗಿದ್ದೆ.

ಮೂರನೇ ಪ್ರಯತ್ನವೂ ವಿಫಲವಾದಾಗ ನಾವಿಬ್ಬರೂ ತುಂಬಾ ಚಿಂತಿತರಾದೆವು. ಎಲ್ಲಾ ಮುಗೀತು ಅಂತ ಚಿಕಿತ್ಸೆ ಮೇಲೆ ನಂಬಿಕೆ ಕಳೆದುಕೊಂಡೆವು. ದೇವರ ಶಾಪಕ್ಕೆ ಗುರಿಯಾಗಿದ್ದೇವೇನೊ ಅದಕ್ಕೆ ಹೀಗಾಗಿದೆ ಅಂತ ನಮಗೆ ನಾವೇ ಸಮಾಧಾನ ಮಾಡಿಕೊಂಡೆವು. ಪ್ರಯತ್ನವನ್ನ ಅಲ್ಲಿಗೆ ನಿಲ್ಲಿಸಲು ನಿರ್ಧರಿಸಿ ಅದನ್ನು ಹೇಳೋದಕ್ಕೆ ಅಂತ ಆಸ್ಪತ್ರೆಗೆ ಹೋದೆವು. ಆದ್ರೆ ಗರ್ಭಗುಡಿಯ ವೈದ್ಯರು ನಮ್ಮ ನಿರಾಸೆಗೆ ಮತ್ತೆ ಜೀವ ತುಂಬಿದರು. ಭರವಸೆ ನೀಡಿದರು. ನಾವು ಇನ್ನೊಂದು ಕೋರ್ಸ್‌ಚಿಕಿತ್ಸೆ ಪಡೆಯಲು ಒಪ್ಪಿಕೊಂಡೆವು.

ನೀವು ನಂಬಲ್ಲ ದೇವರು ನಮ್ಮ ಪಾಲಿಗೆ ಕಣ್ಣು ಬಿಟ್ಟಿದ್ದ. ನಾನು ಗರ್ಭಿಣಿಯಾಗಿದ್ದೆ. ಆ ಸಂತಸಕ್ಕೆ ಪಾರವೇ ಇರಲಿಲ್ಲ. ಗರ್ಭಗುಡಿಯ ವೈದ್ಯರು ನನಗೆ ಇನ್ನಷ್ಟು ಆರೈಕೆ ಮಾಡಿದರು. ಗರ್ಭಿಣಿ ಅವಧಿಯಲ್ಲಿ ಸರಿಯಾದ ಮಾರ್ಗದರ್ಶನ ಮತ್ತು ಸೂಚನೆಗಳನ್ನ ನೀಡಿದರು. ನಾವು ಅದನ್ನು ತಪ್ಪದೆ ಪಾಲಿಸಿದೆವು. ಒಂಭತ್ತು ತಿಂಗಳ ನಂತರ ನಾನು ಅನಸ್ತೇಶಿಯಾ (ಅರಿವಳಿಕೆ ಮದ್ದು)ದಿಂದ ಎಚ್ಚರವಾಗಿ ಕಣ್ಣು ಬಿಟ್ಟಾಗ ಪಕ್ಕದಲ್ಲಿ ಮುದ್ದಾದ ಮಗುವಿನ ಅಳು ಕೇಳಿಸಿತು. ಕಣ್ಣಲ್ಲಿ ಆನಂದಭಾಷ್ಫ. ನಾನು ತಾಯಿಯಾಗಿದ್ದೆ.

ನಿಜ ಹೇಳ್ತೀನಿ, ಅದೊಂದು ಜೀವನದ ಸರ್ವಶ್ರೇಷ್ಠ ಅನುಭವ. ಅದಕ್ಕೆ ನಾನು ಸಾಕ್ಷಿಯಾಗಿದ್ದೆ.

