ಡಾ. ಪವಿತ್ರಾ

ಡಾ. ಪವಿತ್ರಾ

MBBS, MS OBG , FRM
ಸಂತಾನೋತ್ಪತ್ತಿ ತಜ್ಞರು
ವೈದ್ಯಕೀಯ ನೋಂದಣಿ ಸಂಖ್ಯೆ (ಕೆಎಂಸಿ) : 110858
ತಿಳಿದಿರುವ ಭಾಷೆಗಳು: ಕನ್ನಡ,ಇಂಗ್ಲಿಷ್‌,ತಮಿಳು, ಹಿಂದಿ

ನಿಮ್ಮ ನೇಮಕಾತಿಯನ್ನು ಕಾಯ್ದಿರಿಸಿ

ಶಾಖೆ
ಆವರಣದಲ್ಲಿ
ಆನ್ಲೈನ್

* ನೇಮಕಾತಿಗಳು ವೈದ್ಯರ ಲಭ್ಯತೆಗೆ ಒಳಪಟ್ಟಿರುತ್ತವೆ. ದಯವಿಟ್ಟು, ನೀವು ಈಗಾಗಲೇ ಗರ್ಭಗುಡಿಗೆ ಭೇಟಿ ನೀಡಿದ್ದರೆ ನಿಮ್ಮ ನೋಂದಾಯಿತ ಸಂಖ್ಯೆಯನ್ನು ನೀವು ನೀಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

ಡಾ. ಪವಿತ್ರಾ ನುರಿತ ಸಂತಾನೋತ್ಪತ್ತಿ ತಜ್ಞೆಯಾಗಿದ್ದು ಸಂತಾನೋತ್ಪತ್ತಿ ಸಮಸ್ಯೆಯಿಂದ ಬಳಲುತ್ತಿರುವ ಅದೆಷ್ಟೋ ದಂಪತಿಗಳು ಅದರಿಂದ ಹೊರಬರಲು ಸೂಕ್ತ ಸಹಾಯ ನೀಡುತ್ತಿದ್ದಾರೆ. ಡಾ. ಪವಿತ್ರಾ ವಿಐಎಂಎಸ್‌ ಮತ್ತು ಆರ್‌ಸಿಯಿಂದ ಎಂಬಿಬಿಎಸ್‌ ಪದವಿ ಹಾಗೂ ಅದೇ ಸಂಸ್ಥೆಯಿಂದ ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರದಲ್ಲಿ ಎಂಎಸ್‌ ಪದವಿ ಪಡೆದಿದ್ದಾರೆ. ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ವಿಸ್ತರಿಸಿಕೊಳ್ಳುವ ಆಸಕ್ತಿಯಿಂದ ಡಾ. ಪಾಟೀಲ್ಸ್‌ ಫರ್ಟಿಲಿಟಿ ಮತ್ತು ಎಂಡೋಸ್ಕೊಪಿ ಕ್ಲಿನಿಕ್‌ನಿಂದ ಸಂತಾನೋತ್ಪತ್ತಿ ಔಷಧಿಯಲ್ಲಿ ಫೆಲೋಶಿಪ್‌ ಗಳಿಸಿದ್ದಾರೆ. ಉತ್ತಮವಾದ ಶೈಕ್ಷಣಿಕ ಹಿನ್ನೆಲೆ ಇರುವ ಡಾ. ಪವಿತ್ರಾ ಅವರು ತಮ್ಮ ವೃತ್ತಿಯಲ್ಲಿ ಅಪಾರ ಅನುಭವ ಸಂಪತ್ತನ್ನು ಗಳಿಸಿದ್ದಾರೆ. ಸಂತಾನೋತ್ಪತ್ತಿ ಸಮಸ್ಯೆ ಚಿಕಿತ್ಸೆಯಲ್ಲಿ ಎರಡು ವರ್ಷದ ಅನುಭವವಿದ್ದು ಪೋಷಕರಾಗಬೇಕು ಅನ್ನುವ ಹಂಬಲದಿಂದ ಬರುವ ದಂಪತಿಗಳಿಗೆ ಅತ್ಯುತ್ಯಮ ಚಿಕಿತ್ಸೆ ನೀಡುವಲ್ಲಿ ದಣಿವರಿಯದ ಕೆಲಸ ಮಾಡಿದ್ದಾರೆ. ಡಾ ಪವಿತ್ರಾ ಅವರು ಐವಿಎಫ್‌ ಮತ್ತು ಐಯುಐನಂಥ ಕಾರ್ಯವಿಧಾನಗಳನ್ನು ಒಳಗೊಂಡಂತೆ ಅಸಿಸ್ಟೆಡ್‌ ರಿಪ್ರೊಡಕ್ಟಿವ್‌ ಟೆಕ್ನಾಲಜಿ (ART) ಯಲ್ಲಿಅಸಾಧಾರಣ ಕೌಶಲ್ಯ ಹೊಂದಿದ್ದಾರೆ.

