ಡಾ. ಶಾಲಿನಿ ವೆಂಕಟಪ್ಪ

ಡಾ. ಶಾಲಿನಿ ವೆಂಕಟಪ್ಪ

MBBS, MD(OBG), DNB, MNAMS, FRM
ಫರ್ಟಿಲಿಟಿ ಸ್ಪೆಷಲಿಸ್ಟ್‌
ವೈದ್ಯಕೀಯ ನೋಂದಣಿ ಸಂಖ್ಯೆ (ಕೆಎಂಸಿ) : 117558
ತಿಳಿದಿರುವ ಭಾಷೆಗಳು: ಕನ್ನಡ, ಇಂಗ್ಲಿಷ್, ಹಿಂದಿ

ನಿಮ್ಮ ನೇಮಕಾತಿಯನ್ನು ಕಾಯ್ದಿರಿಸಿ

ಶಾಖೆ
ಆವರಣದಲ್ಲಿ
ಆನ್ಲೈನ್

* ನೇಮಕಾತಿಗಳು ವೈದ್ಯರ ಲಭ್ಯತೆಗೆ ಒಳಪಟ್ಟಿರುತ್ತವೆ. ದಯವಿಟ್ಟು, ನೀವು ಈಗಾಗಲೇ ಗರ್ಭಗುಡಿಗೆ ಭೇಟಿ ನೀಡಿದ್ದರೆ ನಿಮ್ಮ ನೋಂದಾಯಿತ ಸಂಖ್ಯೆಯನ್ನು ನೀವು ನೀಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

ಡಾ.ಶಾಲಿನಿ ವೆಂಕಟಪ್ಪ ಅವರು ಅತ್ಯಂತ ಮಹಾತ್ವಾಕಾಂಕ್ಷೆಯ ಹಾಗೂ ನುರಿತ ಫಲವತ್ತತೆ ತಜ್ಞರಾಗಿದ್ದಾರೆ. ಪ್ರಸೂತಿ ಮತ್ತು ಸ್ತ್ರೀರೋಗ ಚಿಕಿತ್ಸೆ ಹಾಗೂ ಸಂತಾನೋತ್ಪತ್ತಿ ಚಿಕಿತ್ಸಾ ಕ್ಷೇತ್ರದಲ್ಲಿ ಮಕ್ಕಳಿಲ್ಲದ ದಂಪತಿಗಳ ಆರೈಕೆ, ಅವರ ರೋಗ ಪರೀಕ್ಷೆ ಮತ್ತು ಅತ್ಯಂತ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವಲ್ಲಿ ಸಿದ್ಧಹಸ್ತರಾಗಿದ್ದಾರೆ. ಭಾರತದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳಲ್ಲಿ ಒಂದಾದ ಚಂಡೀಗಢದ PGIMER ನಲ್ಲಿ ವೈದ್ಯಕೀಯ ಶಿಕ್ಷಣ ಪಡೆದಿರುವ ಡಾ. ಶಾಲಿನಿಯವರು, ಅತ್ಯುತ್ತಮ ವೈದ್ಯಕೀಯ ಅನುಭವ ಮತ್ತು ಮಹಿಳೆಯರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ವೈದ್ಯರಾಗಿದ್ದಾರೆ. 

ದಂಪತಿಗಳೊಂದಿಗೆ ಆತ್ಮೀಯತೆ, ಅತ್ಯಂತ ಶಿಸ್ತುಬದ್ಧ ಕಾರ್ಯನಿರ್ವಹಿಸುವಿಕೆ ಹಾಗೂ ಮಾನವೀಯತೆಯಿಂದ ಚಿಕಿತ್ಸೆ ನೀಡುವಲ್ಲಿ ಡಾ. ಶಾಲಿನಿ ಹೆಸರುವಾಸಿಯಾಗಿದ್ದಾರೆ. ಸಂತಾನೋತ್ಪತ್ತಿಗೆ ಸಂಬಂಧಿಸಿದ ಅನೇಕ ಕಾರ್ಯಾಗಾರಗಳಲ್ಲದೆ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಅವರು ಸಕ್ರಿಯವಾಗಿ ಭಾಗವಹಿಸಿ ಅಪಾರ ಜ್ಞಾನ ಗಳಿಸಿದ್ದಾರೆ.

