ಮಗು ಪಡೆಯಲು ನನಗೆ ಅಂಡಾಶಯ ಗಡ್ಡೆ ಅಡ್ಡವಾಗುತ್ತಾ?
ಅದೊಂದು ಮಧುರವಾದ ವಸಂತದ ಮುಂಜಾವು. ಅನುರಾಧ ಹಿಂದೆಂದಿಗಿಂತ ತನ್ನ ಪತಿಯ ಜೊತೆ ಹೆಚ್ಚು ಖುಷಿಯಾಗಿದ್ದಳು. ಯಾಕೆಂದ್ರೆ ಆಕೆ ಗರ್ಭವತಿ ಆಗಿದ್ದಳು. ವಿಷಯ ತಿಳಿಯುತ್ತಿದ್ದಂತೆ ಆಕೆ ತನ್ನ ಮುದ್ದಿನ ಕಂದನ ಬಗ್ಗೆ ಚಂದದ ಕನಸು ಕಟ್ಟಿಕೊಂಡಳು. ಆದ್ರೆ ಆ ಖುಷಿ ಹೆಚ್ಚು ಕಾಲ ಇರಲಿಲ್ಲ. ಕನಸು ಹೆಚ್ಚು ಸಮಯ ಇರಲಿಲ್ಲ. ಜಸ್ಟ್‌ಒಂದೇ ಒಂದು ವಾರದಲ್ಲಿ ಆಕೆಗೆ ಎಂಥದೋ ಕಸಿವಿಸಿಯಾಗತೊಡಗಿತು. ಕಿಬ್ಬೊಟ್ಟೆಯಲ್ಲಿ ವಿಪರೀತ ನೋವು ಕಾಣಿಸಿಕೊಂಡು ವಿಚಲಿತಗೊಂಡಳು. ಕೂಡಲೇ ಖ್ಯಾತ ಸಂತಾನೋತ್ಪತ್ತಿ ಕೇಂದ್ರವಾದ ಗರ್ಭಗುಡಿ ಐವಿಎಫ್‌ಸೆಂಟರ್‌ಗೆ ಹೋಗಿ ಅಲ್ಲಿ ಪ್ರಸೂತಿ ತಜ್ಞೆಯನ್ನ ಭೇಟಿ ಮಾಡಿದಳು. ಅವರು ಅಲ್ಟ್ರಾಸೌಂಡ್ ಮಾಡಿಸಲು ಸೂಚಿಸಿದರು. ಯಾಕೆಂದ್ರೆ ಹೊಟ್ಟೆನೋವಿಗೆ ಖಚಿತವಾದ ಕಾರಣ ಅವರಿಗೆ ಬೇಕಾಗಿತ್ತು.
ಅಲ್ಟ್ರಾಸೌಂಡ್ ರಿಪೋರ್ಟ್ ಬಂದು ಅನುರಾಧಾ ಕೈ ಸೇರುವಾಗ ಒಂದು ಸಣ್ಣ ಆತಂಕ ಕಾದಿತ್ತು. ಆಕೆಗೆ ಅಂಡಾಶಯದಲ್ಲಿ ಗಡ್ಡೆ ಇರುವುದು ಕಂಡುಬಂದಿತ್ತು. ಅದನ್ನು ಇಂಗ್ಲೀಷಿನಲ್ಲಿ ovarian cyst ಅಂತಾರೆ. ಅಂದ್ರೆ ಅಂಡಾಶಯದಲ್ಲಿ ನೀರಿನಿಂದ ತುಂಬಿದ ಒಂದು ಸಣ್ಣ ಗಡ್ಡೆ. ಗಮನಿಸಬೇಕಾದ ವಿಷಯವೇನೆಂದರೆ, ಇಂಥ ಕೆಲವು ಅಂಡಾಶಯದ ಗಡ್ಡೆಗಳು ತನ್ನಷ್ಟಕ್ಕೆ ತಾವೇ ಕರಗಿಹೋಗುತ್ತವೆ. ಕೆಲವು ಮಾತ್ರ ಗರ್ಭಧರಿಸಲು ಅಡ್ಡವಾಗುತ್ತವೆ.
