ಡಾ. ಐಶ್ವರ್ಯ ಮುಸುನೂರು

ಡಾ. ಐಶ್ವರ್ಯ ಮುಸುನೂರು

MBBS, MS (OBG), FRM
ಫರ್ಟಿಲಿಟಿ ಸ್ಪೆಷಲಿಸ್ಟ್‌
ವೈದ್ಯಕೀಯ ನೋಂದಣಿ ಸಂಖ್ಯೆ (ಕೆಎಂಸಿ) : 151050
ತಿಳಿದಿರುವ ಭಾಷೆಗಳು: ತಿಳಿದಿರುವ ಭಾಷೆಗಳು: ಕನ್ನಡ, ಇಂಗ್ಲಿಷ್, ತೆಲುಗು, ಹಿಂದಿ

ನಿಮ್ಮ ನೇಮಕಾತಿಯನ್ನು ಕಾಯ್ದಿರಿಸಿ

ಶಾಖೆ
ಆವರಣದಲ್ಲಿ
ಆನ್ಲೈನ್

* ನೇಮಕಾತಿಗಳು ವೈದ್ಯರ ಲಭ್ಯತೆಗೆ ಒಳಪಟ್ಟಿರುತ್ತವೆ. ದಯವಿಟ್ಟು, ನೀವು ಈಗಾಗಲೇ ಗರ್ಭಗುಡಿಗೆ ಭೇಟಿ ನೀಡಿದ್ದರೆ ನಿಮ್ಮ ನೋಂದಾಯಿತ ಸಂಖ್ಯೆಯನ್ನು ನೀವು ನೀಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

ಡಾ. ಐಶ್ವರ್ಯ ಮುಸುನೂರು ಅವರು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾಗಿದ್ದು, ಸಂತಾನೋತ್ಪತ್ತಿ ಆರೋಗ್ಯ ಮತ್ತು ಚಿಕಿತ್ಸೆಯಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. ದಂಪತಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ಆತ್ಮೀಯತೆಯಿಂದಿರುವ ಡಾ. ಐಶ್ವರ್ಯ ತಮ್ಮ ವೈದ್ಯಕೀಯ ಅನುಭವದ ಜೊತೆಗೆ ವೈಜ್ಞಾನಿಕ ಆಧಾರಿತ ಚಿಕಿತ್ಸೆಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ART ಮತ್ತು ಸಂತಾನೋತ್ಪತ್ತಿ ಹಾರ್ಮೋನ್‌ಗಳ ಅಧ್ಯಯನದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಹೊಸ ವೈದ್ಯಕೀಯ ವಿಷಯಗಳನ್ನು ಕಲಿಯುವುದರಲ್ಲಿ ವಿಶೇ಼ಷ ಉತ್ಸಾಹ ಹೊಂದಿರುವ ಅವರು ಶಸ್ತ್ರಚಿಕಿತ್ಸೆಯಲ್ಲಿ ಆಸಕ್ತಿ ಹೊಂದಿದ್ದಾರೆ.ಡಾ. ಐಶ್ವರ್ಯ ಅವರು ವೈದ್ಯಕೀಯ ಮಾರ್ಗಸೂಚಿ ಅನುಸಾರ ಆಧುನಿಕ ಫಲವತ್ತತೆ ಚಿಕಿತ್ಸಾ ವಿಧಾನಗಳ ಬಗ್ಗೆ ತಿಳಿದುಕೊಂಡು ಉತ್ತಮ ಚಿಕಿತ್ಸೆ ನೀಡುವಲ್ಲಿ ಬದ್ಧರಾಗಿದ್ದಾರೆ. 

ಶಿಕ್ಷಣ ಮತ್ತು ಪ್ರಮಾಣ ಪತ್ರಗಳು

  • MBBS : ಡಾ. ಪಿನ್ನಮನೇನಿ ಸಿದ್ಧಾರ್ಥ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ & ರೀಸರ್ಚ್‌ ಫೌಂಡೇಷನ್‌- ಗೈನಕಾಲಜಿಯಲ್ಲಿ ಗೋಲ್ಡ್‌ ಮೆಡಲ್‌ ವಿಜೇತೆ 
  • MS (OBG): ಡಾ. ಪಿನ್ನಮನೇನಿ ಸಿದ್ಧಾರ್ಥ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ & ರೀಸರ್ಚ್‌ ಫೌಂಡೇಷನ್‌
  • FRM:  ಗರ್ಭಗುಡಿ IVF ಸೆಂಟರ್