ಶಿಕ್ಷಣ ಮತ್ತು ಅರ್ಹತೆಗಳು

ವೈದ್ಯಕೀಯ ಪದವಿ (MBBS): MBBS, ಕೆಂಪೇಗೌಡ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ (KIMS), ಬೆಂಗಳೂರು, 2016.

ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ MD., ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸ್ನಾತಕೋತ್ತರ ಸಂಸ್ಥೆ (PGIMER) ಚಂಡೀಗಢ, 2021.

ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ DNB, ನ್ಯಾಷನಲ್‌ ಬೋರ್ಡ್‌ ಆಫ್‌ ಎಕ್ಸಾಮಿನೇಷನ್‌ ಇನ್‌ ಮೆಡಿಕಲ್‌ ಸೈನ್ಸ್‌. 

ಸಂತಾನೋತ್ಪತ್ತಿ ಔಷಧದಲ್ಲಿ ಫೆಲೋಶಿಪ್‌, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (RGUHS) 2026, ಮಿಲನ್‌ ಫರ್ಟಿಲಿಟಿ ಮತ್ತು ಹೆರಿಗೆ ಕೇಂದ್ರ, ಬೆಂಗಳೂರು. 

ಕ್ಲಿನಿಕಲ್‌ ಅಟ್ಯಾಚ್ಮೆಂಟ್‌ ಇನ್‌ ರಿಪ್ರೊಡಕ್ಟಿವ್‌ ಮೆಡಿಸಿನ್‌, ಸೇಂಟ್‌ ಮೇರಿ ಆಸ್ಪತ್ರೆ, ಮ್ಯಾಂಚೆಸ್ಟರ್‌ ವಿಶ್ವವಿದ್ಯಾನಿಲಯ, NHS, ಮ್ಯಾಂಚೆಸ್ಟರ್‌.

ಅನುಭವ ಮತ್ತು ಪರಿಣಿತಿ

ಸೀನಿಯರ್‌ ರೆಸಿಡೆಂಟ್‌ (ಸಂತಾನೋತ್ಪತ್ತಿ ವೈದ್ಯಕೀಯ ವಿಭಾಗ) ಜಿಂದಾಲ್‌ IVF ಮತ್ತು ಸಂತ ಮೆಮೋರಿಯಲ್‌ ನರ್ಸಿಂಗ್‌ ಹೋಮ್‌, ಚಂಡೀಗಢ. (11/2023 – 08/2024)

ಸೀನಿಯರ್‌ ರೆಸಿಡೆಂಟ್‌( ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ) ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ  (GMCH-32),  ಚಂಡೀಗಢ (06/2022 – 11/2023)

ರಿಜಿಸ್ಟ್ರಾರ್‌, ಕ್ಲೌಡ್‌ನೈನ್‌ ಹಾಸ್ಪಿಟಲ್‌, ಬೆಂಗಳೂರು (11/2021 – 04/2022)

ಜೂನಿಯರ್‌ ರೆಸಿಡೆಂಟ್‌ PGIMER, ಚಂಡೀಗಢ (01/2018 – 06/2021)