ರಿಪೋರ್ಟ್ ಸ್ಟಡಿ ಮಾಡಿದ ಗರ್ಭಗುಡಿಯ ಪ್ರಸೂತಿ ತಜ್ಞೆ ನಿಯಮಿತವಾದ ಪರೀಕ್ಷೆ ಮಾಡಿಕೊಳ್ಳುವಂತೆ ಅನುರಾಧಾಗೆ ಸೂಚಿಸಿದರು. ಹಾಗೆ ಗಡ್ಡೆಯಿಂದ ಏನಾದ್ರೂ ಸಮಸ್ಯೆ ಆಗುತ್ತೋ ಇಲ್ವೋ ಕಾದು ನೋಡೋಣ ಅಂತಾನೂ ಹೇಳಿದರು. ಹಲವು ವಾರಗಳ ನಂತರ ಅಂಡಾಶಯ ಗಡ್ಡೆ ಸ್ವಲ್ಪ ದಪ್ಪನಾಗಿದ್ದರೂ ಅಂಥ ತೊಂದರೆ ಏನೂ ಇರಲಿಲ್ಲ. ಮಗು ಏನೂ ಸಮಸ್ಯೆ ಇಲ್ಲದೆ ಗರ್ಭದಲ್ಲಿ ಬೆಳೆಯತೊಡಗಿತು. ಒಂಭತ್ತು ತಿಂಗಳು ಮುಗಿದು ಹೆರಿಗೆಗೆ ಹತ್ತಿರವಿದ್ದಾಗ ಗರ್ಭಗುಡಿಯ ಪ್ರಸೂತಿ ತಜ್ಞೆ ಅಂಡಾಶಯ ಗಡ್ಡೆಯನ್ನು ಸಿಸೇರಿಯನ್ ಅವಧಿಯಲ್ಲಿ ತೆಗೆಯಲು ನಿರ್ಧರಿಸಿದ್ದರು. ಅನುರಾಧಾಗೆ ಆರೋಗ್ಯವಂತ ಹೆಣ್ಣು ಮಗು ಆಗಿ ಕುಟುಂಬ ಸಂತಸದಲ್ಲಿ ತೇಲಾಡಿತು. ಅವರ ಆ ಸಂತಸಕ್ಕೆ ಕಾರಣವಾಗಿದ್ದು ಮಾತ್ರ ಗರ್ಭಗುಡಿ ಐವಿಎಫ್‌ಸೆಂಟರ್. ಸೂಕ್ತ ಸಮಯದಲ್ಲಿ ಚಿಕಿತ್ಸೆ ಮತ್ತು ಮಾರ್ಗದರ್ಶನ ನೀಡದಿದ್ದರೆ ಅನುರಾಧಾಳಿಗೆ ಖಂಡಿತಾ ಆ ಖುಷಿ ಸಿಗುತ್ತಿರಲಿಲ್ಲ.
ನಿಮಗೊಂದು ಮಾತು ಹೇಳಲೇಬೇಕು, ಗರ್ಭಧರಿಸುವಿಕೆಯ ಸಮಯದಲ್ಲಿ ಅಂಡಾಶಯದಲ್ಲಿ ಗಡ್ಡೆ ಬಂದರೆ ಅದು ನಿಜಕ್ಕೂ ಸ್ವಲ್ಪ ಒತ್ತಡ ಉಂಟುಮಾಡುತ್ತದೆ. ಆದ್ರೆ ಹೆದರಬೇಕಾಗಿಲ್ಲ. ಕಾಳಜಿಯಂತೂ ಅತ್ಯವಶ್ಯ. ಅಂಡಾಶಯದಲ್ಲಿ ಗಡ್ಡೆಯಾದ್ರೆ ಅದರಿಂದ ಆರೋಗ್ಯವಂತ ಮಗು ಪಡೆಯಲು ಸಮಸ್ಯೆಯಾಗುತ್ತದೆ ಅನ್ನೋದು ಸರಿಯಲ್ಲ. ಆದ್ರೆ ಅಂಥದ್ದೊಂದು ಸಂದರ್ಭ ಬಂದಾಗ ವೈದ್ಯರ ಮಾರ್ಗದರ್ಶನ ಮತ್ತು ಚಿಕಿತ್ಸೆ ಪಡೆಯುವುದು ಖಂಡಿತಾ ಅವಶ್ಯ ಅನ್ನೋದನ್ನು ಮಾತ್ರ ಮರೆಯಬಾರದು.
ಬೆಂಗಳೂರಿನಲ್ಲಿ ಆರಂಭವಾದ ಗರ್ಭಗುಡಿ ಐವಿಎಫ್‌ಸೆಂಟರ್‌ಸಂತಾನೋತ್ಪತ್ತಿ ಆರೋಗ್ಯ ಕೇಂದ್ರವಾಗಿದ್ದು ಹಲವು ಶಾಖೆಗಳನ್ನು ಹೊಂದಿದೆ. ವೃತ್ತಿಪರತೆಯಲ್ಲಿ ಯಶಸ್ಸು, ನೈತಿಕ ಗುರಿ ಮತ್ತು ಪ್ರತಿಯೊಬ್ಬರ ಬಗ್ಗೆ ವಹಿಸುವ ಕಾಳಜಿಯಿಂದ ಗರ್ಭಗುಡಿ ನಾಡಿನಲ್ಲಿ ಮನೆಮಾತಾಗಿದೆ. ಸುಮಾರು ೮೫೦೦ ಕುಟುಂಬಗಳು ಗರ್ಭಗುಡಿ ನೆರವಿನಿಂದ ಸಂತಸದಲ್ಲಿವೆ ಎಂದು ಹೇಳಲು ನಮಗೆ ಅತೀವ ಸಂತಸವಾಗುತ್ತದೆ.