ತಮ್ಮ ತಾಳ್ಮೆ, ಸಹಾನುಭೂತಿ ಮತ್ತು ವೈಜ್ಞಾನಿಕ ವಿಧಾನಕ್ಕೆ ಹೆಸರುವಾಸಿಯಾಗಿರುವ ಡಾ. ಪವಿತ್ರಾ ಅವರು ಪ್ರತಿಯೊಬ್ಬ ದಂಪತಿಗಳಿಗೂ ಅವರ ಅಗತ್ಯತೆಗನುಗುಣವಾಗಿ ವೈಯಕ್ತಿಕ ಚಿಕಿತ್ಸೆ ಸಿಕ್ತಿದೆಯಾ ಇಲ್ವ ಅಂತ ಖುದ್ದು ಖಚಿತಪಡಿಸಿಕೊಳ್ಳುತ್ತಾರೆ. ತಮ್ಮ ದಂಪತಿಗಳ ಜೊತೆ ಮುಕ್ತವಾಗಿ ಮತ್ತು ಪಾರದರ್ಶಕ ರೀತಿಯಲ್ಲಿ ವ್ಯವಹರಿಸುವ ಡಾ. ಪವಿತ್ರಾ ನೈತಿಕ ಮತ್ತು ಆಧಾರಸಹಿತ ಚಿಕಿತ್ಸೆ ನೀಡುವುದರಲ್ಲಿ ನಂಬಿಕೆ ಇಟ್ಟಿದ್ದಾರೆ. ತಮ್ಮ ಬಳಿಗೆ ಬರುವ ದಂಪತಿ ಒತ್ತಡದಿಂದ ಇದ್ದಲ್ಲಿ ಗೊಂದಲದಲ್ಲಿ ಇದ್ದಲ್ಲಿ ಅದನ್ನು ನಿವಾರಿಸಲು ಭಾವನಾತ್ಮಕವಾಗಿ ಅವರೊಡನೆ ಸ್ಪಂದಿಸಿ ಸಮಾಲೋಚನೆ ನಡೆಸುವುದರಲ್ಲೂ ಡಾ ಪವಿತ್ರ ಸಿದ್ಧಹಸ್ತರು.

ಸಂಕೀರ್ಣವಾದ ಸಂತಾನೋತ್ಪತಿ ಚಿಕಿತ್ಸೆ ನೀಡುವಲ್ಲಿ ದಂಪತಿಗಳಿಗೆ ಬೇಕಾದ ಸಲಹೆ ಮತ್ತು ಮಾರ್ಗದರ್ಶನ ನೀಡುವುದು ಹಾಗೂ ಅವರನ್ನು ಸಬಲೀಕರಣಗೊಳಿಸುವುದು ಡಾ. ಪವಿತ್ರಾ ಅವರ ಉದ್ದೇಶ. ಹೊಸದಾಗಿ ಕುಟುಂಬವನ್ನ ಶುರುಮಾಡಿದವರು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಬಂದಾಗ ತಮ್ಮ ಅನುಭವ, ಸಮರ್ಪಣಾ ಭಾವ ಮತ್ತು ಬದ್ಧತೆಯೊಂದಿದೆ ಡಾ . ಪವಿತ್ರಾ ಸದಾ ಕಾರ್ಯನಿರ್ವಹಿಸುತ್ತಾರೆ.

ಈ ಪುಟವನ್ನು ಹಂಚಿಕೊಳ್ಳಿ