ಪರಿಣಿತಿ ಮತ್ತು ಕೌಶಲಗಳು

  • ಸಂತಾನೋತ್ಪತ್ತಿ ಔಷಧಿ ಮತ್ತು IVF: ಒವುಲೇಷನ್‌ ಇಂಡಕ್ಷನ್‌, ಕಂಟ್ರೋಲ್ಡ್‌ ಒವರಿಯನ್‌ ಸ್ಟಿಮ್ಯುಲೇಷ̧̧ನ್‌, ಲುಟಿಯಲ್‌ ಫೇಸ್‌ ಸಪೋರ್ಟ್‌, ಎಂಡೋಮೆಟ್ರಿಯಲ್‌ ಪ್ರಿಪರೇಷನ್‌, ಥರ್ಡ್‌ ಪಾರ್ಟಿ ರಿಪ್ರೊಡಕ್ಷನ್‌ ಮತ್ತು ಫರ್ಟಿಲಿಟಿ ಪ್ರಿಸರ್ವೇಷನ್‌.  
  • ಸುಧಾರಿತ ವೈದ್ಯಕೀಯ ಪ್ರಕ್ರಿಯೆಗಳು: ಅಂಡಾಣು ಸಂಗ್ರಹಣೆ, ಭ್ರೂಣ ವರ್ಗಾವಣೆ ಮತ್ತು ಗರ್ಭಾಶಯದ ಒಳಗೆ ವೀರ್ಯಾಣುಗಳನ್ನು ಸೇರಿಸುವ ಪ್ರಕ್ರಿಯೆ (IUI)ಗಳಲ್ಲಿ ಪ್ರಾಯೋಗಿಕ ಅನುಭವ.  
  • ಅಲ್ಟ್ರಾಸೌಂಡ್‌ ಬಳಕೆಗಳು: ಫಾಲಿಕಲ್ಸ್‌ ಮಾನಿಟರಿಂಗ್‌, ಡಾಪ್ಲರ್‌ ಸ್ಟಡೀಸ್‌, ಸಲೈನ್‌ ಇನ್‌ಫ್ಯೂಷನ್‌ ಸೋನೋಗ್ರಫಿ ಮತ್ತು ಆರಂಭಿಕ ಗರ್ಭಾವಸ್ಥೆಯ ಸ್ಕ್ಯಾನಿಂಗ್‌. 
  • ಹೆಚ್ಚಿನ ಅಪಾಯದ ಗರ್ಭಧಾರಣೆಯ ನಿರ್ವಹಣೆ:  300ಕ್ಕೂ ಹೆಚ್ಚು ಸಿಸೇರಿಯನ್‌ ಶಸ್ತ್ರಚಿಕಿತ್ಸೆಗಳನ್ನು ಸ್ವತಂತ್ರವಾಗಿ ನಿರ್ವಹಿಸಿದ ಅನುಭವ (ಪ್ಲಾಸೆಂಟಾ ಪ್ರಿವಿಯಾ,ಮಯೋಮೆಕ್ಟಮಿ, ಸೆಪ್ಟಲ್‌ ರೆಸೆಕ್ಷನ್‌, ಅಧೆಸಿಯೋಲಿಸಿಸ್‌) ಹಾಗೂ ಐವಿಎಫ್‌ ಮೂಲಕ ಗರ್ಭಧಾರಣೆ ಹೊಂದಿದವರ ಗರ್ಭಾವಸ್ಥೆಯ ಸಮಗ್ರ ನಿರ್ವಹಣೆಯಲ್ಲಿ ಪರಿಣಿತಿ.  
  • ಸ್ತ್ರೀರೋಗಶಸ್ತ್ರಚಿಕಿತ್ಸೆ:ಲ್ಯಾಪ್ರೊಸ್ಕೋಪಿಕ್/ಹಿಸ್ಟರೋಸ್ಕೋಪಿಕ್ ಶಸ್ತ್ರಚಿಕಿತ್ಸೆಗಳನ್ನು (ಎಂಡೊಮೆಟ್ರಿಯೋಸಿಸ್,  ಮಯೋಮೆಕ್ಟಮಿ, ಸೆಪ್ಟಲ್ ರಿಸೆಕ್ಷನ್, ಅಡ್ಹೆಸಿಯೊಲೈಸಿಸ್) ನಡೆಸಲಾಗಿದೆ.