ವೃತ್ತಿ ಅನುಭವ ಮತ್ತು ಪರಿಣಿತಿ

  • ಕನ್ಸಲ್ಟೆಂಟ್‌ ಇನ್‌ ರಿಪ್ರೊಡಕ್ಟಿವ್‌ ಮೆಡಿಸಿನ್‌ -ಡಾ. ಕಾಮಿನಿ ರಾವ್‌ ಹಾಸ್ಪಿಟಲ್‌, ಬೆಂಗಳೂರು
  • ಫೆಲೊ(Fellow): ಗರ್ಭಗುಡಿ IVF ಸೆಂಟರ್‌ಸೀನಿಯರ್‌ ರೆಸಿಡೆಂಟ್‌: ಹಳೆಯ ಸರ್ಕಾರಿ ಜನರಲ್‌ ಆಸ್ಪತ್ರೆ, ವಿಜಯವಾಡ, ಆಂಧ್ರಪ್ರದೇಶ
  • ಕೊವಿಡ್‌ ಸಂದರ್ಭದಲ್ಲಿ ವೈದ್ಯಕೀಯ ಸೇವೆ: ಹಳೆಯ ಸರ್ಕಾರಿ ಜನರಲ್‌ ಆಸ್ಪತ್ರೆ ಮತ್ತು ಪಿನ್ನಮನೇನಿ ಸಿದ್ಧಾರ್ಥ ವೈದ್ಯಕೀಯ ಸಂಸ್ಥೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದಲ್ಲಿ ಕೊವಿಡ್‌ ವಾರ್ಡ್‌ ಸೇರಿದಂತೆ ವಿವಿಧ ವೈದ್ಯಕೀಯ ಸೇವೆಗಳ ನಿರ್ವಹಣೆ. 

ಪ್ರಮಾಣ ಪತ್ರಗಳು

  • MRCOG ( ರಾಯಲ್‌ ಕಾಲೇಜ್‌ ಆಫ್‌ ಅಬ್‌ಸ್ಟೆಟ್ರಿಷಿಯನ್ಸ್‌ & ಗೈನಕಾಲಜಿಸ್ಟ್ಸ್‌-  ಭಾಗ 1 ಮತ್ತು ಭಾಗ 2 ಪೂರ್ಣ

    ಪ್ರಶಸ್ತಿಗಳು

    MBBS -ಸ್ತ್ರೀರೋಗ ಶಾಸ್ತ್ರದಲ್ಲಿ ಚಿನ್ನದ ಪದಕ.

    ಆಗಸ್ಟ್‌ 2025 ರಲ್ಲಿ ನಡೆದ ಸೌತ್‌ ISAR ಸಮ್ಮೇಳನದಲ್ಲಿ ಪುರುಷರ ಸಂತಾನ ಸಮಸ್ಯೆಗೆ Aphrodite ಮಾನದಂಡಗಳ ಆಧಾರದ ಮೇಲೆ ನೀಡುವ ನಿರ್ದಿಷ್ಟ ಹಾರ್ಮೋನ್‌ ಚಿಕಿತ್ಸೆಯ ಕುರಿತಾದ ಬೆಸ್ಟ್‌ ಕೇಸ್‌ ರಿಪೋರ್ಟ್‌ ಅವಾರ್ಡ್‌.

ಚಿಕಿತ್ಸೆಯ ವಿಶೇಷತೆಗಳು

-ವೈದ್ಯಕೀಯ ಮಾರ್ಗಸೂಚಿಗಳ ಆಧಾರಿತ ಚಿಕಿತ್ಸೆ:  ಸಂತಾನೋತ್ಪತ್ತಿ ಚಿಕಿತ್ಸೆಯಲ್ಲಿ (ART) ಅಂತಾರಾಷ್ಟ್ರೀಯ ವೈದ್ಯಕೀಯ ಮಾರ್ಗಸೂಚಿಗಳು ಮತ್ತು ವೈಜ್ಞಾನಿಕ ಅಧ್ಯಯನಗಳ ಆಧಾರದ ಮೇಲೆ ಚಿಕಿತ್ಸೆ.

