ಡಾ. ನಿಕಿತಾ ಮೂರ್ತಿ ಬಿ. ಎಸ್.

ಡಾ. ನಿಕಿತಾ ಮೂರ್ತಿ ಬಿ. ಎಸ್.

MBBS, MS-OBG, DNB, FRM
ಫಲವತ್ತತೆ ತಜ್ಞರು
ವೈದ್ಯಕೀಯ ನೋಂದಣಿ ಸಂಖ್ಯೆ (ಕೆಎಂಸಿ) : 110260
ತಿಳಿದಿರುವ ಭಾಷೆಗಳು: ಕನ್ನಡ, ಇಂಗ್ಲಿಷ್,ಹಿಂದಿ, ತೆಲುಗು

ನಿಮ್ಮ ನೇಮಕಾತಿಯನ್ನು ಕಾಯ್ದಿರಿಸಿ

ಶಾಖೆ
ಆವರಣದಲ್ಲಿ
ಆನ್ಲೈನ್

* ನೇಮಕಾತಿಗಳು ವೈದ್ಯರ ಲಭ್ಯತೆಗೆ ಒಳಪಟ್ಟಿರುತ್ತವೆ. ದಯವಿಟ್ಟು, ನೀವು ಈಗಾಗಲೇ ಗರ್ಭಗುಡಿಗೆ ಭೇಟಿ ನೀಡಿದ್ದರೆ ನಿಮ್ಮ ನೋಂದಾಯಿತ ಸಂಖ್ಯೆಯನ್ನು ನೀವು ನೀಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

ಬಂಜೆತನ ನಿವಾರಣಾ ಚಿಕಿತ್ಸೆಯಲ್ಲಿ ಕೇಳಿಬರುವ ಮೋಸ್ಟ್ ಪಾಪ್ಯುಲರ್ ಹೆಸರೆಂದರೆ ಡಾ. ನಿಕಿತಾ ಮೂರ್ತಿ ಅವರದ್ದು. “ನಮಗೆ ಇನ್ನೂ ಮಗು ಆಗಿಲ್ಲ’ ಅಂತ ಬರುವ ಯಾವುದೇ ದಂಪತಿಗಳ ಪಾಲಿಗೆ ನಿಕಿತಾ ದೊಡ್ಡ ಆಶಾಕಿರಣ. ಯಾಕೆಂದ್ರೆ ಅವರೊಬ್ಬ ವಿಶೇಷ ಅನುಭವವಿರುವ ಬಂಜೆತನ ನಿವಾರಣಾ ತಜ್ಞೆಯಾಗಿದ್ದಾರೆ.

೨೦೧೪ರಲ್ಲಿ ನಿಕಿತಾ ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಿಂದ ಎಂಬಿಬಿಎಸ್ ಪದವಿ ಪಡೆದರು. ನಂತರ ದಾವಣಗೆರೆಯ ಪ್ರತಿಷ್ಠಿತ JJMMC ಸಂಸ್ಥೆಯಿಂದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಹಾಗೂ ೨೦೧೮ರಲ್ಲಿ ಅವರು DNB ಪದವಿ ಪಡೆದರು. ದೆಹಲಿಯ ಮೂಲ್ ಚಂದ್ ಆಸ್ಪತ್ರೆಯಲ್ಲಿ ಹೆಚ್ಚಿನ ವೈದ್ಯಕೀಯ ಶಿಕ್ಷಣ ಪಡೆದ ನಂತರ ೨೦೧೯ ರಿಂದ ೨೦೨೦ರ ತನಕ ಬೆಂಗಳೂರಿನ ರಿಚ್ ಮಂಡ್ ರಸ್ತೆಯಲ್ಲಿರುವ ಫೋರ್ಟಿಸ್ ಮತ್ತು ಶೇಷಾದ್ರಿಪುರಂನಲ್ಲಿರುವ ಅಪೊಲೊ ಆಸ್ಪತ್ರೆಯಲ್ಲಿ ರಿಜಿಸ್ಟ್ರಾರ್ ಆಗಿ ಕಾರ್ಯ ನಿರ್ವಹಿಸಿದರು. ೨೦೧೯ರಲ್ಲಿ ಬೆಂಗಳೂರಿನ ಮಿಲನ್ ಫರ್ಟಿಲಿಟಿ ಸೆಂಟರ್ ನಿಂದ ಸಂತಾನೋತ್ಪತ್ತಿ ಔಷಧಿಯಲ್ಲಿ ಫೆಲೋಷಿಪ್ ಗೌರವ ಸಹ ಪಡೆದುಕೊಂಡರು.

ಮಕ್ಕಳಿಲ್ಲವಲ್ಲ ಅಂತ ಕೊರಗುತ್ತಿರುವ ನೂರಾರು ದಂಪತಿಗಳಿಗೆ ಅಕ್ಕರೆಯಿಂದ ಚಿಕಿತ್ಸೆ ನೀಡಿದ ದೀಪ್ತಿ, ಕೇರಿ ಫರ್ಟಿಲಿಟಿ ಸೆಂಟರ್ ನಲ್ಲಿ ೨೦೨೦ರಿಂದ ೨೦೧೨೧ರ ತನಕ ಮುಖ್ಯ ಸಲಹೆಗಾರ್ತಿಯಾಗಿ ಕಾರ್ಯ ನಿರ್ವಹಿಸಿದರು. ಈಗ ಬಿಇಎಲ್ ರಸ್ತೆಯಲ್ಲಿರುವ ಪ್ರತಿಷ್ಠಿತ ಗರ್ಭಗುಡಿ ಐವಿಎಫ್ ಸೆಂಟರ್ ನಲ್ಲಿ ಫಲವತ್ತತೆ ತಜ್ಞೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಡಾ. ನಿಕಿತಾ ಮೂರ್ತಿ ಸಂತಾನೋತ್ಪತ್ತಿ ನೆರವು, ಗರ್ಭಧಾರಣಾ ಪೂರ್ವ ಸಮಾಲೋಚನೆ ಮತ್ತು ಫಲವತ್ತತೆ ಸಮಸ್ಯೆಗಳನ್ನು ನಿಭಾಯಿಸುವುದು-ಈ ವಿಷಯಗಳಲ್ಲಿ ವಿಶೇಷ ಪರಿಣಿತಿ ಪಡೆದಿದ್ದಾರೆ. ಅವರೊಬ್ಬ ನುರಿತ, ಪ್ರೀತಿಪಾತ್ರ, ಸಹೃದಯಿ ವೈದ್ಯೆ. ಡಾ. ನಿಕಿತಾ ಮೂರ್ತಿಯವರು ತಮ್ಮ ಅಪಾರ ಜ್ಞಾನ ಮತ್ತು ಅನುಭವದಿಂದ ಹಲವು ದಂಪತಿಗಳ ಬಂಜೆತನ ನಿವಾರಿಸಿ ಅವರ ಬಾಳಿನಲ್ಲಿ ಸಂತಸ ತಂದಿದ್ದಾರೆ. ಅದಕ್ಕಾಗಿ ಡಾ. ನಿಕಿತಾ ಮೂರ್ತಿಯವರನ್ನು ಗರ್ಭಗುಡಿ ಅಭಿನಂದಿಸುತ್ತದೆ.

ಈ ಪುಟವನ್ನು ಹಂಚಿಕೊಳ್ಳಿ

ಕರೆಗಾಗಿ ವಿನಂತಿಸಿ

+91 9108 9108 32