ಸರ್ಟಿಫಿಕೇಷನ್ಸ್‌

  • MRCOG ಭಾಗ 2 – ರಾಯಲ್ ಕಾಲೇಜ್ ಆಫ್ ಆಬ್‌ಸ್ಟೆಟ್ರಿಶಿಯನ್ಸ್ ಅಂಡ್ ಗೈನಕಾಲಜಿಸ್ಟ್ಸ್, ಯುಕೆ (2025)
  • MRCOG ಭಾಗ 1 – ರಾಯಲ್ ಕಾಲೇಜ್ ಆಫ್ ಆಬ್‌ಸ್ಟೆಟ್ರಿಶಿಯನ್ಸ್ ಅಂಡ್ ಗೈನಕಾಲಜಿಸ್ಟ್ಸ್, ಯುಕೆ (2022)
  • ISUOG ಬೇಸಿಕ್‌ ಅಲ್ಟ್ರಾಸೌಂಡ್ ಆನ್‌ಲೈನ್ ಟ್ರೈನಿಂಗ್‌ ಸರ್ಟಿಫಿಕೇಷನ್‌ (2025)

ಸದಸ್ಯತ್ವಗಳು

  • ನ್ಯಾಷನಲ್ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್ (MNAMS) ಸದಸ್ಯತ್ವ  
  • ಇಂಡಿಯನ್ ಫರ್ಟಿಲಿಟಿ ಸೊಸೈಟಿ (IFS) ಸದಸ್ಯತ್ವ

IVF ಚಿಕಿತ್ಸಾ ವಿಧಾನ

ಡಾ. ಶಾಲಿನಿ ಅವರು ಪ್ರತಿಯೊಬ್ಬರಿಗೂ ಅವರ ಆರೋಗ್ಯದ ಸ್ಥಿತಿ ಮತ್ತು ಅಗತ್ಯಗಳಿಗೆ ಅನುಗುಣವಾಗಿ ವೈಯಕ್ತಿಕ ಚಿಕಿತ್ಸೆ ನೀಡುವುದರಲ್ಲಿ ನಂಬಿಕೆ ಇಟ್ಟಿದ್ದಾರೆ. ಯುಕೆ (NHS) ಮತ್ತು ಭಾರತದ ಪ್ರಮುಖ ವೈದ್ಯಕೀಯ ಸಂಸ್ಥೆಗಳಲ್ಲಿ ಪಡೆದ ತರಬೇತಿಯ ಅನುಭವದ ಆಧಾರದ ಮೇಲೆ, ಭ್ರೂಣವನ್ನು ಗರ್ಭಾಶಯಕ್ಕೆ ವರ್ಗಾಯಿಸುವುದು ಮತ್ತು ಅಂಡಾಣುಗಳನ್ನು ಸಂಗ್ರಹಿಸುವಂತಹ ಸೂಕ್ಷ್ಮ ಪ್ರಕ್ರಿಯೆಗಳಲ್ಲಿ ಹೆಚ್ಚಿನ ನಿಖರತೆಗೆ ಆದ್ಯತೆ ನೀಡುತ್ತಾರೆ.

ಚಿಕಿತ್ಸೆಯ ಪ್ರತಿಯೊಂದು ಹಂತದ ಬಗ್ಗೆಯೂ ರೋಗಿಗಳಿಗೆ ಸರಳವಾಗಿ ವಿವರಿಸಿ, ಅವರ ಭಾವನೆಗಳನ್ನು ಅರ್ಥಮಾಡಿಕೊಂಡು, ಆತ್ಮವಿಶ್ವಾಸದಿಂದ ಐವಿಎಫ್ ಪಯಣವನ್ನು ಮುಂದುವರಿಸಲು ನೆರವಾಗುತ್ತಾರೆ. ರೋಗಿಯ ಸುರಕ್ಷತೆ, ಅವರ ಅಗತ್ಯಕ್ಕೆ ತಕ್ಕ ಚಿಕಿತ್ಸೆ ಮತ್ತು ಚಿಕಿತ್ಸೆಯ ಯಶಸ್ಸಿನ ಸಾಧ್ಯತೆಯನ್ನು ಹೆಚ್ಚಿಸುವುದರ ಮೇಲೆ ಅವರು ವಿಶೇಷ ಗಮನ ಹರಿಸುತ್ತಾರೆ.

