ಅಂಡಾಶಯದ ಮೀಸಲು ಪರೀಕ್ಷೆಗಳು (ಒಆರ್‍ಟಿ)
ಸ್ತ್ರೀ ಪ್ರಜನನ ವ್ಯವಸ್ಥೆಯು ಆಂತರಿಕ ಮತ್ತು ಬಾಹ್ಯ ಅಂಗಗಳನ್ನು ಒಳಗೊಂಡಿರುತ್ತದೆ. ಅಂಡಾಣು ಬಿಡುಗಡೆಯೊಂದಿಗೆ ಸಂತಾನೋತ್ಪತ್ತಿ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಸ್ತ್ರೀ ಪ್ರಜನನ ವ್ಯವಸ್ಥೆಯ ಅಂಡಾಶಯಗಳು ಅಂಡಾಣು ಉತ್ಪಾದಿಸುವ ಅಂಗಗಳಾಗಿವೆ, ಅದು ಬಿಡುಗಡೆಯಾದಾಗ ವೀರ್ಯದಿಂದ ಫಲವತ್ತಾಗಿಸುವುದಕ್ಕಾಗಿ ಫಾಲೋಪಿಯನ್ ಟ್ಯೂಬ್‍ಗಳಲ್ಲಿ ಕೆಳಗೆ ಚಲಿಸುತ್ತದೆ. ಅಂಡಾಶಯದಲ್ಲಿನ ಯಾವುದೇ ಅಸಹಜತೆಯು ಫರ್ಟಿಲಿಟಿ ಮಟ್ಟದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆಯಲ್ಲದೇ ಸಂತಾನೋತ್ಪತ್ತಿ ಸಮಸ್ಯೆಗೆ ಮುಖ್ಯ ಕಾರಣವಾಗಬಹುದು.
ಅಂಡಾಶಯಗಳ ಕಾರ್ಯಗಳು ಯಾವುವು?
ಅಂಡಾಶಯಗಳು ಮೂರು ಮುಖ್ಯ ಕಾರ್ಯಗಳನ್ನು ಹೊಂದಿವೆ:
• ಪ್ರತಿ ಮಹಿಳೆ ಜೀವಿತಾವಧಿಯವರೆಗೆ ಸೀಮಿತ ಸಂಖ್ಯೆಯ ಅಂಡಾಣುಗಳೊಂದಿಗೆ ಜನಿಸುತ್ತಾರೆ ಅಲ್ಲದೇ ಅಂಡಾಶಯಗಳು ಈ ಅಂಡಾಣುಗಳನ್ನು ರಕ್ಷಿಸುತ್ತವೆ ಮತ್ತು ಪ್ರೌಢಾವಸ್ಥೆ(ಮೈನೆರೆಯುವುದು, ದೊಡ್ಡವರಾಗುವುದು)ಯನ್ನು ತಲುಪಿದಾಗ, ಅಂಡಾಶಯಗಳು ಈ ಅಂಡಾಣುಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತವೆ.
• ಸ್ತ್ರೀ ಪ್ರಜನನ ಹಾರ್ಮೋನುಗಳಾದ ಎಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಕೂಡ ಅಂಡಾಶಯದಿಂದ ಉತ್ಪತ್ತಿಯಾಗುತ್ತವೆ. ಸ್ತ್ರೀ ಗುಣಲಕ್ಷಣಗಳ ಬೆಳವಣಿಗೆಯು ಈ ಹಾರ್ಮೋನುಗಳ ಕಾರಣದಿಂದಾಗಿರುತ್ತದೆ.
