ಡಾ. ಹರ್ಷಿತಾ ಗುರುಪ್ರಸಾದ್
ಡಾ. ಹರ್ಷಿತಾ ಗುರುಪ್ರಸಾದ್ ಪರಿಚಯ
ಡಾ. ಹರ್ಷಿತಾ ಅವರು ಗರ್ಭಗುಡಿ ದಾವಣಗೆರೆ ಶಾಖೆಯಲ್ಲಿ ಫಲವತ್ತತೆ ತಜ್ಞರಾಗಿದ್ದು, ಸಂತಾನೋತ್ಪತ್ತಿ ಚಿಕಿತ್ಸೆ ಮತ್ತು ಅತ್ಯಾಧುನಿಕ ಶಸ್ತ್ರಚಿಕಿತ್ಸಾ ವಿಧಾನಗಳಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ. IVF ಚಿಕಿತ್ಸೆಯಲ್ಲಿನ ಆಧುನಿಕ ತಂತ್ರಜ್ಞಾನದ ಜೊತೆಗೆ ಲ್ಯಾಪರೋಸ್ಕೋಪಿ ಶಸ್ತ್ರಚಿಕಿತ್ಸೆ ಮತ್ತು ಕ್ಲಿಷ್ಟಕರ ಸಂತಾನೋತ್ಪತ್ತಿ ಸಮಸ್ಯೆಗಳಿಗೆ ಸಮಗ್ರ ಚಿಕಿತ್ಸೆ ನೀಡುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಶಿಕ್ಷಣ
- FMAS -ಫೆಲೋಶಿಪ್ ಇನ್ ಮಿನಿಮಲ್ ಆಕ್ಸೆಸ್ ಸರ್ಜರಿ
- FRM - ಫೆಲೋಶಿಪ್ ಇನ್ ರಿಪ್ರೊಡಕ್ಟಿವ್ ಮೆಡಿಸಿನ್- CIMAR ಹಾಸ್ಪಿಟಲ್, ಕೊಚ್ಚಿ, ಕೇರಳ
- DNB- OBGY
- MS OBGY -MGM ಮೆಡಿಕಲ್ ಕಾಲೇಜ್ ಮತ್ತು ಹಾಸ್ಪಿಟಲ್, ಔರಂಗಾಬಾಧ್, ಮಹಾರಾಷ್ಟ್ರ
- MBBS – ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಬೆಳಗಾವಿ (BIMS).
ಅನುಭವ ಮತ್ತು ಪರಿಣತಿ
ಡಾ. ಹರ್ಷಿತಾ ಅವರಿಗೆ ವೈದ್ಯಕೀಯ ಕ್ಷೇತ್ರದ ಅನುಭವದ ಜೊತೆಗೆ ಸಂಶೋಧನೆಯಲ್ಲಿಯೂ ಉತ್ತಮ ಹಿನ್ನೆಲೆ ಇದೆ. ಸಂತಾನೋತ್ಪತ್ತಿ ಚಿಕಿತ್ಸೆಯ ವಿಶೇಷ ತರಬೇತಿ ಸಂದರ್ಭದಲ್ಲಿ ಅವರು, ಫ್ರೀಜ್ ಮಾಡಿ ಸಂರಕ್ಷಿಸಿದ ಭ್ರೂಣವನ್ನು ಗರ್ಭಾಶಯಕ್ಕೆ ವರ್ಗಾಯಿಸುವಾಗ (Frozen Embryo Transfer ) Luteal Phase GnRH Agosnist ಔಷಧದ ಕುರಿತು ವೈದ್ಯಕೀಯ ಸಂಶೋಧನೆ ನಡೆಸಿದ್ದಾರೆ.
ಪ್ರಮುಖ ಕೌಶಲ್ಯಗಳು: ಅತ್ಯಾಧುನಿಕ 2D/3D ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಲ್ಯಾಪರೋಸ್ಕೋಪಿಕ್ ಸರ್ಜರಿ ಹಾಗೂ ART ತಂತ್ರಜ್ಞಾನ.
ಆಸಕ್ತಿಯ ಕ್ಷೇತ್ರ: IVF ಚಿಕಿತ್ಸೆಯ ಜೊತೆಗೆ ಲ್ಯಾಪರೋಸ್ಕೋಪಿಕ್ ಶಸ್ತ್ರಚಿಕಿತ್ಸೆಯನ್ನು ಬಳಸುವ ಮೂಲಕ ಸಂತಾನ ಚಿಕಿತ್ಸೆಯ ಫಲಿತಾಂಶವನ್ನು ಉತ್ತಮಗೊಳಿಸುವುದು.
