ಡಾ. ರಾಘವೇಂದ್ರ ಜಿ

ಡಾ. ರಾಘವೇಂದ್ರ ಜಿ

ಎಂಬಿಬಿಎಸ್‌. ಎಂಬಿಎ,ಪಿಜಿಡಿಎಚ್‌ಎಂ
ವೈದ್ಯಕೀಯ ಅಧೀಕ್ಷಕರು
ವೈದ್ಯಕೀಯ ನೋಂದಣಿ ಸಂಖ್ಯೆ (ಕೆಎಂಸಿ) :
ತಿಳಿದಿರುವ ಭಾಷೆಗಳು:

ಡಾ. ರಾಘವೇಂದ್ರ ಜಿ. ಅವರು ಗರ್ಭಗುಡಿಯಲ್ಲಿ ವೈದ್ಯಕೀಯ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಆರೋಗ್ಯ ಕ್ಷೇತ್ರದಲ್ಲಿ ಅಪಾರ ಅನುಭವವಿದ್ದು, ಹಲವಾರು ಪ್ರತಿಷ್ಠಿತ ಆರೋಗ್ಯಸಂಸ್ಥೆಗಳಲ್ಲಿ ನಾಯಕತ್ವದ ಜವಾಬ್ದಾರಿಯನ್ನು ನಿಭಾಯಿಸಿದ ಅನುಭವವೂ ಇದೆ. ವೈದ್ಯಕೀಯ ಆಡಳಿತ ಮತ್ತು ಆಸ್ಪತ್ರೆಯ ಕಾರ್ಯಾಚರಣೆಗಳಲ್ಲಿ ಅವರಿಗಿರುವ 15 ವರ್ಷಗಳ ಸುದೀರ್ಘ ಅನುಭವ, ರೋಗಿಗಳ ಆರೈಕೆ ಹಾಗೂ ಅವರಿಗೆ ಸಿಗಬೇಕಾದ ಆರೋಗ್ಯ ಸೇವೆಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವಲ್ಲಿ ಡಾ. ರಾಘವೇಂದ್ರ ಸಿದ್ಧಹಸ್ತರು.

ಡಾ. ರಾಘವೇಂದ್ರ ಅವರು ಇಎಸ್‌ಐ ಆಸ್ಪತ್ರೆಯಲ್ಲಿ ಸೀನಿಯರ್‌ ರೆಸಿಡೆಂಟ್‌ ಆಗಿದ್ದವರು. ನಂತರ ಅವರು ಸದ್ಗುಣ ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ವಾಹಕರು ಮತ್ತು ಓಜುಸ್ ಮೆಡಿಕೇರ್‌ನಲ್ಲಿ ಸೆಂಟರ್‌ ಡೈರೆಕ್ಟರ್‌ ಆಗಿ ಸೇವೆ ಸಲ್ಲಿಸಿದ್ದಾರೆ. ಅವರು ಪೋರ್ಟಿಯಾ ಹೆಲ್ತ್ ವಿಸ್ಟಾದಲ್ಲಿ ಟೆಲಿಮೆಡಿಸಿನ್‌ಗೆ ತಮ್ಮದೇ ಆದ ಕೊಡುಗೆ ನೀಡಿದ್ದಲ್ಲದೆ ಶಾಂತಿ ಆಸ್ಪತ್ರೆ, ಸಪ್ತಗಿರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಮಾನವ್ ಚಾರಿಟಬಲ್ ಆಸ್ಪತ್ರೆಯ ಆಡಳಿತ ವಿಭಾಗದಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ. ಇತ್ತೀಚೆಗಷ್ಟೇ ಅವರು ಪೀಪಲ್ ಟ್ರೀ ಆಸ್ಪತ್ರೆಯಲ್ಲಿ ಆಸ್ಪತ್ರೆಯ ನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದರು.

ಮಕ್ಕಳಿಲ್ಲದ ದಂಪತಿಗಳ ಪೋಷಕತ್ವದ ಪಯಣ ಇದೆಯಲ್ಲ ಅದು ಒಂದು ಸವಾಲಿನ ಮತ್ತು ಭಾವನಾತ್ಮಕವಾದ ಪಯಣ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಡಾ. ರಾಘವೇಂದ್ರ ಅವರ ನಾಯಕತ್ವವು, ಅತ್ಯಾಧುನಿಕ ಫಲವತ್ತತೆ ಚಿಕಿತ್ಸೆ ಮಾತ್ರವಲ್ಲದೆ ಪ್ರೀತಿ, ಸಹಾನುಭೂತಿ ಮತ್ತು ಸಮಗ್ರ ಆರೈಕೆಯನ್ನು ಒದಗಿಸುವಲ್ಲಿ ನಮ್ಮ ಬದ್ಧತೆಯನ್ನು ಮತ್ತಷ್ಟು ಹೆಚ್ಚಿಸಿದೆ. ದಂಪತಿಗಳ ಆರೈಕೆಗೆ ಅನುಕೂಲವಾದ ವಾತಾವರಣ ಕಲ್ಪಿಸಿಕೊಡುವುದು ಆ ಮೂಲಕ ದಂಪತಿಗಳ ತಾಯ್ತನದ ಪಯಣವನ್ನು ಸಹ್ಯವಾಗಿಸುವುದು ಡಾ ರಾಘವೇಂದ್ರ ಅವರ ಉದ್ದೇಶವಾಗಿದೆ.

ಈ ಪುಟವನ್ನು ಹಂಚಿಕೊಳ್ಳಿ