ಚಿಕಿತ್ಸೆಯ ಪ್ರಮುಖ ವಿಶೇಷತೆಗಳು

  • ಅಲ್ಟ್ರಾಸೌಂಡ್ ಮೂಲಕ ಸಮಗ್ರ ಮೇಲ್ವಿಚಾರಣೆ: ಡಾಪ್ಲರ್ ಮತ್ತು ಸಲೈನ್ ಇನ್ಫ್ಯೂಷನ್ ಸ್ಕ್ಯಾನ್‌ಗಳ ಮೂಲಕ ಚಿಕಿತ್ಸೆಯ ಪ್ರತಿ ಹಂತವನ್ನೂ ಗಮನಿಸಿ, ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವುದು.
  •  ವೈಜ್ಞಾನಿಕ ಆಧಾರಿತ ಚಿಕಿತ್ಸಾ ವಿಧಾನಗಳು: ಇತ್ತೀಚಿನ ವೈದ್ಯಕೀಯ ಸಂಶೋಧನೆಗಳ ಆಧಾರದ ಮೇಲೆ, ಪ್ರತಿ ರೋಗಿಯ ಅಗತ್ಯಕ್ಕೆ ತಕ್ಕಂತೆ IVF ಚಿಕಿತ್ಸೆಗೆ ಬೇಕಾದ ಔಷಧೋಪಚಾರ ಮತ್ತು ಭ್ರೂಣ ವರ್ಗಾವಣೆಯ ನಂತರದ ಆರೈಕೆಯನ್ನು ರೂಪಿಸುವುದು.
  • ಸುಧಾರಿತ ಶಸ್ತ್ರಚಿಕಿತ್ಸಾ ವಿಧಾನಗಳು: IVF ಚಿಕಿತ್ಸೆಗೆ ಮೊದಲು ಗರ್ಭಧಾರಣೆಗೆ ಅಡ್ಡಿಯಾಗಬಹುದಾದ ಸಮಸ್ಯೆಗಳನ್ನು ಸರಿಪಡಿಸಲು ಲ್ಯಾಪರೊಸ್ಕೋಪಿ ಮತ್ತು ಹಿಸ್ಟರೊಸ್ಕೋಪಿ ಶಸ್ತ್ರಚಿಕಿತ್ಸೆಗಳನ್ನು ನಡೆಸುವುದು.