-ಡಾಟಾ-ಆಪ್ಟಿಮೈಸ್ಡ್‌ ಟ್ರಿಗರ್ಸ್‌: ಟ್ರಿಗರ್‌ ಇಂಜೆಕ್ಷನ್‌ ನಂತರ ಪ್ರೊಜೆಸ್ಟರಾನ್‌ ಮಟ್ಟ ಸೇರಿದಂತೆ ವಿವಿಧ ವೈದ್ಯಕೀಯ ಅಂಶಗಳನ್ನು ಪರಿಶೀಲಿಸಿ, ಉತ್ತಮ ಗುಣಮಟ್ಟದ ಪ್ರಬುದ್ಧ ಅಂಡಾಣುಗಳನ್ನು ಪಡೆಯಲು ಪ್ರಯತ್ನಿಸುವುದು.

-ಪುರುಷ ಮತ್ತು ಮಹಿಳೆಯರ ಸಂತಾನೋತ್ಪತ್ತಿ ಸಮಸ್ಯೆಗಳಿಗೆ ಸಮಗ್ರ ಚಿಕಿತ್ಸೆ: ಇಬ್ಬರಲ್ಲೂ ಕಂಡುಬರುವ ಸಂತಾನೋತ್ಪತ್ತಿ ಸಮಸ್ಯೆಗಳನ್ನು ಗುರುತಿಸಿ, ಅದಕ್ಕೆ ತಕ್ಕಂತೆ ವಿಶೇಷ ಚಿಕಿತ್ಸೆ ನೀಡುವುದು. ಪುರುಷರಲ್ಲಿ ವೀರ್ಯಾಣು ಸಮಸ್ಯೆ ಇದ್ದಲ್ಲಿ ಅದಕ್ಕೆ ಸೂಕ್ತ ಚಿಕಿತ್ಸೆಗೆ ಆದ್ಯತೆ. 

-ಸುಧಾರಿತ ಶಸ್ತ್ರಚಿಕಿತ್ಸಾ ವಿಧಾನಗಳು: ಭ್ರೂಣ ವರ್ಗಾವಣೆಗೆ ಮೊದಲು ಗರ್ಭಾಶಯದ ಆರೋಗ್ಯ ಮತ್ತು ಅದರ ಸ್ಥಿತಿಯನ್ನು ಉತ್ತಮಗೊಳಿಸಲು ಅಗತ್ಯವಿರುವ ಸಂತಾನೋತ್ಪತ್ತಿ ಸಂಬಂಧಿತ ಶಸ್ತ್ರಚಿಕಿತ್ಸೆಗಳಿಗೆ ಆದ್ಯತೆ.

ಸಂಶೋಧನಾ ಕೊಡುಗೆಗಳು

ಫೆಲೋಶೀಪ್‌ ಥೀಸಿಸ್‌: ICSI ಚಿಕಿತ್ಸೆಗೆ ಒಳಗಾಗುವ ಮಹಿಳೆಯರಲ್ಲಿ, ಟ್ರಿಗರ್‌ ಇಂಜೆಕ್ಷನ್‌ ನಂತರ ರಕ್ತದಲ್ಲಿನ ಪ್ರೊಜೆಸ್ಟಿರಾನ್‌ ಹಾರ್ಮೋನ್‌ ಮಟ್ಟವು ಫಾಲಿಕಲ್‌ನಿಂದ ದೊರೆಯುವ ಅಂಡಾಣುಗಳ ಪ್ರಮಾಣ ಮತ್ತು ಅಂಡಾಣುಗಳ ಪಕ್ವತೆಯ ಮೇಲೆ ಬೀರುವ ಪರಿಣಾಮ ಕುರಿತು ಅಧ್ಯಯನ.  

-ಸ್ನಾತಕೋತ್ತರ ಪದವಿ ಸಂಶೋಧನಾ ಪ್ರಬಂಧ: ಹೆರಿಗೆಗೆ ಗರ್ಭಕಂಠವನ್ನ ಸಿದ್ಧಪಡಿಸುವ ಮತ್ತು ಹೆರಿಗೆ ಪ್ರಕ್ರಿಯೆಯನ್ನು ಪ್ರಾರಂಭಿಸುವ ವಿಧಾನಗಳ ಕುರಿತು ತುಲನಾತ್ಮಕ ಅಧ್ಯಯನ. ಇದರಲ್ಲಿ ಫೋಲೆ ಬಲ್ಬ್‌ ಮತ್ತು ಯೋನಿಮಾರ್ಗದ ಮಿಸೊಪ್ರೊಸ್ಟಾಲ್‌ ಔಷಧಿಯನ್ನು ಒಟ್ಟಿಗೆ ಬಳಸುವ ವಿಧಾನವನ್ನು, ಮಿಸೊಪ್ರೊಸ್ಟಾಲ್‌ ಔಷಧಿಯನ್ನು ಮಾತ್ರ ಬಳಸುವ ವಿಧಾನದೊಂದಿಗೆ ಹೋಲಿಸಿ ಅಧ್ಯಯನ ಮಾಡಿದ್ದಾರೆ.