ನಿಮ್ಮ ಎಲ್ಲಾ ಆಸೆಗಳನ್ನು ಈಡೇರಿಸಲು ನಮ್ಮ ಬಳಿ ನುರಿತ ಫರ್ಟಿಲಿಟಿ ವೈದ್ಯರ ಸಮೂಹವೇ ಇದೆ. ಭ್ರೂಣ ತಜ್ಞರಿದ್ದಾರೆ. ನುರಿತ ಅರೆ ವೈದ್ಯಕೀಯ ಸಿಬ್ಬಂದಿ ಇದೆ. ನಮ್ಮ ಆಶಯ ಒಂದೆ. ʼನಮ್ಮಲ್ಲಿಗೆ ಬರುವ ಪ್ರತಿ ದಂಪತಿಯೂ ಆರೋಗ್ಯವಂತ ಮಗುವಿನೊಂದಿಗೆ, ಸಂತಸದಿಂದ ಮನೆಗೆ ಹೋಗಬೇಕುʼ.
ಆ ಆಶಯ ಈಡೇರಿಸಿದ ಸಂತೃಪ್ತಿ ನಮ್ಮ ಪಾಲಿಗಿದೆ.
ಈ ಪುಟವನ್ನು ಹಂಚಿಕೊಳ್ಳಿ
ನಮ್ಮ ಬಗ್ಗೆ
ಗರ್ಭಗುಡಿಯು ಬಂಜೆತನ ಸಮಸ್ಯೆಗಳು ಮತ್ತು ದಂಪತಿಗಳ ಮೇಲೆ ಅವರ ಭಾವನಾತ್ಮಕ ಮತ್ತು ಮಾನಸಿಕ ಪರಿಣಾಮಗಳನ್ನು ಪರಿಹರಿಸಲು ಅತ್ಯಾಧುನಿಕ-ಮೂಲಸೌಕರ್ಯ ಮತ್ತು ಅತ್ಯಾಧುನಿಕ ಐವಿಎಫ್ ತಂತ್ರಜ್ಞಾನವನ್ನು ಹೊಂದಿರುವ ಹೊಸ-ಪೀಳಿಗೆಯ ಬಂಜೆತನ ಚಿಕಿತ್ಸಾ ಆಸ್ಪತ್ರೆಗಳ ಸರಪಳಿಯಾಗಿದೆ. ನಾವು ಅರ್ಹ ಮತ್ತು ಅನುಭವಿ ವೈದ್ಯರ ತಂಡವನ್ನು ಹೊಂದಿದ್ದೇವೆ; ಅವರ ಆಳವಾದ ಜ್ಞಾನ ಮತ್ತು ಪರಿಣತಿಯು ನಿಮ್ಮ ಎಲ್ಲಾ ಬಂಜೆತನ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ಕಲ್ಲನ್ನು ಬಿಡುವುದಿಲ್ಲ. ಪ್ರಯಾಣದ ಉದ್ದಕ್ಕೂ ನಿಮ್ಮನ್ನು ಪ್ರೇರೇಪಿಸಲು ಮತ್ತು ಮಾರ್ಗದರ್ಶನ ಮಾಡಲು ಬೆಂಬಲ ಮತ್ತು ಕಾಳಜಿಯುಳ್ಳ ಸಿಬ್ಬಂದಿ ಯಾವಾಗಲೂ ನಿಮ್ಮ ಪಕ್ಕದಲ್ಲಿರುತ್ತಾರೆ. ಗರ್ಭಗುಡಿ ಐವಿಎಫ್, ಬೆಂಗಳೂರಿನ ಅತ್ಯುತ್ತಮ ಫಲವತ್ತತೆ ಚಿಕಿತ್ಸಾ ಆಸ್ಪತ್ರೆ, ಬಂಜೆತನ ಸಮಸ್ಯೆಗಳು ಮತ್ತು ಲೈಂಗಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ದಂಪತಿಗಳಿಗೆ ಭಾವನಾತ್ಮಕ ಬೆಂಬಲವನ್ನು ನೀಡುತ್ತದೆ
ಸಂಪರ್ಕಿಸಿ