ವಿಶೇಷ ಹಾಗೂ ಸಂಕೀರ್ಣ ಸಂತಾನೋತ್ಪತ್ತಿ ಸಮಸ್ಯೆಗಳ ನಿರ್ವಹಣೆ

  • ಸಂಕೀರ್ಣ ಸಂತಾನೋತ್ಪತ್ತಿ ಸಮಸ್ಯೆಗಳಿಗೆ ಸುಧಾರಿತ ಚಿಕಿತ್ಸಾ ವಿಧಾನಗಳು: ಅಂಡಾಣುಗಳ ಸಂಖ್ಯೆ ಬಹಳ ಕಡಿಮೆಯಾಗಿರುವುದು, ಪದೇಪದೇ ಭ್ರೂಣ ಗರ್ಭಾಶಯದಲ್ಲಿ ಅಂಟಿಕೊಳ್ಳದಿರುವುದು, ಪದೇಪದೆ ಗರ್ಭಪಾತವಾಗುವುದು ಹಾಗೂ ದಾನಿಗಳ ಅಂಡಾಣು ಅಥವಾ ವೀರ್ಯದ ನೆರವಿನಿಂದ ಸಂತಾನ ಪಡೆಯುವ ಪ್ರಕರಣಗಳ ನಿರ್ವಹಣೆ.
  • ಗರ್ಭಧಾರಣೆಗೆ ಅಡ್ಡಿಯಾಗುವ ಗಂಭೀರ ಸ್ತ್ರೀರೋಗ ಸಮಸ್ಯೆಗಳು: ತೀವ್ರ ಎಂಡೊಮೆಟ್ರಿಯೋಸಿಸ್, ಗರ್ಭಾಶಯದಲ್ಲಿ ಗಡ್ಡೆಗಳು (ಫೈಬ್ರಾಯ್ಡ್‌ಗಳು) ಮತ್ತು ಗರ್ಭಾಶಯದ ಒಳಭಾಗದಲ್ಲಿ ಅಂಟಿಕೊಳ್ಳುವಿಕೆ ಉಂಟಾಗಿ ಗರ್ಭಧಾರಣೆಗೆ ತೊಂದರೆಯಾಗುವ ಸಮಸ್ಯೆಗಳಿಗೆ ಔಷಧೋಪಚಾರ ಹಾಗೂ ಶಸ್ತ್ರಚಿಕಿತ್ಸೆಯ ಮೂಲಕ ಚಿಕಿತ್ಸೆ ನೀಡುವುದು.
  • ಗರ್ಭಾವಸ್ಥೆ ಮತ್ತು ಹೆರಿಗೆಯ ಸಮಯದ ತುರ್ತು ಪರಿಸ್ಥಿತಿಗಳ ನಿರ್ವಹಣೆ: ಗರ್ಭಾಶಯದ ಹೊರಗೆ ಗರ್ಭ ಬೆಳೆಯುವ ಸ್ಥಿತಿಯಲ್ಲಿ ಗರ್ಭಕೋಶದ ಹೊರಭಾಗದ ಗರ್ಭ ಒಡೆದು ಉಂಟಾಗುವ ತುರ್ತು ಪರಿಸ್ಥಿತಿ, ಹೆರಿಗೆಯ ಸುತ್ತಮುತ್ತ ಹೃದಯದ ಕಾರ್ಯಕ್ಷಮತೆ ಕುಸಿಯುವುದು, ಗರ್ಭಾವಸ್ಥೆಯಲ್ಲಿ ತೀವ್ರ ರಕ್ತದೊತ್ತಡದ ಸಮಸ್ಯೆ ಹಾಗೂ ಗರ್ಭಾಶಯ ಒಡೆಯುವಂತಹ ಜೀವಕ್ಕೆ ಅಪಾಯ ಉಂಟುಮಾಡಬಹುದಾದ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಿದ ಅನುಭವ.

ಸಂಶೋಧನಾ ಪ್ರಬಂಧಗಳು  

  • - ಐವಿಎಫ್ ಚಿಕಿತ್ಸೆಯಲ್ಲಿ ಸೀರಮ್ AMH ಮಟ್ಟ ಮತ್ತು ಭ್ರೂಣದ ಕ್ರೋಮೋಸೋಮ್‌ಗಳ ಸಾಮಾನ್ಯತೆಯ ನಡುವಿನ ಸಂಬಂಧ: ಫರ್ಟಿವಿಷನ್ 2025, ದೆಹಲಿ ಎನ್‌ಸಿಆರ್.
  • - ಕಣ್ಣಿಗೆ ಕಾಣದ ಗಾಯಗಳೇ ಗುಣವಾಗಲು ಅತ್ಯಂತ ಕಷ್ಟವಾದವು: ಈಸ್ಟ್ ಝೋನ್ ಯುವ FOGSI–2021.
  • - ಆರಂಭಿಕ ಹಂತದ ಎಂಡೊಮೆಟ್ರಿಯಲ್ ಕ್ಯಾನ್ಸರ್ ಹೊಂದಿರುವ ಋತುಬಂಧಕ್ಕೆ ಮುನ್ನ  ಮಹಿಳೆಯರಲ್ಲಿ ಅಂಡಾಶಯವನ್ನು ಸಂರಕ್ಷಿಸುವ ನವೀನ ವಿಧಾನ: 35 ವರ್ಷದ ಮಹಿಳೆಯ ಪ್ರಕರಣದ ವರದಿ. ನಾರ್ತ್ ಝೋನ್ YUVAFOGSI–2021, ಚಂಡೀಗಢ.
  • - ಎರಡೂ ಅಂಡಾಶಯಗಳಲ್ಲಿನ ಬಾರ್ಡರ್‌ಲೈನ್ ಟ್ಯೂಮರ್‌ಗಳಿಗೆ ಅತ್ಯಂತ ಸಂಯಮಿತ, ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಉಳಿಸುವ ಚಿಕಿತ್ಸೆ: 19 ವರ್ಷದ ಯುವತಿಯ ಪ್ರಕರಣದ ವರದಿ. FOGSI PG ಫೋರಂ–2020.
  • - ಗರ್ಭಾವಸ್ಥೆಯ ಅಂತಿಮ ಹಂತದಲ್ಲಿ ತಾಯಿಯ ಅಡ್ರಿನಲ್ ಗ್ರಂಥಿಯಲ್ಲಿ ರಕ್ತಸ್ರಾವ ಉಂಟಾದ ಅಪರೂಪದ ಪ್ರಕರಣ: AICOG 2020, ಲಖನೌ.