• ಪ್ರತಿ ಋತು ಆವರ್ತನದೊಂದಿಗೆ ಅಂಡಾಶಯದಿಂದ ಒಂದು ಅಥವಾ ಹೆಚ್ಚಿನ ಅಂಡಾಣುಗಳು ಬಿಡುಗಡೆಯಾಗುತ್ತವೆ. ಅಂಡಾಶಯಗಳು ಕೋಶಕಗಳನ್ನು ಹೊಂದಿರುತ್ತವೆ. ಅಂಡಾಣುವು ಹಾರ್ಮೋನ್‍ಗಳಿಂದ ಉತ್ತೇಜಿಸಲ್ಪಟ್ಟ ನಂತರ, ಕೋಶಕವು ಅಂಡಾಶಯದ ಗೋಡೆಗಳಿಗೆ ಚಲಿಸುತ್ತದೆ, ಅಲ್ಲಿ ಅಂಡಾಣು ಮತ್ತು ಕೋಶಕವು ಬೆಳೆಯುತ್ತವೆ ಮತ್ತು ಪ್ರಬುದ್ಧವಾಗುತ್ತವೆ.
ಅಕಾಲಿಕ ಅಂಡಾಶಯದ ವೈಫಲ್ಯ ಎಂದರೇನು?
ಅಂಡಾಶಯಗಳು ಎಸ್ಟ್ರೊಜೆನ್ ಎಂಬ ಹಾರ್ಮೋನ್ ಅನ್ನು ಉತ್ಪತ್ತಿ ಮಾಡುತ್ತವೆ ಎಂದು ತಿಳಿದಿದೆ, ಇದು ವಯಸ್ಸಿನಿಂದ ಋತುಬಂಧ(ಮೆನೋಪಾಸ್)ದವರೆಗೆ ಋತುಆವರ್ತನಕ್ಕೆ ಕಾರಣವಾಗಿರುತ್ತದೆ. ವಯಸ್ಸು ಮುಂದುವರೆದಂತೆ, ಅಂಡಾಶಯಗಳಿಗೂ ಕೂಡ ವಯಸ್ಸಾಗುತ್ತದೆ ಮತ್ತು ವಯಸ್ಸಾದಂತೆ ಕೆಲವೇ ಅಂಡಾಣುಗಳು ಬಿಡುಗಡೆಯಾಗುತ್ತವೆ ಅಲ್ಲದೇ ಕೊನೆಗೆ ಯಾವುದೇ ಅಂಡಾಣುಗಳು ಬಿಡುಗಡೆಯಾಗದಿದ್ದಾಗ ಮತ್ತು ಮಹಿಳೆಯ ಋತು ಆವರ್ತನವು ನಿಂತಾಗ ಮತ್ತು ಅವಳು ಋತುಬಂಧವನ್ನು ತಲುಪುತ್ತಾಳೆ. ಋತುಬಂಧವು ಸಾಮಾನ್ಯವಾಗಿ 40 ವರ್ಷಗಳ ನಂತರ ಕಂಡುಬರುತ್ತದೆ. ಆದ್ದರಿಂದ, ನೀವು ಚಿಕ್ಕವರಾಗಿದ್ದರೆ ಮತ್ತು ನಿಮ್ಮ ಅಂಡಾಶಯಗಳು ಅಂಡಾಣುಗಳನ್ನು ಉತ್ಪಾದಿಸಲು ಅಥವಾ ಬಿಡುಗಡೆ ಮಾಡಲು ಸಾಧ್ಯವಾಗದಿದ್ದರೆ, ನಿಮ್ಮ ಮುಟ್ಟಿನ ಅವಧಿಗಳು ನಿಲ್ಲುತ್ತವೆ ಎಂಬುದು ಬಹಳ ಸ್ಪಷ್ಟವಾಗಿರುತ್ತದೆ. ಈ ಸ್ಥಿತಿಯು ಋತುಬಂಧಕ್ಕೆ ಹೋಲುತ್ತದೆ; ಆದರೂ, ಇದು ಅಕಾಲಿಕ ಅಂಡಾಶಯದ ವೈಫಲ್ಯದ ಕಾರಣದಿಂದಾಗಿರಬಹುದು. ಅಕಾಲಿಕ ಅಂಡಾಶಯದ ವೈಫಲ್ಯವನ್ನು ಅಕಾಲಿಕ ಅಂಡಾಶಯದ ಅಸಾಮರ್ಥ್ಯ ಎಂದೂ ಕರೆಯುತ್ತಾರೆ. ಇದು ಅಂಡಾಶಯಗಳು 40 ವರ್ಷಕ್ಕಿಂತ ಮೊದಲು ಸಾಮಾನ್ಯವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದ ಸ್ಥಿತಿಯನ್ನು ಸೂಚಿಸುತ್ತದೆ. ಇದರಿಂದಾಗಿ ಋತು ಆವರ್ತನಗಳು ನಿಲ್ಲುವುದಲ್ಲದೇ ಸಾಮಾನ್ಯ ವಯಸ್ಸಿಗಿಂತ ಮುಂಚಿತವಾಗಿ ಋತು ಆವರ್ತನವನ್ನು ನಿಲ್ಲಿಸುತ್ತದೆಯಲ್ಲದೇ ಋತುಬಂಧ(ಮುಟ್ಟು ನಿಲ್ಲುವುದು) ಉಂಟಾಗುತ್ತದೆ.
