ಹಿಸ್ಟರೊಸಲ್ಪಿಂಗೋಗ್ರಾಮ್ (ಎಚ್‍ಎಸ್‍ಜಿ)

ಹಿಸ್ಟರೊಸಲ್ಪಿಂಗೋಗ್ರಾಮ್ (ಎಚ್‍ಎಸ್‍ಜಿ)

ಮಹಿಳೆ ಗರ್ಭಿಣಿಯಾಗಲು, ಪ್ರಜನನ ವ್ಯವಸ್ಥೆಯ ಎಲ್ಲಾ ಅಂಗಗಳು ಆರೋಗ್ಯಕರವಾಗಿರುವುದು ಮತ್ತು ಸರಿಯಾಗಿ ಕಾರ್ಯನಿರ್ವಹಿಸುವುದು ಮುಖ್ಯ. ಯಶಸ್ವಿ ಗರ್ಭಧಾರಣೆಯನ್ನು ಸಾಧಿಸಲು ಅಂಡಾಶಯಗಳು, ಗರ್ಭಕೋಶ, ಫಾಲೋಪಿಯನ್ ಟ್ಯೂಬ್‍ಗಳು ಮತ್ತು ಯೋನಿ ಆರೋಗ್ಯಕರ ಸ್ಥಿತಿಯಲ್ಲಿರಬೇಕು. ಇವುಗಳಲ್ಲಿ ಯಾವ ಅಂಗದಲ್ಲಾದರೂ ಅಸಹಜ ತೊಂದರೆ ಇದ್ದರೆ, ಗರ್ಭಾವಸ್ಥೆ ಕಷ್ಟಕರವಾಗುತ್ತದೆ.

ನಿರ್ದಿಷ್ಟ ಅಂಗದೊಂದಿಗಿನ ಯಾವುದೇ ತೊಂದರೆಯನ್ನು ಗುರುತಿಸಲು ಮತ್ತು ನಿವಾರಿಸಲು ದೇಹದ ಮೇಲ್ಮೈಯಲ್ಲಿ ಅನೇಕ ರೋಗನಿರ್ಣಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಆದರೆ ಆಧಾರವಾಗಿರುವ ಕಾರಣವು ಅಂಗದೊಳಗೆ (ಫಾಲೋಪಿಯನ್ ಟ್ಯೂಬ್‍ಗಳಲ್ಲಿ ಅಡಚಣೆಯಂತೆ) ಕಂಡುಬಂದರೆ, ದೇಹದೊಳಗೆ ಪರೀಕ್ಷಿಸಲು ಅನುಮತಿಸುವ ವಿಭಿನ್ನ ರೀತಿಯ ಕಾರ್ಯವಿಧಾನವನ್ನು ನಿರ್ವಹಿಸಬೇಕಾಗುತ್ತದೆ. ಹಿಸ್ಟರೊಸಲ್ಪಿಂಗೋಗ್ರಾಮ್ (ಎಚ್‍ಎಸ್‍ಜಿ) ಅಂತಹ ಒಂದು ವಿಧಾನವಾಗಿದ್ದು, ಪರೀಕ್ಷಕನಿಗೆ ಗರ್ಭಾಶಯದ ಗೋಡೆಗಳು ಮತ್ತು ಫಾಲೋಪಿಯನ್ ಟ್ಯೂಬ್‍ಗಳನ್ನು ವೀಕ್ಷಿಸಲು ಅವಕಾಶ ಮಾಡಿಕೊಡುತ್ತದೆ. ಇದು ಗರ್ಭಾಶಯದ ಬಾಹ್ಯರೇಖೆ ಮತ್ತು ಆಕಾರದ ಬಗ್ಗೆ ಮಾಹಿತಿಯನ್ನು ಒದಗಿಸುವ ಒಂದು ಸಣ್ಣ ವಿಧಾನವಾಗಿದೆ ಮತ್ತು ಎಂಡೊಮೆಟ್ರಿಯಲ್ ಕುಹರದೊಳಗೆ ಯಾವುದೇ ಗುರುತು, ಫೈಬ್ರಾಯ್ಡ್‌ಗಳು ಅಥವಾ ಪಾಲಿಪ್‍ಗಳನ್ನು ಪತ್ತೆ ಮಾಡುತ್ತದೆ. ಫಾಲೋಪಿಯನ್ ಟ್ಯೂಬ್‍ಗಳಲ್ಲಿ ಯಾವುದೇ ಅಡಚಣೆ ಇದೆಯೇ ಎಂದು ನಿರ್ಣಯಿಸಲು ಇದು ನೆರವು ನೀಡುತ್ತದೆ.