ಅವತ್ತು ಹುಟ್ಟಿದ ಮಗಳು ಈಗ ಪ್ರೀ-ನರ್ಸರಿಯಲ್ಲಿ ಓದುತ್ತಿದ್ದಾಳೆ. ಆರೋಗ್ಯವಾಗಿದ್ದಾಳೆ. ಆದ್ರೆ ಸಖತ್‌ತುಂಟಿ. ಆಕೆಯನ್ನ ನೋಡಿದಾಗಲೆಲ್ಲಾ ಅವಳ ಮುದ್ದು ಮಾತನ್ನ ಕೇಳಿದಾಗಲೆಲ್ಲಾ ನನ್ನ ಮನಸಿನಲ್ಲಿ ಮೂಡುವ ಭಾವ ಒಂದೆ, ಗರ್ಭಗುಡಿಗೆ ಕೃತಜ್ಞತೆ ಹೇಳೋದು. ಅವರ ಸೂಕ್ತ ಸಮಾಲೋಚನೆ ಮತ್ತು ಮಾರ್ಗದರ್ಶನ ಇಲ್ಲದಿದ್ದರೆ ನಾನು ಮೊದಲ ಹಂತದಲ್ಲೇ ಕೈ ಬಿಡುತ್ತಿದ್ದೆನೇನೋ. ನನಗೀಗ ಇಂಗ್ಲೀಷಿನ Better late than never ಅನ್ನೋ ಗಾದೆ ಮಾತು ಸರಿಯಾಗಿ ಅರ್ಥವಾಗಿದೆ.

ಇದಕ್ಕಿಂತ ಹೆಚ್ಚೇನೂ ಹೇಳಲಾರೆ; ಗರ್ಭಗುಡಿ ನಿನಗೆ ತುಂಬು ಹೃದಯದ ಧನ್ಯವಾದಗಳು.

ಈ ಪುಟವನ್ನು ಹಂಚಿಕೊಳ್ಳಿ

ನಮ್ಮ ಬಗ್ಗೆ

ಗರ್ಭಗುಡಿಯು ಬಂಜೆತನ ಸಮಸ್ಯೆಗಳು ಮತ್ತು ದಂಪತಿಗಳ ಮೇಲೆ ಅವರ ಭಾವನಾತ್ಮಕ ಮತ್ತು ಮಾನಸಿಕ ಪರಿಣಾಮಗಳನ್ನು ಪರಿಹರಿಸಲು ಅತ್ಯಾಧುನಿಕ-ಮೂಲಸೌಕರ್ಯ ಮತ್ತು ಅತ್ಯಾಧುನಿಕ ಐವಿಎಫ್ ತಂತ್ರಜ್ಞಾನವನ್ನು ಹೊಂದಿರುವ ಹೊಸ-ಪೀಳಿಗೆಯ ಬಂಜೆತನ ಚಿಕಿತ್ಸಾ ಆಸ್ಪತ್ರೆಗಳ ಸರಪಳಿಯಾಗಿದೆ. ನಾವು ಅರ್ಹ ಮತ್ತು ಅನುಭವಿ ವೈದ್ಯರ ತಂಡವನ್ನು ಹೊಂದಿದ್ದೇವೆ; ಅವರ ಆಳವಾದ ಜ್ಞಾನ ಮತ್ತು ಪರಿಣತಿಯು ನಿಮ್ಮ ಎಲ್ಲಾ ಬಂಜೆತನ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ಕಲ್ಲನ್ನು ಬಿಡುವುದಿಲ್ಲ. ಪ್ರಯಾಣದ ಉದ್ದಕ್ಕೂ ನಿಮ್ಮನ್ನು ಪ್ರೇರೇಪಿಸಲು ಮತ್ತು ಮಾರ್ಗದರ್ಶನ ಮಾಡಲು ಬೆಂಬಲ ಮತ್ತು ಕಾಳಜಿಯುಳ್ಳ ಸಿಬ್ಬಂದಿ ಯಾವಾಗಲೂ ನಿಮ್ಮ ಪಕ್ಕದಲ್ಲಿರುತ್ತಾರೆ. ಗರ್ಭಗುಡಿ ಐವಿಎಫ್, ಬೆಂಗಳೂರಿನ ಅತ್ಯುತ್ತಮ ಫಲವತ್ತತೆ ಚಿಕಿತ್ಸಾ ಆಸ್ಪತ್ರೆ, ಬಂಜೆತನ ಸಮಸ್ಯೆಗಳು ಮತ್ತು ಲೈಂಗಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ದಂಪತಿಗಳಿಗೆ ಭಾವನಾತ್ಮಕ ಬೆಂಬಲವನ್ನು ನೀಡುತ್ತದೆ

ಸಂಪರ್ಕಿಸಿ