ವಿಶೇಷ ಪರಿಣಿತಿ
ರಿಪ್ರೊಡಕ್ಟಿವ್ ಮೆಡಿಸಿನ್: IVF ಮತ್ತು ಲ್ಯಾಪರೊಸ್ಕೋಪಿಕ್ ಸರ್ಜರಿ
MRCOG -1 ( ರಾಯಲ್ ಕಾಲೇಜ್ ಆಫ್ ಅಬ್ಸ್ಟೆಟ್ರಿಷಿಯನ್ಸ್ ಮತ್ತು ಗೈನಕಾಲಜಿ ಸದಸ್ಯೆ)
FOGSI- ಬೇಸಿಕ್ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್
IVF ಚಿಕಿತ್ಸಾ ವಿಧಾನ
ಡಾ. ಹರ್ಷಿತಾ ಅವರು ಪ್ರತಿ ದಂಪತಿಯ ವೈಯಕ್ತಿಕ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತವಾದ ಚಿಕಿತ್ಸೆ ನೀಡುತ್ತಾರೆ. ಸೋನಾಲಜಿಸ್ಟ್ ಹಾಗೂ ಲ್ಯಾಪರೋಸ್ಕೋಪಿಕ್ ಸರ್ಜನ್ ಆಗಿ ತಮಗಿರುವ ಪರಿಣತಿಯನ್ನು ಬಳಸಿಕೊಂಡು, IVF ಚಿಕಿತ್ಸೆಯ ಮೊದಲು ಮತ್ತು ಚಿಕಿತ್ಸೆಯ ಸಂದರ್ಭದಲ್ಲಿ ಸಂತಾನೋತ್ಪತ್ತಿಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಿ ಚಿಕಿತ್ಸೆ ನೀಡುತ್ತಾರೆ.
ಚಿಕಿತ್ಸೆಯ ಪ್ರಮುಖ ವೈಶಿಷ್ಟ್ಯಗಳು
ವಿವರವಾದ 3D ಅಲ್ಟ್ರಾಸೌಂಡ್ ಸ್ಕ್ಯಾನ್
ಸಂತಾನೋತ್ಪತ್ತಿಗೆ ಅನುಕೂಲವಾಗುವಂತೆ ಕಡಿಮೆ ಶಸ್ತ್ರಚಿಕಿತ್ಸಾ ವಿಧಾನಗಳ ಮೂಲಕ ಅಗತ್ಯ ಮಾರ್ಪಾಡು
ಫ್ರೋಜನ್ ಎಂಬ್ರಿಯೋ ಟ್ರಾನ್ಸ್ಫರ್ (FET) ಗಾಗಿ ಸಂಶೋಧನಾಧಾರಿತ ವಿಧಾನಗಳ ಬಳಕೆ.
ಪ್ರಶಸ್ತಿಗಳು ಮತ್ತು ಸಾಧನೆಗಳು
ಪ್ರಥಮ ಬಹುಮಾನ: 2020ರಲ್ಲಿ ನಡೆದ SONOCON ಕಾನ್ಫರೆನ್ಸ್ನಲ್ಲಿ ಪ್ರಬಂಧ ಮಂಡನೆ.
ಶೈಕ್ಷಣಿಕ ಸಾಧನೆ: M.S. OBGY (ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ) ಅಧ್ಯಯನ ಮಾಡುವಾಗ ಕಾಲೇಜಿಗೆ ಟಾಪರ್
ಸಂಶೋಧನಾ ಪ್ರಬಂಧ ಪ್ರಕಟಣೆ: ದಕ್ಷಿಣ ಏಷ್ಯಾದ ಮಹಿಳೆಯರಲ್ಲಿ ಡೆಂಗ್ಯೂ ವೈರಸ್ನ ಪರಿಣಾಮವನ್ನು ರಕ್ತದ ಪರೀಕ್ಷೆಯ ಮೂಲಕ ಮುಂಚಿತವಾಗಿ ಗುರುತಿಸುವ ಕುರಿತು ಸಂಶೋಧನಾ ಲೇಖನ (IJISRT, 2020)
ಸಹಲೇಖಕಿ: ಡಾ. ಪರಶುರಾಮ್ ಗೋಪಿನಾಥನ್ ಅವರೊಂದಿಗೆ ICSI ಮತ್ತು ಸಾಮಾನ್ಯ IVF ಮೂಲಕ ಗರ್ಭಧಾರಣೆ ಮಾಡುವ ವಿಧಾನಗಳ ಕುರಿತು ಅಧ್ಯಾಯ ರಚನೆ.