ಎಚ್‍ಎಸ್‍ಜಿ ಎಂದರೇನು?

ಹಿಸ್ಟರೊಸಲ್ಪಿಂಗೋಗ್ರಾಮ್ (ಎಚ್‍ಎಸ್‍ಜಿ) ಒಂದು ರೋಗನಿರ್ಣಯ ಕ್ರಮವಾಗಿದ್ದು, ಇದು ಫಾಲೋಪಿಯನ್ ಟ್ಯೂಬ್‍ಗಳಲ್ಲಿ ಅಡೆತಡೆ ಮತ್ತು ನೀವು ಗರ್ಭಧರಿಸುವುದನ್ನು ತಡೆಯುವ ಯಾವುದೇ ಫೈಬ್ರಾಯ್ಡ್‌ಗಳು, ಗಾಯದ ಅಂಗಾಂಶ, ಪಾಲಿಪ್ಸ್ ಅಥವಾ ಇತರ ಬೆಳವಣಿಗೆಗಳನ್ನು ಪತ್ತೆಹಚ್ಚುವ ಮತ್ತು ಕ್ಷ-ಕಿರಣ ಮತ್ತು ವಿಶೇಷ ರೀತಿಯ ಡೈ (ಅಯೋಡಿನ್) ಅನ್ನು ಬಳಸುವ ಕ್ರಮವಾಗಿದೆ.

ಎಚ್‍ಎಸ್‍ಜಿ ಹಂತ-ಹಂತವಾಗಿ

• ಕಾರ್ಯವಿಧಾನಕ್ಕೆ ತಯಾರಾಗಲು ಈ ಕ್ರಮವನ್ನು ನಿರ್ವಹಿಸುವ ಒಂದು ಗಂಟೆಯ ಮೊದಲು ನೋವಿನ ಔಷಧಿಯನ್ನು ತೆಗೆದುಕೊಳ್ಳಲು ನಿಮಗೆ ಸೂಚಿಸಲಾಗುತ್ತದೆ. ನಿಮ್ಮ ಸ್ಥಿತಿಯನ್ನು ಅವಲಂಬಿಸಿ, ನಿಮ್ಮ ವೈದ್ಯರು ಪ್ರತಿಜೀವಕ(ಆ್ಯಂಟಿ ಬಯಾಟಿಕ್)ವನ್ನು ಸಹ ಶಿಫಾರಸು ಮಾಡಬಹುದು.

• ಇದು ಸಣ್ಣ ವೈದ್ಯಕೀಯ ಕ್ರಮವಾಗಿರುವುದರಿಂದ, ಇದನ್ನು ಸಾಮಾನ್ಯವಾಗಿ ಕಚೇರಿಯಲ್ಲಿ ಅಥವಾ ಸ್ತ್ರೀರೋಗತಜ್ಞರ ಕ್ಲಿನಿಕ್‍ನಲ್ಲಿ ನಡೆಸಲಾಗುತ್ತದೆ. ಫ್ಲೋರೋಸ್ಕೋಪ್ ಅಡಿಯಲ್ಲಿ (ಎಕ್ಸ್‌ರೆ ಇಮೇಜರ್), ಯೋನಿಯೊಳಗೆ ಸ್ಪೆಕ್ಯುಲಮ್ ಅನ್ನು ಸೇರಿಸಲಾಗುತ್ತದೆ ಮತ್ತು ಅದನ್ನು ತೆರೆದು ಗರ್ಭಕಂಠವನ್ನು ಸ್ವಚ್ಛಗೊಳಿಸಲಾಗುತ್ತದೆ.