ಪಿಒಎಫ್‍ಗೆ ಕಾರಣಗಳು
ಅಕಾಲಿಕ ಅಂಡಾಶಯದ ವೈಫಲ್ಯದ ಕೆಲವು ಕಾರಣಗಳು:
• ಇಡಿಯೋಪಥಿಕ್ (ಅಜ್ಞಾತ ಕಾರಣಗಳು) - ಕೆಲವೊಮ್ಮೆ, ಕಾರಣವನ್ನು ವಿವರಿಸಲು ಕಷ್ಟವಾಗುತ್ತದಲ್ಲದೇ ಮತ್ತು ನಿಮ್ಮ ವೈದ್ಯರು ಇನೂ ಹೆಚ್ಚಿನ ರೋಗನಿರ್ಣಯ ಪರೀಕ್ಷೆ ಸೂಚಿಸಬಹುದು.
• ಐಟ್ರೊಜೆನಿಕ್ - ಕೀಮೋಥೆರಪಿ ಮತ್ತು ವಿಕಿರಣ ಚಿಕಿತ್ಸೆ - ಇವುಗಳು ಜೀವಕೋಶಗಳ ಆನುವಂಶಿಕ ವಸ್ತುವಿಗೆ ಹಾನಿ ಮಾಡುವ ಮೂಲಕ ವಿಷವಸ್ತು - ಪ್ರೇರಿತ ಅಂಡಾಶಯದ ವೈಫಲ್ಯ ಉಂಟುಮಾಡಬಹುದು. ಆದರೂ, ತಂಬಾಕು, ಕೆಲವು ರಾಸಾಯನಿಕಗಳು, ವೈರಸ್‍ಗಳು ಮತ್ತು ಕೀಟನಾಶಕಗಳಂತಹ ಇತರ ವಿಷಗಳು ಸಹ ಪಿಒಎಫ್‍ಅನ್ನು ಪ್ರಚೋದಿಸಬಹುದು.
• ಸಾಂಕ್ರಾಮಿಕ - ಅಕಾಲಿಕ ಅಂಡಾಶಯದ ವೈಫಲ್ಯಕ್ಕೆ ಕೆಲವು ಸೂಕ್ಷ್ಮಜೀವಿಯ ಮತ್ತು ವೈರಲ್ ಸೋಂಕುಗಳು ಕೂಡ ಕೊಡುಗೆ ನೀಡುತ್ತವೆ.
• ಕ್ರೋಮೋಸೋಮಲ್ ಅಸಹಜತೆಗಳು - ಟರ್ನರ್ ಸಿಂಡ್ರೋಮ್ ಮತ್ತು ದುರ್ಬಲ ಎಕ್ಸ್ ಸಿಂಡ್ರೋಮ್‍ನಂತಹ ಕೆಲವು ಕ್ರೋಮೋಸೋಮಲ್ ದೋಷಗಳು ಪಿಒಎಫ್‍ನೊಂದಿಗೆ ಸಹಯೋಗ ಹೊಂದಿವೆ.