ಸಂಶೋಧನಾ ಪ್ರಬಂಧಗಳು

-ಪುರುಷರ ಸಂತಾನೋತ್ಪತ್ತಿ ಸಮಸ್ಯೆಗಳ ನಿರ್ವಹಣೆ: Aphrodite ಮಾನದಂಡಗಳ ಆಧಾರದ ಮೇಲೆ ಹಾರ್ಮೋನ್‌ ಚಿಕಿತ್ಸೆಯ ಮೂಲಕ ಸಂಕೀರ್ಣ ಸಂತಾನೋತ್ಪತ್ತಿ ಸಮಸ್ಯೆಗಳನ್ನು ನಿರ್ವಹಿಸಿದ ಸಂಶೋಧನಾ ಪ್ರಕರಣವನ್ನು South ISAR ಸಮ್ಮೇಳನದಲ್ಲಿ ಮಂಡಿಸಿ ಪ್ರಶಸ್ತಿ ಪಡೆದಿದ್ದಾರೆ. (2025)

-ಅಂಡಾಣುಗಳ ಗುಣಮಟ್ಟ ಮತ್ತು ಬೆಳವಣಿಗೆ: ICSI ಚಿಕಿತ್ಸೆಯಲ್ಲಿ ಟ್ರಿಗರ್‌ ಇಂಜೆಕ್ಷನ್‌ ನಂತರ ರಕ್ತದಲ್ಲಿನ ಪ್ರೊಜೆಸ್ಟಿರೋನ್‌ ಮಟ್ಟಕ್ಕೂ, ಸಂಗ್ರಹಿಸಿದ ಅಂಡಾಣುಗಳ ಸಂಖ್ಯೆ ನಡುವಿನ ಸಂಬಂಧ ಕುರಿತು ಸಂಶೋಧನೆಯನ್ನು ISAR ಅಹಮದಾಬಾದ್‌ ಸಮ್ಮೇಳನದಲ್ಲಿ ಮಂಡನೆ. ( 2026)

-ಸಂಕೀರ್ಣ ಮತ್ತು ಅಪರೂಪದ ವೈದ್ಯಕೀಯ ಪ್ರಕರಣಗಳು: ಗರ್ಭಾವಸ್ಥೆಯಲ್ಲಿ ಕಾಣಿಸಿಕೊಂಡ ಅಪರೂಪದ ಕ್ಷಯರೋಗದ ಪ್ರಕರಣವನ್ನು (Yuva-FOGSI, 2021) ಹಾಗೂ ಅಂಡಾಶಯದ ಕ್ಯಾನ್ಸರ್‌ ನಾಲ್ಕನೇ ಹಂತದಲ್ಲಿ ಕಾಣಿಸಿಕೊಂಡ ಅಪರೂಪದ Sister mary joseph nodule ಪ್ರಕರಣವನ್ನು (ರಾಜ್ಯಮಟ್ಟದ ಸಮ್ಮೇಳನ, 2019) ನಿರ್ವಹಿಸಿ ದಾಖಲಿಸಿದ್ದಾರೆ. 

- ವೈದ್ಯಕೀಯ ಸಂಶೋಧನಾ ಲೇಖನಗಳ ಪ್ರಕಟಣೆ: ಮಹಿಳಾ ಮತ್ತು ಪ್ರಸೂತಿ ಶಸ್ತ್ರಚಿಕಿತ್ಸೆಗಳ ನಂತರ ಮೂತ್ರದಲ್ಲಿ ಬ್ಯಾಕ್ಟೀರಿಯಾ ಕಾಣಿಸಿಕೊಳ್ಳುವಿಕೆ ಹಾಗೂ ಯೋಜಿತ ಸಿಸೇರಿಯನ್‌ ಹೆರಿಗೆಗೆ ಮೊದಲು ನೀಡುವ ಸ್ಟಿರಾಯ್ಡ್‌ ಚಿಕಿತ್ಸೆಯಿಂದ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಕುರಿತು ವೈದ್ಯಕೀಯ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.

ಈ ಪುಟವನ್ನು ಹಂಚಿಕೊಳ್ಳಿ

ಕರೆಗಾಗಿ ವಿನಂತಿಸಿ

+91 9108 9108 32