• ನಂತರ ಕ್ಯಾನ್ನುಲಾ(ತೆಳುವಾದ ಕೊಳವೆ)ವನ್ನು ಗರ್ಭಕಂಠದೊಳಗೆ ಸೇರಿಸಲಾಗುತ್ತದೆ ಮತ್ತು ಸ್ಪೆಕ್ಯುಲಮ್ ಅನ್ನು ತೆಗೆದುಹಾಕಲಾಗುತ್ತದೆ.

• ನಂತರ ಗರ್ಭಾಶಯವು ಕಾಂಟ್ರಾಸ್ಟ್ ಡೈ (ಅಯೋಡಿನ್) ನಿಂದ ತುಂಬಿರುತ್ತದೆ. ನಂತರ ಫ್ಲೋರೋಸ್ಕೋಪ್‍ನ ಸಹಾಯದಿಂದ ಇಮೇಜಿಂಗ್ ಮೂಲಕ ವರ್ಣದ ಹರಿವನ್ನು ಟ್ರ್ಯಾಕ್ ಮಾಡಲಾಗುತ್ತದೆ.

• ಚಿತ್ರಣವನ್ನು ಮುಗಿಸಿದ ನಂತರ, ಕಾರ್ಯವಿಧಾನವನ್ನು ಪೂರ್ಣಗೊಳಿಸಲಾಗುತ್ತದೆ ಮತ್ತು ಕ್ಯಾನ್ನುಲಾವನ್ನು ತೆಗೆದುಹಾಕಲಾಗುತ್ತದೆ.

ಈ ಕ್ರಮವು ಯಾವುದೇ ಅಪಾಯಗಳನ್ನು ಹೊಂದಿರುವುದಿಲ್ಲ ಮತ್ತು ಸಾಮಾನ್ಯವಾಗಿ ಕಡಿಮೆ ನೋವಿನಿಂದ ಕೂಡಿರುತ್ತದೆ ಮತ್ತು ಕಾರ್ಯವಿಧಾನದ ಸಮಯದಲ್ಲಿ ಕೇವಲ ಸೌಮ್ಯ ಪ್ರಮಾಣದ ಸೆಳೆತದ ಅನುಭವವಾಗುತ್ತದೆ. ಆದರೆ ಫಾಲೋಪಿಯನ್ ಟ್ಯೂಬ್‍ನಲ್ಲಿ ಯಾವುದೇ ಅಡಚಣೆಯಿದ್ದರೆ, ನೀವು ತೀವ್ರವಾದ ನೋವನ್ನು ಅನುಭವಿಸುವ ಸಾಧ್ಯತೆಯಿದೆ, ಅದು ನೋವು ಔಷಧಿಗಳ ಸೇವನೆ ನಂತರ ಕಡಿಮೆಯಾಗುತ್ತದೆ. ಈ ಕ್ರಮ ಪೂರ್ಣಗೊಂಡ ನಂತರ, ವರದಿಯು ವಿವರವಾದ ಚಿತ್ರವನ್ನು ನೀಡುತ್ತದೆಯಲ್ಲದೇ ಇದರಿಂದ ನಿಮ್ಮ ವೈದ್ಯರು ನಿಮಗೆ ಸೂಕ್ತವಾದ ಚಿಕಿತ್ಸೆಯನ್ನು ಸೂಚಿಸಲು ಸಾಧ್ಯವಾಗುತ್ತದೆ.

ಈ ಪುಟವನ್ನು ಹಂಚಿಕೊಳ್ಳಿ