• ಆಟೋ ಇಮ್ಯೂನ್ ಕಾಯಿಲೆ - ಒಂದು ಸ್ಥಿತಿ, ಬಹಳ ಅಪರೂಪವಾಗಿದ್ದರೂ, ದೇಹದ ರೋಗನಿರೋಧಕ ವ್ಯವಸ್ಥೆಯು ಅಂಡಾಶಯದ ಅಂಗಾಂಶದ ವಿರುದ್ಧ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ. ಇದು ಮೊಟ್ಟೆಯನ್ನು ಒಳಗೊಂಡಿರುವ ಕೋಶಕಕ್ಕೆ ಹಾನಿ ಮಾಡುತ್ತದೆ ಮತ್ತು ಮೊಟ್ಟೆಯನ್ನು ಹಾನಿಗೊಳಿಸುತ್ತದೆ.
ಪಿಒಎಫ್ ರೋಗನಿರ್ಣಯ
• ರಕ್ತ ಪರೀಕ್ಷೆ ಮತ್ತು ಗರ್ಭಾವಸ್ಥೆಯ ಪರೀಕ್ಷೆ - ನೀವು ಪಿಒಎಫ್ ಹೊಂದಿದ್ದರೆ ಗುರುತಿಸಲು ಪ್ರಾಥಮಿಕ ಹಂತವೆಂದರೆ ನಿಮ್ಮ ಅಂಡಾಶಯಗಳು ಎಸ್ಟ್ರೊಜೆನ್ ಅನ್ನು ಉತ್ಪಾದಿಸುತ್ತದೆಯೇ ಮತ್ತು ಎಫ್‍ಎಸ್‍ಎಚ್ ಮತ್ತು ಎಲ್‍ಎಚ್ ಹಾರ್ಮೋನ್‍ಗಳು ಪಿಟ್ಯುಟರಿ ಗ್ರಂಥಿಯಿಂದ ಉತ್ಪತ್ತಿಯಾಗುತ್ತದೆಯೇ ಎಂದು ಪರೀಕ್ಷಿಸಲು ರಕ್ತ ಪರೀಕ್ಷೆ ನಡೆಸಲಾಗುತ್ತದೆ. ಪಿಟ್ಯುಟರಿ ಹಾರ್ಮೋನ್‍ಗಳಲ್ಲಿ ಹೆಚ್ಚಳವಿದ್ದರೆ ಮತ್ತು ಎಸ್ಟ್ರೊಜೆನ್‍ನ ಉತ್ಪಾದನೆಯಿಲ್ಲದಿದ್ದರೆ, ಇದು ನೀವು ಪಿಒಎಫ್‍ಅನ್ನು ಹೊಂದಿರಬಹುದು ಎಂಬ ಸೂಚಕವಾಗಿರಬಹುದು. 2 ರಿಂದ 4 ವಾರಗಳ ಅವಧಿಯವರೆಗೆ ವಾರಕ್ಕೊಮ್ಮೆ ಸೀರಮ್ ಎಫ್‍ಎಸ್‍ಎಚ್ ಮತ್ತು ಎಸ್ಟ್ರಾಡಿಯೋಲ್ ಮಟ್ಟವನ್ನು ಪರೀಕ್ಷಿಸಲು ಗರ್ಭಧಾರಣೆಯ ಪರೀಕ್ಷೆಯನ್ನು ಕೂಡ ಮಾಡಬಹುದು. ಎಫ್‍ಎಸ್‍ಎಚ್ ಮಟ್ಟಗಳು ಅಧಿಕವಾಗಿದ್ದರೆ ಮತ್ತು ಎಸ್ಟ್ರೊಜೆನ್ ಮಟ್ಟಗಳು ಕಡಿಮೆಯಾಗಿದ್ದರೆ, ಅದು ಪಿಒಎಫ್‍ಅನ್ನು ಸೂಚಿಸುತ್ತದೆ.