ಪ್ರಕಟಿತ ಲೇಖನಗಳು 

  • - ಇಂಟರ್‌ನ್ಯಾಷನಲ್ ಜರ್ನಲ್ ಆಫ್ ರಿಪ್ರೊಡಕ್ಷನ್, ಕಾಂಟ್ರಾಸೆಪ್ಷನ್, ಆಬ್ಸ್ಟೆಟ್ರಿಕ್ಸ್ ಅಂಡ್ ಗೈನಕಾಲಜಿ (2024): ಯೋಜಿತ ಸ್ತ್ರೀರೋಗ ಶಸ್ತ್ರಚಿಕಿತ್ಸೆಗಳಿಗೆ ಮುನ್ನ ಕಾರ್ಬೋಹೈಡ್ರೇಟ್ ಆಹಾರ ಸೇವನೆ ಮತ್ತು ಶಸ್ತ್ರಚಿಕಿತ್ಸೆಗೆ ಮುನ್ನ ಉಪವಾಸ ಮಾಡುವ ವಿಧಾನಗಳ ತುಲನಾತ್ಮಕ ಅಧ್ಯಯನ. ಶಸ್ತ್ರಚಿಕಿತ್ಸೆಯ ನಂತರ ಶೀಘ್ರ ಚೇತರಿಕೆಗೆ ಈ ವಿಧಾನಗಳ ಪರಿಣಾಮಕಾರಿತ್ವದ ಮೌಲ್ಯಮಾಪನ.
    ಲೇಖಕರು: S. ವೆಂಕಟಪ್ಪ, S. ಸೂರಿ, V. ಜೈನ್, V. ಅರೋರಾ, K. ಜೈನ್, S. ಮಲ್ಹೋತ್ರಾ ಮತ್ತು N. ಸಚ್‌ದೇವ.
  • - ಜೆ. ಗೈನಕಾಲ್ (14 ಜುಲೈ 2023): ವೈಫಲ್ಯದಿಂದ ಹೃದಯ ಕಳೆದುಕೊಳ್ಳಬೇಡಿ — ಹೆರಿಗೆಯ ಸುತ್ತಮುತ್ತ ಉಂಟಾದ ಕಾರ್ಡಿಯೊಮಯೋಪತಿ ಸಮಸ್ಯೆಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ ಪ್ರಕರಣದ ವರದಿ.
  • - ಏಷ್ಯನ್ ರಿಸರ್ಚ್ ಜರ್ನಲ್ ಆಫ್ ಗೈನಕಾಲಜಿ ಅಂಡ್ ಆಬ್ಸ್ಟೆಟ್ರಿಕ್ಸ್ (13 ಅಕ್ಟೋಬರ್ 2021): ಗರ್ಭಾವಸ್ಥೆಯಲ್ಲಿ COVID-19 ಲಸಿಕೆ: ಅಂತರರಾಷ್ಟ್ರೀಯ ಶಿಫಾರಸುಗಳ ಸಂಕ್ಷಿಪ್ತ ಅವಲೋಕನ.
    ಲೇಖಕರು: ಶಾಲಿನಿ ವೆಂಕಟಪ್ಪ, ಅಂಕಿತ್ ಕುಮಾರ್ ಚಕ್ರವರ್ತಿ ಮತ್ತು ಅವಿರ್ ಸರ್ಕಾರ್.

ಈ ಪುಟವನ್ನು ಹಂಚಿಕೊಳ್ಳಿ

ಕರೆಗಾಗಿ ವಿನಂತಿಸಿ

+91 9108 9108 32