• ಆನುವಂಶಿಕ ಪರೀಕ್ಷೆ - ಪಿಒಎಫ್ ನ ಕುಟುಂಬದ ಇತಿಹಾಸವಿದ್ದರೆ, ಪಿಒಎಫ್ ಅನ್ನು ಪತ್ತೆಹಚ್ಚಲು ಆನುವಂಶಿಕ ಪರೀಕ್ಷೆಯನ್ನು ಕೂಡ ಸೂಚಿಸಬಹುದು.
• ಟ್ರಾನ್ಸ್ವೆಜಿನಲ್ ಅಲ್ಟ್ರಾಸೌಂಡ್ - ಅಂಡಾಶಯವನ್ನು ಹತ್ತಿರದಿಂದ ಪರೀಕ್ಷಿಸುವ ಕ್ರಮ. ಕೆಲವು ಕಿರುಚೀಲಗಳು ಮಾತ್ರ ಗೋಚರಿಸಿದರೆ ಮತ್ತು ಅಂಡಾಶಯದ ಗಾತ್ರವು ಚಿಕ್ಕದಾಗಿದ್ದರೆ, ಪಿಒಎಫ್ ಇರಬಹುದು.
ಪಿಒಎಫ್‍ನ ವರ್ಗೀಕರಣ
ಸೀರಮ್ ಎಫ್‍ಎಸ್‍ಎಚ್ ಮಟ್ಟಗಳು ಮತ್ತು ಕ್ಲಿನಿಕಲ್ ಸಂಶೋಧನೆಗಳನ್ನು ಆಧರಿಸಿ ಪಿಒಎಫ್ ಅನ್ನು ಈ ಕೆಳಗಿನ ಪ್ರಕಾರಗಳಾಗಿ ವಿಂಗಡಿಸಬಹುದು:
• ಅತೀಂದ್ರಿಯ - ಸಾಮಾನ್ಯ ಎಫ್‍ಎಸ್‍ಎಚ್ ಮಟ್ಟಗಳು ಮತ್ತು ವಿವರಿಸಲಾಗದ ಸಂತಾನೋತ್ಪತ್ತಿ ಸಮಸ್ಯೆ.
• ಬಹಿರಂಗವಾದವು - ಹೆಚ್ಚಿನ ಮಟ್ಟದ ಎಫ್‍ಎಸ್‍ಎಚ್ ಮತ್ತು ಅನಿಗದಿತ ಋತು ಆವರ್ತನ.
• ಜೀವರಾಸಾಯನಿಕ - ವಿವರಿಸಲಾಗದ ಸಂತಾನೋತ್ಪತ್ತಿ ಸಮಸ್ಯೆ ಮತ್ತು ಎಲಿವೇಟೆಡ್ ಬೇಸಲ್ ಸೀರಮ್ ಎಫ್‍ಎಸ್‍ಎಚ್.
• ಅಕಾಲಿಕ ಋತುಬಂಧ - ಅಮೆನೋರಿಯಾ ಮತ್ತು ಶಾಶ್ವತ ಸಂತಾನೋತ್ಪತ್ತಿ ಸಮಸ್ಯೆ.
ಪಿಒಎಫ್ ಹೊಂದಿರುವ ಮಹಿಳೆಯರಲ್ಲಿ ಸಂತಾನೋತ್ಪತ್ತಿ ಸಮಸ್ಯೆ ಹೆಚ್ಚಾಗಿರುತ್ತದೆ. ಸಮಯೋಚಿತ ಆರೈಕೆ ಮತ್ತು ಸೂಕ್ತ ಚಿಕಿತ್ಸೆ ಈ ಸ್ಥಿತಿಯನ್ನು ಸರಿಪಡಿಸುತ್ತದೆಯಲ್ಲದೇ ನಿಮ್ಮ ಗರ್ಭಧರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಚಿಕಿತ್ಸೆಯ ಪ್ರಕ್ರಿಯೆಯ ಮೂಲಕ ನಿಮಗೆ ಮಾರ್ಗದರ್ಶನ ನೀಡಲು ಫರ್ಟಿಲಿಟಿ ತಜ್ಞರನ್ನು ಸಂಪರ್ಕಿಸಿ.